fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಡಿಸೆಂಬರ್ 31, 2020

ನಗಿಸಿದ್ದು ಕನ್ನಡ

ನಾನು ನಕ್ಕಾಗ ನಗಿಸಿದ್ದು ಕನ್ನಡ,
ನಾನು ಅತ್ತಾಗ ಅಳಿಸಿದ್ದು ಕನ್ನಡ,
ನಾನು ಪ್ರೀತಿಸಿದಾಗ ಮೂಡಿದ್ದು ಕನ್ನಡ,
ನಾನು ಪ್ರೇಮಿಸಿದಾಗ ಅರಳಿದ್ದು ಕನ್ನಡ,
ನಾನು ಕಾಮಿಸಿದಾಗ ಕನಲಿದ್ದು ಕನ್ನಡ,

ನನ್ನ ಖುಷಿಗೆ ಜೊತೆಯಾಗಿದ್ದು ಕನ್ನಡ,
ನನ್ನ ಕೋಪಕ್ಕೆ ಸೇರಿಕೊಂಡಿದ್ದು ಕನ್ನಡ,
ನನ್ನ ಖಿನ್ನತೆ ವ್ಯಕ್ತಪಡಿಸಿದ್ದು ಕನ್ನಡ,
ನನ್ನ ಭಕ್ತಿಯೂ ಕನ್ನಡ,
ನನ್ನ ಶಕ್ತಿಯೂ ಕನ್ನಡ
ನನ್ನ ಮುಕ್ತಿಯೂ ಕನ್ನಡ,

ನನ್ನಲ್ಲಿ ಅರಿವು ಮೂಡಿಸಿದ್ದು ಕನ್ನಡ,
ನನ್ನಲ್ಲಿ ಅಹಂಕಾರ ಬೆಳೆಸಿದ್ದೂ ಕನ್ನಡ,
ನನ್ನಲ್ಲಿ ಹೆಮ್ಮೆ ಬೆಳಗಿಸಿದ್ದೂ ಕನ್ನಡ,
ನನ್ನಲ್ಲಿ ಕೀಳರಿಮೆ ತಂದದ್ದೂ ಕನ್ನಡ,
ನನ್ನಲ್ಲಿ ಅಭಿಮಾನ ಸೇರಿಸಿದ್ದು ಕನ್ನಡ,

ನನಗೆ ದೃಷ್ಟಿಯಾಗಿ ಕಂಡದ್ದು ಕನ್ನಡ,
ನನಗೆ ಧ್ವನಿಯಾಗಿ ಕೇಳಿದ್ದು ಕನ್ನಡ,
ನನಗೆ ವಾಸನೆಯಾಗಿ ಗ್ರಹಿಸಿದ್ದು ಕನ್ನಡ,
ನನಗೆ ರುಚಿಯಾಗಿ ಸವಿದದ್ದು ಕನ್ನಡ,
ನನಗೆ ಸ್ಪರ್ಶವಾಗಿ ಮುಟ್ಟಿದ್ದು ಕನ್ನಡ,

ಮಾತು ಕಲಿಸಿದ್ದು ಕನ್ನಡ,
ವಿದ್ಯೆ ನೀಡಿದ್ದು ಕನ್ನಡ ,
ಉದ್ಯೋಗ ದೊರಕಿಸಿದ್ದು ಕನ್ನಡ,
ಬದುಕು ದಯಪಾಲಿಸಿದ್ದು ಕನ್ನಡ,
ನಮ್ಮ ನಿಮ್ಮ ಗೆಳೆತನಕ್ಕೆ ಸಾಕ್ಷಿಯಾದದ್ದು ಕನ್ನಡ,

ನಾನು ಕನ್ನಡ - ನೀವೂ ಕನ್ನಡ,
ಅವನೂ ಕನ್ನಡ - ಅವಳೂ ಕನ್ನಡ,
ಎಲ್ಲವೂ ಕನ್ನಡ - ಎಲ್ಲರೂ ಕನ್ನಡ,
ಎಲ್ಲೆಲ್ಲೂ ಕನ್ನಡ - ಎಂದೆಂದೂ ಕನ್ನಡ,
ನಮ್ಮೆಲ್ಲರ ಜೀವನವೇ ,
ಕನ್ನಡ ಕನ್ನಡ ಕನ್ನಡ........
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಸ್ಸುಗಳ ಅಂತರಂಗದ ಚಳವಳಿ.

ಕನ್ನಡ ರಾಜ್ಯೋತ್ಸವ ದ ಶುಭಾಶಯಗಳು

ಬುಧವಾರ, ಡಿಸೆಂಬರ್ 30, 2020

ಡಾ. ವಿಷ್ಣುವರ್ಧನ ರವರ ರಸ್ತೆ (ಬನಶಂಕರಿ - ಕೆಂಗೇರಿ 12.3 KM)


     ಕರ್ನಾಟಕದ ಕರ್ಣ, ಬಂಗಾರದ ಕಳಸ, ಸಿಂಹಾದ್ರಿಯ ಸಿಂಹ, ಸಾಹಸ ಸಿಂಹ, ಕರುನಾಡ ಜಮೀನ್ದಾರ್ರು, ಅಭಿನಯ ಭಾರ್ಗವ ಬಿರುದಾಂಕಿತ ಡಾ. ವಿಷ್ಣುವರ್ಧನ್ ಅವರ ಹೆಸರನ್ನು ಬೆಂಗಳೂರಿನ ಪ್ರಮುಖ ರಸ್ತೆಗೆ ಇಡುವ ಮೂಲಕ ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಗೌರವ ಸೂಚಿಸುತ್ತಿದೆ.
     ಬೆಂಗಳೂರಿನ ಬನಶಂಕರಿಯಿಂದ ಕೆಂಗೇರಿ ತನಕ ಇರುವ ರಸ್ತೆಗೆ ದಿನಾಂಕ 2-2-2014ರಂದು 'ಡಾ. ವಿಷ್ಣುವರ್ಧನ ರಸ್ತೆ' ಎಂದು ನಾಮಕರಣ ಮಾಡಲಾಗಿದೆ. ಸುಮಾರು 12.3 ಕಿ.ಮೀ ಉದ್ದದ ರಸ್ತೆಗೆ ವಿಷ್ಣುವರ್ಧನ ಅವರ ಹೆಸರಿಡುತ್ತಿದ್ದಂತೆ ಹೊಸ ಇತಿಹಾಸ ನಿರ್ಮಾಣವಾಗಿದೆ. ದೇಶದಲ್ಲೇ ಅತಿ ಉದ್ದದ ರಸ್ತೆಗೆ ತನ್ನ ಹೆಸರನ್ನು ಹೊಂದಿದ ಏಕೈಕ ಕಲಾವಿದ ಎಂಬ ಕೀರ್ತಿ ವಿಷ್ಣು ಅವರಿಗೆ ಸಲ್ಲುತ್ತದೆ ಎಂದು ಡಾ. ವಿಷ್ಣುವರ್ಧನ ಸೇನಾ ಸಮಿತಿ ಹೇಳಿದೆ.
     ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಹೆಸರು ಚಿರಸ್ಥಾಯಿ 'ಡಿಟೆಕ್ಟೀವ್ ಸಾಹಸಸಿಂಹ' ಎಂಬ ಹೆಸರಿನಲ್ಲಿ ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ ಅವರು ಕಾಮಿಕ್ ಸ್ಟ್ರಿಪ್ ಸರಣಿಯನ್ನು ಹೊರತಂದಿದ್ದರು. ಆಪ್ತಮಿತ್ರ ಗೆಟೆಪ್ ನಲ್ಲಿ ಕಾಮಿಕ್ ಹೀರೋ ಆಗಿ ವಿಷ್ಣುವರ್ಧನ್ ಅವರನ್ನು ಪರಿಚಯಿಸಲಾಗಿದೆ. ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 7 ಅಡಿಗಳ ಕಂಚಿನ ಪುತ್ಥಳಿಯನ್ನು ಮಾರ್ಚ್ 1, 2012 ರಂದು ಬೆಂಗಳೂರಿನ ಗೌರಿಪಾಳ್ಯದಲ್ಲಿ ಅನಾವರಣ ಮಾಡಲಾಗಿದೆ.
     ಪಾರ್ಕ್: ಪಟ್ಟಾಭಿರಾಮನಗರ ವ್ಯಾಪ್ತಿಯ ಜಯನಗರ 4ನೇ "ಟಿ" ಬ್ಲಾಕ್ ಬಡಾವಣೆಯ 28ನೇ ಮುಖ್ಯರಸ್ತೆ ಹಾಗೂ 35ನೇ ಅಡ್ಡರಸ್ತೆ ನಡುವಿರುವ ವಿಶ್ರಾಂತಿ ವನಕ್ಕೆ 'ಡಾ. ವಿಷ್ಣುವರ್ಧನ್ ವಿಶ್ರಾಂತಿ ವನ' ಎಂದು ನಾಮಕರಣ ಮಾಡಲಾಗಿದೆ. ಇದಲ್ಲದೆ ಬಳ್ಳಾರಿಯಲ್ಲಿ ಕನ್ನಡ ಚಿತ್ರರಂಗದ ಮೇರುನಟ ಡಾ.ವಿಷ್ಣು ಹೆಸರಿನಲ್ಲಿ ಜಿಂದಾಲ್ ಅವರು ನಿರ್ಮಿಸಿರುವ ಪಾರ್ಕ್ ಅನ್ನು ಸಾರ್ವಜನಿಕರಿಗೆ ಮಕ್ತಗೊಂಡಿದೆ.

ಮಂಗಳವಾರ, ಡಿಸೆಂಬರ್ 22, 2020

ಅಮ್ಮಾ ನೀನಿಲ್ಲದ ಊರು...

ಅಮ್ಮಾ ನೀನಿಲ್ಲದ ಊರಲ್ಲಿ
ನನಗೇನು ಕೆಲಸ
ಅಲ್ಲಿ ತೊನೆದಾಡುವ ನೆನಪುಗಳಷ್ಟೇ
ಜೋತಾಡುತ್ತಿವೆ ನೀ ಹೆಜ್ಜೆಯಿಟ್ಟಲ್ಲೆಲ್ಲ
ಕೂತಲ್ಲಿ ಕೂರಲಾಗದೇ ಬಳಲುತ್ತೇನೆ
ಕಿವಿಯಲ್ಲಿ ನಿನ್ನ ಮಾತು ತರಂಗಗಳಂತೆ ಅಪ್ಪಳಿಸಿ
ಇನ್ನಷ್ಟು ಮತ್ತಷ್ಟು ಕೇಳಬೇಕೆನಿಸುತ್ತದೆ
ಹಾಗೆ ಹಾಗೆ ನಿನ್ನ ಮಡಿಲ ತುಂಬೆಲ್ಲ
ನನ್ನನ್ನೇ ನಾ ಹರಡಿಕೊಂಡು
ಕಿತ್ತೊಗೆಯಬೇಕು “ಇಲ್ಲಾ ” ಎನ್ನುವ ಈ ಶಬ್ದವನ್ನೇ.
ಆದರೆ ಸಾಧ್ಯವಾಗದ ಮಾತು
ನೀನು ಇಲ್ಲಾ ಎನ್ನುವ ಸತ್ಯದಷ್ಟೆ.
ನೀನೂ ಮಹಿಳೆ
ನಿನ್ನ ರಕ್ತ ಮಾಂಸ ಹಂಚಿಕೊಂಡು ಹುಟ್ಟಿದ
ನಾನೂ ಮಹಿಳೆ
ಆದರೂ ನಿನ್ನೆತ್ತರಕ್ಕೆ ನಾ ಏರಲಾರೆ
ಮಗಳು ನನ್ನ ಮಡಿಲ ತುಂಬಿದ್ದರೂ
ಗೊತ್ತು ನನಗೆ ಏಕೆಂದು!
ಆ ನಿನ್ನ ಮುಗ್ಧ ನಗು
ಎಲ್ಲರೂ ನನ್ನ ಮಕ್ಕಳೆಂದು ಕಾಣುವ ಬಗೆ
ನಿಸ್ವಾರ್ಥ ನಿನ್ನ ಬದುಕು
ಬೇಕು ಎನ್ನುವುದ ಬಿಟ್ಟು
ಸಾಕು ಸಿಕ್ಕಷ್ಟೇ
ಎಂದಂದುಕೊಂಡೇ ಬದುಕಿದವಳು
ಕೊನೆಗೊಂದು ದಿನ
ನಿರಾಳವಾಗಿ ಅಂಗಾತ ಮಲಗಿದವಳು
ಈ ಶುಭದಿನಕೆ
ನನ್ನ ಬದುಕಲ್ಲಿ ಸಾಕ್ಷಿಯಾದವಳು

ಶುಕ್ರವಾರ, ಡಿಸೆಂಬರ್ 18, 2020

ಗೂಗಲ ಪುಟದ ವಿಚಿತ್ರಗಳು (Google lmgtfy Pages) 16

LMGTFY
(Let Me Google That For You)
(ಲೆಟ್ ಮಿ ಗೂಗಲ್ ದಟ್ ಫಾರ್ ಯು)
(ನಿಮಗಾಗಿ ಗೂಗಲ್ ಕೆಲಸವನ್ನು  ಮಾಡುತ್ತದೆ)

        ಗೂಗಲ್ ಅನ್ನು ಬಳಸಲು ತುಂಬಾ ಸೋಮಾರಿಯಾಗಿರುವವರಿಗೆ ನಾವು ಮಾಡಿದ ಕಿರು ಸೇವೆಯಾಗಿದೆ. ಹುಡುಕಾಟ ಪ್ರಶ್ನೆಯನ್ನು ನಮೂದಿಸಿದ ನಂತರ, ಫಲಿತಾಂಶಗಳಿಗೆ ಬದಲಾಗಿ, ನಿಮ್ಮ ಸೋಮಾರಿಯಾದ ಸ್ವೀಕರಿಸುವವರಿಗೆ ನೀವು ಮೇಲ್ ಕಳುಹಿಸುವ ಲಿಂಕ್ ಅನ್ನು ನೀವು ಪಡೆಯುತ್ತೀರಿ. ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ನಿಜವಾದ ಹುಡುಕಾಟವನ್ನು ಪ್ರಾರಂಭಿಸುತ್ತದೆ: ಹೀಗಾಗಿ, ಈ ಪರಿಧಿಯ ರೀತಿಯಲ್ಲಿ, ನೀವು ಅದನ್ನು ಅವರಿಗೆ ಗೂಗಲ್ ಮಾಡಿದ್ದೀರಿ. ಅವರು ಮಾಡಬೇಕಾಗಿರುವುದು ಲಿಂಕ್ ಅನ್ನು ಕ್ಲಿಕ್ ಮಾಡಿ. ತಂತ್ರಜ್ಞಾನದ ಒಂದು ಸುಂದರ ಉದಾಹರಣೆ ನಮಗೆ ವಿಷಯಗಳನ್ನು ಹೆಚ್ಚು ಸಂಕೀರ್ಣಗೊಳಿಸುತ್ತದೆ. ಕೆಳಗಿನ ಚಿತ್ರವನ್ನು ಕ್ಲಿಕ್ ಮಾಡಿ

ಮಂಗಳವಾರ, ಡಿಸೆಂಬರ್ 15, 2020

ಅ-ಅಃ ನಮ್ಮ ಜೋಡಿ

ಅಂದದ ಗೊಂಬೆ ನಿನಗೆ
ಭರಣ ತೋಡಿಸಿ
ಇಂದ್ರನ ಮಗಳು ನಾಚುವಂತೆ
ಳಕಲ್ ಸೀರೆ ಉಡಿಸಿ
ರ್ಕೋಳ್ಳೋ ಹಂಗ
ರ ಮಂದಿಯಲ್ಲಾ
ಕ್ಮಿನಿಯನ್ನು
ಲ್ಲಮ್ಮನ ಜಾತ್ರ್ಯಾಗ ನಾ
ತ್ಕೋಂಡು ನನ್ನ ಹೇಗಲಮ್ಯಾಲ
ಸಿರಿಲೆ ಸುತ್ತಾಡುವಾಗ
ಡನಾಡಿಗಳೆಲ್ಲ
ಯ್ ಎಂದು ಕೂಗಿ
ಸರದಲ್ಲಿ ಬಳಿ ಬಂದು
ಅಂದೆ ಬಿಡಬೇಕು. ನಮ್ಮನ್ ನೋಡಿ
ಅಃ ಎಂಥ ಅದ್ಭುತ,

ಯಾರ್ ಕೆಟ್ ಕಣ್ಣು ಬಿಳ್ದೆ ಇರ್ಲಿ ನಿಮ್ ಜೋಡಿ ಮ್ಯಾಲ ಅಂತ..

ಬುಧವಾರ, ಡಿಸೆಂಬರ್ 09, 2020

ಥಂಬ್ಲರ್ (Tumblr)

tumblr ಗೆ ಚಿತ್ರಗಳ ಫಲಿತಾಂಶಗಳು

ಸ್ಥಾಪನೆ: ಫೆಬ್ರವರಿ 2007; 12 ವರ್ಷಗಳ ಹಿಂದೆ
ಪ್ರಧಾನ ಕಚೇರಿಗಳು: ನ್ಯೂ ಯಾರ್ಕ್, U.S
ಉದ್ಯೋಗಿಗಳು: 411 (as of June 2017)
ಪ್ರಮುಖ ವ್ಯಕ್ತಿಗಳು: Jeff D'Onofrio (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ)
ಸಂಸ್ಥಾಪಕ: ಡೇವಿಡ್ ಕಾರ್ಪ್
ಮಾಲೀಕ: Verizon Media

ನಾಮನಿರ್ದೇಶನಗಳುಟೀನ್ ಚಾಯ್ಸ್ ಪ್ರಶಸ್ತಿ - ಚಾಯ್ಸ್ ಸೋಷಿಯಲ್ ನೆಟ್‌ವರ್ಕ್‌

ಮನುಷ್ಯ


ಗುರುವಾರ, ಡಿಸೆಂಬರ್ 03, 2020

ಪಬ್ಬು ಪಬ್ಬು / ಗಬ್ಬು ಗಬ್ಬು

ನಗರದ ಬೀದಿಗಳಲಿ ಈಗ ಎಲ್ಲೆಂದರಲ್ಲಿ ಪಬ್ಬು ಪಬ್ಬು

ನಗರದ ಬೀದಿಗಳಲಿ ಈಗ ಎಲ್ಲೆಂದರಲ್ಲಿ ಪಬ್ಬು ಪಬ್ಬು
**
ಪಬ್ಬುಗಳ ಒಳಗೆಲ್ಲಾ ಸದಾಕಾಲ ಏನೋ ಗಬ್ಬು ಗಬ್ಬು

1.. ಜಾಹೀರಾತು

2.ಜಾಹೀರಾತು