fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಶನಿವಾರ, ನವೆಂಬರ್ 24, 2018

ಸ್ವಭಾವ

ತನ್ನದೇ ಅಕ್ಕನ ಗಂಡ
ಅವರವರ ಸ್ವಂತ ಗುಣ-ದೋಷ ಭಾವ
ಅವರವರ ಸ್ವಭಾವದಂತೆ ಭಾವವೂ ಬೆರೆ
ಇದೊಂದು ಹುಟ್ಟು ಗುಣ, ಸುಟ್ಟರೂ ಹೋಗದ್ದು
ಬೇರೆಯವರನ್ನು ಪ್ರಭಾವಿಸುವ ವ್ಯಕ್ತಿತ್ವದ ಅಂಶ
ರೂಪ ರೂಪಗಳನು ದಾಟಿದ ಸ್ವರೂಪ
ನಿರ್ವಾತಕ್ಕೆ ಅಭಾವವೇ ಸ್ವಭಾವ
ಪ್ರಶ್ನಿಸುವುದು ಹೆಂಡತಿಯ ಸ್ವಭಾವ, ಉತ್ತರಿಸದಿರುವುದು ಗಂಡನ ಸ್ವಭಾವ
ಕೆಟ್ಟ ಹೆಂಡತಿಯನ್ನಾದರೂ ಬಿಡಬಹುದು. ಕೆಟ್ಟ ಸ್ವಭಾವವನ್ನು ಬಿಡಲಾಗದು
ಸ್ವಭಾವವನ್ನು ಮೀರಲು ಸ್ವಂತ ಭಾವನಿಂದಲೂ ಸಾಧ್ಯವಿಲ್ಲ (ಸ್ವಭಾವೋ ದುರತಿಕ್ರಮಃ)
ಒಳ್ಳೆಯ ಸ್ವಭಾವದ ವ್ಯಕ್ತಿಗೆ ಮಗಳನ್ನು ಕೊಟ್ಟರೆ ಮಗಳೇನೋ ಸುಖವಾಗಿರಬಹುದು, ಅಳಿಯ...?
ಸ್ವಭಾವ ಬೇರೆಯಾದರೂ ಭಾವ ಒಂದಾದರೆ ಸಂಸಾರ ಸಸಾರ
ಸ್ವಭಾವವೆಲ್ಲ ಸ್ವಾಭಾವಿಕವೇ
ಬೇಕು ಬೇಕೆಂಬುದು ನರನ ಸ್ವಭಾವ, ಬೇಕೇ ಬೇಕೆಂಬುದು ನಾಗರಿಕರನ ಸ್ವಭಾವ

-ವಿಶ್ವನಾಥ ಸುಂಕಸಾಳ

ಗುರುವಾರ, ನವೆಂಬರ್ 22, 2018

ಅಮ್ಮ ಕರುಣೆಯ ಸಾಗರ

ಅವಳೊಂದು ಕರುಣೆಯ ಸಾಗರ
ಮಮತೆಯ ಆಗರ
ಸಿಹಿಯಂತ ಮಾತು ಬಲು ಮಧುರ
ಹೋಗೆನು ನಿನ್ನಿಂದ ನಾ ದೂರ
ನೀ ಅಗಲಿದಾಕ್ಷಣವೆ ಈ ಧರಣಿಗೆ ನಾ ಭಾರ
 
ಧರಣಿ ನಾ ಬಂದ ಗಳಿಗೆ
ಅಮ್ಮ ಎಂದಿತು ಈ ನನ್ನ ನಾಲಿಗೆ
ಅಂದೆ ಬೆಳೆಯಿತು ನಮ್ಮ ಸಲಿಗೆ
ನೀ ಇರಲು ನನ್ನೊಂದಿಗೆ ಸಿಹಿಯೂಟದ ಹೋಳಿಗೆ
ನಿನ್ನ ವಾತ್ಸಲ್ಯದಿಂದ ತುಂಬಿದೆ ನನ್ನ ಹೃದಯದ ಮಳಿಗೆ
 
ಹಸಿವೆಂಬ ಈ ನನ್ನ ಆರ್ತನಾದ
ತಟ್ಟಿತು ನಿನ್ನ ಮನಸ್ಸಿನ ಕದ
ಹಾಲು ಮಾಡಿ ಉಣಿಸಿದೆ ನಿನ್ನ ನೆತ್ತರು
ಮರೆಯನಮ್ಮ ಅದನ್ನು ನಾ ಸತ್ತರು
ಬಾಳೆಂಬ ಶಾಲೆಗೆ ನೀನೆ ಮೊದಲ ಗುರು
 
ಈ ನಿನ್ನ ಋಣವ ನಾ ಹೆಂಗ ತಿರಿಸಲಮ್ಮ
ನಿನಗಾಗೆ ಮುಡಿಪು ಈ ನನ್ನ ಜನ್ಮ
ಹಂಚಮ್ಮ ನಿನ್ನ ಒಲಿಮೆಯ ಪ್ರೀತಿ,
ನನ್ನಂತೆ ಇತರರಿಗೆ.
 
                                         
                                                                       ಇಂದ - ಎಂ.ಎಸ್.ಪರಶುರಾಮ

ಗುರುವಾರ, ನವೆಂಬರ್ 15, 2018

ಯಾರಿಂದ ಏನೇನು ಕಲಿಯಬೇಕು?

(1)  ಶ್ರವಣಕುಮಾರ  = ತಂದೆ-ತಾಯಿಗಳ ಸೇವೆ
(2) ಶ್ರೀ ರಾಮ         = ಮರ್ಯಾದೆ
(3) ಹನುಮಂತ       = ಆರಾಧಕನ ಸೇವೆ
(4) ಭೀಷ್ಮ             = ಬ್ರಹ್ಮಚರ್ಯೆ
(5) ಶ್ರೀ ಕೃಷ್ಣ          = ಗೆಳೆತನ
(6) ಏಕಲವ್ಯ          = ಗುರುಭಕ್ತಿ
(7) ಯುಧಿಷ್ಠಿರ        = ಧರ್ಮ
(8) ಕರ್ಣ              = ದಾನ
(9) ಮಹಾವೀರ      = ತಪಸ್ಸು
(10) ಹರೀಶ್ಚಂದ್ರ    = ಸತ್ಯ
(11) ಲಕ್ಷ್ಮಣ, ಭರತ ಹಾಗೂ ಶತ್ರುಘ್ನ = ಸೋದರ ವಾತ್ಸಲ್ಯ
(12) ಚಾಣಕ್ಯ                       = ಛಲ
(13) ಸೀತಾ                        = ಸಹನೆ
(14) ಸಾವಿತ್ರಿ ಮತ್ತು ಗಾಂಧಾರಿ = ಪತಿ ಪ್ರೇಮ
(15) ತೆನಾಲಿ ರಾಮಕೃಷ್ಣ        = ಹಾಸ್ಯ
(16) ಭೂದೇವಿ                    = ಕ್ಷಮೆ

ಶುಕ್ರವಾರ, ನವೆಂಬರ್ 09, 2018

ಶನಿವಾರ, ನವೆಂಬರ್ 03, 2018

ಪೋಟೋ ಸೂಪರ್ (Photooo...SUPER)

ತುಂಬ_ಜನ_photo_ಹಾಕಿದ್ರೆ Mass ಆಗಿರುತ್ತೆ ....

ಸ್ವಲ್ಪ_ಜನ_ಹಾಕಿದ್ರೆ Clss ಆಗಿರುತ್ತೆ ....

ಕೆಲವೊಬ್ರೂ_ಹಾಕಿದ್ರೆ Sappe ಆಗಿರುತ್ತೆ ....

ಇನ್_ಕೆಲವೊಬ್ರೂ_ಹಾಕಿದ್ರೆ..Comedy ಆಗಿರುತ್ತೆ 

Nanu_ಹಾಕಿದ್ರೆ Photooo...SUPER ಆಗಿರುತ್ತೆ..


ಗುರುವಾರ, ನವೆಂಬರ್ 01, 2018

ನವೆಂಬರ್ 1 (November 1)

        ನವೆಂಬರ್ 1 ಬಂತೆಂದರೆ ಜಯಭಾರತ ಜನನಿಯ ತನುಜಾತೆಗೆ 63 ವರ್ಷ ತುಂಬುತ್ತದೆ. ಕನ್ನಡ ಮಾತೆ 63 ರ ಕದ ತಟ್ಟಲು ಅಣಿಯಾಗುತ್ತಿದ್ದಾಳೆ. ಆಕೆಯನ್ನು ಅರುವತ್ತರ ಅಧ್ವರ್ಯು ಎಂದು ಕರೆಯಲಪ್ಪಣೆಯೆ, ದೊರೆಯೇ. ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಹರಿದು ಹಂಚಿಹೋಗಿದ್ದ ಕರ್ನಾಟಕದ ಚಾಪೆಯನ್ನು ಒಗ್ಗೂಡಿಸಿ ರತ್ನಗಂಬಳಿ ನೇಯ್ದ ಕರ್ನಾಟಕ ಏಕೀಕರಣ ಚಳವಳಿಯ ಹೋರಾಟಗಾರರಿಗೆ ಪುನಃ ನಮಿಸುವ ಕಾಲ ಮತ್ತೆ ಬರುತ್ತಿದೆ. ನಿಸ್ವಾರ್ಥ ಸೇವಕ, ಚಳವಳಿಯ ನಾಯಕ ಆಲೂರು ವೆಂಕಟರಾಯರಿಗೆ ಮೊದಲ ನಮಸ್ಕಾರಗಳು.
        ನವೆಂಬರ್ ಒಂದು ನಾಡಹಬ್ಬ. ಅಂದು ಎಲ್ಲರಿಗೂ ರಜೆ. ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ಸರಕಾರಿ, ಅರೆಸರ್ಕಾರಿ, ಕೊರೆ ಸರ್ಕಾರಿ, ಖಾಸಗಿ ಖಿಲ್ಲತ್ತುಗಳೂ ರಾಜ್ಯೋತ್ಸವ ಆಚರಿಸುತ್ತವೆ. ಮಂಚೂಣಿಯಲ್ಲಿ ನಿಂತು ರಾಜ್ಯದ ಮುಖ್ಯಮಂತ್ರಿಗಳು ಕೆಂಪು ಹಳದಿ ಬಣ್ಣದ ಧ್ವಜಾರೋಹಣ ಮಾಡುತ್ತಾರೆ. ಕೆಂಪು ಹಳದಿ ಬಾವುಟ ನಮ್ಮ ರಾಜ್ಯದ ಅಧಿಕೃತ ಧ್ವಜವೇನಲ್ಲ. ಆದರೂ ಅದೇ ನಮ್ಮ ಧ್ವಜವೆಂದು ಒಪ್ಪಿಕೊಂಡು ಹಾರಿಸುತ್ತಾ ಬಂದಿದ್ದೇವೆ. ಇನ್ನು ಕೆಂಪು ಹಳದಿ ಬಾವುಟವು ಕನ್ನಡ ನಾಡು ನುಡಿಯ ಸಾರ್ವಭೌಮತ್ವವನ್ನು ಪ್ರತಿನಿಧಿಸುತ್ತದೆ ಎಂದು ಮತ್ತೆ ನೆನಪಿಸುವ ಕರ್ನಾಟಕದ ಸಂದಿಗೊಂದಿಗಳಲ್ಲಿ ಸುಳಿದಾಡುವ ಆಟೋರಿಕ್ಷ ಚಾಲಕರಿಗೆ ಎರಡನೇ ನಮಸ್ಕಾರ. ರಾಜ್ಯೋತ್ಸವ ಬಂತೆಂದರೆ ರಾಜ್ಯೋತ್ಸವ ಪ್ರಶಸ್ತಿಗಳು ಬೆನ್ನೇರಿ ಬರುತ್ತವೆ. Not only ಬಂದಾಗ but also ಬರಬೇಕೆಂಬ ವ್ಯಾಕರಣದ ನಿಯಮದ ಹಾಗೆ. ನಾನಾ ಕ್ಷೇತ್ರಗಳಲ್ಲಿ ಅವಿಸ್ಮರಣೀಯ ಸೇವೆ ಸಲ್ಲಿಸಿ ಧನ್ಯರಾದ ಕನ್ನಡದ ಕುವರರು ಮತ್ತು ಕುವರಿಯರಿಗೆ ಇಡೀ ರಾಜ್ಯದ ಪರವಾಗಿ ಧನ್ಯವಾದ ಹೇಳುವ ಪ್ರತೀಕವಾಗಿ ಪ್ರಶಸ್ತಿಗಳನ್ನು ಕೊಡಮಾಡಲಾಗುತ್ತದೆ. ಇದು ಸಂಪ್ರದಾಯ. ಏನೇ ಮಾಡಿದರೂ ಅದಕ್ಕೊಂದು ಲೆಕ್ಕಾಚಾರ ಇರಬೇಕು. ತೂಕ ತುಂಡು ಇರಬೇಕು. 
