ಅಂಧಕಾರವೆಂಬ ಮನೆಯ ಬಾಗಿಲಲ್ಲಿ ಆರಂಗದ ಕರಡಿ ಕಟ್ಟಿ
ಮೂರಂಗದ ಕೋಡಗ ಏಡಿಸಿ ಕಾಡುತ್ತಿದೆ.
ಮೀರಿದೆನೆಂಬವರೆಲ್ಲರು ಕರಡಿಯ ಗಿಲಗಿನಲ್ಲಿ ಸತ್ತು,
ಮೂರಂಗದ ಕೋಡಗ ಏಡಿಸಿ ಕಾಡುತ್ತಿದೆ.
ಮೀರಿದೆನೆಂಬವರೆಲ್ಲರು ಕರಡಿಯ ಗಿಲಗಿನಲ್ಲಿ ಸತ್ತು,
ಕೋಡಗದ ಚೇಷ್ಟೆಯಲ್ಲಿ ಸಿಕ್ಕಿ,
ಬೇಡ ನಿಮಗೆ ಆರೂಢದ ಮಾತು.
ಇಂತಿವ ಮೀರಿ ಅರಿದವಂಗಲ್ಲದೆ ಸದಾಶಿವಮೂರ್ತಿಲಿಂಗವಿಲ್ಲ.
ಬೇಡ ನಿಮಗೆ ಆರೂಢದ ಮಾತು.
ಇಂತಿವ ಮೀರಿ ಅರಿದವಂಗಲ್ಲದೆ ಸದಾಶಿವಮೂರ್ತಿಲಿಂಗವಿಲ್ಲ.
--------> ಅರಿವಿನ ಮಾರಿತಂದೆ