fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಬುಧವಾರ, ಡಿಸೆಂಬರ್ 31, 2014
ಶುಕ್ರವಾರ, ಡಿಸೆಂಬರ್ 26, 2014
ಅಗ್ಘವಣಿ ಹಂಪಯ್ಯ -1
ಅಂಕಿತ ನಾಮ:
ಹಂಪೆಯ ಏರುತಯ್ಯ
ಕಾಲ: 1300
ದೊರಕಿರುವ ವಚನಗಳು: 4 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಕುಂತಳ ದೇಶದ ಮುಕುಂದಪುರ
ಪರಿಚಯ: ಕಾಲ. ಸು. 1300. ಕುಂತಳ ದೇಶದ ಮುಕುಂದಪುರದವನು. ಅಗ್ಘವಣಿ ಅಥವ ಶುದ್ಧ ನೀರನ್ನು ಭಕ್ತರಿಗೆ
ಕಾಲ: 1300
ದೊರಕಿರುವ ವಚನಗಳು: 4 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಕುಂತಳ ದೇಶದ ಮುಕುಂದಪುರ
ಪರಿಚಯ: ಕಾಲ. ಸು. 1300. ಕುಂತಳ ದೇಶದ ಮುಕುಂದಪುರದವನು. ಅಗ್ಘವಣಿ ಅಥವ ಶುದ್ಧ ನೀರನ್ನು ಭಕ್ತರಿಗೆ
ಒದಗಿಸುವ ಕಾಯಕ ನಡೆಸುತ್ತಿದ್ದ. ಈತನ 14 ವಚನಗಳು ದೊರೆತಿವೆ.
ಪಂಚಾಕ್ಷರಿ ಮಂತ್ರದ ಮಹಿಮೆ,
ಭಕ್ತನ ಸ್ಥಿತಿಗಳ ವರ್ಣನೆ ಈತನ ವಚನಗಳ ಮುಖ್ಯ ಆಸಕ್ತಿ.
ಹುಸಿಯ ನುಡಿಯನು ಭಕ್ತ, ವ್ಯಸನಕ್ಕೆಳಸನು ಭಕ್ತ,
ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ.
ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ ತೊತ್ತಾಗಿಪ್ಪುದು.
ಕೋಪವೆಂಥದೆಂದರಿಯ,
ವಿಷಯಂಗಳಾತಂಗೆ ತೃಣವು ನೋಡಾ, ಬಯಸುವವನಲ್ಲ ಭಕ್ತ.
ದಯೆಯೆಂಬುದು ತನ್ನ ಕೈಯಲ್ಲಿ, ಸ್ಮರಣೆಯೆಂಬುದು ತನಗೆ ತೊತ್ತಾಗಿಪ್ಪುದು.
ಕೋಪವೆಂಥದೆಂದರಿಯ,
ತಾಪತ್ರಯಂಗಳು ಮುಟ್ಟಲಮ್ಮವು, ವ್ಯಾಪ್ತಿಗಳಡಗಿದವು.
ಲಿಂಗವನೊಳಕೊಂಡ ಪರಿಣಾಮಿ.
ಆತನ ಪಥ ಲೋಕಕ್ಕೆ ಹೊಸತು, ಲೋಕದ ಪಥವಾತನಿಗೆ ಹೊಸತು.
ತನಗೊಮ್ಮೆಯು ಲಿಂಗಧ್ಯಾನ, ಲಿಂಗಕೊಮ್ಮೆಯು ತನ್ನ ಧ್ಯಾನ.
ಘನಘನಮಹಿಮೆಯ ಹೊಗಳಲೆನ್ನಳವಲ್ಲ.
ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ,
ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ.
ಲಿಂಗವನೊಳಕೊಂಡ ಪರಿಣಾಮಿ.
ಆತನ ಪಥ ಲೋಕಕ್ಕೆ ಹೊಸತು, ಲೋಕದ ಪಥವಾತನಿಗೆ ಹೊಸತು.
ತನಗೊಮ್ಮೆಯು ಲಿಂಗಧ್ಯಾನ, ಲಿಂಗಕೊಮ್ಮೆಯು ತನ್ನ ಧ್ಯಾನ.
ಘನಘನಮಹಿಮೆಯ ಹೊಗಳಲೆನ್ನಳವಲ್ಲ.
ಪನ್ನಗಧರ ಕೇಳಯ್ಯಾ, ಚೆನ್ನ ಹಂಪೆಯ ವಿರುಪಯ್ಯಾ,
ನಿಮ್ಮ ನಂಬಿದ ಸತ್ಯಶರಣ ಪರಿಣಾಮಿ.
-------------> ಅಗ್ಘವಣಿ ಹಂಪಯ್ಯ
ಅಗ್ಘವಣಿ ಹಂಪಯ್ಯ -2
ಹಂಸಪತಿ ಗರುಡಪತಿ ವೃಷಭಪತಿ
ಮೊದಲಾದ ಸರ್ವಜೀವಾಧಿಪತಿ
ದೇವರಾಯ ಮಹಾರಾಯನ ಅರಸುತನ ಹೊಸತು:
ಓಲಗಕ್ಕೆ ಬಾರ, ಸಿಂಹಾಸನದಲ್ಲಿ ಕುಳ್ಳಿರ,
ಸ್ತ್ರೀಲಂಪಟನಾಗಿ ಅಂತಃಪುರವ ಬಿಟ್ಟು ಹೊರವಂಡ.
ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ,
ಗುರುವೆಂಬ ತಳವಾರನ ಆಜ್ಞೆ ಕೆಟ್ಟಿತ್ತು,
ತೆರೆದ ಬಾಗಿಲ ಮುಚ್ಚುವರಿಲ್ಲ,
ಮುಚ್ಚಿದ ಬಾಗಿಲ ತೆರೆವವರಿಲ್ಲ.
ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು,
ಭಕ್ತರೆಂಬವರಿನ್ನು ಬದುಕಲೇ ಬಾರದು.
ಮೊದಲಾದ ಸರ್ವಜೀವಾಧಿಪತಿ
ದೇವರಾಯ ಮಹಾರಾಯನ ಅರಸುತನ ಹೊಸತು:
ಓಲಗಕ್ಕೆ ಬಾರ, ಸಿಂಹಾಸನದಲ್ಲಿ ಕುಳ್ಳಿರ,
ಸ್ತ್ರೀಲಂಪಟನಾಗಿ ಅಂತಃಪುರವ ಬಿಟ್ಟು ಹೊರವಂಡ.
ಕಪ್ಪಕಾಣಿಕೆಯನೊಪ್ಪಿಸಿಕೊಂಬವರಿಲ್ಲ,
ಗುರುವೆಂಬ ತಳವಾರನ ಆಜ್ಞೆ ಕೆಟ್ಟಿತ್ತು,
ತೆರೆದ ಬಾಗಿಲ ಮುಚ್ಚುವರಿಲ್ಲ,
ಮುಚ್ಚಿದ ಬಾಗಿಲ ತೆರೆವವರಿಲ್ಲ.
ಹಂಪೆಯ ವಿರುಪಯ್ಯನ ಅರಸುತನ ಕೆಟ್ಟಿತ್ತು,
ಭಕ್ತರೆಂಬವರಿನ್ನು ಬದುಕಲೇ ಬಾರದು.
