ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ಜುಲೈ 22, 2019

ಅಮ್ಮ ಎಂದು ಹೆಸರು...

ನಾವು ನಕ್ಕೆವು ಅವಳು ನಕ್ಕಳು
ನಾವು ಅತ್ತೆವು ಅವಳು ಅತ್ತಳು
ಹಸಿವಾದಾಗ ಹಾಲುಣಿಸುತ್ತಿದ್ದಳು 
ತನ್ನ ಕೈಯ ತುತ್ತ ತಿನಿಸುತ್ತಿದ್ದಳು..!

ಅವಳೇನು ಯಕ್ಷಿಣಿಯಲ್ಲ
ಅವಳೇನು ಸಂಗೀತ ಕಲಿತಿಲ್ಲ
ಸ್ವರ ಸಂಗತಿಗಳಂತೂ ಗೊತ್ತಿಲ್ಲ
ಆದರೂ ಹಾಡುತ್ತಿದ್ದಳು..!
ನಮಗಾಗಿ ಹಾಡುತ್ತಿದ್ದಳು, ಲಾಲಿಸಿ
ಚಂದಮಾಮನ ತೋರಿಸಿದಳು..!
ಹಾಗೇ ತಲೆಯ ನೆವರಿಸಿ ಹುಚ್ಚಿಯಂತೆ
ತಾರೆಗಳೊಂದಿಗೆ ಮಾತಾಡುತ್ತಿದ್ದಳು..!
ನಮಗಾಗಿ ಕೇವಲ ನಮಗಾಗಿ..!

ಅವಳು ಅಂಬಾನಿಯ ಮಗಳಲ್ಲ
ಟಾಟಾರ ಸಂಬಂಧಿಯೂ ಅಲ್ಲ
ಬಡತನದಲ್ಲೇ ಮಿಂದೆದ್ದವಳು
ಆದರೂ.. ನಾವು ಕೇಳಿದ್ದು 
ಎಂದಿಗೂ ಇಲ್ಲ ಎನ್ನುತ್ತಿದ್ದಿಲ್ಲ
ಕಾಸಿಗೆ ಕಾಸು ಕೂಡಿಡುತ್ತಿದ್ದಳು
ತನಗಾಗಿ ಅಲ್ಲ ನಮ್ಮೆಳಿಗೆಗಾಗಿ
ನಮಗಾಗಿ ಕೇವಲ ನಮಗಾಗಿ..!

ಅವಳು ಯಾವ ವಿದ್ಯಾಲಯದಲ್ಲೂ
ಓದಿಲ್ಲ ಹಾಗೇ ಪಧವಿಯೂ ಪಡೆದಿಲ್ಲ
ಆದರೆ ಅಕ್ಷರಭ್ಯಾಸ ಮಾಡಿಸುತ್ತಿದ್ದಳು
ನಮಗೆ ಬೇಕು ಬೇಡ ಹೇಳುತ್ತಿದ್ದಳು
ಪ್ರೀತಿಯ ಮೌಲ್ಯವನು ಹೇಳುತ್ತಿದ್ದಳು
ಮೊದಲ ಗುರುವಾಗಿ ನಿಂತಿದ್ದಳು
ನಮಗಾಗಿ ಕೇವಲ ನಮಗಾಗಿ..!

ಅವಳೇ ಇಡೀ ಜಗದ ಉಸಿರು
ಅವಳಿಗೆ ಅಮ್ಮ ಎಂದು ಹೆಸರು..!
                                                           ಕೃಪೆ: ಸಿದ್ದು ಗುಂಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು