fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಡಿಸೆಂಬರ್ 14, 2014

ಪವಿತ್ರ ಶೈವಕ್ಷೇತ್ರ ಮಹಾಕೂಟ

Mahakuteswara, Mahakuta, ಮಹಾಕೂಟೇಶ್ವರ, ಮಹಾಕೂಟ*ಟಿ.ಎಂ.ಸತೀಶ್
          ಚಾಲುಕ್ಯರ ಕಾಲದ ಪ್ರಸಿದ್ಧ ಪುಣ್ಯಕ್ಷೇತ್ರ ಬಾದಾಮಿಯ ಪೂರ್ವಕ್ಕೆ ಸುಮಾರು 5 ಕಿಲೋ ಮೀಟರ್ ದೂರದ ನಂದಿಕೇಶ್ವರ ಗ್ರಾಮದ ಬಳಿ ಇರುವ ಮತ್ತೊಂದು ತೀರ್ಥಕ್ಷೇತ್ರ ಮಹಾಕೂಟ.
       ವಿರಳ ಹಾಗೂ ಬಹು ಅಪರೂಪದ ಗಿಡಮರಗಳಿಂದ ಕೂಡಿದ ಕಾನನ ಪ್ರದೇಶದಲ್ಲಿ ಅಚ್ಛಾದಿತವಾದ ನಸುಗೆಂಪು ಮರಳು ಕಲ್ಲಿನ ಎರಡು ಬೆಟ್ಟಗಳ ನಡುವೆ ಇರುವುದೇ ಮಹಾಕೂಟವೆಂಬ ಪುಣ್ಯಕ್ಷೇತ್ರ.
ಇಲ್ಲಿ ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇಗುಲಗಳಿವೆ. ಈ ಎರಡು ದೇವಾಲಯಗಳ ಮಧ್ಯೆ ಸುಂದರವಾದ ಪುಷ್ಕರಣಿಯಿದ್ದು ಇದರ ಸುತ್ತಲೂ ಹಲವಾರು ಸಣ್ಣ ಪುಟ್ಟ ದೇವಾಲಯಗಳಿವೆ. ಹಲವು ಭಿನ್ನ ವಿಗ್ರಹಗಳನ್ನು ಪುಷ್ಕರಣಿಯ ಸುತ್ತಲೂ ಜೋಡಿಸಿಡಲಾಗಿದೆ.
ಮಹಾಕೂಟೇಶ್ವರ ದೇವಾಲಯ, ಮಹಾಕೂಟ, Mahakuta, mahakoota,    ಪುಷ್ಕರಣಿಯಲ್ಲಿ ಮುಖಲಿಂಗ ಮಂಟಪ ಇದೆ. ಮುಖಲಿಂಗ ಮಂಟಪದಲ್ಲಿರುವ ಶಿವಲಿಂಗದಲ್ಲಿ  ನಾಲ್ಕುಮುಖದ ಅಪರೂಪದ ಶಿವಲಿಂಗವಿದೆ. ಅತ್ಯಂತ ಕಲಾತ್ಮಕವಾದ ಹಾಗೂ ಸೂಕ್ಷ್ಮ ಕೆತ್ತನೆಗಲಿಂದ ಕೂಡಿದ ಈ ಲಿಂಗದಲ್ಲಿರುವ ಶಿವನ ಶಿರದಲ್ಲಿ ಗುಂಗುರು ಗುಂಗುರು ಕೂದಲನ್ನೂ ಸಹ ಶಿಲ್ಪಿ ಮನೋಹರವಾಗಿ ಕೆತ್ತಿದ್ದಾನೆ.span>
ಮಹಾಕೂಟೇಶ್ವರ ಹಾಗೂ ಮಲ್ಲಿಕಾರ್ಜುನನ ದರ್ಶನಕ್ಕೆ ಬರುವ ಭಕ್ತರು,  ಪುಷ್ಕರಣಿಯಲ್ಲಿ  ಮೊದಲು ಸ್ನಾನ ಮಾಡಿ ನಂತರ ದೇವರ ಮಾಡುತ್ತಾರೆ.
ಮಹಾಕೂಟೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ದೇವಾಲಯಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬೆಟ್ಟಗಳ ಮಹಾಕೂಟೇಶ್ವರ ದೇವಾಲಯ, ಮಹಾಕೂಟ, Mahakuta, mahakoota,ಸಾಲಿನ ನಡುವೆ, ಹಸಿರುವನ ರಾಶಿಯ ನಡುವೆ ಕಂಗೊಳಿಸುವ ಈ ದೇಗುಲಗಳ ರಮಣೀಯವಾಗಿ ಕಾಣುತ್ತವೆ.
       ಈ ದೇಗುಲಗಳಲ್ಲಿ  ಚೌರಸ ಗರ್ಭಗೃಹವಿದೆ. ಇದಕ್ಕಿಂತ ಅಗಲವಾದ ಸಭಾ ಮಂಟಪ ಹಾಗೂ ಕಿರಿದಾದ ಮುಖಮಂಟಪವಿದೆ. ಗರ್ಭಗುಡಿಯ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ.  ಎತ್ತರದ ಅಷ್ಠಾನ ಅಡ್ಡ ಪಟ್ಟಿಕೆಗಳಲ್ಲಿ ಹೆಚ್ಚಾಗಿ ಶಿವಪುರಾಣಗಳಿಗೆ ಸಂಬಂಧಿಸಿದ ಲೌಕಿಕ ವಿಷಯದ ಶಿಲ್ಪಗಳಿವೆ. ಹೊರ ಬಿತ್ತಿಗಳಲ್ಲಿ  ಜಾಲಂದ್ರವಿದೆ. ಅರ್ಧನಾರೀಶ್ವರನ ಸುಂದರ ಕೆತ್ತನೆ ಮನಮೋಹಕವಾಗಿದೆ.
ಮಹಾಕೂಟೇಶ್ವರ ದೇವಾಲಯ, ಮಹಾಕೂಟ, Mahakuta, mahakoota,     ದೇವಾಲಯದ ಎದುರು ಹೊರಭಾಗದಲ್ಲಿರುವ ನಂದಿಯ ಹಿಂಭಾಗದಲ್ಲಿ ಪ್ರವೇಶದ್ವಾರಕ್ಕೆ ಎದುರುಮುಖವಾಗಿ ಗಣಪನ ವಿಗ್ರಹವಿದೆ. ಭಕ್ತರು ಈ ಗಣಪನಿಗೆ ವಿಶೇಷ  ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಅದೇನು ಗೊತ್ತೆ, ಈ ಗಣಪನ ಹೊಕ್ಕಳಿಗೆ ಭಕ್ತರು ಎಣ್ಣೆ ಹಚ್ಚುತ್ತಾರೆ.


        ಗಣಪನ ಡೊಳ್ಳುಹೊಟ್ಟೆಯಲ್ಲಿ ಹೊಕ್ಕುಳ ಜಾಗದಲ್ಲಿ ದೊಡ್ಡದೊಂದು ರಂದ್ರವಿದೆ. ಭಕ್ತರು ಈ ರಂದ್ರದಲ್ಲಿ ಎಣ್ಣೆ ಸುರಿಯುತ್ತಾರೆ.Mahakoota Ganesha, ಮಹಾಕೂಟೇಶ್ವರ ದೇವಾಲಯ ಗಣೇಶ, ಮಹಾಕೂಟ, ಬಾದಾಮಿ, ಪಟ್ಟದಕಲ್ಲು, ಐಹೊಳೆ.ಈ ದೇವಾಲಯ 8ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂಬುದು ಇಲ್ಲಿನ ಅರ್ಚಕರ ಅಂಬೋಣ..... ದೇವಾಲಯದ ಸುತ್ತ  ಅಗಸ್ತ್ತ್ಯೆಶ್ವರ, ವೀರಭದ್ರೇಶ್ವರ ಮೊದಲಾದ ಹಲವಾರು ಚಿಕ್ಕ ಗುಡಿಗಳಿವೆ.
        ಪ್ರಮುಖ ದೇಗುಲದ ಹೊರಬಿತ್ತಿಯ ಮೇಲೆ ವಿಷ್ಣು, ಸ್ಥಾನಕಬ್ರಹ್ಮ, ಅರ್ಧ ನಾರೀಶ್ವರ, ಪರಶುಧರ ಶಿವ, ತ್ರಿಶೂಲಧಾರಿ ಶಿವ ಮೊದಲಾದ ಕೆತ್ತನೆ ಇದೆ. ಕೆಳ ಪಟ್ಟಿಕೆಗಳಲ್ಲಿ  ಸುಂದರ ಶಿಲ್ಪಕಲಾ ಕೆತ್ತನೆ ಇದೆ. ಇಲ್ಲಿ  ಸೂಕ್ಷ್ಮ ಕೆತ್ತನೆ ಇಲ್ಲದಿದ್ದರೂ ಮನೋಹರವಾದ ಶಿಲ್ಪಕಲಾ ಸೌಂದರ್ಯವಿದೆ.
ಬಾದಾಮಿ ಚಾಲುಕ್ಯರ ನಾಡಿನಲ್ಲಿ  ಶಿಲೆಗಳೂ ಸಂಗೀತವನ್ನು ಹಾಡುತ್ತವೆ. ವಿಶೇಷ ವಾಸ್ತು ಶೈಲಿಯ ಸುಂದರ ದೇವಾಲಯಗಳು ಆಸ್ತಿಕರಿಗೆ ಭಕ್ತಿಭಾವ ಮೂಡಿಸಿದರೆ, ನಾಸ್ತಿಕರನ್ನು ತಮ್ಮ ಕಲಾಶ್ರೀಮಂತಿಕೆಯಿಂದ ಕೈಬೀಸಿ ಕರೆಯುತ್ತವೆ.
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-22352901 /22352909 /22352903 Email : kstdc@vsnl.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು