ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಫೆಬ್ರವರಿ 21, 2022

ವಿಶ್ವ ತಾಯಿ ನುಡಿ ದಿನ

ನನ್ನ ಧ್ಯಾನ ಕನ್ನಡ💛❤️

ನನ್ನ ಮೌನ ಕನ್ನಡ💛❤️

ನನ್ನ ಉಸಿರು ಕನ್ನಡ💛❤️

ನನ್ನ ಮಾತೃಭಾಷೆ ಕನ್ನಡ💛❤️

ನನ್ನ ಮನದ ಭಾಷೆ ಕನ್ನಡ💛❤️

ನನ್ನ ಮನದಾಳದ ಭಾಷೆ ಕನ್ನಡ💛❤️

ನನ್ನ ರಕ್ತದ ಕಣ ಕಣದಲ್ಲೂ ಕನ್ನಡ💛❤️

ಅನ್ಯ ಭಾಷೆ ಹೊರಿಕೆ ನಿಂತರೆ ಮಾತೃ ಭಾಷೆ ಉಳಿಯುತ್ತೆ, ಬೆಳೆಯುತ್ತೆ.
ವಿಶ್ವ ತಾಯಿ ನುಡಿ ದಿನ ಶುಭಹಾರೈಕೆಗಳು....

https://t.me/spn3187/39131

ಬುಧವಾರ, ಫೆಬ್ರವರಿ 09, 2022

ನಮ್ಮ ನಂಬಿಕೆಗಳು 14


೧೪) ಸಾಮಾನ್ಯವಾಗಿ ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದು:
ಸಾಮಾನ್ಯವಾಗಿ ನದಿ ನೀರಿನಲ್ಲಿ ನಾಣ್ಯಗಳನ್ನು ಎಸೆಯುವುದರಿಂದ ಅದೃಷ್ಟವು ನಮಗೆ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ವೈಜ್ಞಾನಿಕವಾಗಿ ಹೇಳುವುದಾದರೆ ಹಿಂದಿನ ಕಾಲದಲ್ಲಿ ನಾಣ್ಯಗಳನ್ನು ಬಹುತೇಕ ತಾಮ್ರದಲ್ಲಿಯೇ ಮಾಡಲಾಗುತ್ತಿತ್ತು. ಆದರೆ ಇಂದು ಸ್ಟೇನ್‍ಲೆಸ್ ಸ್ಟೀಲ್‍ನಲ್ಲಿ ಮಾಡಲಾಗುತ್ತಿದೆ. ತಾಮ್ರವು ಒಂದು ಅದ್ಭುತವಾದ ಲೋಹವಾಗಿದ್ದು, ಮಾನವನ ದೇಹಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ಇಂತಹ ಪ್ರಯೋಜನಕಾರಿಯಾದ ತಾಮ್ರದ ನಾಣ್ಯಗಳನ್ನು ನದಿಯಲ್ಲಿ ಎಸೆಯುವುದರಿಂದ ನದಿಯ ನೀರು ಶುದ್ಧವಾಗುವುದರ ಜೊತೆಗೆ ಮೂಲಕ ಸ್ವಲ್ಪ ತಾಮ್ರವು ನಮ್ಮ ದೇಹವನ್ನು ಸೇರುವ ವ್ಯವಸ್ಥೆಯನ್ನು ನಮ್ಮ ಪೂರ್ವಜರು ಮಾಡಿದ್ದರು. ಇದು ಒಂದು ಸಂಪ್ರದಾಯವಾಗಿ ಇಂದಿಗೂ ನಡೆದು ಕೊಂಡು ಬಂದಿದೆ.

ಗುರುವಾರ, ಫೆಬ್ರವರಿ 03, 2022

ಹೆಂಡತಿ / ಹೆಂಡ 'ಅತಿ'

ದಡೂತಿ ಜಗಳಗಂಟಿ ನನ್ನ ಹೆಂಡತಿ

ದಡೂತಿ ಜಗಳಗಂಟಿ ನನ್ನ ಹೆಂಡತಿ
**
ಅವಳಿಂದಾಗಿಯೇ ಆಗಿದ್ದು ನಾ ಕುಡಿವ ಹೆಂಡ 'ಅತಿ'

- Vರಂಗಯ್ಯ

ಮಂಗಳವಾರ, ಫೆಬ್ರವರಿ 01, 2022

ಪೇಬ್ರುವರಿ ತಿಂಗಳ ಮಹತ್ವದ ದಿನಗಳು


ಫೆಬ್ರವರಿ ೧: ಭಾರತೀಯ ಕರಾವಳಿ ಸುರಕ್ಷಾ ದಿನಾಚರಣೆ
ಫೆಬ್ರುವರಿ ೩: ಮೊಜಾಂಬಿಕ್ನಲ್ಲಿ 'ನಾಯಕರ ದಿನಾಚರಣೆ'.
ಫೆಬ್ರುವರಿ ೩: ೧೯೬೬ರಲ್ಲಿ ಸೋವಿಯೆಟ್ ಒಕ್ಕೂಟದ ಲೂನ ೯ ಚಂದ್ರನ ಮೇಲೆ ಇಳಿದ ಮೊದಲ ಗಗನನೌಕೆಯಾಯಿತು.
ಫೆಬ್ರುವರಿ ೪: ಶ್ರೀಲಂಕಾದಲ್ಲಿ ಸ್ವಾತಂತ್ರ್ಯ ದಿನಾಚರಣೆ.
ಫೆಬ್ರುವರಿ ೭: ೧೯೯೨ರಲ್ಲಿ ಯುರೋಪಿನ ಒಕ್ಕೂಟವನ್ನು ಸ್ಥಾಪಿಸಿದ ಮಾಸ್ಟ್ರಿಕ್ಟ್ ಒಪ್ಪಂದಕ್ಕೆ ಸಹಿ ಹಾಕಲಯಿತು.
ಫೆಬ್ರುವರಿ ೧೧: ಜಪಾನ್ನಲ್ಲಿ ರಾಷ್ಟ್ರದ ಸ್ಥಾಪನೆ ದಿನಾಚರಣೆ'.
ಫೆಬ್ರುವರಿ ೧೨: ಚಾರ್ಲ್ಸ್ ಡಾರ್ವಿನ್ ಮತ್ತು ಅಬ್ರಹಮ್ ಲಿಂಕನ್ (ಚಿತ್ರಿತ) ಅವರ ಜನ್ಮ ದಿನಾಚರಣೆಗಳು.
ಫೆಬ್ರುವರಿ ೧೪: ಪ್ರೇಮಿಗಳ ದಿನಾಚರಣೆ.
ಫೆಬ್ರವರಿ ೨೦: ಅರುಣಾಚಲ ಪ್ರದೇಶ ದಿನ
ಫೆಬ್ರುವರಿ ೨೧: ಯುನೆಸ್ಕೊ ಘೋಷಿತ ಅಂತರರಾಷ್ಟ್ರೀಯ ಮಾತೃಭಾಷೆ ದಿನಾಚರಣೆ.
ಫೆಬ್ರವರಿ ೨೪: ಕೇಂದ್ರೀಯ ಸುಂಕ (ಸೆಂಟ್ರಲ್ ಎಕ್ಸೈಸ್) ದಿನ
ಫೆಬ್ರವರಿ ೨೮: ರಾಷ್ಟ್ರೀಯ ವಿಜ್ಞಾನ ದಿನ.

ಕೃಪೆ: ಕನ್ನಡದ ವಿಕಿಪೀಡಿಯ (ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ)

1.. ಜಾಹೀರಾತು

2.ಜಾಹೀರಾತು