Google ನಲ್ಲಿ ಹೀಗೆ ಟೈಪ್ ಮಾಡಿ: " Holi" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ಬಣ್ಣದ 3 ತಟ್ಟೆಗಳು " ಕಾಣುತ್ತದೆ. ಆಗ ನೀವು ಆ ಬಣ್ಣದ ತಟ್ಟೆಯನ್ನು ಮುಟ್ಟಿದಾಗ ಒಂದು ಬಣ್ಣ ನಿಮ್ಮ ಪರದೆಯ ಮೇಲೆ ಬರುತ್ತದೆ ಹಾಗೆಯೆ ಎಲ್ಲಿ ನೀವು ಕ್ಲಿಕ್ ಮಾಡುತ್ತಿರೋ ಅಲ್ಲೆಲ್ಲ ಬಣ್ಣ ಬಿಳುತ್ತದೆ, ನಂತರ ನೀವು ಅದನ್ನು ಅಳಿಸಲು ಅಲ್ಲಿ ನಿಮಗೆ ನೀರು ಕಾಣುತ್ತದೆ. ಅದನ್ನು ಕ್ಲಿಕ್ ಮಾಡುತ್ತಿರೋ ಆಗ ಆ ಬಣ್ಣವೆಲ್ಲವೂ ಅಳಿಸುವುದನ್ನು ಕಾಣಬಹುದು. ಇದೂ ಕೂಡ ಒಂದು ಗೂಗಲ್ ಮೊಜು ಪುಟ...
fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಸೋಮವಾರ, ಮಾರ್ಚ್ 18, 2024
ಬುಧವಾರ, ಮಾರ್ಚ್ 13, 2024
ಶುಕ್ರವಾರ, ಮಾರ್ಚ್ 08, 2024
ಶಿವನ 21 ಹೆಸರುಗಳು ಮತ್ತು ಅರ್ಥ
ಮಹಾ ಶಿವರಾತ್ರಿಯ ಶುಭಾಶಯಗಳು
ಸೋಮವಾರ ಶಿವನಿಗೆ ವಿಶೇಷವಾಗಿ ಪ್ರಿಯವಾದ ವಾರ. ಏಕೆಂದರೆ ಸೋಮವಾರ ‘ಸೋಮ’ ಅಂದರೆ ಚಂದ್ರನ ವಾರ. ಚಂದ್ರ ಮಹಾದೇವನ ಪರಮ ಭಕ್ತ. ಮಹಾದೇವನ ಪ್ರೀತ್ಯರ್ಥ ಆತನ ಶಿರವನ್ನು ಅಲಂಕರಿಸಿರುವನು. ಸೋಮವಾರದಂದು ಶಿವನ ನಾಮಗಳ ಸ್ಮರಣೆ ಮಾಡಿದರೆ ವಿಶೇಷ ಪ್ರಯೋಜನವಿದೆ. ಶಿವನ 21 ಹೆಸರುಗಳು ಮತ್ತು ಅವುಗಳ ಅರ್ಥವನ್ನಿಲ್ಲಿ ನೋಡೋಣ ....
- ಶಿವ : ಶಿವ ಎಂದರೆ ‘ಮಂಗಳ’, ಮಂಗಳಕರನಾದುದರಿಂದ ಈತ ‘ಶಿವ’ ಎಂದರು.
- ವಾಮದೇವ : ‘ವಾಮ’ ಎಂದರೆ ಸುಂದರ. ಶಿವನಷ್ಟು ಸುಂದರ ಯಾರೂ ಇಲ್ಲ ಎಂಬ ಕಾರಣದಿಂದ ಈತನನ್ನು ‘ವಾಮದೇವ’ ಎಂದು ಕರೆಯಲಾಗಿದೆ.
- ಸುಂದರೇಶ್ವರ : ಗಜಚರ್ಮಾಂಬರ ಧಾರಿಯಾದ ಶಿವನು ಪಾರ್ವತಿ ದೇವಿಯನ್ನು ಮದುವೆಯಾಗಲು ಬಂದಾಗ ಆತನ ಅತ್ತೆ ಗಾಬರಿಯಿಂದ ತಲೆ ತಿರುಗಿ ಬೀಳುತ್ತಾಳೆ. ಆಗ ಆಕೆಯನ್ನು ಸಮಾಧಾನ ಪಡಿಸಲು ಶಿವನು ನಾನಾವಿಧಾಲಂಕಾರ ಭೂಷಿತನಾಗಿ ‘ಸುಂದರೇಶ್ವರನ’ ರೂಪ ತಾಳುತ್ತಾನೆ.
- ವೃಷಭಧ್ವಜ : ಎತ್ತು ಅಥವಾ ನಂದಿಯನ್ನು ವಾಹನವಾಗಿ ಹೊಂದಿರುವುದರಿಂದ ‘ವೃಷಭಧ್ವಜ’ ಎಂದು ಕರೆಯಲಾಗಿದೆ.
- ಆಶುತೋಶ : ಭಕ್ತರಿಗೆ ಒಲಿದು ಶೀಘ್ರದಲ್ಲಿ ವರ ನೀಡುವುದರಿಂದ ‘ಆಶುತೋಷ’ ಎಂದು ಕರೆಯಲಾಗಿದೆ.
- ಗಂಗಾಧರ : ಗಂಗೆಯನ್ನು ಶಿರಸ್ಸಿನಲ್ಲಿ ಧರಿಸಿರುವುದರಿಂದ ಶಿವನನ್ನು ‘ಗಂಗಾಧರ’ ಎಂದು ಕರೆಯಲಾಗಿದೆ.
- ಪಿನಾಕಿ : ಶಿವನು ಧನಸ್ಸನ್ನು ಧರಿಸಿರುವುದರಿಂದ ‘ಪಿನಾಕಿ’ ಎಂಬ ಹೆಸರು.
- ವಿಷಕಂಠ (ನೀಲಕಂಠ) : ಸಮುದ್ರ ಮಥನ ಸಂದರ್ಭದಲ್ಲಿ ಹಾಲಾಹಲ(ವಿಷ)ವನ್ನು ನುಂಗಿ ಗಂಟಲಲ್ಲಿ ಇರಿಸಿಕೊಂಡು ಲೋಕವನ್ನು ರಕ್ಷಿಸಿದ ಈತ ವಿಷಕಂಠ. ಆಗ ಗಂಟಲು ನೀಲಿಗಟ್ಟಿ ‘ನೀಲಕಂಠ’ನೆಂಬ ಹೆಸರನ್ನೂ ಪಡೆದ.
- ಸಾರಂಗಪಾಣಿ : ದಕ್ಷಿಣಾಮೂರ್ತಿ ರೂಪದಲ್ಲಿ ಶಿವನು ಕೈಯಲ್ಲಿ ಸಾರಂಗವನ್ನು ಧರಿಸಿರುವುದರಿಂದ ಸಾರಂಗಪಾಣಿ ಎಂಬ ಹೆಸರು.
- ನಟರಾಜ : ನಾಟ್ಯದ ಮೂಲಕ ಅಪಸ್ಮಾರನನ್ನು ನಿಯಂತ್ರಿಸಿದ ಕಾರಣ ಈತನು ನಟರಾಜ ಎಂದು ಕರೆಯಲಾಗಿದೆ.
- ಸದಾಶಿವ : ಸದಾ ಸಜ್ಜನರಿಗೆ ಮಂಗಳವನ್ನು ಕರುಣಿಸುವನಾದ್ದರಿಂದ ಸದಾಶಿವ ಎಂದು ಕರೆಯಲಾಗಿದೆ.
- ನಾಗಾಭರಣ : ನಾಗ(ಸರ್ಪ)ವನ್ನು ಆಭರಣವಾಗಿ ಧರಿಸಿರುವುದರಿಂದ ನಾಗಾಭರಣ ಎಂದು ಕರೆಯಲಾಗಿದೆ.
- ತ್ರಿಪುರಾರಿ : ತ್ರಿಪುರಾಸುರನನ್ನು ಸಂಹಾರ ಮಾಡಿದ್ದರಿಂದ – “ತ್ರಿಪುರಾರಿ”
- ಮೃತ್ಯುಂಜಯ : ಮೃತ್ಯುವಿಗೆ ಅಭಿಮಾನಿಯಾದ ಯಮನನ್ನೂ ಮೀರಿಸಿರುವುದರಿಂದ ಮೃತ್ಯುಂಜಯ ಎಂದು ಕರೆಯಲಾಗಿದೆ.
- ಧೂರ್ಜಟಿ : ತಪಸ್ಸಿನಿಂದಾಗಿ ಜಟೆಯನ್ನು ಹೊಂದಿರುವ ಕಾರಣದಿಂದ ಧೂರ್ಜಟಿ ಎಂದು ಕರೆಯಲಾಗಿದೆ.
- ಕಾಮಾರಿ : ಕಾಮನನ್ನು ಗೆದ್ದು, ಆತನನ್ನು ದಹಿಸಿದ್ದರಿಂದ ಈತ ಕಾಮಾರಿ ಎಂದು ಕರೆಯಲಾಗಿದೆ.
- ಮಹಾದೇವ : ದೇವತೆಗಳ ದೇವನಾದ್ದರಿಂದ ‘ಮಹಾದೇವ’ ಎಂದು ಕರೆಯಲಾಗಿದೆ.
- ಅರ್ಧನಾರೀಶ್ವರ : ತನ್ನ ದೇಹದ ಅರ್ಧಭಾಗದಲ್ಲಿ ಪಾರ್ವತಿಯನ್ನು ಹೊಂದಿರುವುದರಿಂದ ಈತ ಅರ್ಧನಾರೀಶ್ವರ ಎಂದು ಕರೆಯಲಾಗಿದೆ.
- ಶಂಕರ : ಶಂ ಎಂದರೆ ಸುಖ. ಸಕಲ ಸುಖವನ್ನೂ ಕರುಣಿಸುವವನು ಶಂಕರ ಎಂದು ಕರೆಯಲಾಗಿದೆ.
- ಆದಿಯೋಗಿ : ಮಹಾ ತಪಸಿಯಾದ ಶಿವ ಯೋಗಿಗಳ ಮಹಾದೇವ, ಯೋಗಿಗಳ ಪರಮಗುರು ಆದ್ದರಿಂದ ಆದಿಯೋಗಿ ಎಂದು ಕರೆಯಲಾಗಿದೆ.
- ಮಹಾಕಾಲ : ಸ್ವಯಂ ಕಾಲನೂ, ಮಹಾಕಾಳಿಯ ಅರ್ಧಾಂಗನೂ ಆಗಿರುವುದರಿಂದ ಮಹಾಕಾಲ ಎಂದು ಕರೆಯಲಾಗಿದೆ.
ಹಾಗೆಯೇ ಮಹಾದೇವನಿಗೆ ಸೋಮಶೇಖರ, ಚಂದ್ರಮೌಳಿ, ಚಂದ್ರಶೇಖರ ಎಂಬಿತ್ಯಾದಿ ಹೆಸರುಗಳೂ ಇವೆ.
ಶಿವಾರ್ಪಣಮಸ್ತು
█▓▒▒░░░⯮ ಕೃಪೆ: 🙶 ಸದ್ವಿಚಾರ ಸಂಗ್ರಹ 🙷 ░░░▒▒▓█
ಶನಿವಾರ, ಮಾರ್ಚ್ 02, 2024
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...