fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಬುಧವಾರ, ಮಾರ್ಚ್ 31, 2021
ಸೋಮವಾರ, ಮಾರ್ಚ್ 22, 2021
"ನನ್ನಪ್ಪ"
ಹೆಗಲಲ್ಲಿ ಹೊತ್ತು,
ಹಾದಿ ಬೀದಿಯಲ್ಲಿ ರಾಜನಂತೆ,
ಹೊತ್ತು ತಿರುಗಿದವನು. ಕಷ್ಟವ
ತಾನುಂಡು,ಸುಖದಲ್ಲಿ ಪೊರೆದವ, ನನ್ನಪ್ಪ.
ತುತ್ತು ತುತ್ತಿಗೆ ಪರದಾಡಿ,
ಅಮೃತವ ನನಗಿಕ್ಕಿ.
ನೋವಿನ ಭಾದೆ ಸರಿಸಿ,
ಎಲ್ಲರಂತೆ ಸಲಹಿದವ, ನನ್ನಪ್ಪ.
ಸಾಲವ ಲೆಕ್ಕಿಸದೆ,
ಧನಿಕರಿಗೆ ಹೊಲವಿಟ್ಟು,
ವಿದ್ಯಾಮೃತವನಿತ್ತು,
ಸಮಾಜದಲ್ಲೊಂದು ಮೂರ್ತಿ ಕಡೆದವ ನನ್ನಪ್ಪ.
ಜಾತಿ ಧರ್ಮದ ಸೋಗಿಲ್ಲದೆ,
ಪ್ರೀತಿ ವಿಶ್ವಾಸವ ಬಿತ್ತಿ,
ಕರುಣಾಮಯಿಯಾಗು,
ಎಂದರಸಿ ಬೆಳೆಸಿದವ, ನನ್ನಪ್ಪ.
ಸೊಗಳಾಡಿ ಮಾತನಾಡದ,
ದುಷ್ಟರ ಕಡುವೈರಿ.
ಕಷ್ಟದಲ್ಲೂ ಮರುಗಿದರು,
ಭ್ರಷ್ಟತೆಗೆ ಕೈ ಚಾಚದವ,
ನಿಷ್ಟುರ ನುಡಿಯುವ ನನ್ನಪ್ಪ.
ಮೌನದಲ್ಲಿ ಮಾತಾಗಿ,
ನೋವಿನಲ್ಲೂ ಮುಖ ಅರಳಿಸಿ,
ನಗುವ,ನಗು ಮೊಗದ ನಂದಾದೀಪ.
ಬಾಳಿಗೆ ಬೆಳಕಾದ ನನ್ನಿ ಆಶಾಕಿರಣ, ನನ್ನಪ್ಪ.
✍ ರಚನೆ:ಚೌಡ್ಲಾಪುರ ಸೂರಿ
ಗುರುವಾರ, ಮಾರ್ಚ್ 18, 2021
ಗೂಗಲ ಥಾನ್ಸನ ಕೈ ಪುಟ (Google Thanos Pages) 19
ಇಂದಿಗೂ ಪ್ರವೇಶಿಸಬಹುದಾದ ಮೋಜಿನ ಗೂಗಲ್ ಟ್ರಿಕ್, ಥಾನ್ಸನ ಕೈಯನ್ನು ಒಂದನೇ ಬಾರಿ ನೀವೂ ಕ್ಲಿಕ್ ಮಾಡಿದಾಗ ನಿಮ್ಮ ಒಂದು ದ್ವನಿ ಕೇಳಿಸುತ್ತದೆ ಹಾಗೂ ಆಗ ನಿಮ್ಮ ಪುಟದಲ್ಲಿ ಕೆಲವು ಮಾಹಿತಿಗಳು ದೂಳಿನ ಕಣದಂತೆ ಹಾರಿ ಮಾಯವಾಗುತ್ತದೆ.
ಥಾನ್ಸನ ಕೈಯನ್ನು ಎರಡನೇ ಬಾರಿ ನೀವೂ ಕ್ಲಿಕ್ ಮಾಡಿದಾಗ ನಿಮ್ಮ ಒಂದು ದ್ವನಿ ಕೇಳಿಸುತ್ತದೆ ಹಾಗೂ ಆಗ ನಿಮ್ಮ ಪುಟದಲ್ಲಿ ಕೆಲವು ಮಾಹಿತಿಗಳು ಹಸಿರು ಬಣ್ಣದಲ್ಲಿ ಕಾಣುತ್ತವೆ.....
ಮಂಗಳವಾರ, ಮಾರ್ಚ್ 09, 2021
ನಮ್ಮ ನಂಬಿಕೆಗಳು 3
೩) ಚರಣ ಸ್ಪರ್ಶದ ಹಿಂದಿನ ವೈಜ್ಞಾನಿಕ ವಿವರಣೆ:
ಸಾಮಾನ್ಯವಾಗಿ ನಾವು ಚರಣ ಸ್ಪರ್ಶ ಮಾಡುವ ವ್ಯಕ್ತಿಯು ನಮಗಿಂತ ವಯಸ್ಸಾದವರು ಅಥವಾ ಧಾರ್ಮಿಕ ಹಿನ್ನೆಲೆಯ ವ್ಯಕ್ತಿಗಳು ಆಗಿರುತ್ತಾರೆ. ಯಾವಾಗ ಅವರು ನಿಮ್ಮ ನಮಸ್ಕಾರವನ್ನು ಸ್ವೀಕರಿಸುತ್ತಾರೋ, ಈ ಕ್ರಿಯೆಯು ನಿಮ್ಮ ಅಹಂ ಅನ್ನು ದಾಟಿ ಕೊಂಡು ಬಂದಿರುತ್ತದೆ (ಇದನ್ನೇ ಶ್ರದ್ಧೆ ಎಂದು ಕರೆಯುತ್ತಾರೆ) ನಿಮ್ಮ ಚರಣ ಸ್ಪರ್ಶವನ್ನು ಸ್ವೀಕರಿಸುವ ಅವರ ಹೃದಯವು ಧನಾತ್ಮಕ ಆಲೋಚನೆಗಳಿಂದ ಮತ್ತು ಶಕ್ತಿಯಿಂದ ನಿಮ್ಮನ್ನು ಹರಸುತ್ತದೆ (ಇದನ್ನು ಕರುಣಾ ಎಂದು ಕರೆಯುತ್ತಾರೆ) ಇದು ನಿಮ್ಮನ್ನು ಅವರ ಕೈ ಮತ್ತು ಕಾಲ್ಬೆರಳುಗಳ ಮೂಲಕ ತಲುಪುತ್ತದೆ. ಈ ಒಂದು ಪ್ರಕ್ರಿಯೆಯು ಆ ಸ್ಥಳದಲ್ಲಿ ಶಕ್ತಿ ಸಂಚಯವನ್ನು, ಲೌಕಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಮನಸ್ಸು, ಹೃದಯಗಳೆರಡುನ್ನೂ ಬೆಸೆಯುತ್ತದೆ. ಇದೇ ಕ್ರಿಯೆಯನ್ನು ಹಸ್ತ ಲಾಘವ ಮಾಡುವ ಮೂಲಕ ಹಾಗೂ ಅಪ್ಪಿ ಕೊಳ್ಳುವ ಮೂಲಕ ಸಹ ಮಾಡ ಬಹುದು. ಮೆದುಳಿನಿಂದ ಆರಂಭವಾಗುವ ನರಗಳು ನಿಮ್ಮ ಇಡೀ ದೇಹದ ತುಂಬಾ ಹರಡಿ ಕೊಂಡಿರುತ್ತವೆ. ಈ ನರಗಳು ನಿಮ್ಮ ಕೈಬೆರಳು ಮತ್ತು ಕಾಲು ಬೆರಳುಗಳಲ್ಲಿ ಅಂತ್ಯವಾಗಿರುತ್ತದೆ. ಯಾವಾಗ ನೀವು ನಿಮ್ಮ ಕೈ ಬೆರುಳಿನ ತುದಿಯನ್ನು ಇತರರ ಪಾದದ ಮೇಲೆ ಸ್ಪರ್ಶಿಸುತ್ತೀರೋ, ಆಗ ಎರಡು ದೇಹದ ನಡುವೆ ಒಂದು ಬಗೆಯ ವಿದ್ಯುತ್ಪ್ರವಾಹವು ಹರಿಯುತ್ತದೆ. ಆಗ ನಿಮ್ಮ ಬೆರಳು ಮತ್ತು ಹಸ್ತಗಳು ಈ ವಿದ್ಯುತ್ ಶಕ್ತಿಯ "ಧಾರಕಗಳಾಗಿ" ಕಾರ್ಯ ನಿರ್ವಹಿಸುತ್ತವೆ. ನಿಮ್ಮಿಂದ ಚರಣ ಸ್ಪರ್ಶಕ್ಕೆ ಒಳಗಾಗುವ ವ್ಯಕ್ತಿಯ ಕಾಲುಗಳು ಆಗ ಶಕ್ತಿಯನ್ನು ನೀಡುವ ಅಂಶವಾಗಿ ಗುರುತಿಸಲ್ಪಡುತ್ತದೆ.
ಫೇಸ್‌ಬುಕ್ (FACE BOOK)
ಅರ್ಜೆಂಟೀನಾ ಕಛೇರಿಗಳುಫೇಸ್‌ಬುಕ್ ಒಂದು ವಿಶ್ವವ್ಯಾಪಕವಾದ ಸಾಮಾಜಿಕ ಸಂಪರ್ಕದ ಜಾಲತಾಣ, ಇದರ ಕಾರ್ಯಾಚರಣೆ ನಿರ್ವಹಿಸುವ ಮತ್ತು ಖಾಸಗಿಯಾಗಿ ಮಾಲಿಕತ್ವ ಹೊಂದಿರುವ ಕಂಪನಿ Facebook, Inc.
