ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಭಾನುವಾರ, ಮಾರ್ಚ್ 31, 2019

ನಾಡು ನನ್ನ ನಾಡು (Place My Place)

ನಾಡು ನನ್ನ ನಾಡು ಕನ್ನಡ ನಾಡು
ಹಾಡು ನನ್ನ ಹಾಡು ಕನ್ನಡ ಹಾಡು
ಚೆಂದದ ಚೆಲುವಿನ ಸುಂದರ ಸಿರಿಯ ನೋಡು
ತಾಯಿಯ ಮುಡಿಗಿದು ತಂದಿಹ ಸೊಬಗು ನೋಡು || ಪ ||

ಕನ್ನಡದ ಮಣ್ಣಿನಲಿ ಹುಟ್ಟಿಬಂದ ಕನ್ನಡಿಗ
ನಾಡ-ನುಡಿ ಸೇವೆಗಾಗಿ ಕಟ್ಟಿ ನಿಂತ ಟೊಂಕವ
ಅಮ್ಮ ಇದು ಇದೆಯಾ ನಿನಗಾಗಿ ಮೀಸಲು
ಸಿದ್ದ ಇರುವ ರಕ್ತದ ಕಣಗಳನೆ ಸುರಿಸಲು ||

ನಾಡ ನೆಲದ ದಾಹ ತಣಿಸಿ
ತಾಯ ಮೈಗೆ ಹಸಿರನುಡಿಸಿ
ಮೈದುಂಬಿ ಹರಿದಿಹರು ಕೃಷ್ಣೆ ಕಾವೇರಿ
ಪಂಪ ಪೊನ್ನ ರನ್ನ ಸೇರಿ ಮಾಹಾಕಾವ್ಯ ಹೊಳೆ ಹರಿಸಿ
ಜ್ಞಾನಶರದಿ ಬೆಳೆದಿಹುದು ಪರಿದಿ ಮಿರಿ ||

ನಿರಭಿಮಾನಿ ಕನ್ನಡಿಗ ಕೇಳು ನಿ ಕೇಳು
ತಾಯ ಮಡಿಲ ಸುಖವ ಮರೆವೆಯ ನೀನು
ಅವಳುಳಿವು ನಿನ್ನುಳಿವು ಅವಳಳಿವು ನಿನ್ನಳಿವು
ಅವಳ ಪಾದಕೆ ಶರಣು ಬಾರೆಯ ನೀನು
ಶರಣು ಆಗದೆ ಮುಗಿದು ಹೋಗುವೆ ನೀನು ||

ಮಂಗಳವಾರ, ಮಾರ್ಚ್ 26, 2019

ಅಗ್ಘವಣಿ ಹೊನ್ನಯ್ಯ

ವಚನಕಾರ
ಅಗ್ಘವಣಿ ಹೊನ್ನಯ್ಯ 
ಅಂಕಿತ ನಾಮ
ಹುಲಿಗೆರೆಯ ವರದ ಸೋಮನಾಥ 
ಕಾಲ
1160 
ದೊರಕಿರುವ ವಚನಗಳು
4 (ಆಧಾರ: ಸಮಗ್ರ ವಚನ ಸಂಪುಟ) 
ತಂದೆ/ತಾಯಿ

ಹುಟ್ಟಿದ ಸ್ಥಳ
ಪುಲಿಗೆರೆ (ಇಂದಿನ ಲಕ್ಷ್ಮೇಶ್ವರ),ಬೆಳಗಾವಿ 
ಪರಿಚಯ
ಕಾಲ ಸು. 1160. ಊರು: ಪುಲಿಗೆರೆ (ಇಂದಿನ ಲಕ್ಷ್ಮೇಶ್ವರ). ಅಗ್ಘವಣಿ ಅಥವ ಶುದ್ಧ ನೀರನ್ನು ಭಕ್ತರಿಗೆ ಒದಗಿಸುವ ಕಾಯಕ ನಡೆಸುತ್ತಿದ್ದ. 4 ವಚನಗಳು ದೊರೆತಿವೆ. ಮರಡಿಪುರ (1180) ಶಾಸನದಲ್ಲಿ ಈತನ ಉಲ್ಲೇಖವಿದೆ. ಅಬ್ಬಲೂರಿನಲ್ಲಿ ನಡೆದ ಪವಾಡ ಪ್ರಸಂಗದಲ್ಲಿ ಏಕಾಂತ ರಾಮಯ್ಯನ ತಲೆಯನ್ನು ಹರಿವಾಣದಲ್ಲಿಟ್ಟು ಮೆರೆಸಿದ ಅನ್ನುವ ಐತಿಹ್ಯವಿದೆ. ಶಿವಭಕ್ತಿ, ಉಗ್ರವಾದ ಏಕದೇವತಾ ನಿಷ್ಠೆ ಇವನ ವಚನಗಳಲ್ಲಿ ವ್ಯಕ್ತವಾಗಿವೆ.

ಭಾನುವಾರ, ಮಾರ್ಚ್ 24, 2019

ಸೋವಿ


 * ದರದರನೇ ಕೆಳಗಿಳಿದು ಬ೦ದಾಗ ದರದ ಲ್ಲಾ ಗುವ ಸದರವೇ ಸೋವಿ 
  • ಹೆಚ್ಚು ಹೆಚ್ಚು ಖರೀದಿಯ ಉತ್ಸಾಹವನ್ನು ತೆರೆಯುವ ಚಾವಿ
  •  
  •  ಜಾಸ್ತೀ ವೇಟು, ಕಮ್ಮಿ ರೇಟು ಆದಾಗ ಕೊಡುವ ಹೆಸರು
  •  
  •  ಮಾಲು ಜಾಸ್ತೀಯಾಗಿ ಬೆಲೆಯೇ ನಾಸ್ತೀಯಾದಾಗಿನ ವಸ್ತು-ಸ್ಥಿತಿ 

  •  ಕಡಿಮೆ ದರದ ಎತ್ತುಗಳಿಗೆ ಏನೆನ್ನಬಹುದು

ಶುಕ್ರವಾರ, ಮಾರ್ಚ್ 22, 2019

ಹೆತ್ತವಳು


ಹೆತ್ತವಳು ಅವಳೇ, ಹೊತ್ತವಳು ಅವಳೇ
ಹೊರೆಯಾಕೆ ಆಗುತಿ ಅವಳಿಗೆ?
ಬಡಿಯುವವಳು ಅವಳೇ, ಬಡಿಸುವವಳು ಅವಳೇ
ಬಾರ ಯಾಕ ಆಗುತಿ ಅವಳಿಗೆ?

ಬಣ್ಣದ ಆಟ ಅವಳಿಗೆ ಗೊತ್ತಿಲ್ಲ
ಬದುಕೋದು ಕಲಿಸ್ತಾಳ, ಊರೆಲ್ಲಾ ಹೊಗಳ್ತಾಳ
ಹಸಿದಾಗ ಊಟ ಹೊಟ್ಟೆತುಂಬಾ ಬಡಿಸ್ತಾಳ
ನಡಿಯೋದು ಕಲಿಸಿ, ನಕ್ಕು ನಲಿತಾಳ

ಯಾರೇನೆ ಹೇಳಿದರು ನನ
ಮಗನೆ ಬಾರೀ ಅಂತಾಳ
ಕೊನೆಗೊಮ್ಮೆ ಉಸಿರು ನಿಂತರೂ
ನಿನ್ನ ಮನದಲ್ಲೆ ಉಳಿತಾಳ

ಇಂದ : ಸದಾನಂದ.ಬ.ಸಕ್ಕರಶೆಟ್ಟಿ.

ಬುಧವಾರ, ಮಾರ್ಚ್ 20, 2019

ಮಕ್ಕಳನ್ನು ವರ್ಣಿಸುವ ಜನಪದ ಗೀತೆಗಳು


ಯಾಕಳುವೆ ಎಲೆರಂಗ ಬೇಕಾದ್ದು ನಿನಗೀವೆ ನಾಕೆಮ್ಮೆ ಕರೆದ ನೊರೆ ಹಾಲು|

ಸಕ್ಕರೆ ನೀ ಕೇಳಿದಾಗ ಕೊಡುವೇನು|| 


ಯಾತಕಳುತಾನೆಂದು ಎಲ್ಲಾರು ಕೇಳ್ಯಾರು ಕಾಯದ ಹಾಲ ಕೆನೆ ಬೇಡಿ| 
ಕಂದಯ್ಯ ಕಾಡಿ ಕೈಬಿಟ್ಟು ಇಳಿದಾನ|| 


ಅಳುವ ಕಂದನ ತುಟಿಯು ಹವಳದ ಕುಡಿಹಂಗೆ ಕುಡಿಹುಬ್ಬು ಬೇವಿನೆಸಳಂಗೆ| 
ಕಣ್ಣೋಟ ಶಿವನ ಕೈಯಲಗು ಹೊಳೆದಂತೆ|| 

ಅತ್ತರೆ ಅಳಲವ್ವ ಈ ಕೂಸು ನನಗಿರಲಿ ಕೆಟ್ಟರೆ ಕೆಡಲಿ ಮನೆಗೆಲಸ| 
ಕಂದನಂತ ಮಕ್ಕಳಿರಲವ್ವ ಮನೆತುಂಬ|| 

ಜೋಗೂಳ ಹಾಡಿದರೆ ಆಗಲೇ ಕೇಳ್ಯಾನು ಹಾಲ ಹಂಬಲವ ಮರೆತಾನು| 
ಕಂದಂಗೆ ಜೋಗೂಳದಾಗೆ ಅತಿಮುದ್ದು|| 

ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲ ಎತ್ತಿಕೊಳ್ಳೆಂಬ ಹಟವಿಲ್ಲ| 
ನಿನ್ನಂತ ಹತ್ತು ಮಕ್ಕಳೂ ಇರಬಹುದು|| 

ಆಡಿ ಬಾ ಎನ್ನ ಕಂದ ಅಂಗಾಲ ತೊಳೆದೇನ ತೆಂಗಿನ ಕಾಯಿ ತಿಳಿನೀರ| 
ತಕ್ಕೊಂಡು ಬಂಗಾರದ ಮೊರೆ ತೊಳೆದೇನ|| 


ಕೂಸು ಇದ್ದ ಮನೆಗೆ ಬೀಸಣಿಗೆ ಯಾತಕೆ ಕೂಸು ಕಂದಯ್ಯ ಒಳ ಹೊರಗ| 
ಆಡಿದರೆ ಬೀಸಣಿಗೆ ಗಾಳಿ ಸುಳಿದಾವ||

ಭಾನುವಾರ, ಮಾರ್ಚ್ 03, 2019

ನೋವು - ಸಂತೋಷ

ಒಬ್ಬರಿಗೆ ನೋವು ಮಾಡುವುದೆಂದರೆ ಮರವನ್ನು ಕಡಿದು ಉರುಳಿಸಿದಂತೆ
         - ಕೆಲವೇ ನಿಮಿಷಗಳ ಕೆಲಸ....

ಒಬ್ಬರನ್ನು ಸಂತೋಷಪಡಿಸುವುದೆಂದರೆ ಗಿಡವನ್ನು ನೆಟ್ಟು, ಮರವಾಗಿ ಬೆಳೆಸಿದಂತೆ
         - ತುಂಬಾ ಸಮಯ, ಪ್ರೀತಿ, ತಾಳ್ಮೆ, ಕಾಳಜಿಯ ಅಗತ್ಯವಿರುತ್ತದೆ....

ಬದುಕು ಆಶೀರ್ವಾದಗಳ ಸಂತೆ,ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು.
           .. "ಶಾಂತವಾಗಿ ಆಲೋಚಿಸಿ ನೋಡಿ"

1.. ಜಾಹೀರಾತು

2.ಜಾಹೀರಾತು