Print friendly

ಭಾನುವಾರ, ಏಪ್ರಿಲ್ 22, 2018

ಅಮ್ಮನಿಗಾಗಿ.....(To Mother)

ನನ್ನ ಮೊದಲ ಗೆಳತಿಯಾದೆ ನೀನು, ಕಲಿಸಿದೆ ನಾಲಕ್ಕೂ ಅಕ್ಷರವನ್ನು,
ಪ್ರೀತಿ ಉಣಿಸುತ್ತಲೇ ಎದೇಯೆತ್ತರಕ್ಕೆ ಸಲುಗಿದೆ ನನನ್ನು.
ಇಡೀ ಜಗತನ್ನೆ ಗೆಲ್ಲುವೆ ಒಂದೇ ಕೈಯಲ್ಲಿ ನಾನು,
ಜೊತೆಯಾಗಿ ನಿಂತರೆ ಇನ್ನೊಂದು ಕೈ ಹಿಡಿದು ನೀನು.
ನೋವಾದಾಗ ನನಗೆ ನೀ ಅತ್ತೆ, ನನ್ನ
ನಲಿವಿನಲ್ಲಿ ನೀ ನಕ್ಕೆ, ಸೋಲಲ್ಲೂ ಜೊತೆಯಾಗಿ ನಿಂತೆ ನೀನು,
ಕೈ ಹಿಡಿದು ಮೇಲೆತ್ತಿ ಬದುಕ ದಾರಿಯ ತೋರಿದೆ ನೀನು.
ಸಾಲು ಸಾಲುಗಳು ಗೀಚಿ ಎಸೆದರು ಮುಗಿಯಲಿಲ್ಲ ಸಾಲುಗಳು
ನನಗೆ ನೀ ಮಾಡಿದ ಎಲ್ಲವನ್ನು. ನನಗಾಗಿ ನೀ ಎಸ್ಟು ದಣಿವೆ ಅಮ್ಮ,
ನೀನಿಲ್ಲದೇ ನಾನೇನು ಇಲ್ಲ ನನಮ್ಮ. ಪ್ರೀತಿ ಏನೆಂದು ನೀ ಕಲಿಸಿದೆ,
ನನ್ನ ಕಣ್ಣಿರ ಮೊದಲು ನೀ ಒರೆಸಿದೆ. ಸಾವಿರ ಸಾವಿರ ದಿನಗಳು ಕಳೆದರು
ನೀ ನನ್ನ ಮೊದಲ ಗುರುವಮ್ಮ, ನಾ ಮೆಚ್ಚಿದ ಮೊದಲ ಪ್ರೇಯಸಿ ನೀನಮ್ಮ.
ಯಾರು ಕದಿಯಲಾಗದು ನಿನಗಾಗಿ ಇಟ್ಟ ಪ್ರೀತಿಯನ್ನು, ನಿನ್ನಂತೆ
ಪ್ರೀತಿಸಿಲ್ಲ ಯಾರು ನನನ್ನು ಇನ್ನು. ಅಮ್ಮ ನನ್ನೊಲವು ನೀ, ನನ್ನ ಬದುಕು ನೀ. 

I LOVE YOU AMMA.
ಕೃಪೆ—> ನವೀನ್

ಕಾಮೆಂಟ್‌ಗಳಿಲ್ಲ: