ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಗುರುವಾರ, ಆಗಸ್ಟ್ 31, 2017

ಕನ್ನಡ ಮಾತೆಯರೇಕೊ

ಕನ್ನಡ ಮಾತೆಯರೇಕೊ
ಕನ್ನಡ ಮಾತೆ ಆಡರಲ್ಲ ?
ಮಕ್ಕಳೊಡನೆ ಮಾತಾಟ
ಕನ್ನಡವೆಲ್ಲಿ ಕಾಣೆಯಾಯ್ತ ? ||

ಮಮ್ಮೀ ಡ್ಯಾಡೀ ಮಧುರ
ಕರೆಯಲದೆಷ್ಟೂ ಸದರ 
ಅಪ್ಪ ಅವ್ವಾ ಅಮ್ಮಾ ಅಣ್ಣ
ಅನ್ನಬೇಕಿತ್ತಲ್ಲಾ ಉದರ ? ||

ಉಳಿವಿಗಾಗಿ ಹೋರಾಟ
ನಿಜ ಬದುಕೆ ಜೂಜಾಟ
ಜೂಜಿನ ಜೂಟಾಟ ಕುತ್ತೆ
ಕಳುವಾಗದಿಹಳೆ ಮಾತೆ ? ||

ಉಂಡು ತಿಂದು ಲಾಲಿ
ಹಾಡುವಾಗ ಜೋಕಾಲಿ
ಕಂದ ಮಲಗೆಂದು ಹಾಡಿ
ಮಿಡಿದರದೆ ಕನ್ನಡ ದುಡಿ ||

ಟುಸು ಪುಸು ಜಗದಾಚೆ
ಜತೆ ಕೂತ ಆತ್ಮೀಯತೆ
ಬಚ್ಚಿಡದೆ ಬಿಚ್ಚಲಿ ಮಾತೆ
ಕನ್ನಡ ತಾಯಿಗೆ ಘನತೆ ||

- ನಾಗೇಶ ಮೈಸೂರು

ಸೋಮವಾರ, ಆಗಸ್ಟ್ 28, 2017

ಕಂದನ ಕಾಮಿಡಿ ಪಂಚ್

ಜಗತ್ತಿನ ಏಕೈಕ ಕಾಗದ ರಹಿತ ಹೊತ್ತಿಗೆ (ಬುಕ್) - ಫೇಸ್ ಬುಕ್
ಜಗತ್ತಿನ ಅತಿದೊಡ್ಡ ಗೇಟ್‍                             - ಕೋಲ್ಗೇಟ್
ಅತಿದೊಡ್ಡ ಬಾಮ್‍                                    - ಝಂಡೂಬಾಮ್
ವಿಶ್ವದ ಅತಿ ಭಯಂಕರ ಸಿಟಿ                           - ಇಲ್ಟ್ರೆಕಿಸಿಟಿ
ಅತಿ ಹೆಚ್ಚು ಮಾರಕವಾದ ಬನ್                      - ಕಾರ್ಬನ್
ನವರಸಗಳಿಂತ ಭಿನ್ನವಾದ ರಸ                     - ಪಾದರಸ
ದಾನಗಳ್ಲಿ ಹೆಚ್ಚು ಫಲದಾಯಕ                    - ಮತದಾನ

ಅತಿ ಹೆಚ್ಚು ಉಷ್ಣಹೊಂದಿರುವ ಟಿವಿ             - ಸನ್ ಟಿವಿ 

ಬುಧವಾರ, ಆಗಸ್ಟ್ 23, 2017

ಶಿವರಾಮ ಕಾರಂತರು

ಬಹುಮುಖ ವ್ಯಕ್ತಿತ್ವದ ತ್ರಿವಿಕ್ರಮ ಪ್ರತಿಭೆಯ ಶಿವರಾಮ ಕಾರಂತರು
ಕೋಟ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಜ್ಞಾನಪೀಠದೆತ್ತರಕ್ಕೆ ಬೆಳೆದ ಕಾರಂತರದು ಅಸಾಧಾರಣ - ಅನುಪಮ ಪ್ರತಿಭೆ

ಕೋಟಾ ಶಿವರಾಮ ಕಾರಂತರು ಕೇವಲ ಕವಿ-ಸಾಹಿತಿ -ಲೇಖಕರಷ್ಟೇ ಅಲ್ಲ. ಅವರದು ಬಹುಮುಖ ಪ್ರತಿಭೆ. ಕಾರಂತರು ಶ್ರೇಷ್ಠ ಕನ್ನಡ ಸಾಹಿತಿಕಲಾವಿದವಿಜ್ಞಾನ ವಿಲಾಸಿ,ಅಲೆಮಾರಿಪತ್ರಕರ್ತಪ್ರಯೋಗಶೀಲನೃತ್ಯಪಟುಪರಿಸರವಾದಿಸ್ವಾತಂತ್ರ್ಯ ಹೋರಾಟಗಾರಭಾಷಾ ಶಾಸ್ತ್ರಜ್ಞ... ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತದೆ. ಕಾರಂತರಷ್ಟು ಶ್ರದ್ಧಾಪೂರ್ಣ ಮತ್ತು ಕ್ರಿಯಾಪೂರ್ಣ ಸೇವೆಯನ್ನು ಕನ್ನಡದಲ್ಲಿ ಮತ್ತಾರೂ ಮಾಡಿಲ್ಲ ಎಂದೇ ಹೇಳಬಹುದು.

ನಡೆದಾಡುವ ವಿಶ್ವಕೋಶಕಡಲತೀರದ ಭಾರ್ಗವ ಎಂದೇ ಖ್ಯಾತರಾಗಿದ್ದ ಕಾರಂತರು ಹುಟ್ಟಿದ್ದು ಅಕ್ಟೋಬರ್ ೧೦,೧೯೦೨ರಂದು. ಹುಟ್ಟೂರು ಕಡಲ ತೀರದ ಕೋಟತಂದೆ ಶೇಷ ಕಾರಂತತಾಯಿ ಲಕ್ಷ್ಮೀ. ಲಕ್ಷ್ಮೀ -ಶೇಷಕಾರಂತ ದಂಪತಿಗಳಿಗೆ ಐದನೇ ಮಗನಾಗಿ ಜನಿಸಿದ ಕಾರಂತರುಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದಾಗಮಹಾತ್ಮಾ ಗಾಂ ಅವರ ತತ್ವಗಳಿಂದ ಪ್ರಭಾವಿತರಾಗಿ ಅಸಹಕಾರ ಚಳವಳಿಗೆ ಧುಮುಕಿದರು. ಆನಂತರ ಪತ್ರಕರ್ತರಾಗಿ,ಛಾಯಾಗ್ರಾಹಕರಾಗಿನೃತ್ಯಪಟುವಾಗಿಸಿನಿಮಾ ನಿರ್ಮಾಪಕರಾಗಿ ಹತ್ತು ಹಲವು ಕ್ಷೇತ್ರಗಳಲ್ಲಿ ಕಾರಂತರು ದುಡಿದರು. ಕೈಸುಟ್ಟುಕೊಂಡರು. ಯಕ್ಷಗಾನಕೋಲಾಟ ಪ್ರದರ್ಶನದಲ್ಲಿ ಅಪ್ರತಿಮ ಯಶಸ್ಸು ಗಳಿಸಿದಕ್ಷಿಣ ಕನ್ನಡ ಜಿಲ್ಲೆಯ ಜೀವಂತ ಕಲೆಯ ಪರಿಚಯವನ್ನು ದೇಶಾದ್ಯಂತ ಮಾಡಿದರು.
ಪ್ರವಾಸಿ - ಅಲೆಮಾರಿ: ಕೆಲವನ್ನು ಬಲ್ಲವರಿಂದ ಕಲಿತುಮತ್ತೆ ಕೆಲವನ್ನು ಕೋಶ ಓದಿ ತಿಳಿದುಮತ್ತೆ ಕೆಲವನ್ನು ವಿಶ್ವಪರ್ಯಟನೆಯಿಂದ ಅರಿಯಬೇಕೆನ್ನುವ ಹಿರಿಯ ಸಿದ್ಧಾಂತವನ್ನು ತಮ್ಮ ಬಾಳಲ್ಲೂ ಅಳವಡಿಸಿಕೊಂಡ ಕಾರಂತರಿಗೆ ಸಂಚಾರ (ಅಲೆಮಾರಿತನ) ಕಲಿಸಿದ್ದು ಅಪಾರ. ಸಿಂಹಳನೇಪಾಳಬೀರುತ್ಇರಾನ್,ಆಫ್ಘಾನಿಸ್ತಾನಹಾಂಕಾಂಗ್ಜಪಾನುಗಳ ಸುತ್ತಿಬಂದ ಕಾರಂತರ ಪೂರ್ವದಿಂದ ಅತ್ಯಪೂರ್ವಕ್ಕೆ ಕೃತಿಯ ಬೆನ್ನುಡಿಯಲ್ಲಿ ಸಂಚಾರದ ಬಗ್ಗೆ ಕಾರಂತರ ಅಭಿಪ್ರಾಯ ಹೀಗಿದೆ :
...ಸಂಚಾರ ನನ್ನ ಬದುಕಿಗೆ ಅವಿರತವಾಗಿ ಬೆರೆತದ್ದುಪುಟಕೊಟ್ಟಿದ್ದುಸೂರ್ತಿಕೊಟ್ಟಿದ್ದುಬಾಹ್ಯ ಜಗತ್ತಿನ ಅನುಭವಕ್ಕೆ ಹೆದ್ದಾರಿಯಾದದ್ದು.
... ಆ ಸಂಚಾರದ ಅನುಭವಗಳೇ ನನ್ನ ಸಾಹಿತ್ಯಕ್ಕೆ ಜೀವಕಳೆಯನ್ನು ಒದಗಿಸಬೇಕು. ಸಾಹಿತ್ಯಕ್ಕೆ ಬೇಕಾದ ವಸ್ತುವನ್ನು ಸ್ವಯಂಸೂರ್ತಿಯಿಂದಲೇ ಸೃಷ್ಟಿ ಮಾಡಿಕಲ್ಪನಾವಿಲಾಸದಿಂದಲೇ ಅಲಂಕರಿಸಿ ಯಾರನ್ನೂ ಮೆಚ್ಚಿಸುವುದಕ್ಕೆ ಹೋಗಲಾರೆ. .... ಸಂಚಾರ ನನ್ನ ಪಾಲಿಗೆ ನಿತ್ಯದ ವಿದ್ಯಾಭ್ಯಾಸ.
ಕೃತಿ : ಕಾರಂತರು ನಾಲ್ಕು ಸಂಪುಟಗಳ ವಿಜ್ಞಾನ ಪ್ರಪಂಚಸಿರಿಗನ್ನಡ ಅರ್ಥಕೋಶ೪೪ ಕಾದಂಬರಿ೧೬ ನಾಟಕ೩ ಕಥಾ ಸಂಕಲನ೬ ಪ್ರಬಂಧ ಮತ್ತು ಚಿತ್ರಣಕವನ ಸಂಗ್ರಹ೫ ಆತ್ಮಕಥೆ ಮತ್ತು ಜೀವನ ಚರಿತ್ರೆವಿಚಾರ ಸಾಹಿತ್ಯ೨೫ ಮಕ್ಕಳ ಸಾಹಿತ್ಯಪ್ರವಾಸ ಕಥನಕಿರಿಯರ ವಿಶ್ವಕೋಶಗೀತರೂಪಕ ಸೇರಿದಂತೆ ೧೫೦ಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ.
ಪ್ರಶಸ್ತಿ ಪಾರಿತೋಷಕ : ಈ ಮಹಾನ್ ಸಾಹಿತ್ಯ ಸಾಧಕನಿಗೆ ಜ್ಞಾನಪೀಠ ಪ್ರಶಸ್ತಿ (ಮೂಕಜ್ಜಿಯ ಕನಸು),ಪದ್ಮಭೂಷಣಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಎರಡು ಗೌರವ ಡಾಕ್ಟರೇಟ್ತುಲಸಿ ಸಮ್ಮಾನ್ಇಂದಿರಾಗಾಂ ವೃಕ್ಷಮಿತ್ರ ಪ್ರಶಸ್ತಿಪಂಪ ಪ್ರಶಸ್ತಿಸ್ವೀಡಿಷ್ ಅಕಾಡಮಿ ಪಾರಿತೋಷಕವೇ ಮೊದಲಾದ ಹಲವು ಪ್ರಶಸ್ತಿಗಳು ಸಂದಿವೆ. ಕಾರಂತರು ಬದುಕಿದ್ದಿದ್ದರೆ ಈಹೊತ್ತು ಶತಾಯುಷಿಗಳಾಗಿರುತ್ತಿದ್ದರು. ಆದರೆತಮ್ಮ ೯೩ನೇ (೧೯೯೭) ವಯಸ್ಸಿನಲ್ಲಿ ಕಾರಂತರು ಇಹವನ್ನು ತ್ಯಜಿಸಿದರು.
                                                                                             ಕೃಪೆ   =>> ಟಿ.ಎಂ.ಸತೀಶ್

ಮಂಗಳವಾರ, ಆಗಸ್ಟ್ 22, 2017

ನಮ್ಮಮ್ಮ

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ
ತುಂಬಿದ ಮನೆಯಲ್ಲಿ ಜನಿಸಿದ್ದು
ಅಪ್ಪಯ್ಯನ ಮುದ್ದಿನ ಮಗಳಾಗಿದ್ದು
ವಯಸಿಗೂ ಮೀರಿ ಭಾರ ಹೊತ್ತಿದ್ದು
ದಿಂಬಿಗೆ ತಲೆಯಾನಿಸಿ ಅತ್ತಿದ್ದು

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ
ಗೀತೆ ರಾಮಾಯಣ ಓದಿ ನೀ ಬಿಕ್ಕಿದ್ದು
ಕರ್ಣ ಸೀತೆಗೂ ಮಿಗಿಲಾಗಿ ಬದುಕಿದ್ದು
ಜಾತಿ ಮತ ಮೀರಿ ನೀ ಬೆಳೆದು ನಿಂತಿದ್ದು
ಜ್ಞಾನ ಧರ್ಮದ ಸೌರಭ ಹರಡಿದ್ದು

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ
ನವಮಾಸ ನೋವನು ನಗುತಾ ಭರಿಸಿದ್ದು
ಎದೆಯ ಅಮೃತಕೆ ಪ್ರೀತಿ ಬೆರೆಸಿ ಕುಡಿಸಿದ್ದು
ದೇಶ ಭಕ್ತಿ ನ್ಯಾಯ ನೀತಿ ತ್ಯಾಗವ ಕಲಿಸಿದ್ದು
ಸಂಸ್ಕೃತಿ ಸಂಸ್ಕಾರಗಳ ಪಾಠ ನೀ ಹೇಳಿದ್ದು

ನನಗೆ ಗೊತ್ತಿಲ್ಲ ಎಂದುಕೊಂಡೆಯಾ ಅಮ್ಮ
ದಿನವೆಲ್ಲ ದುಡಿದು ಬರಿ ಹೊಟ್ಟೆಯಲಿ ಮಲಗಿದ್ದು
ಸೆಗಣಿ ಬೆರಣಿ ತಟ್ಟಿ ನಮ್ಮ ಹೊಟ್ಟೆ ತುಂಬಿದ್ದು
ಅಳು ನುಂಗಿ ನಕ್ಕು ಛಲದಿಂದ ನಡೆದಿದ್ದು
ನಿನ್ನೆದುರು ಬದುಕೇ ಸೋತು ಶರಣಾಗಿದ್ದು

ನಿನಗೆ ಗೊತ್ತೇನಮ್ಮಾ
ನೀನೇ ಕಲ್ಪವೃಕ್ಷವಾಗಿ ನೆರಳು ನೀಡಿದ್ದು
ನೆರಳಲ್ಲೇ ನಮ್ಮ ಬಾಳು ಬೆಳಗಿದ್ದು
***************************
(“ಅಮ್ಮ ನಿನ್ನ ಒಲುಮೆಗೆ” ಕವನ ಸಂಕಲನದಲ್ಲಿ ಪ್ರಕಟವಾಗಿದೆ.)    – ‘ಶಮ’, ನಂದಿಬೆಟ್ಟ

ಭಾನುವಾರ, ಆಗಸ್ಟ್ 20, 2017

ಗ೦ಟೆ



ಎಳೆಯುತ ಗಾಡೀ ! ಎತ್ತಿನ ಜೋಡಿ

ದಡ ಬಡ ಸದ್ದಿನ ನಮ್ಗಾಡಿ

ಕೊರಳಿಗೆ ಗ೦ಟೆ ! ಕ೦ಚಿನ ಗ೦ಟೆ

ಘಣ ! ಘಣ ! ಗ೦ಟೆ

ಝಣ ! ಝಣ ! ಝಣ ! ಗ೦ಟೆ

ಕೊ೦ಬಿನ ಕಳಸಕೆ ಕಟ್ಟಿದ ಗೆಜ್ಜೆ

ಕಡಾಣಿ ಕ೦ಬಿಗೆ ಹಾಕಿದ ಗೆಜ್ಜೆ

ಝಣ ! ಝಣ ! ಝಣ ! ಗೆಜ್ಜೆ

ತಾಳಕೆ ಇಡುತಿಹ ಎತ್ತಿನ ಹೆಜ್ಜೆ

ಘಲು ! ಘಲು ! ಘಲು ! ಗೆಜ್ಜೆ

ಘಲು ! ಘಲು ! ಘಲು ! ಗೆಜ್ಜೆ

ಗಾಲಿಯು ಉರುಳುವ ಕಟಕಟ ಸದ್ದು

ಗಾಡಿಯು ಓಡುವ ದಡ ಬಡ ಸದ್ದು

ದಡ ! ಬಡ ! ದಡ ! ಸದ್ದು

ಬುಧವಾರ, ಆಗಸ್ಟ್ 09, 2017

ಸ್ವಾರಸ್ಯದ ಸಂಗತಿಗಳು 1

·        ©¢gÀÄ MAzÀÄ ¢£ÀPÉÌ 24 EAZÀÄ ¨É¼ÉAiÀħ®èzÀÄ.
·        gÁfêïUÁA¢ü SÉïïgÀvÀß ¥Àæ±À¹ÛAiÀÄ£ÀÄß ªÉÆzÀ®Ä ¥ÀqÉzÀªÀgÀÄ «±Àé£ÁxÀ£ï D£ÀAzï
·        ªÁå¯ÉAn£Á mÉgɱɯÌêÁ ¨ÁºÁåPÁ±ÀzÀ°è ¥ÀæAiÀiÁt ªÀiÁrzÀ ªÉÆzÀ® ªÀÄ»¼É UÀUÀ£ÀAiÀiÁwæ
·        gÁªÀÄZÀjvÀ ªÀiÁ£À¸À PÀÈwAiÀÄ£ÀÄß gÀa¹zÀªÀgÀÄ vÀļÀ¹zÁ¸ÀgÀÄ
·        MgÉÆÃ®f JAzÀgÉ ¥ÀªÀðvÀ CzsÀåAiÀÄ£À «eÁÕ£À

ಕೃಪೆ : ಕೆ.ಟಿ.ಆರ್

ಬುಧವಾರ, ಆಗಸ್ಟ್ 02, 2017

ಮಂಗಳ ಸೂತ್ರದ ಮೂರು ಗಂಟಿನ ಮಹತ್ವ

       ಮಂಗ ಸೂತ್ರವನ್ನು ಮೂರು ಗಂಟು ಹಾಕಿ ಕಟ್ಟಲಾಗುತ್ತದೆ. ಒಂದೊಂದು ಗಂಟಿಗೆ ಒಂದೊಂದು ಅರ್ಥವಿದೆ.
..
ಮೊದಲನೇಯ ಗಂಟು
ಗಂಡನೊಂದಿಗಿನ ವಿಧೇಯತೆಗಾಗಿ ಹಾಕಿದರೆ,
..
ಎರಡನೇಯ ಗಂಟು
ಕುಟುಂಬದವರೊಂದಿಗೆ ವಿಧೇಯತೆ ಇರಲಿ ಎಂದು ಹಾಕುವುದು,
..
ಮೂರನೇಯ ಗಂಟು
ಪರಮಾತ್ಮನಲ್ಲಿ ಶ್ರದ್ದೆಯಿರಲಿ ಎಂದು ಹಾಕುವುದು.
..
ಇಷ್ಟೆಲ್ಲ ನಿಯಮಗಳ ಅನುಸರಿಸಿ ಪದ್ಧತಿ ಪ್ರಕಾರ ಕಟ್ಟಿದ ತಾಳಿಯನ್ನು ಗೃಹಿಣಿಯರು ಸಹ ಅಷ್ಟೇ ಶ್ರದ್ದೆಯಿಂದ ಧರಿಸುತ್ತಿದ್ದಾರೆ.

1.. ಜಾಹೀರಾತು

2.ಜಾಹೀರಾತು