ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಮಂಗಳವಾರ, ಆಗಸ್ಟ್ 22, 2017

ನಮ್ಮಮ್ಮ

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ
ತುಂಬಿದ ಮನೆಯಲ್ಲಿ ಜನಿಸಿದ್ದು
ಅಪ್ಪಯ್ಯನ ಮುದ್ದಿನ ಮಗಳಾಗಿದ್ದು
ವಯಸಿಗೂ ಮೀರಿ ಭಾರ ಹೊತ್ತಿದ್ದು
ದಿಂಬಿಗೆ ತಲೆಯಾನಿಸಿ ಅತ್ತಿದ್ದು

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ
ಗೀತೆ ರಾಮಾಯಣ ಓದಿ ನೀ ಬಿಕ್ಕಿದ್ದು
ಕರ್ಣ ಸೀತೆಗೂ ಮಿಗಿಲಾಗಿ ಬದುಕಿದ್ದು
ಜಾತಿ ಮತ ಮೀರಿ ನೀ ಬೆಳೆದು ನಿಂತಿದ್ದು
ಜ್ಞಾನ ಧರ್ಮದ ಸೌರಭ ಹರಡಿದ್ದು

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ
ನವಮಾಸ ನೋವನು ನಗುತಾ ಭರಿಸಿದ್ದು
ಎದೆಯ ಅಮೃತಕೆ ಪ್ರೀತಿ ಬೆರೆಸಿ ಕುಡಿಸಿದ್ದು
ದೇಶ ಭಕ್ತಿ ನ್ಯಾಯ ನೀತಿ ತ್ಯಾಗವ ಕಲಿಸಿದ್ದು
ಸಂಸ್ಕೃತಿ ಸಂಸ್ಕಾರಗಳ ಪಾಠ ನೀ ಹೇಳಿದ್ದು

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ
ದಿನವೆಲ್ಲ ದುಡಿದು ಬರಿ ಹೊಟ್ಟೆಯಲಿ ಮಲಗಿದ್ದು
ಸೆಗಣಿ ಬೆರಣಿ ತಟ್ಟಿ ನಮ್ಮ ಹೊಟ್ಟೆ ತುಂಬಿದ್ದು
ಅಳು ನುಂಗಿ ನಕ್ಕು ಛಲದಿಂದ ನಡೆದಿದ್ದು
ನಿನ್ನೆದುರು ಬದುಕೇ ಸೋತು ಶರಣಾಗಿದ್ದು

ನಿನಗೆ ಗೊತ್ತೇನಮ್ಮಾ
ನೀನೇ ಕಲ್ಪವೃಕ್ಷವಾಗಿ ನೆರಳು ನೀಡಿದ್ದು
ನೆರಳಲ್ಲೇ ನಮ್ಮ ಬಾಳು ಬೆಳಗಿದ್ದು
***************************
(“ಅಮ್ಮ ನಿನ್ನ ಒಲುಮೆಗೆ” ಕವನ ಸಂಕಲನದಲ್ಲಿ ಪ್ರಕಟವಾಗಿದೆ.)    – ‘ಶಮ’, ನಂದಿಬೆಟ್ಟ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು