ಖಗೋಲವೃತ್ತದ ೩೬೦ ಡಿಗ್ರಿ(ಅಂಶ) ಗಳನ್ನು ಅಶ್ವಿನಿ ನಕ್ಷತ್ರದ ಆರಂಭದ ಬಿಂದು ೦ ಡಿಗ್ರಿಯಿಂದ ಆರಂಭಿಸಿ ೩೦ ಡಿಗ್ರಿಗಳಂತೆ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, (ಇವು ಸೌರಮಾನ ತಿಂಗಳುಗಳ ಹೆಸರುಗಳೂ ಆಗಿವೆ) ಹೀಗೆ, ಪ್ರತಿ ೩೦ ಡಿಗ್ರಿಗಳ(೩೦ ಅಂಶ) ೧೨ ರಾಶಿಗಳಾಗಿ ವಿಂಗಡಿಸಿರುವುದೇ ಸೌರಮಾನ ತಿಂಗಳು. ಈ ಮೇಷಾದಿ ರಾಶಿಗಳಿಗೆ ಪ್ರತಿಯೊಂದಕ್ಕೂ ಒಂದೊಂದು ನಕ್ಷತ್ರಗಳ ಪುಂಜ(ಗುಂಪು) ಇದೆ. ಅದನ್ನು ಆಕಾಶದಲ್ಲಿ ಸುಲಭವಾಗಿ ಗುರುತಿಸಬಹುದು.
ಜ್ಯೋತಿಷ್ಯ ಶಾಸ್ತ್ರದಲ್ಲಿ ಆಕಾಶದಲ್ಲಿ ಸೂರ್ಯನ ಪಥವನ್ನು (ಕ್ರಾಂತಿ ವೃತ್ತ) ೧೨ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಈ ವಿಂಗಡನೆಗಳೇ ರಾಶಿಗಳು. ಪಾಶ್ಚಾತ್ಯ ಮತ್ತು ಹಿಂದೂ ಜೋತಿಷ್ಯಗಳಲ್ಲಿ ಈ ರಾಶಿಗಳು ಹೀಗಿವೆ:
ಕ್ರಮಾಂಕ | ಸಂಸ್ಕೃತ ಹೆಸರು & ಸ್ವಾಮಿ ಗ್ರಹ | ಪಾಶ್ಚಾತ್ಯ ಹೆಸರು | ತತ್ವ |
---|---|---|---|
1 | ಮೇಷ (ಮಂಗಳ) | Aries (Κριός, "ram") | Fire |
2 | ವೃಷಭ (ಶುಕ್ರ) | Taurus (Ταύρος, "bull") | Earth |
3 | ಮಿಥುನ (ಬುಧ) | Gemini (Δίδυμοι, "twins") | Air |
4 | ಕರ್ಕಾಟಕ (ಚಂದ್ರ) | Cancer (Καρκίνος, "crab") | Water |
5 | ಸಿಂಹ (ಸೂರ್ಯ) | Leo (Λέων, "lion") | Fire |
6 | ಕನ್ಯಾ (ಗುರು) | Virgo (Παρθένος, "virgin", "girl") | Earth |
7 | ತುಲಾ (ಶುಕ್ರ) | Libra (Ζυγός, "balance") | Air |
8 | ವೃಶ್ಚಿಕ (ಮಂಗಳ) | Scorpio (Σκόρπειος, "scorpion") | Water |
9 | ಧನುಸ್ (ಬುಧು) | Sagittarius (Τοξότης, "archer", "bow") | Fire |
10 | ಮಕರ:(ಮೊಸಳೆ-ಭಾರತೀಯ) (ಶನಿ) | Capricorn (Αἰγόκερως, "goat-horned", "sea-monster") | Earth |
11 | ಕುಂಭ (ಶನಿ) | Aquarius (Ὑδροχόος, "water-pourer", "pitcher") | Air |
12 | ಮೀನ (ಗುರು) | Pisces (Ἰχθείς, "fish") | Water |
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.