-----> ಅಗ್ಘವಣಿ ಹಂಪಯ್ಯ
ಗುರುವಾರ, ಡಿಸೆಂಬರ್ 25, 2014
ಸೋಮವಾರ, ಡಿಸೆಂಬರ್ 22, 2014
ಮಂಗಳವಾರ, ಡಿಸೆಂಬರ್ 16, 2014
ಭಾನುವಾರ, ಡಿಸೆಂಬರ್ 14, 2014
ಪವಿತ್ರ ಶೈವಕ್ಷೇತ್ರ ಮಹಾಕೂಟ
ಚಾಲುಕ್ಯರ
ಕಾಲದ ಪ್ರಸಿದ್ಧ ಪುಣ್ಯಕ್ಷೇತ್ರ ಬಾದಾಮಿಯ ಪೂರ್ವಕ್ಕೆ ಸುಮಾರು 5 ಕಿಲೋ ಮೀಟರ್
ದೂರದ
ನಂದಿಕೇಶ್ವರ ಗ್ರಾಮದ ಬಳಿ ಇರುವ ಮತ್ತೊಂದು ತೀರ್ಥಕ್ಷೇತ್ರ ಮಹಾಕೂಟ.
ವಿರಳ ಹಾಗೂ ಬಹು ಅಪರೂಪದ
ಗಿಡಮರಗಳಿಂದ ಕೂಡಿದ ಕಾನನ ಪ್ರದೇಶದಲ್ಲಿ ಅಚ್ಛಾದಿತವಾದ ನಸುಗೆಂಪು ಮರಳು ಕಲ್ಲಿನ
ಎರಡು ಬೆಟ್ಟಗಳ ನಡುವೆ ಇರುವುದೇ ಮಹಾಕೂಟವೆಂಬ ಪುಣ್ಯಕ್ಷೇತ್ರ.
ಇಲ್ಲಿ ಮಹಾಕೂಟೇಶ್ವರ ಮತ್ತು
ಮಲ್ಲಿಕಾರ್ಜುನ ದೇಗುಲಗಳಿವೆ. ಈ ಎರಡು
ದೇವಾಲಯಗಳ ಮಧ್ಯೆ ಸುಂದರವಾದ
ಪುಷ್ಕರಣಿಯಿದ್ದು ಇದರ ಸುತ್ತಲೂ ಹಲವಾರು ಸಣ್ಣ ಪುಟ್ಟ ದೇವಾಲಯಗಳಿವೆ.
ಹಲವು
ಭಿನ್ನ ವಿಗ್ರಹಗಳನ್ನು ಪುಷ್ಕರಣಿಯ
ಸುತ್ತಲೂ ಜೋಡಿಸಿಡಲಾಗಿದೆ.
ಮಹಾಕೂಟೇಶ್ವರ ಹಾಗೂ
ಮಲ್ಲಿಕಾರ್ಜುನನ ದರ್ಶನಕ್ಕೆ ಬರುವ ಭಕ್ತರು, ಪುಷ್ಕರಣಿಯಲ್ಲಿ ಮೊದಲು ಸ್ನಾನ
ಮಾಡಿ ನಂತರ ದೇವರ ಮಾಡುತ್ತಾರೆ.
ಮಹಾಕೂಟೇಶ್ವರ
ಹಾಗೂ ಮಲ್ಲಿಕಾರ್ಜುನ ದೇವರ ದೇವಾಲಯಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಲಾಗಿದೆ.
ಬೆಟ್ಟಗಳ
ಸಾಲಿನ ನಡುವೆ,
ಹಸಿರುವನ ರಾಶಿಯ ನಡುವೆ ಕಂಗೊಳಿಸುವ ಈ ದೇಗುಲಗಳ ರಮಣೀಯವಾಗಿ
ಕಾಣುತ್ತವೆ.
ಈ ದೇಗುಲಗಳಲ್ಲಿ ಚೌರಸ
ಗರ್ಭಗೃಹವಿದೆ. ಇದಕ್ಕಿಂತ ಅಗಲವಾದ ಸಭಾ ಮಂಟಪ ಹಾಗೂ ಕಿರಿದಾದ ಮುಖಮಂಟಪವಿದೆ.
ಗರ್ಭಗುಡಿಯ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಎತ್ತರದ ಅಷ್ಠಾನ ಅಡ್ಡ
ಪಟ್ಟಿಕೆಗಳಲ್ಲಿ ಹೆಚ್ಚಾಗಿ
ಶಿವಪುರಾಣಗಳಿಗೆ
ಸಂಬಂಧಿಸಿದ ಲೌಕಿಕ ವಿಷಯದ ಶಿಲ್ಪಗಳಿವೆ. ಹೊರ ಬಿತ್ತಿಗಳಲ್ಲಿ ಜಾಲಂದ್ರವಿದೆ.
ಅರ್ಧನಾರೀಶ್ವರನ ಸುಂದರ ಕೆತ್ತನೆ ಮನಮೋಹಕವಾಗಿದೆ.
ಗಣಪನ
ಡೊಳ್ಳುಹೊಟ್ಟೆಯಲ್ಲಿ ಹೊಕ್ಕುಳ ಜಾಗದಲ್ಲಿ ದೊಡ್ಡದೊಂದು ರಂದ್ರವಿದೆ. ಭಕ್ತರು ಈ
ರಂದ್ರದಲ್ಲಿ ಎಣ್ಣೆ ಸುರಿಯುತ್ತಾರೆ.
ಈ ದೇವಾಲಯ 8ನೇ ಶತಮಾನದಲ್ಲಿ
ನಿರ್ಮಾಣವಾಗಿದೆ ಎಂಬುದು ಇಲ್ಲಿನ ಅರ್ಚಕರ ಅಂಬೋಣ..... ದೇವಾಲಯದ ಸುತ್ತ
ಅಗಸ್ತ್ತ್ಯೆಶ್ವರ,
ವೀರಭದ್ರೇಶ್ವರ ಮೊದಲಾದ ಹಲವಾರು ಚಿಕ್ಕ ಗುಡಿಗಳಿವೆ.
ಪ್ರಮುಖ ದೇಗುಲದ ಹೊರಬಿತ್ತಿಯ
ಮೇಲೆ ವಿಷ್ಣು,
ಸ್ಥಾನಕಬ್ರಹ್ಮ, ಅರ್ಧ ನಾರೀಶ್ವರ,
ಪರಶುಧರ ಶಿವ, ತ್ರಿಶೂಲಧಾರಿ ಶಿವ
ಮೊದಲಾದ ಕೆತ್ತನೆ ಇದೆ. ಕೆಳ ಪಟ್ಟಿಕೆಗಳಲ್ಲಿ ಸುಂದರ ಶಿಲ್ಪಕಲಾ ಕೆತ್ತನೆ ಇದೆ.
ಇಲ್ಲಿ ಸೂಕ್ಷ್ಮ ಕೆತ್ತನೆ ಇಲ್ಲದಿದ್ದರೂ ಮನೋಹರವಾದ ಶಿಲ್ಪಕಲಾ ಸೌಂದರ್ಯವಿದೆ.
ಬಾದಾಮಿ ಚಾಲುಕ್ಯರ
ನಾಡಿನಲ್ಲಿ ಶಿಲೆಗಳೂ ಸಂಗೀತವನ್ನು ಹಾಡುತ್ತವೆ. ವಿಶೇಷ ವಾಸ್ತು ಶೈಲಿಯ ಸುಂದರ
ದೇವಾಲಯಗಳು ಆಸ್ತಿಕರಿಗೆ ಭಕ್ತಿಭಾವ ಮೂಡಿಸಿದರೆ,
ನಾಸ್ತಿಕರನ್ನು ತಮ್ಮ ಕಲಾಶ್ರೀಮಂತಿಕೆಯಿಂದ ಕೈಬೀಸಿ
ಕರೆಯುತ್ತವೆ.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-22352901 /22352909 /22352903
Email : kstdc@vsnl.in
ಶುಕ್ರವಾರ, ಡಿಸೆಂಬರ್ 12, 2014
ಗುರುವಾರ, ಡಿಸೆಂಬರ್ 11, 2014
ಬುಧವಾರ, ಡಿಸೆಂಬರ್ 10, 2014
ನುಡಿಮುತ್ತು 18
ತಾಯಿ
ಇಲ್ಲದ
ತವರಿಗೆ
ಮಗಳು
ಬಂದರೆ
ಉರಿಬೇಸಗೆಯಲ್ಲಿ
ಮರಳು
ಗಾಡಿಗೆ
ಬಂದಂತೆ.
-ಅನಕೃ
ತಾಯಿ ಮತ್ತು ತಾಯ್ನಾಡು ಸ್ವರ್ಗಕ್ಕಿಂತ ಮಿಗಿಲು.
-ಲೋಕೋಕ್ತಿ
ದುಡಿಮೆ ಮುನ್ನಡೆಗೆ ಕೀಲಿ.
-ನಾಣ್ನುಡಿ
ದೇವರು ಒಬ್ಬನೇ. ಅವನನ್ನು ಭಾವಿಸುವ ಮನಸ್ಸುಗಳು ಮಾತ್ರ ಅನೇಕ.
-ಉಪನಿಷತ್
ದುಡ್ಡು ಎಂದರೆ ದುಡಿದು ತರಬೇಕಾದ ವಸ್ತು.
-ನಾ.ಕಸ್ತೂರಿ
ಕಾಲ
ಎನ್ನುವುದು
ನಿಂತ
ನೀರಲ್ಲ
ಹರಿಯುತ್ತಿರುವ
ಪ್ರವಾಹ.
-ಷೇಕ್ಸ್ ಪಿಯರ್
ಕಳೆದುಹೋದ ಸುಖವನ್ನು ನೆನಪಿಸಿಕೊಳ್ಳುವುದೇ ದುಃಖಗಳಲ್ಲಿ ದುಃಖ.
-ಷೇಕ್ಸ್ ಪಿಯರ್
ಕಣ್ಣುಗಳ ಬದಲಾಗಿ ಹೃದಯದಿಂದ ನೋಡುವುದೇ ತಾಳ್ಮೆ.
-ನೋಟ್ಸ್
ಕಾವ್ಯೋಪಾಸನೆಯು ಉತ್ತಮ ಆತ್ಮ ಸಂಸ್ಕಾರ.
-ಡಿವಿಜಿ
ಕೀರ್ತಿ ಬಂದಾಗ ನೆನಪಿನ ಶಕ್ತಿ ಅಳಿಯುತ್ತದೆ.
-ಹೆನ್ರಿವಾರ್ಡ್ ಬೇಚರ್
ಕೃಪೆ
: ಮಾ.ಕೃ.ಮಂಜು
ಮಂಗಳವಾರ, ಡಿಸೆಂಬರ್ 09, 2014
ಸೋಮವಾರ, ಡಿಸೆಂಬರ್ 08, 2014
ಶುಕ್ರವಾರ, ಡಿಸೆಂಬರ್ 05, 2014
ಗುರುವಾರ, ಡಿಸೆಂಬರ್ 04, 2014
ಬುಧವಾರ, ಡಿಸೆಂಬರ್ 03, 2014
ಸೋಮವಾರ, ಡಿಸೆಂಬರ್ 01, 2014
ಟಾಪ್ - 3 ನವೆಂಬರ್- 2014
ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 ) ನವೆಂಬರ್- 2014
ಬ್ರೌಸರ್ಗಳ ಪ್ರಕಾರ ವೀಕ್ಷಣೆ ಟಾಪ್
Firefox
Crome
Internet Explore
ಆಪರೇಟಿಂಗ್ ಸಿಸ್ಟಮ್ಗಳ ವೀಕ್ಷಣೆ ಟಾಪ್ 3
Windows
Android
Macintosh
ಆಪರೇಟಿಂಗ್ ಸಿಸ್ಟಮ್ಗಳ ವರ್ಷನಗಳ ಪ್ರಕಾರ
Windows XP |
Windows 7 |
Nokia Phones |
ಕಳೆದ ತಿಂಗಳಲ್ಲಿ ಪುಟಗಳ ವೀಕ್ಷಣೆ
1,369
1,369
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...