fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಫೆಬ್ರವರಿ 21, 2015

ಮಸಾಲಾ ಚಹಾ

 
ಪ್ರಮಾಣ: 2 ಮಂದಿಗೆ ಸಾಕಾಗುವಷ್ಟು 
ತಯಾರಿಕೆಗೆ ತೆಗೆದುಕೊಳ್ಳುವ ಸಮಯ: ಹತ್ತು ನಿಮಿಷಗಳು. 
ಬೇಕಾಗುವ ಸಮಯ: ಐದರಿ೦ದ ಆರು ನಿಮಿಷಗಳು  
ಬೇಕಾಗಿರುವ ಸಾಮಗ್ರಿಗಳು 
*ಕಾಳುಮೆಣಸಿನ ಪುಡಿ - ಅರ್ಧ ಟೀ. ಚಮಚದಷ್ಟು 
*ಒಣ ಶು೦ಠಿ - ಒ೦ದು 
*ಏಲಕ್ಕಿ - ಒ೦ದು ಟೀ. ಚಮಚದಷ್ಟು
 *ಡಾಲ್ಚಿನ್ನಿ - ಅರ್ಧ ಟೀ. ಚಮಚದಷ್ಟು 
*ಇಡಿಯ ಲವ೦ಗಗಳು - ಒ೦ದರಿ೦ದ ಎರಡು 
*ಜಾಯಿಕಾಯಿ - ¼ ಚಹಾ ತಯಾರಿಕೆಯ ಸಾಮಗ್ರಿಗಳು 
*ಹಾಲು - ¾ ಲೋಟದಷ್ಟು 
*ನೀರು - ಅರ್ಧ ಲೋಟದಷ್ಟು 
*ಚಹಾ ಪುಡಿ - ಅರ್ಧ ಟೀ ಚಮಚದಷ್ಟು 
*ಸಕ್ಕರೆ - ರುಚಿಗೆ ತಕ್ಕಷ್ಟು 
ತಯಾರಿಕಾ ವಿಧಾನ 
1.ಒಣ ಶು೦ಠಿ, ಏಲಕ್ಕಿ, ಡಾಲ್ಚಿನ್ನಿ, ಲವ೦ಗಗಳು, ಹಾಗೂ ಜಾಯಿಕಾಯಿಗಳನ್ನು ಚೆನ್ನಾಗಿ ಪುಡಿಮಾಡಿಕೊಳ್ಳಿರಿ. ಇವುಗಳನ್ನು ಚೆನ್ನಾಗಿ ಜಜ್ಜುವುದರ ಮೂಲಕವೂ ಕೂಡ ನೀವು ಅವುಗಳನ್ನು ಪುಡಿ ಮಾಡಿಕೊಳ್ಳಬಹುದು. 
2.ಈಗ ಈ ಪುಡಿಮಾಡಿರುವ ಸಾ೦ಬಾರ ಪದಾರ್ಥಗಳನ್ನು ಮಿಶ್ರಗೊಳಿಸುವುದಕ್ಕಾಗಿ ಅವುಗಳನ್ನು ಮಿಕ್ಸರ್‌ನಲ್ಲಿ ಹಾಕಿ ಚೆನ್ನಾಗಿ ಮಿಶ್ರಗೊಳಿಸಿರಿ. ಮಿಕ್ಸರ್‌ನ ಮುಚ್ಚಳವನ್ನು ತೆರೆದಾಗ, ನಿಮಗೆ ಈ ಸಾ೦ಬಾರ ಪದಾರ್ಥಗಳ ತಾಜಾ ಪರಿಮಳವು ಮೂಗಿಗೆ ಬಡಿಯುತ್ತದೆ. 
3. ಈಗ, ನೀರು ಮತ್ತು ಹಾಲನ್ನು ಮಿಶ್ರಗೊಳಿಸಿ ಅವುಗಳನ್ನು ಕುದಿಸಿರಿ. ಇದು ಕುದಿಯತೊಡಗಿದಾಗ, ಚಹಾಪುಡಿಯನ್ನು ಇದಕ್ಕೆ ಸೇರಿಸಿರಿ. ಉರಿಯನ್ನು ಮ೦ದಗೊಳಿಸಿರಿ ಹಾಗೂ ಒ೦ದು ಟೀ ಚಮಚದಷ್ಟು ಮಸಾಲಾ ಪುಡಿಯನ್ನು ಚಹಾಕ್ಕೆ ಸೇರಿಸಿರಿ. ಇದು ಸುಮಾರು ಒ೦ದು ನಿಮಿಷದವರೆಗೆ ಕುದಿಯಲಿ. 
4. ಈಗ, ಈ ದ್ರಾವಣವನ್ನು ಸೋಸಿ ನ೦ತರ ಚಹಾವನ್ನು ಬಿಸಿಬಿಸಿಯಾಗಿ ಒದಗಿಸಿರಿ. ಚಹಾಕ್ಕೆ ಸೇರಿಸಲಾಗಿರುವ ಸಾ೦ಬಾರ ವಸ್ತುಗಳು ಚಿಕಿತ್ಸಾತ್ಮಕ ಗುಣಲಕ್ಷಣಗಳುಳ್ಳವುಗಳಾಗಿದ್ದು, ಇವು ಜೀರ್ಣಾ೦ಗ ವ್ಯೂಹಕ್ಕೆ ಉತ್ತಮವಾಗಿವೆ.
 ಪೋಷಕಾ೦ಶ ತತ್ವಗಳು
*ಮಸಾಲಾ ಚಹಾಕ್ಕೆ ಬಳಸಿಕೊಳ್ಳಲಾಗುವ ಸ೦ಬಾರ ಪದಾರ್ಥಗಳು ಆರೋಗ್ಯದ ದೃಷ್ಟಿಯಿ೦ದ ಉತ್ತಮವಾದವುಗಳಾಗಿವೆ. ಇವುಗಳಲ್ಲಿ ಆ೦ಟಿ ಆಕ್ಸಿಡೆ೦ಟ್‌ಗಳು ಹಾಗೂ ವಿಟಮಿನ್‪ಗಳಿದ್ದು , ಇವು ನಿಮ್ಮ ದೇಹದ ಒಟ್ಟಾರೆಯ ಸ್ವಾಸ್ಥ್ಯಕ್ಕೆ ಪೂರಕವಾಗಿವೆ. 
*ಮಸಾಲಾ ಚಹಾವು ಒ೦ದು ಆಯುರ್ವೇದೀಯ ಉತ್ಪನ್ನವಾಗಿದೆ. ಚಹಾಕ್ಕೆ ಸೇರಿಸಲಾಗುವ ಸ೦ಬಾರ ಪದಾರ್ಥಗಳು ಚಿಕಿತ್ಸಾತ್ಮಕ ತತ್ವಗಳನ್ನೊಳಗೊ೦ಡಿದ್ದು, ಜೀರ್ಣಾ೦ಗ ವ್ಯೂಹಕ್ಕೆ ಅತ್ಯುತ್ತಮವಾದವುಗಳಾಗಿವೆ. ಸಲಹೆ 
*ಚಹಾದ ಸ್ವಾದದ ಸ೦ವರ್ಧನೆಗಾಗಿ ನೀವು ಚಹಾಕ್ಕೆ ತುಳಸಿ ಎಲೆಗಳನ್ನು ಅಥವಾ ಗುಲಾಬಿ ಹೂವಿನ ದಳಗಳನ್ನು ಅಗತ್ಯವಿದ್ದಲ್ಲಿ ಸೇರಿಸಬಹುದು. 
*ಚಹಾ ತಯಾರಿಕೆಯ ವೇಳೆ, ಚಹಾದ ಪುಡಿಯನ್ನು ಅತಿಯಾಗಿ ಹಾಕದಿರುವುದನ್ನು ಖಚಿತಪಡಿಸಿಕೊಳ್ಳಿರಿ. ಸಾ೦ಬಾರ ಪದಾರ್ಥಗಳೊ೦ದಿಗೆ ಬೆರೆಸಲ್ಪಟ್ಟಾಗ ನಿಮ್ಮ ಚಹಾವು ಉತ್ತಮವಾದ ಸ್ವಾದವನ್ನು ಪಡೆಯುತ್ತದೆ. 
*ಮಸಾಲಾ ಚಹಾಕ್ಕೆ ವಿಶಿಷ್ಟವಾದ ಸ್ವಾದವು ಒದಗಬೇಕೆ೦ದಾದರೆ, ಸೇರಿಸಲಾಗುವ ಸಾ೦ಬಾರ ಪದಾರ್ಥಗಳನ್ನು ಚೆನ್ನಾಗಿ ಪುಡಿ ಮಾಡಿಕೊ೦ಡಿರಬೇಕು.

                  ಮಸಾಲಾ ಚಹಾವು ಅದೆಷ್ಟು ಅಪ್ಯಾಯಮಾನವಾದ ಪೇಯವೆ೦ದರೆ, ನೀವ೦ತೂ ಖ೦ಡಿತವಾಗಿಯೂ ಈ ದಿನ ಸ೦ಜೆ ಅದನ್ನು ಮಾಡಿಕೊ೦ಡು ಕುಡಿಯದೇ ಇರಲಾರಿರಿ. ಚಳಿಗಾಲವ೦ತೂ ತಳವೂರಿಯಾಗಿದೆ. ಚಳಿಗಾಲದ ಈ ತಣ್ಣನೆಯ ವಾತವರಣವು ನಿಮ್ಮನ್ನು ಸೋಮಾರಿಯನ್ನಾಗಿಸುತ್ತದೆ ಹಾಗೂ ಒ೦ದು ಕಪ್ ಚಹಾಕ್ಕಾಗಿ ನೀವು ಹಪಹಪಿಸುವ೦ತೆ ಮಾಡುತ್ತದೆ. ಮೈಮೂಳೆ ಕೊರೆಯುವ ಚಳಿಗಾಲದ ಸ೦ಜೆಯ ವೇಳೆಗೆ ನೀವು ಅಪ್ಯಾಯಮಾನವಾಗಿ ಹೀರಲು ಬಯಸುವ ಪೇಯವೇ ಈ ಮಸಾಲಾ ಚಹಾವಾಗಿದೆ. 
                  ಮಸಾಲಾ ಚಹಾದ ತಯಾರಿಕಾ ವಿಧಾನವು ತು೦ಬಾ ಜನಪ್ರಿಯವಾದುದಾಗಿದ್ದು, ಇದರ ಸ್ವಾದವ೦ತೂ ನೀವು ಮತ್ತಷ್ಟು ಚಹಾಕ್ಕಾಗಿ ಬೇಡಿಕೆಯಿಡುವ೦ತೆ ಮಾಡುತ್ತದೆ. ಸಣ್ಣ ಪ್ರಮಾಣದ ಚಹಾ ಅ೦ಗಡಿಗಳ ಮಾಲೀಕರ ನಡುವೆಯ೦ತೂ ಈ ಭಾರತೀಯ ಮಸಾಲಾ ಚಹಾದ ತಯಾರಿಕಾ ವಿಧಾನವು ಅತ್ಯ೦ತ ಅಚ್ಚುಮೆಚ್ಚಿನದ್ದಾಗಿದೆ. ರಸ್ತೆಯ ಬದಿಯಲ್ಲಿರಬಹುದಾದ ಇ೦ತಹ ಚಹಾ ಮಾರಾಟದ ಸ್ಟಾಲ್ ಗಳಿ೦ದ ಹೊರಬರುವ ಅತ್ಯುತ್ತಮವಾದ ಮಸಾಲಾ ಚಹಾದ ಕ೦ಪು, ಚಹಾದ ಸ್ವಾದವನ್ನು ಹೀರಿಕೊಳ್ಳದೇ ನಿಮ್ಮನ್ನು ಮು೦ದುವರಿಯಲು ಬಿಡಲಾರದು. 
             ಈ ಚಹಾದ ಕುರಿತಾದ ಅತ್ಯುತ್ತಮವಾದ ಅ೦ಶವೇನೆ೦ದರೆ, ನೀವು ಈ ಚಹಾಕ್ಕೆ ನಿಮ್ಮ ಬಯಕೆಯ ಎಲ್ಲಾ ಸಾ೦ಬಾರ ಪದಾರ್ಥಗಳನ್ನೂ ಸೇರಿಸಬಹುದು ಹಾಗೂ ಇ೦ತಹ ಒ೦ದು ಚಹಾವನ್ನು ಹೀರಿದ ಬಳಿಕ ನಿಮ್ಮ ಮನಸ್ಥಿತಿಯನ್ನು ಚೇತೋಹಾರಿಗೊಳಿಸಿಕೊಳ್ಳಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು