೨) ನಾವೇಕೆ ತುಳಸಿ ಗಿಡಗಳನ್ನು ಪೂಜಿಸುತ್ತೇವೆ?
ಹಿಂದೂ ಧರ್ಮವು "ತುಳಸಿ" ಗಿಡಕ್ಕೆ ಮಾತೃ ಸ್ಥಾನವನ್ನು ನೀಡಿ ಗೌರವಿಸಿದೆ. "ಪವಿತ್ರ ತುಳಸಿ" ಎಂದು ಸಹ ಕರೆಯಲ್ಪಡುವ ತುಳಸಿಯು ಭಾರತದಲ್ಲಿಯಷ್ಟೇ ಅಲ್ಲದೆ ಪ್ರಪಂಚದ ಇತರ ಭಾಗಗಳಲ್ಲೂ ಸಹ ಪೂಜ್ಯನೀಯ ಸ್ಥಾನವನ್ನು ಪಡೆದು, ಧಾರ್ಮಿಕ, ಆಧ್ಯಾತ್ಮಿಕವಾಗಿ ಪರಿಗಣಿಸಲ್ಪಡುತ್ತಿದೆ. ವೇದ ಕಾಲದ ಋಷಿ ಮುನಿಗಳಿಗೆ ಇದರ ಪ್ರಯೋಜನಗಳು ಚೆನ್ನಾಗಿ ತಿಳಿದಿದ್ದವು. ಆದ್ದರಿಂದಲೇ ಅವರು ಇದಕ್ಕೆ ಮಾತೃ ಸ್ಥಾನವನ್ನು ನೀಡಿ, ಪ್ರತಿಯೊಬ್ಬರ ಮನೆಯಲ್ಲಿ ಇದನ್ನು ಬೆಳೆಯ ಬೇಕೆಂಬ ಸಂದೇಶವನ್ನು ರವಾನಿಸಿದರು. ಹೀಗಾಗಿ ಇಂದು ಅಕ್ಷರಸ್ಥರು ಮತ್ತು ಅನಕ್ಷರಸ್ಥರು ಎಂಬ ಬೇಧ ಭಾವವಿಲ್ಲದೆ ಎಲ್ಲರ ಮನೆಯಲ್ಲೂ ತುಳಸಿಯನ್ನು ನಾವು ಕಾಣ ಬಹುದು. ಇದನ್ನು ನಾವು ಮನೆಯಲ್ಲಿ ಬೆಳೆಸುವ ಮೂಲಕ ಈ ಸಸ್ಯವನ್ನು ನಾವು ರಕ್ಷಿಸುತ್ತಿದ್ದೇವೆ, ಏಕೆಂದರೆ ಇದು ಮನುಕುಲದ ಸಂಜೀವಿನಿ ಎಂಬ ಕಾರಣಕ್ಕಾಗಿ. ತುಳಸಿಯಲ್ಲಿ ಔಷಧೀಯ ಗುಣಗಳ ಆಗರವೇ ಅಡಗಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಇದೊಂದು ಅದ್ಭುತವಾದ ಆ್ಯಂಟಿ ಬಯೋಟಿಕ್. ಪ್ರತಿದಿನ ಚಹಾ ಜೊತೆಗೆ ತುಳಸಿಯನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಹಾಗು ಕುಡಿಯುವವರಿಗೆ ರೋಗಗಳು ಕಾಡುವ ಅಪಾಯವಿರುವುದಿಲ್ಲ. ಆತನ ಆರೋಗ್ಯ ಸ್ಥಿತಿ ಸಮತೋಲನದಲ್ಲಿರುವುದರ ಜೊತೆಗೆ, ಆತನ ಆಯುಸ್ಸು ಸಹ ಹೆಚ್ಚಾಗುತ್ತದೆ. ತುಳಸಿ ಸಸ್ಯಗಳನ್ನು ಮನೆಯಲ್ಲಿ ಇರಿಸಿ ಕೊಳ್ಳುವುದರಿಂದ ಮನೆಯೊಳಗೆ ಸೊಳ್ಳೆ ಮುಂತಾದ ಕೀಟಗಳು ಪ್ರವೇಶಿಸುವುದನ್ನು ತಡೆಗಟ್ಟ ಬಹುದು. ನಂಬಿಕೆಗಳ ಪ್ರಕಾರ ಹಾವುಗಳು ಸಹ ತುಳಸಿ ಗಿಡದ ಬಳಿಗೆ ಹೋಗುವ ಧೈರ್ಯವನ್ನು ಮಾಡುವುದಿಲ್ಲವಂತೆ. ಬಹುಶಃ ಅದಕ್ಕೆ ಇರಬೇಕು ಪ್ರಾಚೀನ ಕಾಲದ ಜನರು ತುಳಸಿಯನ್ನು ತಮ್ಮ ಮನೆಯ ಸಮೀಪದಲ್ಲಿ ಬೆಳೆಸುತ್ತಿದ್ದುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.