೨೦) ದೀಪಾವಳಿಯ ಆಚರಣೆ ಮತ್ತು ಅದಕ್ಕೆ ಸಂಬಂಧಿಸಿದ ಸ್ವಚ್ಛತಾ ಕಾರ್ಯಗಳು:
ದೀಪಾವಳಿಯು ಅಕ್ಟೋಬರ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಅಂದರೆ ಚಳಿಗಾಲದ ಆರಂಭ ಕಾಲದಲ್ಲಿ ಬರುತ್ತದೆ. ಆಗ ತಾನೇ ಮಳೆಗಾಲವು ಮುಗಿದಿರುತ್ತದೆ. ಈ ಕಾಲದಲ್ಲಿ ಮಳೆಗಾಲವು ಎಲ್ಲರಿಗೂ ತಿಳಿದಂತೆ ಪ್ರತಿಯೊಂದಕ್ಕೂ ಹಾನಿಯನ್ನು ಮಾಡಿರುತ್ತದೆ. ಸುಮಾರು ಮನೆಗಳು ಇದರಿಂದ ಹಾನಿಗೆ ಒಳಗಾಗಿರುತ್ತವೆ ಮತ್ತು ದುರಸ್ತಿ ಕಾರ್ಯವು ನಡೆಯ ಬೇಕಾಗಿರುತ್ತದೆ. ಆದ್ದರಿಂದ ಚಳಿಗಾಲದ ಆರಂಭದಲ್ಲಿ ಬರುವ ಈ ಹಬ್ಬದ ನೆಪದಲ್ಲಿ ಸುಮಾರು ಜನರು ತಮ್ಮ ಮನೆಗಳನ್ನು ದುರಸ್ತಿ ಮಾಡಿ ಕೊಳ್ಳುತ್ತಾರೆ. ಮನೆಗೆ ಸುಣ್ಣ - ಬಣ್ಣ ಬಳಿದು ಅಂದವನ್ನು ಸಹ ಹೆಚ್ಚಿಸುತ್ತಾರೆ. ಜೊತೆಗೆ ಚಳಿಗಾಲದ ಉಡುಗೆ -ತೊಡುಗೆಗಳನ್ನು ಸಹ ಕೊಂಡು ಕೊಳ್ಳುತ್ತಾರೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.