fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ಮಾರ್ಚ್ 14, 2020

ಕೊರೊನಾ (Corona) ಎಂದರೇನು? ವೈರಸ್‌ನಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ? ಇಲ್ಲಿದೆ ಅಗತ್ಯ ಮಾಹಿತಿ - ಕೃಪೆ: ವಿಜಯ ಕರ್ನಾಟಕ & @spn3187

     ಇತ್ತೀಚೆಗಷ್ಟೇ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್‌, ಇದೀಗ ವಿಶ್ವವನ್ನೇ ಗಡಗಡ ನಡುಗಿಸುತ್ತಿದೆ. ಕೊರೊನಾ ವೈರಸ್ ಹಾವಳಿ ದಿನೇದಿನೆ ಹೆಚ್ಚುತ್ತಿದ್ದು, ಜನಸಾಮಾನ್ಯರಲ್ಲಿ ತಲ್ಲಣ ಉಂಟುಮಾಡಿದೆ. ಕೊರೊನಾ ವೈರಸ್‌ನಿಂದಾಗಿ ವಿಶ್ವದಾದ್ಯಂತ ಮೃತಪಟ್ಟವರ ಸಂಖ್ಯೆ 3000ದ ಗಡಿ ದಾಟಿದೆ. ಈ ಸಂದರ್ಭದಲ್ಲಿ ಈ ವೈರಸ್‌ ಬಗ್ಗೆ ಸಾರ್ವಜನಿಕರಲ್ಲಿ ಕೆಲವು ತಪ್ಪು ಗ್ರಹಿಕೆಗಳೂ ಹರಡುತ್ತಿವೆ. ಈಗಾಗಲೇ 60 ರಾಷ್ಟ್ರಗಳಿಗೆ ಈ ವೈರಸ್‌ ಹಬ್ಬಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯಕ್ಕೆ ಬೆದರಿಕೆ ಇರುವುದು ನಿಜ. ಆದರೆ, ಇದಕ್ಕೆ ಭಯ ಪಡುವ ಬದಲು ಜಾಗ್ರತೆ ವಹಿಸುವುದು ಅವಶ್ಯ. ಕೊರೊನಾ ವೈರಸ್‌ ಕುರಿತು ನೀವು ತಿಳಿಯಲೇಬೇಕಿರುವ ಮಾಹಿತಿ ಇಲ್ಲಿದೆ.
File:3D medical animation corona virus.jpg
..
ಕೊರೊನಾ ಎಂದರೇನು ?
ಕೊರೊನಾ ಎಂಬುದು ಪ್ರಾಣಿಗಳಲ್ಲಿ ಅನಾರಾಗ್ಯವನ್ನು ಉಂಟುಮಾಡಬಲ್ಲ ವೈರಸ್‌ಗಳ ಬೃಹತ್‌ ಗುಂಪಾಗಿದೆ. ಈ ವೈರಸ್‌ಗಳು ಹೆಚ್ಚಾಗಿ ಉಸಿರಾಟದ ತೊಂದರೆ ಉಂಟುಮಾಡುತ್ತವೆ. ಸಾಮಾನ್ಯ ಶೀತವನ್ನು ಉಂಟುಮಾಡುವ ವೈರಸ್‌ನಿಂದ ಹಿಡಿದು, ಮೆರ್ಸ್‌ (ಮಿಡಲ್‌ ಈಸ್ಟ್‌ ರೆಸ್ಪಿರೇಟರಿ ಸಿಂಡ್ರೋಂ), ಸಾರ್ಸ್‌ (ಸಿವಿಯರ್‌ ಅಕ್ಯೂಟ್‌ ರೆಸ್ಪಿರೇಟರಿ ಸಿಂಡ್ರೋಂ), ಇತ್ತೀಚೆಗೆ ಕಾಣಿಸಿಕೊಂಡಿರುವ ಕೊರೊನಾ ವೈರಸ್‌ ಡಿಸೀಸ್‌ (COVID-19), ಈ ಎಲ್ಲ ವೈರಸ್‌ಗಳೂ ಒಂದೇ ಗುಂಪಿಗೆ ಸೇರುತ್ತವೆ.
..
COVID-19 ಎಂದರೇನು?
COVID-19 ಎಂದರೆ, ಇದೂ ಕೂಡ ಸೋಂಕನ್ನು ಉಂಟುಮಾಡಬಲ್ಲ ವೈರಸ್‌. ಇದು ಕೊರೊನಾ ವೈರಸ್‌ಗಳ ಪೈಕಿ ಇತ್ತೀಚೆಗೆ ಚೀನಾದಲ್ಲಿ ಪತ್ತೆಯಾಗಿ, ವಿಶ್ವಾದ್ಯಂತ ಹರಡುತ್ತಿರುವ ವೈರಸ್‌ ಆಗಿದೆ. ಚೀನಾದ ವುಹಾನ್‌ನಲ್ಲಿ 2019ರ ಡಿಸೆಂಬರ್‌ನಲ್ಲಿ ಪತ್ತೆಯಾಗುವ ಮೊದಲು ಈ ವೈರಸ್ ಕುರಿತು ವಿಶ್ವಕ್ಕೆ ಪರಿಚಯ ಇರಲಿಲ್ಲ.
..
ವೈರಸ್‌ ಸೋಂಕಿನ ರೋಗ ಲಕ್ಷಣಗಳೇನು ?
ಕೊರೊನಾ ಸೋಂಕಿನ ಲಕ್ಷಗಳು ಹಂತಹಂತವಾಗಿ ಕಾಣಿಸಿಕೋಳ್ಳುತ್ತೆ. ಇದರಲ್ಲಿ ರೋಗಲಕ್ಷಣ ರಹಿತ, ಸೌಮ್ಯ, ತೀವ್ರ ಮತ್ತು ಮಾರಣಾಂತಿಕ ಎಂಬ ಹಂತಗಳಿವೆ. ಸಾಮಾನ್ಯ ರೋಗಲಕ್ಷಣಗಳು ಜ್ವರ, ಕೆಮ್ಮು, ಏದುಸಿರು ಮತ್ತು ಉಸಿರಾಟ ಕಷ್ಟವಾಗುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸೋಂಕು ತೀವ್ರವಾದ ಪ್ರಕರಣಗಳಲ್ಲಿ ನ್ಯುಮೋನಿಯಾ, ಮೂತ್ರಪಿಂಡ ವೈಫ‌ಲ್ಯ ಮತ್ತು ಬಹು ಅಂಗಾಂಗ ವೈಫ‌ಲ್ಯಕ್ಕೂ ಕಾರಣವಾಗಬಹುದು.
..
ನೋವೆಲ್‌ ಕೊರೊನಾ ವೈರಸ್‌ ಎಂದು ಕರೆಯುವುದೇಕೆ ?
ಈ ಹಿಂದೆ, ಪ್ರಾಣಿಗಳಲ್ಲಾಗಲಿ, ಮನುಷ್ಯರಲ್ಲಾಗಲಿ ಕಾಣಿಸಿಕೊಳ್ಳದೇ ಇದ್ದು, ಇದೇ ಮೊದಲ ಬಾರಿಗೆ ಕಾಣಿಸಿಕೊಳ್ಳುವ ಕೊರೊನಾ ವೈರಸ್‌ಗೆ ನೋವೆಲ್‌ ಕೊರೊನಾ ವೈರಸ್‌ ಎಂದು ಕರೆಯುತ್ತಾರೆ.
..
ವೈರಸ್‌ನ ಪ್ರಾಕೃತಿಕ ಮೂಲ ಯಾವುದು ?
ಕೊರೊನಾ ವೈರಸ್‌ಗಳ ನೈಸರ್ಗಿಕ ಮೂಲಗಳೆಂದರೆ ಪ್ರಾಣಿಗಳು. ಅದರಲ್ಲೂ ಸಸ್ತನಿಗಳು ಈ ವೈರಸ್ಗಳಿಗೆ ಆವಾಸಸ್ಥಾನ ಎನ್ನಬಹುದು. ಬಾವಲಿಗಳು ಈ ವೈರಸ್‌ಗಳಿಗೆ ಆಶ್ರಯ ನೀಡುವ ಪ್ರಮುಖ ಜೀವಿಗಳು. ಪುನುಗು ಬೆಕ್ಕು (SARS-CoV), ಒಂಟೆ (MERS-CoV) ಸೇರಿದಂತೆ ಇತರ ಹಲವು ಪ್ರಾಣಿಗಳಲ್ಲಿಯೂ ಕೊರೊನ ವರ್ಗದ ವೈರಸ್‌ಗಳು ಇರುತ್ತವೆ.
..
ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಲ್ಲದೇ ?
ಕೊರೊನಾ ವೈರಸ್‌ಗಳು ಪ್ರಾಣಿಗಳಿಂದ ಮನುಷ್ಯರಿಗೆ ಸುಲಭವಾಗಿ ಹರಡಬಲ್ಲವು. ಸೋಂಕುಪೀಡಿತ ಪ್ರಾಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಲ್ಲಿ ಮನುಷ್ಯರಿಗೂ ಹರಡುತ್ತದೆ. ಪ್ರಾಣಿಗಳನ್ನು ನೋಡಿಕೊಳ್ಳುವುದು, ಜೀವಂತ ಪ್ರಾಣಿ ಮಾರುಕಟ್ಟೆಗಳಿಗೆ ಭೇಟಿ ನೀಡುವುದು, ಬೇಯಿಸದ ಅಥವಾ ಅರ್ಧ ಬೇಯಿಸಿದ ಪ್ರಾಣಿ ಉತ್ಪನ್ನಗಳ ಸೇವನೆಯಿಂದಲೂ ವೈರಸ್‌ಗಳು ಹರಡುತ್ತವೆ.
..
ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆಯೇ ?
ಮನುಷ್ಯನಿಂದ ಮನುಷ್ಯನಿಗೆ ಸೋಂಕು ಹರಡುವ ಕುರಿತು ಇತ್ತೀಚೆಗೆ ಚೀನಾದ ರಾಷ್ಟ್ರೀಯ ಆರೋಗ್ಯಾ ಆಯೋಗ ಖಾತರಿಪಡಿಸಿದೆ. ಸೋಂಕು ತಗುಲಿದ ವ್ಯಕ್ತಿಯ ತೀರಾ ಸನಿಹ ಸಂಪರ್ಕಕ್ಕೆ ಬರುವ ವ್ಯಕ್ತಿಗಳು ಅಂದರೆ ಕುಟುಂಬ ಸದಸ್ಯರು, ಆರೋಗ್ಯ-ಆರೈಕೆ ಕೆಲಸಗಾರರು ಮತ್ತು ಇತರ ಸೇವೆ ನೀಡುವವರಿಗೆ ಇದು ಹರಡುವ ಸಾಧ್ಯತೆ ಇದೆ. ಈ ವೈರಸ್‌ ಮುಖ್ಯವಾಗಿ ಗಾಳಿಯಲ್ಲಿನ ಕಣಗಳ (droplets ) ಮೂಲಕ ಮತ್ತು ಬೇರೆ ವಸ್ತುಗಳ (formites)ಮೂಲಕ ಹರಡುತ್ತದೆ. ಸೋಂಕುಪೀಡಿತ ಪ್ರಾಣಿಗಳಿಂದ ಅಥವಾ ರೋಗಿಗಳ ಸಂಪರ್ಕಕ್ಕೆ ಬರುವವರಿಗೆ ವೈರಸ್‌ ತಗಲುವ ಅಪಾಯ ಅತೀ ಹೆಚ್ಚು. ಕುಟುಂಬ ಸದಸ್ಯರು ಮತ್ತು ಆರೋಗ್ಯ ಕಾರ್ಯಕರ್ತರೂ ಈ ಅಪಾಯಕ್ಕೆ ತುತ್ತಾಗುವ ಸಾಧ್ಯತೆ ಇದೆ.
..
ಯಾವ ಹಂತದಲ್ಲಿ ಅಪಾಯಕಾರಿಯಾಗಲಿದೆ ಸೋಂಕು ?
ಕೊರೊನಾ ವೈರಸ್‌ ಕುರಿತು ಇಂದಿಗೂ ಸಂಶೋಧನೆಗಳು ನಡೆಯುತ್ತಲೇ ಇವೆ. ಇದುವರೆಗೂ ಕಂಡುಬಂದಿರುವ ಪ್ರಕರಣಗಳ ಪ್ರಕಾರ ಈಗಾಗಲೇ ಯಾವುದಾದರೂ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳಲ್ಲಿ ಕೊರೊನಾ ಹೆಚ್ಚು ಅಪಾಯಕಾರಿಯಾಗಲಿದೆ. ಅಂದರೆ, ರಕ್ತದೊತ್ತಡ, ಮಧುಮಮೇಹ, ಉಸಿರಾಟದ ತೊಂದರೆ, ಹೃದಯ ಸಂಬಂಧಿ ತೊಂದರೆಗಳಿಗೆ ಈ ಮೊದಲೇ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ಹೆಚ್ಚು ಅಪಾಯಕಾರಿಯಾಗಿರುತ್ತದೆ.
..
ಇದಕ್ಕೆ ಲಸಿಕೆ ಲಭ್ಯವಿದೆಯೇ?
ಪ್ರಸ್ತುತ ಯಾವುದೇ ಲಸಿಕೆ ಲಭ್ಯವಿಲ್ಲ. ಲಸಿಕೆ ಅಭಿವೃದ್ಧಿಗೆ ಪ್ರಯತ್ನ ನಡೆದಿದೆ. ಇದಕ್ಕೆ ಹಲವು ವರ್ಷಗಳಲ್ಲದಿದ್ದರೂ, ಹಲವು ತಿಂಗಳುಗಳು ತಗಲಬಹುದು.
..
ಚಿಕಿತ್ಸೆ ಲಭ್ಯವಿದೆಯೇ?
ಯಾವುದೇ ನಿರ್ದಿಷ್ಟ ವೈರಸ್‌ ನಿರೋಧಕ ಔಷಧಿಗಳು ಲಭ್ಯವಿಲ್ಲ. ಆದರೆ, ರೋಗಿಯ ವೈದ್ಯಕೀಯ ಪರಿಸ್ಥಿತಿಯನ್ನಾಧರಿಸಿ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದು. ಬೆಂಬಲ ಆರೈಕೆ ಒದಗಿಸುವುದು ಹೆಚ್ಚು ಪರಿಣಾಮಕಾರಿಯಾಗಬಲ್ಲದು.
..
ಈ ವೈರಸ್‌ ನಿಂದ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬಹುದು ?
ಸೋಪ್‌ ಮತ್ತು ನೀರಿನಿಂದ (ಹ್ಯಾಂಡ್‌ ಹೈಜೀನ್‌) ಕೈಗಳನ್ನು ಆಗಾಗ್ಗೆ ತೊಳೆಯಬೇಕು. ನಿರ್ಜೀವ ವಸ್ತುಗಳನ್ನು ಮುಟ್ಟಿದ ಬಳಿಕ ಮುಖ, ಕಣ್ಣು, ಮೂಗು ಮತ್ತು ಬಾಯಿಯನ್ನು ಮುಟ್ಟಬಾರದು. ಜ್ವರ ಮತ್ತು ಕೆಮ್ಮು ಇರುವ ಯಾರೊಂದಿಗೂ ತುಂಬಾ ಹತ್ತಿರ ಹೋಗಬಾರದು. ರಕ್ಷಕ ಧರಿಸದೆ ಜೀವಂತ ಕಾಡುಪ್ರಾಣಿಗಳು ಅಥವಾ ಸಾಕು ಪ್ರಾಣಿಗಳ ಸಂಪರ್ಕಕ್ಕೆ ಹೋಗಬಾರದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು