೯) ಗಂಡಸರ ತಲೆಯ ಮೇಲೆ ಶಿಖೆ:
ಆಯುರ್ವೇದದ ಆದಿ ತಜ್ಞನಾದ ಸುಶ್ರುತ ಋಷಿಯು ತಲೆಯಲ್ಲಿನ ಅತ್ಯಂತ ಸೂಕ್ಷ್ಮ ಭಾಗವನ್ನು "ಅಧಿಪತಿ ಮರ್ಮ" ಎಂದು ಗುರುತಿಸಿದ್ದನು. ಇದು ಎಲ್ಲಾ ನರಗಳು ಕೂಡುವ ಭಾಗವಾಗಿದೆ. ಶಿಖೆಯು ಈ ಭಾಗವನ್ನು ರಕ್ಷಿಸುತ್ತದೆ. ಇದು ಮೆದುಳಿನ ಕೆಳಗೆ ಇರುವ ಬ್ರಹ್ಮರಂಧ್ರವನ್ನು ಕಾಪಾಡುತ್ತದೆ. ಇಲ್ಲಿಗೆ ದೇಹದ ಕೆಳಭಾಗದಿಂದ ಬರುವ ಸುಶುಮ್ನಾ ನಾಡಿಯು ಸಂಪರ್ಕಿಸುತ್ತದೆ. ಯೋಗದಲ್ಲಿ ಬ್ರಹ್ಮ ರಂಧ್ರವು ಏಳು ಚಕ್ರಗಳಲ್ಲಿಯೇ ಅತ್ಯಂತ ಶ್ರೇಷ್ಟವಾದ ಚಕ್ರವಾಗಿರುತ್ತದೆ. ಇದು ಸಾವಿರ ದಳಗಳ ಕಮಲಕ್ಕೆ ಸರಿಸಮವೆಂಬ ಭಾವನೆ ಯೋಗಿಗಳಲ್ಲಿ ಇದ್ದು, ಜ್ಞಾನ ಕೇಂದ್ರದಂತೆ ಕೆಲಸ ಮಾಡುತ್ತದೆ. ಶಿಖೆಯು ಈ ಕೇಂದ್ರವನ್ನು ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ ಮತ್ತು ದೇಹದಲ್ಲಿನ ಓಜಸ್ಸು ಎಂಬ ಶಕ್ತಿಯನ್ನು ಸಂರಕ್ಷಿಸುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.