ಅಂಕಿತ ನಾಮ: ಭೋಗಬಂಕೇಶ್ವರಲಿಂಗ
ಕಾಲ: 1160
ದೊರಕಿರುವ ವಚನಗಳು: 11 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ : 1160. ಕೃತಿಯ ವೈಶಿಷ್ಟ್ಯ .ಧಾರ್ಮಿಕ ವಿಚಾರಗಳೇ ಪ್ರಧಾನ. ಬಸವಣ್ಣ,ಚೆನ್ನಬಸವಣ್ಣ, ಅಲ್ಲಮ, ಚಂದಯ್ಯ,
ಕಾಲ: 1160
ದೊರಕಿರುವ ವಚನಗಳು: 11 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ : 1160. ಕೃತಿಯ ವೈಶಿಷ್ಟ್ಯ .ಧಾರ್ಮಿಕ ವಿಚಾರಗಳೇ ಪ್ರಧಾನ. ಬಸವಣ್ಣ,ಚೆನ್ನಬಸವಣ್ಣ, ಅಲ್ಲಮ, ಚಂದಯ್ಯ,
ಮಡಿವಾಳಯ್ಯ, ಹಡಪದಪ್ಪಣ್ಣ,ಸೊಡ್ಡಳ ಬಾಚರಸ,
ಮೋಳಿಗೆ ಮಾರಯ್ಯ, ಅನಿಮಿಷ ದೇವರು, ಮರುಳಶಂಕರ
ದೇವ, ಘಟ್ಟಿವಾಳಯ್ಯ, ಅಜಗಣ್ಣ, ನಿಜಗುಣ,
ಸಿದ್ಧರಾಮ-ಇವರನ್ನುನೆನೆದಿರುವನು. 770 ಅಮರ ಗಣಗಳಿಗೆ
ನಮೋ ಎಂದಿರುವನು.
ಹರನ ನಿರೂಪದಿಂದ ಧರೆಗೆ ಬಸವಣ್ಣನವತರಿಸಿದ ಕಾರಣ,
ಶಿವಾಚಾರ ಸದಾಚಾರವೆಂಬುದು ಧರೆಗೆ ವಿಖ್ಯಾತವಾಯಿತ್ತು.
ಶಿವಗಣ ಪ್ರಮಥಗಣಂಗಳೆಂಬ ಮಹಾಮಹಿಮರ ಸುಳುಹು,
ಧರೆಯ ಮೇಲೆ ಕಾಣಬಂದಿತ್ತು ನೋಡಯ್ಯಾ.
ಪರುಷವ ಸಾಧಿಸಿದಂತಾಯಿತ್ತು, ನಿಮ್ಮ ಶರಣರ ಸಂಗದಿಂದ.
ಎನ್ನ ನಂದಿಯ ಮೊಗವಾಡ, ನೊಸಲಕಣ್ಣುಂಟೆಂಬ
ಅಹಂಕಾರವ ಮುಂದುಗೊಂಡಿದ್ದೆನಯ್ಯಾ.
ಎನ್ನ ಮದ ಉಡುಗಿ, ಸಂಗನಬಸವಣ್ಣನ ಕರುಣದಿಂದ
ಪ್ರಭುದೇವರೆಂಬ ನಿರಾಳವ ಕಂಡು ಬದುಕಿದೆನು ಕಾಣಾ,
ನಿಜಗುರು ಶಂಕರದೇವಾ.

----------> ಅಂಗಸೋಂಕಿನ ಲಿಂಗತಂದೆ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.