ಯಾಕಳುವೆ ಎಲೆರಂಗ ಬೇಕಾದ್ದು ನಿನಗೀವೆ ನಾಕೆಮ್ಮೆ ಕರೆದ ನೊರೆ ಹಾಲು|
ಸಕ್ಕರೆ ನೀ ಕೇಳಿದಾಗ ಕೊಡುವೇನು||
ಯಾತಕಳುತಾನೆಂದು ಎಲ್ಲಾರು ಕೇಳ್ಯಾರು ಕಾಯದ ಹಾಲ ಕೆನೆ ಬೇಡಿ|
ಕಂದಯ್ಯ ಕಾಡಿ ಕೈಬಿಟ್ಟು ಇಳಿದಾನ||
ಅಳುವ ಕಂದನ ತುಟಿಯು ಹವಳದ ಕುಡಿಹಂಗೆ ಕುಡಿಹುಬ್ಬು ಬೇವಿನೆಸಳಂಗೆ|
ಕಣ್ಣೋಟ ಶಿವನ ಕೈಯಲಗು ಹೊಳೆದಂತೆ||
ಅತ್ತರೆ ಅಳಲವ್ವ ಈ ಕೂಸು ನನಗಿರಲಿ ಕೆಟ್ಟರೆ ಕೆಡಲಿ ಮನೆಗೆಲಸ|
ಕಂದನಂತ ಮಕ್ಕಳಿರಲವ್ವ ಮನೆತುಂಬ||
ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು ಹಾಲ ಹಂಬಲವ ಮರೆತಾನು|
ಕಂದಂಗೆ ಜೋಗೂಳದಾಗೆ ಅತಿಮುದ್ದು||
ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ ಎತ್ತಿಕೊಳ್ಳೆಂಬ ಹಟವಿಲ್ಲ|
ನಿನ್ನಂತ ಹತ್ತು ಮಕ್ಕಳೂ ಇರಬಹುದು||
ಆಡಿ ಬಾ ಎನ್ನ ಕಂದ ಅಂಗಾಲ ತೊಳೆದೇನ ತೆಂಗಿನ ಕಾಯಿ ತಿಳಿನೀರ|
ತಕ್ಕೊಂಡು ಬಂಗಾರದ ಮೊರೆ ತೊಳೆದೇನ||
ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ ಕೂಸು ಕಂದಯ್ಯ ಒಳ ಹೊರಗ|
ಆಡಿದರೆ ಬೀಸಣಿಗೆ ಗಾಳಿ ಸುಳಿದಾವ||
ತುಂಬಾ ಚೆನ್ನಾಗಿದೆ... ಇನ್ನಷ್ಟು ಜನಪದ ಗೀತೆಗಳನ್ನು ಅಂತರ್ಜಾಲಕ್ಕೆ ಹಾಕಿ... ನನ್ನ ದೂರವಾಣಿ ಸಂಖ್ಯೆ 9740571747
ಪ್ರತ್ಯುತ್ತರಅಳಿಸಿಧನ್ಯವಾದಗಳು ಸರ್...
ಅಳಿಸಿಪ್ರತಿ ದಿನದ ಮಾಹಿತಿಗಾತಿ ನಮ್ಮ ಮತ್ತೊಂದು ಕನ್ನಡದ ಟೆಲೆಗ್ರಾಮ ಮನೆಯಾದ
ನಮ್ಮ ಕನ್ನಡ ನಾಡು ( https://t̤.me/spn3187 ) ಮನೆಗೆ ಬನ್ನಿ....