ಸ್ಥಾಪಿಸಲಾಗಿದೆ: ಫೆಬ್ರವರಿ 2004, ಕೇಂಬ್ರಿಡ್ಜ್, ಮ್ಯಾಸಚೂಸೆಟ್ಸ್, ಯುನೈಟೆಡ್ ರಾಜ್ಯದ
ಕೇಂದ್ರ ಕಚೇರಿ: Menlo Park, ಕ್ಯಾಲಿಫೊರ್ನಿಯ, ಯುನೈಟೆಡ್ ರಾಜ್ಯದ
ಸ್ಥಾಪಕರು: ಮಾರ್ಕ್ ಜ್ಯೂಕರ್‌ಬರ್ಗ್
ಸಹ ಸಂಸ್ಥಾಪಕ: ಡಸ್ಟಿನ್ ಮೊಸ್ಕೊವಿಟ್ಜ್, ಶೆರಿಲ್ ಸ್ಯಾಂಡ್‌ಬರ್ಗ್ ಮ್ಯಾಟ್ ಕೊಹ್ಲರ್, ವಿ.ಪಿ. ಕ್ರಿಸ್ ಹ್ಯೂಸ್
CFO: ಡೇವಿಡ್ ವೆನರ್
ಸ್ಟಾಕ್ ಬೆಲೆ: FB (NASDAQ)$199.36 +0.65 (+0.33%) ಡಿಸೆಂ 5 4:00 ಅಪರಾಹ್ನ GMT-5 - ನಿರಾಕರಣೆ
ಅಂಗಸಂಸ್ಥೆಗಳು: ವಾಟ್ಸಾಪ್ ಇಂಕ್, LiveRail,Onavo,Private Core, Oculus VR, Wit al. inc, servicefriend, atlas solutions, Etc..
ಆದಾಯ: ↑ 300 ಮಿಲಿಯನ್ ಯುಎಸ್ಡಿ (2008 ಅಂದಾಜು)
ನೌಕರರು: 900+
ವೆಬ್‌ಸೈಟ್: Facebook.com
ಸೈಟ್ ಪ್ರಕಾರ ಸಾಮಾಜಿಕ ನೆಟ್ವರ್ಕ್ ಸೇವೆ, ಜಾಹೀರಾತು, ಬ್ಯಾನರ್ ಜಾಹೀರಾತುಗಳು, ಉಲ್ಲೇಖಿತ ಮಾರ್ಕೆಟಿಂಗ್
ಕೇಂದ್ರ ಕಚೇರಿ: Menlo Park, ಕ್ಯಾಲಿಫೊರ್ನಿಯ, ಯುನೈಟೆಡ್ ರಾಜ್ಯದ
ಸ್ಥಾಪಕರು: ಮಾರ್ಕ್ ಜ್ಯೂಕರ್‌ಬರ್ಗ್
ಸಹ ಸಂಸ್ಥಾಪಕ: ಡಸ್ಟಿನ್ ಮೊಸ್ಕೊವಿಟ್ಜ್, ಶೆರಿಲ್ ಸ್ಯಾಂಡ್‌ಬರ್ಗ್ ಮ್ಯಾಟ್ ಕೊಹ್ಲರ್, ವಿ.ಪಿ. ಕ್ರಿಸ್ ಹ್ಯೂಸ್
CFO: ಡೇವಿಡ್ ವೆನರ್
ಸ್ಟಾಕ್ ಬೆಲೆ: FB (NASDAQ)$199.36 +0.65 (+0.33%) ಡಿಸೆಂ 5 4:00 ಅಪರಾಹ್ನ GMT-5 - ನಿರಾಕರಣೆ
ಅಂಗಸಂಸ್ಥೆಗಳು: ವಾಟ್ಸಾಪ್ ಇಂಕ್, LiveRail,Onavo,Private Core, Oculus VR, Wit al. inc, servicefriend, atlas solutions, Etc..
ಆದಾಯ: ↑ 300 ಮಿಲಿಯನ್ ಯುಎಸ್ಡಿ (2008 ಅಂದಾಜು)
ನೌಕರರು: 900+
ವೆಬ್‌ಸೈಟ್: Facebook.com
ಸೈಟ್ ಪ್ರಕಾರ ಸಾಮಾಜಿಕ ನೆಟ್ವರ್ಕ್ ಸೇವೆ, ಜಾಹೀರಾತು, ಬ್ಯಾನರ್ ಜಾಹೀರಾತುಗಳು, ಉಲ್ಲೇಖಿತ ಮಾರ್ಕೆಟಿಂಗ್
ಶನಿವಾರ, ಮಾರ್ಚ್ 06, 2021
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...