fly
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀
ಸೋಮವಾರ, ಅಕ್ಟೋಬರ್ 31, 2022
ಕನ್ನಡವೆಂದರೆ ಉಸಿರು
ಶುಕ್ರವಾರ, ಅಕ್ಟೋಬರ್ 28, 2022
ಉಪ್ಪಿನ ಋಣ ಕವನ ತಿಳಿಯಿರಿ
ಬುಧವಾರ, ಅಕ್ಟೋಬರ್ 19, 2022
ಮಂಗಳವಾರ, ಅಕ್ಟೋಬರ್ 18, 2022
ಭಾನುವಾರ, ಅಕ್ಟೋಬರ್ 09, 2022
ಮಹಾ ಭಾರತದ 18 ಪರ್ವಗಳು
ಮಂಗಳವಾರ, ಅಕ್ಟೋಬರ್ 04, 2022
ನವರಾತ್ರಿಗಳು ಯಾಕೆ ಇದ್ದಾವೆ?
ನೂರಾರು ಅಥವಾ ಸಾವಿರಾರು ವರ್ಷಗಳ ಹಿಂದಿನ ಜೀವನಕ್ಕೂ ಮತ್ತು ಇಂದಿನ ಜೀವನಕ್ಕೂ ಅಜಗಜಾಂತರ ವ್ಯತ್ಯಾಸಗಳು ನಮಗೆ ಕಂಡುಬರುತ್ತವೆ. ಇಂದು ನಾವು ಆಚರಿಸುತ್ತಿರುವ ಎಷ್ಟೋ ಸಂಪ್ರದಾಯಗಳು ಇಂದು-ನಿನ್ನೆ ಜನ್ಮ ತಾಳಿದವಲ್ಲ. ಅವುಗಳೆಲ್ಲವು ಹಿಂದೆಂದೊ ಜನ್ಮ ತಳೆದಿವೆ. ನೀವು ಎಂದಾದರು ಆಲೋಚಿಸಿದ್ದೀರೇ? ನಾವೇಕೆ ವರ್ಷಕ್ಕೆ ಒಂದು ದೀಪಾವಳಿ, ಹೋಳಿಯನ್ನು ಆಚರಿಸುತ್ತೇವೆ ಆದರೆ ನವರಾತ್ರಿಯನ್ನು ಮಾತ್ರ ಎರಡು ಬಾರಿ ಆಚರಿಸುತ್ತೇವೆ. ಹೌದು ವಸಂತ ನವರಾತ್ರಿ ಮತ್ತು ಶರನ್ನಾವರಾತ್ರಿ ಎಂಬ ಎರಡು ನವರಾತ್ರಿಗಳನ್ನು ನಾವು ಆಚರಿಸುತ್ತೇವೆ.
ಈ ಎರಡು ಮಾಸಗಳು ಋತು ಬದಲಾವಣೆಯನ್ನು ಹೊಂದಿರುವ ಮಾಸಗಳಾಗಿದ್ದು, ನಮ್ಮ ಆಹಾರ ಸೇವನೆಯ ಕ್ರಮವು ಈ ಅವಧಿಯಲ್ಲಿ ಪರಸ್ಪರ ಬದಲಾವಣೆಯಿಂದ ಕೂಡಿರುತ್ತದೆ. ನವರಾತ್ರಿಗಳು ನಮ್ಮನ್ನು ನಾವು ಈ ಆಹಾರ ಪದ್ಧತಿಗೆ ಹೊಂದಿಕೊಳ್ಳುವಂತೆ ಮಾಡುವ ಗುಣಗಳನ್ನು ಹೊಂದಿದೆ. ಅದು ಹೇಗೆಂದರೆ ಆಸ್ತಿಕ ಭಕ್ತ ಸಮೂಹವು ಈ ನವರಾತ್ರಿಗಳ ಸಂದರ್ಭದಲ್ಲಿ ಉಪವಾಸವಿರುತ್ತಾರೆ. ಇದರಿಂದ ಅವರು ಹೊಸ ಆಹಾರ ಶೈಲಿಗೆ ಒಗ್ಗಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಜನರು ಉಪ್ಪು ಮತ್ತು ಸಕ್ಕರೆಯನ್ನು ಮಿತ ಪ್ರಮಾಣದಲ್ಲಿ ಸೇವಿಸುತ್ತಾರೆ. ಇದರಿಂದಾಗಿ ಹೆಚ್ಚಿನ ಧನಾತ್ಮಕ ಶಕ್ತಿಯನ್ನು, ಆತ್ಮ ವಿಶ್ವಾಸವನ್ನು ಮತ್ತು ದೃಢ ನಿರ್ಧಾರದ ಶಕ್ತಿಯನ್ನು (ಉಪವಾಸ ಮಾಡುವುದರಿಂದ ದೃಢ ನಿರ್ಧಾರ ಕೈಗೊಳ್ಳುವ ಶಕ್ತಿಯು) ಹೆಚ್ಚಿಸುತ್ತದೆ ಮತ್ತು ಕೊನೆಗೆ ಆ ಋತುವಿನಲ್ಲಿ ಸಂಭವಿಸುವ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ದೇಹಕ್ಕೆ ನೀಡುತ್ತದೆ.
ಸೋಮವಾರ, ಅಕ್ಟೋಬರ್ 03, 2022
ಕಸರತ್ತು / ಆಪತ್ತು
ಶನಿವಾರ, ಅಕ್ಟೋಬರ್ 01, 2022
ಅಕ್ಟೋಬರ್ ತಿಂಗಳ ಮಹತ್ವದ ದಿನಗಳು
ಅಕ್ಟೋಬರ್ ೨ : ವಿಶ್ವ ಸಸ್ಯಾಹಾರಿಗಳ ದಿನ, ಗಾಂಧೀಜಿಯವರ ಜನ್ಮದಿನಾಚರಣೆ, ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ.
ಅಕ್ಟೋಬರ್ ೩ : ೧೯೯೦ರಲ್ಲಿ ಜರ್ಮನಿ ದೇಶದ ಪುನರೇಕೀಕರಣ, ವಿಶ್ವ ಪ್ರಾಕೃತಿಕ ದಿನ.
ಅಕ್ಟೋಬರ್ ೪ : ೧೯೫೭ರಲ್ಲಿ ಸೋವಿಯೆಟ್ ಒಕ್ಕೂಟದ ಸ್ಪುಟ್ನಿಕ್ ೧ ಭೂಮಿಯನ್ನು ಪ್ರದಕ್ಷಣೆ ಮಾಡಿದ ಮೊದಲ ಕೃತಕ ಉಪಗ್ರಹವಾಯಿತು, ವಿಶ್ವ ಪ್ರಾಣಿದಯಾ / ಪ್ರಾಣಿ ಕ್ಷೇಮಾಭಿವೃದ್ಧಿ ದಿನ.
ಅಕ್ಟೋಬರ್ ೫ : ವಿಶ್ವ ಹವ್ಯಾಸ ದಿನ.
ಅಕ್ಟೋಬರ್ ೬ : ೧೯೭೩ರಲ್ಲಿ ಈಜಿಪ್ಟ್‌ನ ಸೇನೆ ಇಸ್ರೇಲ್ದೇಶವನ್ನು ಪ್ರವೇಶಿಸಿ ಯೊಮ್ ಕಿಪ್ಪೂರ್ ಯುದ್ಧಪ್ರಾರಂಭವಾಯಿತು.
ಅಕ್ಟೋಬರ್ ೧೨ : ೧೪೯೨ರಲ್ಲಿ ಕ್ರಿಸ್ಟೊಫರ್ ಕೊಲಂಬಸ್ ಕೆರಿಬಿಯನ್ ಪ್ರದೇಶದಲ್ಲಿ ಕಾಲಿಟ್ಟ ಮೊದಲ ಪಾಶ್ಚಾತ್ಯನಾದನು.
ಅಕ್ಟೋಬರ್ ೧೪ : ವಿಶ್ವ ಗುಣಮಟ್ಟ ದಿನ.
ಅಕ್ಟೋಬರ್ ೧೬ : ವಿಶ್ವ ಆಹಾರ ದಿನ.
ಅಕ್ಟೋಬರ್ ೧೮ : ೧೯೨೨ರಲ್ಲಿ ಯುನೈಟೆಡ್ ಕಿಂಗ್‌ಡಮ್‍ನಲ್ಲಿ ಬ್ರಿಟಿಶ್ ಬ್ರಾಡ್‍ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ)ಯ ಸ್ಥಾಪನೆ.
ಅಕ್ಟೋಬರ್ ೧೯ : ನೊಬೆಲ್ ಪ್ರಶಸ್ತಿ ವಿಜೇತ ಡಾ. ಸುಬ್ರಮಣ್ಯಂ ಚಂದ್ರಶೇಖರ್ (1910-1995) ಅವರ ಜನ್ಮದಿನ.
ಅಕ್ಟೋಬರ್ ೨೧ : ಪೋಲೀಸ್ ಹುತಾತ್ಮರ ದಿನ.
ಅಕ್ಟೋಬರ್ ೨೪ : ೧೯೪೫ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ (ವಿಶ್ವಸಂಸ್ಥೆ)ಯ ಸ್ಥಾಪನೆ.
ಅಕ್ಟೋಬರ್ ೨೯ : ಟರ್ಕಿ ಗಣರಾಜ್ಯವಾಗಿ ೧೯೨೩ರಲ್ಲಿ ಮುಸ್ತಫ ಕೆಮಲ್ ಅಟಾತುರ್ಕ್ ಅದರ ಮೊದಲ ರಾಷ್ಟ್ರಪತಿಯಾದನು.
ಅಕ್ಟೋಬರ್ ೩೦ : ವಿಶ್ವ ಉಳಿತಾಯ / ಮಿತವ್ಯಯ ದಿನ.
ಅಕ್ಟೋಬರ್ ೩೧ : ೧೮೭೫ ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ, ೧೯೮೪ರಲ್ಲಿ ಇಂದಿರಾ ಗಾಂಧಿಯ ಹತ್ಯೆ.
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...