fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಜೂನ್ 22, 2021

ಅಮ್ಮ ದೇವರು (Lord Mother)

ಅಮ್ಮ ಎನ್ನಲು ಬರುವಳು ತಾಯಿ,
ಕಂದಾ ಎನ್ನುತ ನನಗಾಗಿ..

ಅಮ್ಮ ಎನ್ನಲು ಕರುಣೆಯ ಕಡಲಿವಳು,
ಮುಕ್ಕೋಟಿ ದೇವರ ಪ್ರೀತಿಯ ಮಗಳಿವಳು,
ನನ್ನ ಮುದ್ದಿಸೋ ತಾಯಿ ಇವಳು..

ಅಮ್ಮ ಎನ್ನಲು ತ್ಯಾಗದ ಬಾನಿವಳು,
ಎಲ್ಲಾ ಕಷ್ಟವ ಸ್ವೀಕರಿಸಿ ಬರಿ 
ಪ್ರೀತಿಯ ಹರಿಸುವ ಸುಧೆ ಇವಳು..

ಪ್ರೀತಿಯ ಹಂಚುವುದರಲ್ಲಿ ನಿಪುಣೆ ಇವಳು,
ನನ್ನ ಕ್ಷೇಮವ ಬಯಸುತ 
ತನ್ನ ಜೀವನ ತ್ಯಾಗವ ಮಾಡುವವಳು..

ಅಮ್ಮ ಎನ್ನಲು ದುಃಖವ ಮರೆಮಾಚಿ,
ಕೇವಲ ಖುಷಿಯ ಧಾರೆ ಎರೆದು 
ಧೈರ್ಯವ ತುಂಬುವವಳು…

ಅಮ್ಮ ಎಂದರೆ ಚೆಲವು,
ಬಲವು ಉಕ್ಕಿ ಹರಿಯುತಿಹುದು.

ನನ್ನನ್ನು ಹೆತ್ತು ಹೊತ್ತು ಸಾಕಿದವಳು,
ನನ್ನ ಜನ್ಮದಾತೆ ಇವಳು,
ನನಗೆ ಪ್ರಾಣ ಭಿಕ್ಷೆ ಕೊಟ್ಟು ಭೂಮಿಗೆ ತಂದವಳು,
ನನ್ನ ಪಾಲಿನ ದೇವರಿವಳು… ನನ್ನ ಪಾಲಿನ ದೇವರಿವಳು…
Posted by ಜೀವನ್ ಮಹದೇವ

ಶುಕ್ರವಾರ, ಜೂನ್ 18, 2021

ಗೂಗಲ ಪುಟದ ವಿಚಿತ್ರಗಳು (Google Chandler Bing Pages) 22

     Google “ಚಾಂಡ್ಲರ್ ಬಿಂಗ್” ಎಂದು ಟೈಪ್ ಮಾಡಿ ಮತ್ತು ಎಂಟರ್ ಒತ್ತಿರಿ. ಮತ್ತು ಹುಡುಕಾಟ ಪುಟದ ಬಲಭಾಗದಲ್ಲಿರುವ ಸ್ವಲ್ಪ ಸೋಫಾ ಚಿತ್ರದ ಮೇಲೆ ಕ್ಲಿಕ್ ಮಾಡಿ. ನಂತರ Google ಹುಡುಕಾಟ ಪುಟದಲ್ಲಿ ನೀವು ಈ ರೀತಿಯದನ್ನು ನೋಡುತ್ತೀರಿ:

ಮಂಗಳವಾರ, ಜೂನ್ 15, 2021

ಅ-ಅಃ ವರೆಗೆ ಆಮಂತ್ರಣ

ನುಮಾನ ಬೇಡ ಇನ್ನು
ಮಂತ್ರಣ ನೀಡಿರುವೆ
ಲ್ಲಿರುವೇ ಅನುವರ್ತಿ ನಾನು
ಗಲೇ ಬಂದು ಸೇರಿಕೋ ನೀನು, ನನ್ನಾ ಒಲವೇ
ದಯವಾಗಲಿ ಸೂರ್ಯ ನಮ್ಮಾ ಬಾಳಲಿ
ರೆಲ್ಲಾ ನಮ್ಮ ಜೋಡಿಯ ಹಾಡಿ ಹೊಗಳಲಿ
ಷಿ ಮುನಿಗಳು ಬರೆದಿಟ್ಟಿಹರು ಮಂತ್ರ ಘೋಷವ
ಲ್ಲಾ ಹಿರಿಯರ ಸಮ್ಮುಖದಲ್ಲಿ ವಿವಾಹ ಆಗುವ
ನೇ ಕಷ್ಟ ಬರಲಿ ಒಟ್ಟಾಗಿ ಎದುರಿಸುವ
ದು ಕನ್ಯೆಯರು ಲೋಕದಲಿ, ಆರನೆಯವಳು ನೀನೇ
ಲವಿನಜ್ಯೋತಿ ನನ್ನಲಿಬೆಳಗಿದ, ಒಲವಿನ ದೇವತೆ
ನೀನೇ
ದಲಾರೆ ನಿನ ಮನಸಿನ ಮಾತನು, ಮುಗ್ಧ ನಾನು
ಥಣವನ್ನು ಕೊಟ್ಟಿರುವೆ ಪ್ರೀತಿಯ ಔಥಣವನ್ನು
ಅಂತರಂಗದ ಸುಖದುಃಖಗಳೆಲ್ಲವ ಹಂಚಿಕೊಳ್ಳೋಣ
ಅಃ ಅಃ ಬದುಕೇ ಸುಂದರ, ಮುಂದೆಂದೂ ಸಡಗರ
=> ಕೆ ಎಸ್ ಸುಬ್ರಹ್ಮಣ್ಯ ಬಾಬು

ಬುಧವಾರ, ಜೂನ್ 09, 2021

ನಮ್ಮ ನಂಬಿಕೆಗಳು 6


) ಮಕ್ಕಳಿಗೆ ಕಿವಿ ಚುಚ್ಚುವ ಸಂಪ್ರದಾಯ:
ಮಕ್ಕಳಿಗೆ ಕಿವಿ ಚುಚ್ಚುವುದು ಭಾರತದಲ್ಲಿ ಅತ್ಯಂತ ಪ್ರಮುಖ ಸಂಪ್ರದಾಯವಾಗಿದೆ. ಭಾರತೀಯ ತತ್ವಶಾಸ್ತ್ರಜ್ಞರು ಮತ್ತು ವೈದ್ಯರು ಸಹ ಸಂಪ್ರದಾಯಕ್ಕೆ ತಮ್ಮ ಸಹಮತವನ್ನು ವ್ಯಕ್ತ ಪಡಿಸಿದ್ದಾರೆ. ಏಕೆಂದರೆ ಇದು ಚುಚ್ಚಿಸಿಕೊಳ್ಳುವ ವ್ಯಕ್ತಿಯಲ್ಲಿ ಬೌದ್ಧಿಕ ಬೆಳವಣಿಗೆ ಮತ್ತು ನಿರ್ಧಾರ ತೆಗೆದು ಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಕಿವಿ ಚುಚ್ಚಿಸಿ ಕೊಳ್ಳುವುದರಿಂದ ಕಿವಿಯ ನಾಳಗಳ ಕಾಯಿಲೆಗಳಿಂದ ಮುಕ್ತವಾಗುವುದರ ಜೊತೆಗೆ ಮಾತನಾಡುವುದರಲ್ಲಿ ಇರುವ ಸಮಸ್ಯೆಗಳು ಸಹ ದೂರವಾಗುತ್ತದೆ. ಇದನ್ನು ಪಾಶ್ಚಿಮಾತ್ಯ ದೇಶದವರು ಸಹ ಅನುಸರಿಸುತ್ತಿದ್ದಾರೆ. ಅದಕ್ಕಾಗಿಯೇ ಅವರು ತಮ್ಮ ಕಿವಿಗಳಿಗೆ ಫ್ಯಾಶನ್ ಆಗಿ ತೋರುವ ಕಿವಿಯೋಲೆಗಳನ್ನು ಧರಿಸುತ್ತಾರೆ.

ಗುರುವಾರ, ಜೂನ್ 03, 2021

ಬರೆಯುವ ಆಸೆ / ಅಮಾವಾಸ್ಯೆ

ಚಂದ್ರನ ಮೇಲೆ ನಿನ್ನ ಹೆಸರ 
ಬರೆಯುವ ಆಸೆ ನನಗೆ..
ಆ ಚಂದ್ರನ ಮೇಲೆ ನಿನ್ನ ಹೆಸರ 
ಬರೆಯುವ ಆಸೆ
 ನನಗೆ..
**

ಆದರೆ ಈ ಯೋಚನೆ, 
ಅಮಾವಾಸ್ಯೆಯ ದಿನವೇ ಬರುತ್ತದೆ ನನಗೆ..

1.. ಜಾಹೀರಾತು

2.ಜಾಹೀರಾತು