ಮಂಕುತಿಮ್ಮ
ಶಾಲೆಯ ದಿನಗಳಲ್ಲಿ ಕಗ್ಗದ ಬಗ್ಗೆ ಕೇಳುತ್ತ ಬೆಳೆದೆ. ಆದರು ಇದರ ಹುಡುಕಾಟದಲ್ಲಿ ಇಂದು ನನಗೆ ನನ್ನ ಮಿತ್ರರಿಂದ ಸಂಗ್ರಹಿಸಿ ನಿಮ್ಮ ಮುಂದೆ ಪ್ರಕಟಿಸಿದ್ದೇನೆ.ಕಗ್ಗದ ಎಲ್ಲ ನುಡಿಗಳು ಸಾಮಾನ್ಯ ಓದುಗರಿಗೆ ಎಟುಕುವಂತಿಲ್ಲ, ಅವುಗಳಲ್ಲಿ ಚೆಂದ, ಸುಲಭ
ಕಂಡ ಕೆಲವನ್ನು ಇಲ್ಲಿ ಪೋಸ್ಟಿಸುತ್ತಿರುವೆ. ಓದಿ ತಿಳಿದುಕೊಳ್ಳುವ ಭಾರ, ಭಾಗ್ಯ
ನಿಮ್ಮದು.
ಒಟ್ಟಿನಲಿ ತತ್ವವಿದು, ವಿಕಟ ರಸಿಕನೋ ಧಾತ
ತೊಟ್ಟಿಲನು ತೂಗುವನು ಮಗುವ ಜಿಗುಟುವನು
ಸಿಟ್ಟಿನ್ ಓಡವುಟ್ಟುಗಳೊಳಾಗಿಪನು, ಸೋಲಿಪನು
ತುತ್ತು ವಿಕಟಿಗೆ ನಾವು – ಮಂಕುತಿಮ್ಮ
ಒಟ್ಟಿನಲಿ ತಿಳಿಯ ಬೇಕಾದ್ದು ಇಷ್ಟೇ. ನಮ್ಮನ್ನೆಲ್ಲ ಭೂಮಿಗೆ ತಂದ ದೇವರು ವಿನೋದ ಪ್ರಿಯನು. ಆದರೆ ನಾವುಗಳು ಅವನ ವಿನೋದಕ್ಕೆ ತುತ್ತುಗಳು. ನಮಗೆ ಎಲ್ಲ ಕೊಡುತ್ತಾನೆ. ಎಲ್ಲ ಕಸಿದು ಕೊಳ್ಳುತ್ತಾನೆ, ನಾವು ಅತ್ತರು ಅವನಿಗೆ ಆನಂದವೇ, ನಕ್ಕರು ಅವನಿಗೆ ಆನಂದವೇ. ಎಲ್ಲಾ ನಮ್ಮದು, ಎಲ್ಲಾ ನಮ್ಮಿಂದ ಎಂಬ ಭ್ರಮೆಯನ್ನು ಕಳಚಿ ಎಲ್ಲಾ ಅವನ ವಿನೋದ ಲೀಲೆಗಳು ಎಂದು ತಿಳಿದು ಬಾಳಿ ಮುಗಿಸುವುದು ಅಷ್ಟೇ ನಮ್ಮ ಪಾಲಿಗೆ ಬಿಟ್ಟದ್ದು. ನಮ್ಮ ಸೋಲು ಅವನದೇ ನಮ್ಮ ಗೆಲುವು ಅವನದೇ.
ತೊಟ್ಟಿಲನು ತೂಗುವನು ಮಗುವ ಜಿಗುಟುವನು
ಸಿಟ್ಟಿನ್ ಓಡವುಟ್ಟುಗಳೊಳಾಗಿಪನು, ಸೋಲಿಪನು
ತುತ್ತು ವಿಕಟಿಗೆ ನಾವು – ಮಂಕುತಿಮ್ಮ
ಒಟ್ಟಿನಲಿ ತಿಳಿಯ ಬೇಕಾದ್ದು ಇಷ್ಟೇ. ನಮ್ಮನ್ನೆಲ್ಲ ಭೂಮಿಗೆ ತಂದ ದೇವರು ವಿನೋದ ಪ್ರಿಯನು. ಆದರೆ ನಾವುಗಳು ಅವನ ವಿನೋದಕ್ಕೆ ತುತ್ತುಗಳು. ನಮಗೆ ಎಲ್ಲ ಕೊಡುತ್ತಾನೆ. ಎಲ್ಲ ಕಸಿದು ಕೊಳ್ಳುತ್ತಾನೆ, ನಾವು ಅತ್ತರು ಅವನಿಗೆ ಆನಂದವೇ, ನಕ್ಕರು ಅವನಿಗೆ ಆನಂದವೇ. ಎಲ್ಲಾ ನಮ್ಮದು, ಎಲ್ಲಾ ನಮ್ಮಿಂದ ಎಂಬ ಭ್ರಮೆಯನ್ನು ಕಳಚಿ ಎಲ್ಲಾ ಅವನ ವಿನೋದ ಲೀಲೆಗಳು ಎಂದು ತಿಳಿದು ಬಾಳಿ ಮುಗಿಸುವುದು ಅಷ್ಟೇ ನಮ್ಮ ಪಾಲಿಗೆ ಬಿಟ್ಟದ್ದು. ನಮ್ಮ ಸೋಲು ಅವನದೇ ನಮ್ಮ ಗೆಲುವು ಅವನದೇ.
ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು?
ಬಗೆದು ಬಿಡಿಸುವರಾರು ಸೂಜಿಗವನಿದನು?
ಜಗವ ನಿರವಿಸಿದ ಕೈಯೊಂದಾದೊಡೇಕಿಂತು
ಬಗೆ ಬಗೆಯ ಜೀವಗತಿ – ಮಂಕುತಿಮ್ಮ
ಬಗೆದು ಬಿಡಿಸುವರಾರು ಸೂಜಿಗವನಿದನು?
ಜಗವ ನಿರವಿಸಿದ ಕೈಯೊಂದಾದೊಡೇಕಿಂತು
ಬಗೆ ಬಗೆಯ ಜೀವಗತಿ – ಮಂಕುತಿಮ್ಮ
ದೇವರೆಂಬುದೇನು ಕಗ್ಗತ್ತಲೆಯ ಗವಿಯೇ
ನಾವರಿಯಲಾರದೆಲ್ಲದರೊಟ್ಟು ಹೆಸರೇ
ಕಾವನೊಬ್ಬನಿರಲ್ಕೆ ಜಗದ ಕಥೆಯೇಕಿಂತು
ಸಾವು ಹುಟ್ಟುಗಳೇನು – ಮಂಕುತಿಮ್ಮ
ದೇವರು ಎಂದರೆ ಏನು? ನಮಗೆ ತಿಳಿಯದ ಎಲ್ಲಕ್ಕೂ ಸೇರಿಸಿ ಕೊಟ್ಟ ಹೆಸರೇ. ಈ ಜಗತ್ತನ್ನು ಕಾಯಲು ಒಬ್ಬನಿರಲು ಜಗವು ಹೀಗೇಕೆ ಇದೆ? ಸಾವು ಹುತ್ತುಗಳು ಏತಕ್ಕಾಗಿ?
ನಾವರಿಯಲಾರದೆಲ್ಲದರೊಟ್ಟು ಹೆಸರೇ
ಕಾವನೊಬ್ಬನಿರಲ್ಕೆ ಜಗದ ಕಥೆಯೇಕಿಂತು
ಸಾವು ಹುಟ್ಟುಗಳೇನು – ಮಂಕುತಿಮ್ಮ
ದೇವರು ಎಂದರೆ ಏನು? ನಮಗೆ ತಿಳಿಯದ ಎಲ್ಲಕ್ಕೂ ಸೇರಿಸಿ ಕೊಟ್ಟ ಹೆಸರೇ. ಈ ಜಗತ್ತನ್ನು ಕಾಯಲು ಒಬ್ಬನಿರಲು ಜಗವು ಹೀಗೇಕೆ ಇದೆ? ಸಾವು ಹುತ್ತುಗಳು ಏತಕ್ಕಾಗಿ?
ಕೊಳದಿ ನೀ ಮೀವಂದು ತೆರೆಯೆದ್ದು ಹರಡುತ್ತೆ
ವಲಯ ವಲಯಗಳಾಗಿ ಸಾರುವುದು ದಡಕೆ
ಅಲೆಗಳಾ ತೆರದಿ ನಿನ್ನಾತ್ಮದಿಂ ಪರಿಪರಿದು
ಕಳೆತುಕೊಳ್ಳಲಿ ಜಗದಿ – ಮಂಕುತಿಮ್ಮ
ವಲಯ ವಲಯಗಳಾಗಿ ಸಾರುವುದು ದಡಕೆ
ಅಲೆಗಳಾ ತೆರದಿ ನಿನ್ನಾತ್ಮದಿಂ ಪರಿಪರಿದು
ಕಳೆತುಕೊಳ್ಳಲಿ ಜಗದಿ – ಮಂಕುತಿಮ್ಮ
ಕಾರಿಳೊಳಾಗಸದಿ ತಾರೆ ನೂರಿದ್ದರೇನು?
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು
ದೂರದಾ ದೈವವಂತಿರಲಿ, ಮಾನುಷಸಖನ
ಕೋರುವುದು ಬಡಜೀವ – ಮಂಕುತಿಮ್ಮ
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು
ದೂರದಾ ದೈವವಂತಿರಲಿ, ಮಾನುಷಸಖನ
ಕೋರುವುದು ಬಡಜೀವ – ಮಂಕುತಿಮ್ಮ
ಪ್ರೇಮಾತಿಶಯವಿರದ ದಾಂಪತ್ಯ ವರ್ಧಿಸದು |
ವ್ಯಾಮೋಹಕೆಡೆಗೊಟ್ಟಡದು ನಿಗಳವಹುದು ||
ಸಾಮರಸ್ಯವನೆಂತು ಕಾಣ್ಬುದೀ ವಿಷಮದಲಿ |
ಆಮಿಷದ ತಂಟೆಯಿದು ಮಂಕುತಿಮ್ಮ||
ವ್ಯಾಮೋಹಕೆಡೆಗೊಟ್ಟಡದು ನಿಗಳವಹುದು ||
ಸಾಮರಸ್ಯವನೆಂತು ಕಾಣ್ಬುದೀ ವಿಷಮದಲಿ |
ಆಮಿಷದ ತಂಟೆಯಿದು ಮಂಕುತಿಮ್ಮ||
ಬಿಳಳಲ್ಲ, ಬೇರಲ್ಲ, ಮುಂಡಕಾಂಡಗಳಲ್ಲ |
ತಳಿರಲ್ಲ, ಮಲರಲ್ಲ, ಕಾಯಿಹಣ್ಣಲ್ಲ ||
ಎಲೆ ನೀನು; ವಿಶ್ವವೃಕ್ಷದೊಳ್ ಎಲೆಯೊಳೊಂದು ನೀಂ |
ತಿಳಿದವನು ನೆರವಾಗು – ಮಂಕುತಿಮ್ಮ ||
ತಳಿರಲ್ಲ, ಮಲರಲ್ಲ, ಕಾಯಿಹಣ್ಣಲ್ಲ ||
ಎಲೆ ನೀನು; ವಿಶ್ವವೃಕ್ಷದೊಳ್ ಎಲೆಯೊಳೊಂದು ನೀಂ |
ತಿಳಿದವನು ನೆರವಾಗು – ಮಂಕುತಿಮ್ಮ ||
ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು |
ಮಗುವು ನೀಂ ಪೆತ್ತರ್ಗೆ, ಲೋಕಕೆ ಸ್ಪರ್ಧಿ ||
ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ |
ರಗಳೆಗಾರಿಗೆ ಬಿಡುವೋ? – ಮಂಕುತಿಮ್ಮ ||
ಮಗುವು ನೀಂ ಪೆತ್ತರ್ಗೆ, ಲೋಕಕೆ ಸ್ಪರ್ಧಿ ||
ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ |
ರಗಳೆಗಾರಿಗೆ ಬಿಡುವೋ? – ಮಂಕುತಿಮ್ಮ ||
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ |
ಹಿತವಿರಲಿ ವಚನದಲಿ, ಋತವ ಬೇಡದಿರಲಿ ||
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ |
ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ ||
ಹಿತವಿರಲಿ ವಚನದಲಿ, ಋತವ ಬೇಡದಿರಲಿ ||
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ |
ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ ||
ಹಾಗೆಯೋ ಹೀಗೆಯೋ ಹೇಗೆ ಹೇಗೆಯೋ ಜನುಮ
ಸಾಗಿ ಮುಗಿಯುವುದು; ಮುಗಿದು ಮರೆವುದದೆ ಸುಕೃತ
ಈಗಲೋ ಆಗಲೋ ಎಂದೋ ಮುಗಿವುಂಟೆಂಬ
ಭಾಗ್ಯವನು ನೆನೆದು ನಲಿ ಮಂಕುತಿಮ್ಮ
ಸಾಗಿ ಮುಗಿಯುವುದು; ಮುಗಿದು ಮರೆವುದದೆ ಸುಕೃತ
ಈಗಲೋ ಆಗಲೋ ಎಂದೋ ಮುಗಿವುಂಟೆಂಬ
ಭಾಗ್ಯವನು ನೆನೆದು ನಲಿ ಮಂಕುತಿಮ್ಮ
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು – ಮಂಕುತಿಮ್ಮ
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು – ಮಂಕುತಿಮ್ಮ
ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ?
ನರಕವೆದೆಯಲಿ ನೆಲೆಸೆ ನಿದ್ದೆಗೆಡೆಯೆಲ್ಲಿ?
ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ
ಕರುಬಿದನ ಹರಿ ಪೊರೆಗೆ – ಮಂಕುತಿಮ್ಮ
ನರಕವೆದೆಯಲಿ ನೆಲೆಸೆ ನಿದ್ದೆಗೆಡೆಯೆಲ್ಲಿ?
ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ
ಕರುಬಿದನ ಹರಿ ಪೊರೆಗೆ – ಮಂಕುತಿಮ್ಮ
ತ್ರಾಸಿನಲಿ ಕಪ್ಪೆಗಳ ಸರಿಕೂಡಿಸುವ ಚತುರಿ
ಸಂಸ್ಕೃತಿ ದ್ವಂದ್ವಗಳ ಸಮತೂಗಲರಿವಂ
ಬೀಸುಕತ್ತಿಗಳ ಮಧ್ಯದಿ ನೂಲಮೇಲ್ ನಡೆವ
ಸಾಸವೀ ಗೃಹಧರ್ಮ – ಮಂಕುತಿಮ್ಮ
ಸಂಸ್ಕೃತಿ ದ್ವಂದ್ವಗಳ ಸಮತೂಗಲರಿವಂ
ಬೀಸುಕತ್ತಿಗಳ ಮಧ್ಯದಿ ನೂಲಮೇಲ್ ನಡೆವ
ಸಾಸವೀ ಗೃಹಧರ್ಮ – ಮಂಕುತಿಮ್ಮ
ಇರುವ ಕೆಲಸವ ಮಾಡು
ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ
ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ
ತುಂಬಾ ಚನ್ನಾಗಿವೆ.
ಪ್ರತ್ಯುತ್ತರಅಳಿಸಿಪ್ರಕಟಿಸಿದ್ದಕ್ಕೆ, ಧನ್ನವಾದಗಳು ಇಂತಿ ನಿನ್ನ ಗೆಳೆಯ ಶಿವಕೂಮಾರ.P.N{http://spn3187.blogspot.in}
ತುಂಬಾ ಚನ್ನಾಗಿವೆ.
ಅಳಿಸಿ