         ಪ್ರಶಸ್ತಿಗೆ ಪಾತ್ರರಾರು ಎಂದು ನಿರ್ಧರಿಸುವುದು ಅಷ್ಟೇ ಕಷ್ಟದ ಕೆಲಸ. ಪರಂತು, ನಮ್ಮಲ್ಲಿ ಸಾಧಕರು ಅತಿಹೆಚ್ಚು ಸಂಖ್ಯೆಯಲ್ಲಿ ಕಾಣಸಿಗುವುದರಿಂದ ಯಾರು ಹೆಚ್ಚು, ಯಾರು ಕಮ್ಮಿ ಎಂದು ಅಳೆದೂ ಸುರಿದು ಇತ್ಯರ್ಥ ಮಾಡುವುದು ತುಂಬಾ ತ್ರಾಸದ ಕೆಲಸ. ಪ್ರಶಸ್ತಿ ಪಟ್ಟಿ ತಯಾರಿಸುವುದಕ್ಕೆ ಒಂದು ಸಮಿತಿಯನ್ನು ರಚಿಸಲಾಗುತ್ತದೆ. ಯೋಗ್ಯರ ಪಟ್ಟಿ ಮಾಡಿ, ಜರಡಿ ಹಿಡಿದು, ಒಳ್ಳೆ ಹೆಸರುಗಳನ್ನು ಸರಕಾರಕ್ಕೆ ಶಿಫಾರಸ್ಸು ಮಾಡುವುದು ಕಮಿಟಿಯ ಜವಾಬ್ದಾರಿ ಆಗಿರುತ್ತದೆ. ಈ ಬಾರಿಯೂ ಹಾಗೇ ಆಗ್ತದೆ. ಆದರೆ, ಪ್ರಶಸ್ತಿಗೆ ಆಯ್ಕೆ ಮಾಡುವಾಗ ಯಾವುದಾದರೂ ಒಂದು ಮಾನದಂಡ ಇದ್ದರೆ ಲೇಸು. ಹಾಗಾಗಿ, ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಸಮಿತಿ ಸಾರ್ವಜನಿಕರಲ್ಲಿ ಒಂದು ಕೋರಿಕೆಯನ್ನು ಇಟ್ಟಿದೆ. ಅದು ಹೀಗಿದೆ - 
ಮಾನ್ಯರೆ,
       ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಪ್ರತಿ ವರ್ಷ ನವೆಂಬರ್ 1 ರಂದು ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಕ್ಕೆ ಅಗತ್ಯ ಮಾನದಂಡಗಳನ್ನು ನಿರ್ಧರಿಸಲು ಸಲಹಾ ಸಮಿತಿಯು ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಿದೆ.  
                                                                  ಇಂತಿ ನಿಮ್ಮ ಪ್ರೀತಿಯ ಕನ್ನಡಿಗ

                                                                   [ವಿದ್ಯಾಶಂಕರ ಹರಪನಹಳ್ಳಿ] 
- ಕೆ.ವಿ.ರಾಧಾಕೃಷ್ಣ ಸಮನ್ವಯಕಾರರು-
ಕಣಜ ಯೋಜನೆ
ಇ-ಕನ್ನಡ ವಿಭಾಗ,
ಕನ್ನಡ ಭವನ,
ಜೆ.ಸಿ.ರಸ್ತೆ ಬೆಂಗಳೂರು- 560 002.
080-22227478, 09844192952


1.ಮೊದಲನೇಯ ನಮಸ್ಕಾರ -- ಆಲೂರು ವೆಂಕಟರಾಯ
2. ಎರಡನೇಯ ನಮಸ್ಕಾರ --    ಆಟೋರಿಕ್ಷ ಚಾಲಕ
3. ಮೂರನೇ ನಮಸ್ಕಾರ -- *****


1.. ಜಾಹೀರಾತು

2.ಜಾಹೀರಾತು