- ೧. ಇಲಿ, ನಕ್ಷತ್ರ ಮೀನುಗಳು ಹಾಗೂ ಹಲ್ಲಿಗಳ ಬಾಲಗಳು ತುಂಡಾದರೆ ಮತ್ತೆ ಬೆಳೆಯಬಲ್ಲವು.
- ೨. ಗೋಲ್ಡನ್ ಪಾಯ್ಸನ್ ಡಾರ್ಟ್ ಫ್ರಾಗ್ ಎಂಬ ಕಪ್ಪೆ ೧೫೦೦ ಜನರನ್ನು ತನ್ನ ವಿಷದಿಂದ ಕೊಲ್ಲಬಲ್ಲದು.
- ೩. ಸ್ಟೆಗೋಸಾರಸ್ ಸು. ೯ ಮೀಟರ್ ಉದ್ದವಾಗಿರುವ ಸರೀಸೃಪ
- ೪. ಮೊಲಗಳಿಗೆ ಸಿಹಿ ಎಂದರೆ ಬಲುಪ್ರೀಯ.
- ೫. ಕೋಳಿಗಳ ಎಡಕಾಲಿನಲ್ಲಿ ಹೆಚ್ಚು ಮಾಂಸವಿರುತ್ತದೆ.ಕಾರಣ ಸ್ನಾಯುಗಳು ಹೆಚ್ಚಾಗಿರುತ್ತದೆ.
- ೬. ಅಕ್ವೇರಿಯಂಗಳಲ್ಲಿ ಇರುವ ಗೋಲ್ಡ್ ಫಿಶ್ ಒಳ್ಳೆಯ ಬೆಳಕಿಲ್ಲದೇ ಇದ್ದರೆ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತದೆ.
- ೭. ಇಲಿಯ ವೀರ್ಯಾಣುಗಳು ಆನೆಯ ವೀರ್ಯಾಣುವಿಗಿಂತ ಹೆಚ್ಚು.
ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಶುಕ್ರವಾರ, ಜುಲೈ 28, 2017
ಪ್ರಾಣಿ ಲೋಕದ ವೈಚಿತ್ರ್ಯಗಳು 2
ಗುರುವಾರ, ಜುಲೈ 27, 2017
ಬುಧವಾರ, ಜುಲೈ 26, 2017
ಏಕಾಂತರಾಮಿತಂದೆ
ಅಂಕಿತ ನಾಮ: ಎನ್ನಯ್ಯ ಚೆನ್ನರಾಮ
ಕಾಲ: ೧೧೬೦
ದೊರಕಿರುವ ವಚನಗಳು: 7 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ: ಪುರುಷೋತ್ತಮಭಟ್ಟ, ಸೀತಮ್ಮ
ಹುಟ್ಟಿದ ಸ್ಥಳ: ಕಲ್ಬುರ್ಗಿ ಜಿಲ್ಲೆಯ ಅಳಂದ
ಪರಿಚಯ: ಕಾಲ ಸು. 1160.
ಸ್ಥಳ: ಕಲ್ಬುರ್ಗಿ ಜಿಲ್ಲೆಯ ಅಳಂದ. ಹರಿಹರ ಈತನ ಬಗ್ಗೆ ರಗಳೆಯೊಂದನ್ನು ಬರೆದಿದ್ದಾನೆ. ಅಬ್ಬಲೂರು ಶಾಸನದಲ್ಲಿ ಇವನ ಉಲ್ಲೇಖವಿದೆ. ತಂದೆ: ಪುರುಷೋತ್ತಮಭಟ್ಟ, ತಾಯಿ: ಸೀತಮ್ಮ. ಪುಲಿಗೆರೆಯ ಸೋಮೇಶ್ವರನು ಈತನ ಕನಸಿನಲ್ಲಿ ಬಂದು ಪರಧರ್ಮಗಳನ್ನು ಜಯಿಸುವಂತೆ ಹೇಳಿದ; ಹಾಗಾಗಿ ಇವನು ಅಬ್ಬಲೂರಿಗೆ ಬಂದು ಅಲ್ಲಿನ ಜೈನರೊಡನೆ ವಾದಮಾಡಿ ಅಲ್ಲಿನ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ತಲೆ ಕತ್ತರಿಸಿಕೊಂಡು ಮತ್ತೆ ದೇವರು ಅವನನ್ನು ಬದುಕಿಸಿದ ಪವಾಡ ನಡೆಯಿತು. ಬಸದಿಯಲ್ಲಿ ಸೋಮೇಶ್ವರಲಿಂಗ ಸ್ಥಾಪನೆ ಮಾಡಿದ ಎಂಬ ಕಥೆ ಶಾಸನದಲ್ಲಿ ಇದೆ. ಈತನ ಪವಾಡವನ್ನು ಚಿತ್ರಿಸುವ ಶಿಲ್ಪಗಳು ಅಲ್ಲಿನ ದೇವಸ್ಥಾನದಲ್ಲಿವೆ. ಇವನ 7 ವಚನಗಳು ದೊರೆತಿವೆ, ಕಾಯ-ಜೀವ ಭೇದ, ನಿತ್ಯಮುಕ್ತನ ಸ್ಥಿತಿಗಳನ್ನು ವರ್ಣಿಸಿದ್ದಾನೆ.
ಅಶನ ವ್ಯಸನ ಸರ್ವವಿಷಯಾದಿಗಳಲ್ಲಿ ಹುಸಿದು,
ಪಿಸುಣತ್ವದಿಂದ ಗಸಣಿಗೊಂಡು,
ಮಾಡಿಸಿಕೊಂಬುದು ಸದ್ಗುರುವಿಗೆ ಸಂಬಂಧವಲ್ಲ.
ತಿಲರಸ-ವಾರಿಯ ಭೇದದಂತೆ, ಮಣಿಯೊಳಗಿದ್ದ ಸೂತ್ರದಂತೆ
ಅಂಗವ ತೀರ್ಚಿ ಪಾಯ್ಧು ನಿಂದ ಅಹಿಯ ಅಂಗದಂತೆ
ಗುರುಸ್ಥಲಸಂಬಂಧ,
ಎನ್ನಯ್ಯ ಚೆನ್ನರಾಮೇಶ್ವರಲಿಂಗವನರಿಯಬಲ್ಲಡೆ.
ಸೋಮವಾರ, ಜುಲೈ 24, 2017
ಸ್ವಗತ
ಸುಗತ (ಬುದ್ಧ) ವೈರಾಗ್ಯದಿಂದ ಸಂಸಾರ ಬಿಟ್ಟು ಹೊಗುವಾಗ ಹೇಳಿದ ಸತ್ಯಗಳು
ಸೈಲೆಂಟ್ ಮೋಡ್ನಲ್ಲಿ ಹೇಳಿಕೊಂಡ ಮಾತುಗಳು
ಹೆಂಡತಿಯೆದುರಿಗೆ ಗಂಡ ಆಡಬಹುದಾದ ಮಾತುಗಳು
ಹೆಂಡತಿಯ ಗೊಣಗುವಿಕೆಗಳು
ಕೇಳಿಸಿಕೊಳ್ಳಬೇಕಾದವರಿಗೆ ಮಾತ್ರ ಕೇಳುವಂತೆ ನುಡಿಯುವ ಉಕ್ತಿಗಳು
ಮನೋಗತಗಳನ್ನೆಲ್ಲ ವ್ಯಕ್ತಪಡಿಸುವ ಸುರಕ್ಷಿತ ಮಾರ್ಗ
ಆವರಣದೊಳಗಿನ ಸಂಭಾಷಣೆ
ನಮ್ಮೆದುರಾಳಿ ಗೆದ್ದಾಗ ನಾವಾಡುವ ಟೀಕಾರೋಪಗಳು
ಇಷ್ಟವಿಲ್ಲದ ನೆಂಟರು ಬಂದಾಗ ನಾವಾಡುವ ಸ್ವಾಗತ ವಚನ
ಹೇಳಲು ಪೂರ್ತಿ ಧೈರ್ಯವಿಲ್ಲದ ಮಾತುಗಳು ಹೊರಬೀಳುವ ಮಾರ್ಗ
ರಾತ್ರಿ ನಿದ್ರೆಯಲ್ಲಾಡಿದ ಉವಾಚಗಳು
ನಿಮ್ಮೊಳಗಿನ ಧೈರ್ಯ ಸ್ಥಗಿತಗೊಂಡಾಗ ಮಾಡುವ ಭಾಷಣವೂ ಸ್ವಗತವೇ
ಪ್ರಿಯೆಯ ಸೌಂದರ್ಯದ ಬಗೆಗಿನ ನಿಜವಾದ ಅಭಿಪ್ರಾಯ
ನಿಮ್ಮ ಶಿಕ್ಷಕ ನಿಮ್ಮನ್ನು ಬೈದಾಗ ಮನಸ್ಸಿನಲ್ಲೇ ಬೈದುಕೊಂಡದ್ದು
ಸ್ವಂತ ಅಭಿಪ್ರಾಯಗಳಲ್ಲಿ ಹೆಚ್ಚಿನವು ಸ್ವಗತಗಳೇ
ನೀವು ಹೇಳಿದ್ದು ಬೇರೆಯವರಿಗೆ ಕೇಳದಿದ್ದರೆ ಅದು ಸ್ವಗತವೇ
ಶಪಿಸಿಕೊಳ್ಳುವಿಕೆಗೊಂದು ದಾರಿ
ಅರಣ್ಯ ರೋದನವೂ ಹೌದು, ವನಾಲಾಪವೂ ಹೌದು
-ವಿಶ್ವನಾಥ ಸುಂಕಸಾಳ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...








