fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಭಾನುವಾರ, ನವೆಂಬರ್ 30, 2014
ಶನಿವಾರ, ನವೆಂಬರ್ 29, 2014
ಗುರುವಾರ, ನವೆಂಬರ್ 27, 2014
ಬುಧವಾರ, ನವೆಂಬರ್ 26, 2014
ಅಂಗಸೋಂಕಿನ ಲಿಂಗತಂದೆ -1
ಅಂಕಿತ ನಾಮ: ಭೋಗಬಂಕೇಶ್ವರಲಿಂಗ
ಕಾಲ: 1160
ದೊರಕಿರುವ ವಚನಗಳು: 11 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ : 1160. ಕೃತಿಯ ವೈಶಿಷ್ಟ್ಯ .ಧಾರ್ಮಿಕ ವಿಚಾರಗಳೇ ಪ್ರಧಾನ. ಬಸವಣ್ಣ,ಚೆನ್ನಬಸವಣ್ಣ, ಅಲ್ಲಮ, ಚಂದಯ್ಯ,
ಕಾಲ: 1160
ದೊರಕಿರುವ ವಚನಗಳು: 11 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ:
ಪರಿಚಯ: ಕಾಲ : 1160. ಕೃತಿಯ ವೈಶಿಷ್ಟ್ಯ .ಧಾರ್ಮಿಕ ವಿಚಾರಗಳೇ ಪ್ರಧಾನ. ಬಸವಣ್ಣ,ಚೆನ್ನಬಸವಣ್ಣ, ಅಲ್ಲಮ, ಚಂದಯ್ಯ,
ಮಡಿವಾಳಯ್ಯ, ಹಡಪದಪ್ಪಣ್ಣ,ಸೊಡ್ಡಳ ಬಾಚರಸ,
ಮೋಳಿಗೆ ಮಾರಯ್ಯ, ಅನಿಮಿಷ ದೇವರು, ಮರುಳಶಂಕರ
ದೇವ, ಘಟ್ಟಿವಾಳಯ್ಯ, ಅಜಗಣ್ಣ, ನಿಜಗುಣ,
ಸಿದ್ಧರಾಮ-ಇವರನ್ನುನೆನೆದಿರುವನು. 770 ಅಮರ ಗಣಗಳಿಗೆ
ನಮೋ ಎಂದಿರುವನು.
ಹರನ ನಿರೂಪದಿಂದ ಧರೆಗೆ ಬಸವಣ್ಣನವತರಿಸಿದ ಕಾರಣ,
ಶಿವಾಚಾರ ಸದಾಚಾರವೆಂಬುದು ಧರೆಗೆ ವಿಖ್ಯಾತವಾಯಿತ್ತು.
ಶಿವಗಣ ಪ್ರಮಥಗಣಂಗಳೆಂಬ ಮಹಾಮಹಿಮರ ಸುಳುಹು,
ಧರೆಯ ಮೇಲೆ ಕಾಣಬಂದಿತ್ತು ನೋಡಯ್ಯಾ.
ಪರುಷವ ಸಾಧಿಸಿದಂತಾಯಿತ್ತು, ನಿಮ್ಮ ಶರಣರ ಸಂಗದಿಂದ.
ಎನ್ನ ನಂದಿಯ ಮೊಗವಾಡ, ನೊಸಲಕಣ್ಣುಂಟೆಂಬ
ಅಹಂಕಾರವ ಮುಂದುಗೊಂಡಿದ್ದೆನಯ್ಯಾ.
ಎನ್ನ ಮದ ಉಡುಗಿ, ಸಂಗನಬಸವಣ್ಣನ ಕರುಣದಿಂದ
ಪ್ರಭುದೇವರೆಂಬ ನಿರಾಳವ ಕಂಡು ಬದುಕಿದೆನು ಕಾಣಾ,
ನಿಜಗುರು ಶಂಕರದೇವಾ.
ಶಿವಾಚಾರ ಸದಾಚಾರವೆಂಬುದು ಧರೆಗೆ ವಿಖ್ಯಾತವಾಯಿತ್ತು.
ಶಿವಗಣ ಪ್ರಮಥಗಣಂಗಳೆಂಬ ಮಹಾಮಹಿಮರ ಸುಳುಹು,
ಧರೆಯ ಮೇಲೆ ಕಾಣಬಂದಿತ್ತು ನೋಡಯ್ಯಾ.
ಪರುಷವ ಸಾಧಿಸಿದಂತಾಯಿತ್ತು, ನಿಮ್ಮ ಶರಣರ ಸಂಗದಿಂದ.
ಎನ್ನ ನಂದಿಯ ಮೊಗವಾಡ, ನೊಸಲಕಣ್ಣುಂಟೆಂಬ
ಅಹಂಕಾರವ ಮುಂದುಗೊಂಡಿದ್ದೆನಯ್ಯಾ.
ಎನ್ನ ಮದ ಉಡುಗಿ, ಸಂಗನಬಸವಣ್ಣನ ಕರುಣದಿಂದ
ಪ್ರಭುದೇವರೆಂಬ ನಿರಾಳವ ಕಂಡು ಬದುಕಿದೆನು ಕಾಣಾ,
ನಿಜಗುರು ಶಂಕರದೇವಾ.
----------> ಅಂಗಸೋಂಕಿನ ಲಿಂಗತಂದೆ
ಮಂಗಳವಾರ, ನವೆಂಬರ್ 25, 2014
ಶನಿವಾರ, ನವೆಂಬರ್ 22, 2014
ಬುಧವಾರ, ನವೆಂಬರ್ 19, 2014
ಮಂಗಳವಾರ, ನವೆಂಬರ್ 18, 2014
ಸೋಮವಾರ, ನವೆಂಬರ್ 17, 2014
ಭಾನುವಾರ, ನವೆಂಬರ್ 16, 2014
ಶುಕ್ರವಾರ, ನವೆಂಬರ್ 14, 2014
ವಾಸ್ತುಶಿಲ್ಪದ ತವರು ಐಹೊಳೆ
ಬಾದಾಮಿ ಚಾಳುಕ್ಯರ ಕಾಲದಲ್ಲಿ ವೈಭವೋಪೇತವಾಗಿ ಮೆರೆದ
ಐಹೊಳೆ
*ಟಿ.ಎಂ.ಸತೀಶ್
ಭಾರತೀಯ
ದೇವಾಲಯಗಳ ಪೈಕಿ ವಾಸ್ತು ಶಿಲ್ಪದ ತವರು ಎಂದೇ ಖ್ಯಾತವಾದ್ದು ಐಹೊಳೆ. ಬಾದಾಮಿ
ಚಾಳುಕ್ಯರ ಕಾಲದಲ್ಲಿ ವೈಭವೋಪೇತವಾಗಿ ಮೆರೆದ ಈ ಗ್ರಾಮ ಇಂದು ವಿಶ್ವವಿಖ್ಯಾತವಾಗಲು
ಇಲ್ಲಿನ ಕೋಟೆಯ ಒಳಗೆ ಹಾಗೂ ಹೊರಗೆ ಹರಡಿಕೊಂಡಿರುವ ಶಿಲ್ಪಕಲಾಶ್ರೀಮಂತಿಕೆಯ
125ಕ್ಕೂ ಹೆಚ್ಚು ಚಿಕ್ಕ ದೊಡ್ಡ ದೇವಾಲಯಗಳೇ ಕಾರಣ. ಹೀಗಾಗೆ ಈ ಊರನ್ನು ಹಿಂದೂ
ದೇವಾಲಯಗಳ ವಾಸ್ತು ಶಿಲ್ಪದ ತೊಟ್ಟಿಲೆಂದೇ ಕರೆಯುತ್ತಾರೆ.
ಇತಿಹಾಸ
ಮಲಪ್ರಭಾ
ನದಿಯ ಬಲದಂಡೆಯ ಮೇಲೆ ಪ್ರಶಾಂತವಾಗಿ ಮಲಗಿರುವಂತೆ ತೋರುವ ನಿಸರ್ಗ ರಮಣೀಯ ತಾಣಕ್ಕೆ
ಹಿಂದೆ ಅಯ್ಯೋಹೊಳೆ ಎಂದು ಹೆಸರಿತ್ತಂತೆ. ಅಯ್ಯ ಅಥವಾ ಅಯ್ಯನೋರು ಎಂದರೆ ಗುರುಗಳು,
ಪಂಡಿತರು ಎಂದು ಅರ್ಥ. ಈ ಊರು ವಿದ್ಯಾಕೇಂದ್ರವಾಗಿ ಅಯ್ಯಗಳಿಂದ ತುಂಬಿದ್ದ ಕಾರಣ
ಇದಕ್ಕೆ ಆ ಹೆಸರು ಬಂದಿತ್ತೆಂಬ ವಾದವಿದೆ. ಮತ್ತೊಂದು ಕಥೆಯ ರೀತ್ಯ ಕ್ಷತ್ರಿಯರ
ರುಂಡ ಚೆಂಡಾಡಿದ ಪರಶುರಾಮ ಮಲಪ್ರಭೆಯ ಹೊಳೆಯಲ್ಲಿ ತನ್ನ ಪರಶುವನ್ನು ತೊಳೆದಾಗ ಇಡೀ
ನದಿ ನೀರು ಕೆಂಪಾಯಿತು. ಮುಂಜಾನೆ ಈ ನೀರು ಕಂಡ ಮಹಿಳೆಯರು ಅಯ್ಯಯ್ಯೋ ಹೊಳೆ ಎಂದು
ಉದ್ಗರಿಸಿದರು. ಹೀಗಾಗೆ ಈ ಊರು ಐಹೊಳೆಯಾಯ್ತು.
ಐಹೊಳೆ ಅತ್ಯಂತ ಪ್ರಾಚೀನ
ಗ್ರಾಮ. ಇಲ್ಲಿ ಕ್ರಿ.ಪೂ. 6-7ನೇನೇ ಶತಮಾನದಲ್ಲಿ ಅಂದರೆ ಕಬ್ಬಿಣದ ಯುಗದಲ್ಲೇ
ಇಲ್ಲಿ ಜನವಸತಿ ಇತ್ತೆಂದು ಪ್ರಾಗೈತಿಹಾಸಿಕ ಸಂಶೋಧಕರು ಅಂದಾಜು ಮಾಡಿದ್ದಾರೆ.
ಇಲ್ಲಿ ಉಸಗು ಕಲ್ಲಿನಿಂದ ಮತ್ತು ಕತ್ತರಿಸಿದ ಬಂಡೆಗಳನ್ನು ಗಾರೆ,
ಮಣ್ಣಿನ ನೆರವಿಲ್ಲದೆ ಒಂದರ ಮೇಲೊಂದು ಇಟ್ಟು ನಿರ್ಮಿಸಿದ
ಕೋಟೆಯಿದೆ. ಇದನ್ನು ಸುಮಾರು ಕ್ರಿ.ಶ. 6ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು
ಹೇಳಲಾಗಿದ್ದು ಕರ್ನಾಟಕದಲ್ಲಿ ಉಳಿದಿರುವ ಶಿಲಾಕೋಟೆಗಳ ಪೈಕಿ ಇದು ಅತ್ಯಂತ
ಪ್ರಾಚೀನವಾದ್ದಾಗಿದೆ. ಕೋಟೆಯ ಸುತ್ತ ಕಂದಕ ಇರುವುದನ್ನು ಈಗಲೂ
ಗುರುತಿಸಬಹುದಾಗಿದ್ದು, ಕೋಟೆಯ ಅವಶೇಷಗಳನ್ನು
ಕಾಣಬಹುದು.
ವಾಸ್ತುಶಿಲ್ಪ
ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿಸ್ತ
ಶಕ 5ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ
ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ.
ದೇವಾಲಯದ ಮುಖಮಂಟಪದ ಭಿತ್ತಿಯ
ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ -ನಾವೆಯ ನೆರವಿನಿಂದ ನದಿ
ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ,
ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ.
ಐಹೊಳೆಯ ದೇವಾಲಯಗಳನ್ನು
ಪುರಾತತ್ವ ಸರ್ವೇಕ್ಷಣ ಇಲಾಖೆ 22 ವಿಭಾಗಳಾಗಿ ವಿಂಗಡಿಸಿದೆ. ಇದರಲ್ಲಿ
ಹುಚ್ಚಿಮಲ್ಲಿಗುಡಿ,
ಲಡಖಾನ್ ಗುಡಿ, ಹುಚ್ಚಪ್ಪಯ್ಯಮಠ,
ಗಳಗನಾಥ, ರಾವಲ್ ಪಹಡಿ,
ಗುಹಾಂತರ ದೇವಾಲಯ, ಜೈನರ ಮೇಗುತಿ
ದೇವಾಲಯ, ಎರಡು ಅಂತಸ್ತಿನ ಜೈನ ದೇವಾಲಯ ಪ್ರಮುಖ
ಆಕರ್ಷಣೆ.
ಬೆಂಗಳೂರಿನಿಂದ 460,
ಬಿಜಾಪುರದಿಂದ 110 ಹಾಗೂ ಬಾದಾಮಿಯಿಂದ 40 ಕಿ.ಮೀಟರ್ ದೂರದಲ್ಲಿರುವ ಈ ಸುಂದರ ತಾಣ
ಕರುನಾಡ ಕಲಾಶ್ರೀಮಂತಿಕೆಗೆ ಸಾಕ್ಷಿಯಾಗಿದೆ.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-2352901 /2352909 /2352903
Email : kstdc@vsnl.in
ಮಂಗಳವಾರ, ನವೆಂಬರ್ 11, 2014
ಸೋಮವಾರ, ನವೆಂಬರ್ 10, 2014
ನುಡಿ ಮುತ್ತುಗಳು 17
- ಲಕ್ಶ್ಮಿ ಇರುವಲ್ಲಿ ಆಪತ್ತುಗಳು ಬಾಗಿಲು ತೆರೆದಿಟ್ಟಂತೆ ಧುಮ್ಮಿಕ್ಕುತ್ತವೆ.
- ಎನಿತು ಜನ್ಮದಲಿ, ಎನಿತು ಜೀವರಿಗೆ, ಎನಿತು ನಾವು ಋಣಿಯೋ? ತಿಳಿದು ನೋಡಿದರೆ ಬಾಳು ಎಂಬುದಿದು ಋಣದ ರತ್ನಗಣಿಯೋ!
- ನಿಮ್ಮ ಪ್ರೀತಿಯನ್ನು ಮೆಚ್ಚುಗೆಯನ್ನು ನಿಮ್ಮವರಿಗೆ ಇಂದೇ ಹೇಳಿ. ನಾಳೆಗೆ ಈ ಅವಕಾಶ ಸಿಗದೇ ಇರಬಹುದು.
- ತನ್ನ ಸುಖದಲ್ಲಿ ಹರ್ಷಗೊಳ್ಳದೆ, ಇತರರ ದುಃಖದಲ್ಲಿ ಹರ್ಷಗೊಳ್ಳದೆ, ಕೊಟ್ಟು ಸಂಕಟಪಡದೇ ಇರುವವನೇ ಸಜ್ಜನ.
- ಎಷ್ಟೋ ಬಾರಿ ಗೆಲವು ಸೋಲಿನ ರೂಪದಲ್ಲಿ ಬರುತ್ತದೆ....
ಭಾನುವಾರ, ನವೆಂಬರ್ 09, 2014
ಶನಿವಾರ, ನವೆಂಬರ್ 08, 2014
ಗುರುವಾರ, ನವೆಂಬರ್ 06, 2014
ಬುಧವಾರ, ನವೆಂಬರ್ 05, 2014
ಮಂಗಳವಾರ, ನವೆಂಬರ್ 04, 2014
ಸೋಮವಾರ, ನವೆಂಬರ್ 03, 2014
ಭಾನುವಾರ, ನವೆಂಬರ್ 02, 2014
ನವೆಂಬರ ಜ್ಞಾನ 5
೧. ಕರ್ನಾಟಕದಲ್ಲಿ ರೈಲು ಸಂಪರ್ಕವಿಲ್ಲದ ಜಿಲ್ಲೆ ಯಾವುದು? | ||||
೨. ಕನ್ನಡದಲ್ಲಿ ಭಾವಗೀತೆ ಎಂಬ ಮಹಾಪ್ರಬಂಧ ಬರೆದು ಕನ್ನಡದ ಪ್ರಪ್ರಥಮ ಪಿ.ಎಚ್.ಡಿ ಪದವಿ ಪಡೆದ ಹಿರಿಮೆಗೆ ಪಾತ್ರರಾಗಿರುವವರು ಯಾರು? | ||||
೩. ಕರ್ನಾಟಕದ ಉದ್ದವಾದ ನದಿ ಯಾವುದು? | ||||
೪. ಕರ್ನಾಟಕದಲ್ಲಿ ದೊಡ್ಡ ಆಲದ ಮರವಿರುವ ಊರು ಯಾವುದು? | ||||
೫. ಕನ್ನಡದಲ್ಲಿ ಅತೀ ಹೆಚ್ಚು ಪತ್ತೆದಾರಿ ಕಾದಂಬರಿಗಳನ್ನು ಬರೆದವರು ಯಾರು? | ||||
೬. ಭಾರತದ ಮೊದಲ ಆಕಾಶವಾಣಿ ಕೇಂದ್ರವು ಯಾವ ವರ್ಷ ಮತ್ತು ಯಾವ ಊರಿನಲ್ಲಿ ಸ್ಥಾಪಿಸಲಾಯಿತು? | ||||
೭. ರೈಡರ್ ಕಫ್ ಯಾವ ಕ್ರೀಡೆಗೆ ಸಂಬಂಧಿಸಿದುದಾಗಿದೆ? | ||||
೮. ರನ್ನ ಮಹಾಕವಿ ಬರೆದ ಗಧಾಯುದ್ಧಕ್ಕೆ ಇರುವ ಇನ್ನೊಂದು ಹೆಸರು ಏನು? | ||||
೯. ಜಿ.ಎಸ್.ಶಿವರುದ್ರಪ್ಪನವರ ಯಾವ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ? | ||||
೧೦. ಸಂಸ್ಕಾರ ಕಾದಂಬರಿ ಬರೆದರು ಯಾರು? | ||||
೧೧. ಕರ್ನಾಟಕದಲ್ಲಿ ಅತಿ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ ಯಾವುದು? | ||||
೧೨. ಕನ್ನಡದ ಮೊದಲ ಟೆಲಿಚಿತ್ರ ಯಾವುದು?ಮತ್ತು ನಿದೇರ್ಶಕರು ಯಾರು? | ||||
೧೩. ಕರ್ನಾಟಕದ ಭತ್ತದ ಕಣಜವೆಂದು ಹೆಸರಾಗಿರುವ ಜಿಲ್ಲೆ ಯಾವುದು? | ||||
೧೪. ಕರ್ನಾಟಕದ ಮೊದಲ ರೈಲು ಮಾರ್ಗ ಯಾವುದು? | ||||
೧೫. ಕೃಷ್ಣದೇವರಾಯ ರಚಿಸಿದ ಎರಡು ಕೃತಿಗಳು ಯಾವುವು? | ||||
೧೬. ಗಾಂಧೀಜಿಯವರು ತಂಗಿದ್ದ ಕರ್ನಾಟಕದ ಗಿರಿಧಾಮ ಯಾವುದು? | ||||
೧೭. ವಿದೇಶಿ ಚಲನಚಿತ್ರೋತ್ಸವದಲ್ಲಿ ಪ್ರಥಮ ಬಾರಿಗೆ ಪ್ರದರ್ಶನಗೊಂಡ ಕನ್ನಡ ಚಿತ್ರ ಯಾವುದು? | ||||
೧೮. ಯುದ್ಧದಲ್ಲಿ ಮೊದಲು ಕ್ಷಿಪಣಿ ಪ್ರಯೋಗ ಮಾಡಿದ ಕನ್ನಡಿಗ ಯಾರು? | ||||
೧೯. ಕರ್ನಾಟಕದ ಕುಲಪುರೋಹಿತ ಎಂದು ಯಾರನ್ನ ಕರೆಯಲಾಗಿದೆ? | ||||
೨೦. ಕರ್ನಾಟಕದಲ್ಲಿ ಮೊಟ್ಟ ಮೊದಲು ಸಿಮೆಂಟ್ ಕಾರ್ಖಾನೆ ಸ್ಥಾಪನೆಯಾಗಿದ್ದು ಎಲ್ಲಿ? | ||||
೨೧. ಧರ್ಮಸ್ಥಳದಲ್ಲಿರುವ ಏಕಶಿಲಾ ಬಾಹುಬಲಿ ವಿಗ್ರಹದ ಎತ್ತರವೆಷ್ಟು? | ||||
೨೨. ತುಂಗಭದ್ರಾ ಯಾವ ನದಿಗೆ ಉಪನದಿ? | ||||
೨೩. ಕರ್ನಾಟಕದಲ್ಲಿ ಅತೀ ಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು? | ||||
೨೪. ಮಾನವನ ರಕ್ತದೊತ್ತಡದ ಸಾಮಾನ್ಯ ವ್ಯಾಪ್ತಿ ಎಷ್ಟು? | ||||
೨೫. ಭಾರತೀಯ ವಿಜ್ಞಾನಿ ಸಂಸ್ಥೆ ಯಾವ ಊರಿನಲ್ಲಿದೆ? | ||||
೨೬. ಕೆಳದಿ ಇತಿಹಾಸ ಪ್ರಸಿದ್ಧ ಇದು ಯಾವ ಜಿಲ್ಲೆಯಲ್ಲಿದೆ? | ||||
೨೭. ಗುಬ್ಬಿವೀರಣ್ಣ ಪ್ರಶಸ್ತಿ ಪಡೆದ ಉತ್ತರ ಕರ್ನಾಟಕದ ನಟ ಯಾರು? | ||||
೨೮. ಟೇಬಲ್ ಟೆನ್ನಿಸ್‌ಗೆ ಹೆಸರಾಗಿರುವ ಕನ್ನಡತಿ ಯಾರು? | ||||
೨೯. ರಾಷ್ಟ್ರೀಯ ಕಾಫಿ ಸಂಶೋಧನಾ ಕೇಂದ್ರರ ಯಾವ ಊರಿನಲ್ಲಿದೆ? | ||||
೩೦. ಈ ಭಾವಚಿತ್ರದಲ್ಲಿರುವವರು
ಗುರುತಿಸಿ. | ||||
ಉತ್ತರಗಳು: |
ಶನಿವಾರ, ನವೆಂಬರ್ 01, 2014
ಟಾಪ್ - 3 ಅಕ್ಟೋಬರ್- 2014
ನನ್ನ ಜಾಲತಾಣ ಅತೀ ಹೆಚ್ಚು ವೀಕ್ಷಣೆಗಳು ( ಟಾಪ್ - 3 ) ಅಕ್ಟೋಬರ್- 2014
ಬ್ರೌಸರ್ಗಳ ಪ್ರಕಾರ ವೀಕ್ಷಣೆ ಟಾಪ್
Firefox
Crome
Internet Explore
ಆಪರೇಟಿಂಗ್ ಸಿಸ್ಟಮ್ಗಳ ವೀಕ್ಷಣೆ ಟಾಪ್ 3
Windows
Android
Macintosh
ಆಪರೇಟಿಂಗ್ ಸಿಸ್ಟಮ್ಗಳ ವರ್ಷನಗಳ ಪ್ರಕಾರ
Windows XP |
Windows 7 |
ಕಳೆದ ತಿಂಗಳಲ್ಲಿ ಪುಟಗಳ ವೀಕ್ಷಣೆ
1577
1577
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...