ಮಹಿಳೆಯರಿಗೆ ಕೈಗೆ ಮೆಹಂದಿ ಹಚ್ಚಿಕೊಳ್ಳುವುದೆಂದರೆ ಅಚ್ಚುಮೆಚ್ಚು. ಕೇವಲ ಮದುವೆ ಸಮಾರಂಭಗಳಿಗೆ ಮಾತ್ರವಲ್ಲ, ಇತರ ದಿನಗಳಲ್ಲಿಯೂ ಕೈಗೆ ಮಹಂದಿ ಹಚ್ಚಿಕೊಳ್ಳುತ್ತಾರೆ. ತಮ್ಮ ಕೈಯಲ್ಲಿನ ಮೆಹಂದಿ ಬಣ್ಣ ಗಾಢವಾದಾಗ ಅವರ ಸಂತೋಷಕ್ಕೆ ಪಾರವೇ ಇರುವುದಿಲ್ಲ.
- ಮೆಹಂದಿ ಹಚ್ಚಿಕೊಂಡ ನಂತರ ಅದರ ಮೇಲೆ ಲವಂಗದ ಎಣ್ಣೆ ಹಚ್ಚಿಕೊಳ್ಳಿ.
- ಮೆಹಂದಿ ಹಚ್ಚಿಕೊಳ್ಳುವ ಮೊದಲು ಕೈಯನ್ನು ಚೆನ್ನಾಗಿ ತೊಳೆದು ಸೆಟ್ರೋನೆಲ್ ಎಣ್ಣೆ ಹಚ್ಚಿಕೊಳ್ಳಿ. ಮೆಹಂದಿ ಗಾಢ ಬಣ್ಣ ಬರಬೇಕಾದರೆ ತಾಳ್ಮೆ ಅಗತ್ಯ. 4 ಗಂಟೆಗಳ ತನಕ ಕೈಯಲ್ಲಿ ಮೆಹಂದಿ ಇಟ್ಟುಕೊಳ್ಳಿ.
- ಮೆಕಪ್ ಎಕ್ಸ್‌ಪರ್ಟ್ಸ್ ಮೆಹಂದಿ ಬಣ್ಣ ಗಾಢವಾಗಲು ಫೌಂಡೇಶನ್‌ನ ಸಲಹೆ ನೀಡುತ್ತಾರೆ. ಇದನ್ನು ಹಚ್ಚಿಕೊಂಡರೆ ಕೈನ ಬಿಸಿಯ ಜೊತೆಗೆ ಸೇರಿ ಆಕ್ಸಿಡೈಸ್ ಆಗಿ ಮೆಹಂದಿಗೆ ಒಂದು ಗಾಢ ಬಣ್ಣ ಬರುತ್ತದೆ.
- ನೀವು ಚಳಿಗಾಲದಲ್ಲಿ ಕೈಗೆ ಮೆಹಂದಿ ಹಚ್ಚಿಕೊಂಡಿದ್ದರೆ, ಮೆಹಂದಿ ಹಚ್ಚಿದ ಬಳಿಕ ಬೆಚ್ಚನೆಯ ಕಂಬಳಿಯನ್ನು ಕೈ ಮೇಲೆ ಮುಚ್ಚಿ. ಬೆಳಗ್ಗೆ ಹೊತ್ತಿಗೆ ನಿಮ್ಮ ಮೆಹಂದಿಗೆ ಒಳ್ಳೆ ಬಣ್ಣ ಬರುತ್ತದೆ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.