ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಭಾನುವಾರ, ನವೆಂಬರ್ 25, 2018
ಶನಿವಾರ, ನವೆಂಬರ್ 24, 2018
ಸ್ವಭಾವ
ತನ್ನದೇ ಅಕ್ಕನ ಗಂಡ
ಅವರವರ ಸ್ವಂತ ಗುಣ-ದೋಷ ಭಾವ
ಅವರವರ ಸ್ವಭಾವದಂತೆ ಭಾವವೂ ಬೆರೆ
ಇದೊಂದು ಹುಟ್ಟು ಗುಣ, ಸುಟ್ಟರೂ ಹೋಗದ್ದು
ಬೇರೆಯವರನ್ನು ಪ್ರಭಾವಿಸುವ ವ್ಯಕ್ತಿತ್ವದ ಅಂಶ
ರೂಪ ರೂಪಗಳನು ದಾಟಿದ ಸ್ವರೂಪ
ನಿರ್ವಾತಕ್ಕೆ ಅಭಾವವೇ ಸ್ವಭಾವ
ಪ್ರಶ್ನಿಸುವುದು ಹೆಂಡತಿಯ ಸ್ವಭಾವ, ಉತ್ತರಿಸದಿರುವುದು ಗಂಡನ ಸ್ವಭಾವ
ಕೆಟ್ಟ ಹೆಂಡತಿಯನ್ನಾದರೂ ಬಿಡಬಹುದು. ಕೆಟ್ಟ ಸ್ವಭಾವವನ್ನು ಬಿಡಲಾಗದು
ಸ್ವಭಾವವನ್ನು ಮೀರಲು ಸ್ವಂತ ಭಾವನಿಂದಲೂ ಸಾಧ್ಯವಿಲ್ಲ (ಸ್ವಭಾವೋ ದುರತಿಕ್ರಮಃ)
ಒಳ್ಳೆಯ ಸ್ವಭಾವದ ವ್ಯಕ್ತಿಗೆ ಮಗಳನ್ನು ಕೊಟ್ಟರೆ ಮಗಳೇನೋ ಸುಖವಾಗಿರಬಹುದು, ಅಳಿಯ...?
ಸ್ವಭಾವ ಬೇರೆಯಾದರೂ ಭಾವ ಒಂದಾದರೆ ಸಂಸಾರ ಸಸಾರ
ಸ್ವಭಾವವೆಲ್ಲ ಸ್ವಾಭಾವಿಕವೇ
ಬೇಕು ಬೇಕೆಂಬುದು ನರನ ಸ್ವಭಾವ, ಬೇಕೇ ಬೇಕೆಂಬುದು ನಾಗರಿಕರನ ಸ್ವಭಾವ
-ವಿಶ್ವನಾಥ ಸುಂಕಸಾಳ
ಗುರುವಾರ, ನವೆಂಬರ್ 22, 2018
ಅಮ್ಮ ಕರುಣೆಯ ಸಾಗರ
ಅವಳೊಂದು ಕರುಣೆಯ ಸಾಗರಮಮತೆಯ ಆಗರಸಿಹಿಯಂತ ಮಾತು ಬಲು ಮಧುರಹೋಗೆನು ನಿನ್ನಿಂದ ನಾ ದೂರನೀ ಅಗಲಿದಾಕ್ಷಣವೆ ಈ ಧರಣಿಗೆ ನಾ ಭಾರಧರಣಿ ನಾ ಬಂದ ಗಳಿಗೆಅಮ್ಮ ಎಂದಿತು ಈ ನನ್ನ ನಾಲಿಗೆಅಂದೆ ಬೆಳೆಯಿತು ನಮ್ಮ ಸಲಿಗೆನೀ ಇರಲು ನನ್ನೊಂದಿಗೆ ಸಿಹಿಯೂಟದ ಹೋಳಿಗೆನಿನ್ನ ವಾತ್ಸಲ್ಯದಿಂದ ತುಂಬಿದೆ ನನ್ನ ಹೃದಯದ ಮಳಿಗೆಹಸಿವೆಂಬ ಈ ನನ್ನ ಆರ್ತನಾದತಟ್ಟಿತು ನಿನ್ನ ಮನಸ್ಸಿನ ಕದಹಾಲು ಮಾಡಿ ಉಣಿಸಿದೆ ನಿನ್ನ ನೆತ್ತರುಮರೆಯನಮ್ಮ ಅದನ್ನು ನಾ ಸತ್ತರುಬಾಳೆಂಬ ಶಾಲೆಗೆ ನೀನೆ ಮೊದಲ ಗುರುಈ ನಿನ್ನ ಋಣವ ನಾ ಹೆಂಗ ತಿರಿಸಲಮ್ಮನಿನಗಾಗೆ ಮುಡಿಪು ಈ ನನ್ನ ಜನ್ಮಹಂಚಮ್ಮ ನಿನ್ನ ಒಲಿಮೆಯ ಪ್ರೀತಿ,ನನ್ನಂತೆ ಇತರರಿಗೆ.ಇಂದ - ಎಂ.ಎಸ್.ಪರಶುರಾಮ
ಗುರುವಾರ, ನವೆಂಬರ್ 15, 2018
ಯಾರಿಂದ ಏನೇನು ಕಲಿಯಬೇಕು?
(1) ಶ್ರವಣಕುಮಾರ = ತಂದೆ-ತಾಯಿಗಳ ಸೇವೆ
(2) ಶ್ರೀ ರಾಮ = ಮರ್ಯಾದೆ
(3) ಹನುಮಂತ = ಆರಾಧಕನ ಸೇವೆ
(4) ಭೀಷ್ಮ = ಬ್ರಹ್ಮಚರ್ಯೆ
(5) ಶ್ರೀ ಕೃಷ್ಣ = ಗೆಳೆತನ
(6) ಏಕಲವ್ಯ = ಗುರುಭಕ್ತಿ
(7) ಯುಧಿಷ್ಠಿರ = ಧರ್ಮ
(8) ಕರ್ಣ = ದಾನ
(9) ಮಹಾವೀರ = ತಪಸ್ಸು
(10) ಹರೀಶ್ಚಂದ್ರ = ಸತ್ಯ
(11) ಲಕ್ಷ್ಮಣ, ಭರತ ಹಾಗೂ ಶತ್ರುಘ್ನ = ಸೋದರ ವಾತ್ಸಲ್ಯ
(12) ಚಾಣಕ್ಯ = ಛಲ
(13) ಸೀತಾ = ಸಹನೆ
(14) ಸಾವಿತ್ರಿ ಮತ್ತು ಗಾಂಧಾರಿ = ಪತಿ ಪ್ರೇಮ
(15) ತೆನಾಲಿ ರಾಮಕೃಷ್ಣ = ಹಾಸ್ಯ
(16) ಭೂದೇವಿ = ಕ್ಷಮೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...
