fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶುಕ್ರವಾರ, ಮಾರ್ಚ್ 08, 2024

ಶಿವನ 21 ಹೆಸರುಗಳು ಮತ್ತು ಅರ್ಥ

ಮಹಾ ಶಿವರಾತ್ರಿಯ ಶುಭಾಶಯಗಳು
ಸೋಮವಾರ ಶಿವನಿಗೆ ವಿಶೇಷವಾಗಿ ಪ್ರಿಯವಾದ ವಾರ. ಏಕೆಂದರೆ ಸೋಮವಾರ ‘ಸೋಮ’ ಅಂದರೆ ಚಂದ್ರನ ವಾರ. ಚಂದ್ರ ಮಹಾದೇವನ ಪರಮ ಭಕ್ತ. ಮಹಾದೇವನ ಪ್ರೀತ್ಯರ್ಥ ಆತನ ಶಿರವನ್ನು ಅಲಂಕರಿಸಿರುವನು. ಸೋಮವಾರದಂದು ಶಿವನ ನಾಮಗಳ ಸ್ಮರಣೆ ಮಾಡಿದರೆ ವಿಶೇಷ ಪ್ರಯೋಜನವಿದೆ. ಶಿವನ 21 ಹೆಸರುಗಳು ಮತ್ತು ಅವುಗಳ ಅರ್ಥವನ್ನಿಲ್ಲಿ ನೋಡೋಣ ....
  1. ಶಿವ :  ಶಿವ ಎಂದರೆ ‘ಮಂಗಳ’, ಮಂಗಳಕರನಾದುದರಿಂದ ಈತ ‘ಶಿವ’ ಎಂದರು.
  2. ವಾಮದೇವ ವಾಮ’ ಎಂದರೆ ಸುಂದರ. ಶಿವನಷ್ಟು ಸುಂದರ ಯಾರೂ ಇಲ್ಲ ಎಂಬ ಕಾರಣದಿಂದ ಈತನನ್ನು ‘ವಾಮದೇವ’ ಎಂದು ಕರೆಯಲಾಗಿದೆ.
  3. ಸುಂದರೇಶ್ವರ : ಗಜಚರ್ಮಾಂಬರ ಧಾರಿಯಾದ ಶಿವನು ಪಾರ್ವತಿ ದೇವಿಯನ್ನು ಮದುವೆಯಾಗಲು ಬಂದಾಗ ಆತನ ಅತ್ತೆ ಗಾಬರಿಯಿಂದ ತಲೆ ತಿರುಗಿ ಬೀಳುತ್ತಾಳೆ. ಆಗ ಆಕೆಯನ್ನು ಸಮಾಧಾನ ಪಡಿಸಲು ಶಿವನು ನಾನಾವಿಧಾಲಂಕಾರ ಭೂಷಿತನಾಗಿ ‘ಸುಂದರೇಶ್ವರನ’ ರೂಪ ತಾಳುತ್ತಾನೆ.
  4. ವೃಷಭಧ್ವಜ : ಎತ್ತು ಅಥವಾ ನಂದಿಯನ್ನು ವಾಹನವಾಗಿ ಹೊಂದಿರುವುದರಿಂದ ವೃಷಭಧ್ವಜ ಎಂದು ಕರೆಯಲಾಗಿದೆ.
  5. ಆಶುತೋಶ : ಭಕ್ತರಿಗೆ ಒಲಿದು ಶೀಘ್ರದಲ್ಲಿ ವರ ನೀಡುವುದರಿಂದ ಆಶುತೋಷ’ ಎಂದು ಕರೆಯಲಾಗಿದೆ.
  6. ಗಂಗಾಧರ : ಗಂಗೆಯನ್ನು ಶಿರಸ್ಸಿನಲ್ಲಿ ಧರಿಸಿರುವುದರಿಂದ ಶಿವನನ್ನು ‘ಗಂಗಾಧರ’ ಎಂದು ಕರೆಯಲಾಗಿದೆ.
  7. ಪಿನಾಕಿ : ಶಿವನು ಧನಸ್ಸನ್ನು ಧರಿಸಿರುವುದರಿಂದ ಪಿನಾಕಿ’ ಎಂಬ ಹೆಸರು.
  8. ವಿಷಕಂಠ (ನೀಲಕಂಠ) : ಸಮುದ್ರ ಮಥನ ಸಂದರ್ಭದಲ್ಲಿ ಹಾಲಾಹಲ(ವಿಷ)ವನ್ನು ನುಂಗಿ ಗಂಟಲಲ್ಲಿ ಇರಿಸಿಕೊಂಡು ಲೋಕವನ್ನು ರಕ್ಷಿಸಿದ ಈತ ವಿಷಕಂಠ. ಆಗ ಗಂಟಲು ನೀಲಿಗಟ್ಟಿ ‘ನೀಲಕಂಠ’ನೆಂಬ ಹೆಸರನ್ನೂ ಪಡೆದ.
  9. ಸಾರಂಗಪಾಣಿ : ದಕ್ಷಿಣಾಮೂರ್ತಿ ರೂಪದಲ್ಲಿ ಶಿವನು ಕೈಯಲ್ಲಿ ಸಾರಂಗವನ್ನು ಧರಿಸಿರುವುದರಿಂದ ಸಾರಂಗಪಾಣಿ ಎಂಬ ಹೆಸರು.
  10. ನಟರಾಜ : ನಾಟ್ಯದ ಮೂಲಕ ಅಪಸ್ಮಾರನನ್ನು ನಿಯಂತ್ರಿಸಿದ ಕಾರಣ ಈತನು ನಟರಾಜ ಎಂದು ಕರೆಯಲಾಗಿದೆ.
  11. ಸದಾಶಿವ : ಸದಾ ಸಜ್ಜನರಿಗೆ ಮಂಗಳವನ್ನು ಕರುಣಿಸುವನಾದ್ದರಿಂದ ಸದಾಶಿವ ಎಂದು ಕರೆಯಲಾಗಿದೆ.
  12. ನಾಗಾಭರಣ : ನಾಗ(ಸರ್ಪ)ವನ್ನು ಆಭರಣವಾಗಿ ಧರಿಸಿರುವುದರಿಂದ ನಾಗಾಭರಣ ಎಂದು ಕರೆಯಲಾಗಿದೆ.
  13. ತ್ರಿಪುರಾರಿ : ತ್ರಿಪುರಾಸುರನನ್ನು ಸಂಹಾರ ಮಾಡಿದ್ದರಿಂದ – “ತ್ರಿಪುರಾರಿ”
  14. ಮೃತ್ಯುಂಜಯ : ಮೃತ್ಯುವಿಗೆ ಅಭಿಮಾನಿಯಾದ ಯಮನನ್ನೂ ಮೀರಿಸಿರುವುದರಿಂದ ಮೃತ್ಯುಂಜಯ ಎಂದು ಕರೆಯಲಾಗಿದೆ.
  15. ಧೂರ್ಜಟಿ : ತಪಸ್ಸಿನಿಂದಾಗಿ ಜಟೆಯನ್ನು ಹೊಂದಿರುವ ಕಾರಣದಿಂದ ಧೂರ್ಜಟಿ ಎಂದು ಕರೆಯಲಾಗಿದೆ.
  16. ಕಾಮಾರಿ : ಕಾಮನನ್ನು ಗೆದ್ದು, ಆತನನ್ನು ದಹಿಸಿದ್ದರಿಂದ ಈತ ಕಾಮಾರಿ ಎಂದು ಕರೆಯಲಾಗಿದೆ.
  17. ಮಹಾದೇವ : ದೇವತೆಗಳ ದೇವನಾದ್ದರಿಂದ ‘ಮಹಾದೇವ’ ಎಂದು ಕರೆಯಲಾಗಿದೆ.
  18. ಅರ್ಧನಾರೀಶ್ವರ : ತನ್ನ ದೇಹದ ಅರ್ಧಭಾಗದಲ್ಲಿ ಪಾರ್ವತಿಯನ್ನು ಹೊಂದಿರುವುದರಿಂದ ಈತ ಅರ್ಧನಾರೀಶ್ವರ ಎಂದು ಕರೆಯಲಾಗಿದೆ.
  19. ಶಂಕರ : ಶಂ ಎಂದರೆ ಸುಖ. ಸಕಲ ಸುಖವನ್ನೂ ಕರುಣಿಸುವವನು ಶಂಕರ ಎಂದು ಕರೆಯಲಾಗಿದೆ.
  20. ಆದಿಯೋಗಿ : ಮಹಾ ತಪಸಿಯಾದ ಶಿವ ಯೋಗಿಗಳ ಮಹಾದೇವ, ಯೋಗಿಗಳ ಪರಮಗುರು ಆದ್ದರಿಂದ ಆದಿಯೋಗಿ ಎಂದು ಕರೆಯಲಾಗಿದೆ.
  21. ಮಹಾಕಾಲ : ಸ್ವಯಂ ಕಾಲನೂ, ಮಹಾಕಾಳಿಯ ಅರ್ಧಾಂಗನೂ ಆಗಿರುವುದರಿಂದ ಮಹಾಕಾಲ ಎಂದು ಕರೆಯಲಾಗಿದೆ.
    ಹಾಗೆಯೇ ಮಹಾದೇವನಿಗೆ ಸೋಮಶೇಖರ, ಚಂದ್ರಮೌಳಿ, ಚಂದ್ರಶೇಖರ ಎಂಬಿತ್ಯಾದಿ ಹೆಸರುಗಳೂ ಇವೆ.  
ಶಿವಾರ್ಪಣಮಸ್ತು 
█▓▒▒░░░⯮ ಕೃಪೆ: 🙶 ಸದ್ವಿಚಾರ ಸಂಗ್ರಹ  🙷 ░░░▒▒▓█


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು