ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಶುಕ್ರವಾರ, ಆಗಸ್ಟ್ 31, 2018

ಓ ಕರುನಾಡ ತಾಯಿ

ಓ ಕರುನಾಡ ತಾಯಿ, ನೀ ಕುಗ್ಗದಿರು ಎಂದಿಗೂ
ನಿನ್ನಯ ರಕ್ಶಣೆಗಾಗಿ
ಕರುನಾಡಿನ ಪ್ರತಿ ಮಗುವು
ಎಂದೆಂದಿಗೂ ಸಿದ್ದ
ಕರುನಾಡಿನ ಜೀವಾಳವಾದ ಜಲದಾರೆಗಳ
ಶ್ರೀಗಂದದ, ಚಿನ್ನದ ತವರಾದ ಕನ್ನಡ ನೆಲದ
ರಕ್ಶಣೆಗೆಗಾಗಿ ನಾವುಗಳು ಒಗ್ಗಟ್ಟಾಗಿ ಹೋರಾಡುವೆವು
ಉತ್ತರ, ದಕ್ಶಿಣ ಕರುನಾಡು ಎಂಬುದನ್ನು ಅಳಿಸಿ
ಅಕಂಡ ಕರುನಾಡು ಎನ್ನುವುದನ್ನು ಬೆಳೆಸುವೆವು
ನೀ ಕಲಿಸಿದ ಏಕತೆ, ಸಹಬಾಳ್ವೆಯ ಪಾಟವ
ನಾವೆಂದೂ ಮರೆಯದೇ ಪಾಲಿಸುವೆವು
ತನ್ನಯ ಇಂಪಾದ, ಸರಳ ಪದಗಳಿಂದಲೇ
ಎಲ್ಲೆಡೆಯೂ ಕೇಳಲಿ ಕನ್ನಡ ನುಡಿ
ನಿನ್ನಯ ಮಕ್ಕಳ ಸಾದನೆಯಿಂದಲೇ
ಆಕಾಶದೆತ್ತರಕ್ಕೆ ಹಾರಾಡಲಿ ಕನ್ನಡದ ಬಾವುಟ
ಓ ಶಿವನೇ ನನ್ನದೊಂದು ಚಿಕ್ಕ ಬೇಡಿಕೆ
ಕರುನಾಡ ತಾಯಿಯ ಮಡಿಲಿನಲ್ಲಿಯೇ
ಮತ್ತೆ ಹುಟ್ಟಬೇಕು ನಾನು

ಎಂದೆಂದಿಗೂ ನನ್ನಯ ನುಡಿ ಕನ್ನಡ, ನಡೆ ಕನ್ನಡ
ನಾನು ಉಸಿರಾಡುವ ಗಾಳಿಯು ಕನ್ನಡ
ನನ್ನಲ್ಲಿ ಹರಿಯುತ್ತಿರುವ ನೆತ್ತರು ಕನ್ನಡ, ಕನ್ನಡ, ಕನ್ನಡ
ಇಂದ - ನಾಗರಾಜ್ ಬದ್ರಾ

ಶುಕ್ರವಾರ, ಆಗಸ್ಟ್ 24, 2018

ಕತ್ತಲು

ಹುಮ್ಮಸ್ಸು ಏರಿ ಬಂದ ತಮಸ್ಸು
ದೀಪದ ಬುಡದ ಖಾಯಂ ಸದಸ್ಯ
ಬತ್ತಲಾಗುವ ಹೊತ್ತು
ಕತ್ತು ಕುಯ್ಯುವವರು ಜಾಗೃತರಾಗುವ ಸಮಯ
ಕೋಟೆ ಕೊತ್ತಲಗಳನ್ನು ಆವರಿಸಿರುವ ಆವರಣ
ಕರೆಂಟಿನ ಬೆಳಕನ್ನು ನಂಬಿದವನ ಬಾಳು ಪೂರ್ಣ ಕತ್ತಲು

-ವಿಶ್ವನಾಥ ಸುಂಕಸಾಳ

ಬುಧವಾರ, ಆಗಸ್ಟ್ 22, 2018

ಅಮ್ಮ (Mother.....)

ದೊಡ್ಡವನಾಗಿದ್ದ ಅವನು,

ಮುದಿ ಅಮ್ಮನ

ಮಾತು 
ಅರ್ಥವಾಗಲಿಲ್ಲ
ಮಗನಿಗೆ
ಅರ್ಥೈಸಲು
ಪ್ರಯತ್ನ ಸಹ ಮಾಡಲಿಲ್ಲ

ಪುಟ್ಟ ಮಗುವಿದ್ದಾಗ
ಅವನ
ತೊದಲು ನುಡಿಗಳನ್ನು
ಸರಿಯಾಗಿ
ಅರ್ಥ ಮಾಡಿಕೊಳ್ಳುತ್ತಿದ್ದಳು
ಅಮ್ಮ

ಕೃಪೆ -> ಹರೀಶ್ ಶೆಟ್ಟಿ, ಶಿರ್ವ 

ಸೋಮವಾರ, ಆಗಸ್ಟ್ 20, 2018

ಹಬ್ಬದ ಸಾಲು

ಶ್ರಾವಣ ಮಾಸವು
ಬಂದಿತು ಎಂದರೆ
ಬರುವುದು ಹಬ್ಬದ ಸಾಲು,
ಉಣುವುದು ಉಡುವುದು
ಸಂಭ್ರಮ ಪಡುವುದು
ಹರುಷವೆ ಎಲ್ಲರ ಪಾಲು
ಮೊದಲು ಬರುವದು
ನಾಗರ ಚವುತಿ
ಹಾವಿಗೆ ಹಾಲೆರೆಯುವರು,
ವಿಷ ಜಂತುವಿಗೂ
ಸಿಹಿ ನೀಡುತಲಿ
ಪ್ರಾಣಿ ಪ್ರೀತಿ ತೋರುವರು
ನಂತರ ಬರುವಳು
ವರ ಮಹಾಲಕುಮಿ
ಸಿರಿ ಸಂಪದದ ಅರಸಿ,
ರಕ್ಷಾ ಬಂಧನವು
ಅಣ್ಣ-ತಂಗಿಯರ
ಪೊರೆವುದು ಬಂಧನ ಬೆಸೆಸಿ.
ಇದೇ ಮಾಸದಲಿ
ಸ್ವಾತಂತ್ರ್ಯದ ದಿನ
ಭಾರತೀಯರ ಹಬ್ಬ,
ತ್ರಿವರ್ಣ ಧ್ವಜವು
ಬಾನಲಿ ಮೆರೆದಿದೆ
ಮೀರಿದೆ ಹರುಷವು ಅಬ್ಬ!
ಕೃಷ್ಣನ ಜನುಮ
ದಿನವು ಬರುವುದು
ಬಹುಳ ಅಷ್ಟಮಿ ದಿವಸ
ಗೀತೆಯ ಸಾರಿ
ಜೀವನ ಧನ್ಯತೆ
ಪಾಠವ ಹೇಳಿದ ಅರಸ.
ಹೀಗೆಯೆ ಶ್ರಾವಣ
ಮಾಸವು ಪೂರ್ತಿ
ಸಂಭ್ರಮ ಪಡುವ ಕಾಲ,
ಭಕುತಿ ಪ್ರೇಮಗಳ
ಭಾವೈಕ್ಯತೆಯನು
ಬೆಳೆಪುದೆ ಇದರ ಮೂಲ
-ಗುರುರಾಜ್ ಬೆಣಕಲ್

ಗುರುವಾರ, ಆಗಸ್ಟ್ 09, 2018

ರಾಮಯಾಣದ ಸ್ವಾರಸ್ಯ ಸಂಗತಿಗಳು 10

ಸೀತೆಗಾಗಿ ಇಂದ್ರ ಪಾಯಸ ತಂದಿದ್ದ
        ಸೀತೆ ರಾವಣನ ಅಶೋಕ ವನದಲ್ಲಿದ್ದಾಗ ಅಲ್ಲಿಗೆ ಹೊರಗಿನಿಂದ ಹೋದವನು ಹನುಮಂತ ಮಾತ್ರ ಎಂದು ನಾವೆಲ್ಲ ಅಂದುಕೊಂಡಿದ್ದೇವೆ. ಆದರೆ, ಅದಕ್ಕೂ ಮೊದಲೇ ಇಂದ್ರ ಅಲ್ಲಿಗೆ ಹೋಗಿದ್ದ. ಸೀತೆಯ ಅಪಹರಣ ಮಾಡಿ ರಾವಣ ಅವಳನ್ನು ಅಶೋಕ ವನಕ್ಕೆ ತೆಗೆದುಕೊಂಡು ಹೋದ ಸುದ್ದಿ ಬ್ರಹ್ಮನಿಗೆ ಗೊತ್ತಾಯಿತು. ಅವನು ಬಹಳ ಬೇಸರಗೊಂಡ. ಸೀತೆಗೆ ಸಂತೋಷವಾಗಲಿ ಎಂದು ಇಂದ್ರನ ಬಳಿ ಪಾಯಸ ಕೊಟ್ಟು ಕಳಿಸಿದ. ಇಂದ್ರ ಅದನ್ನು ತೆಗೆದುಕೊಂಡು ಬಂದು, ತನ್ನ ಮಂತ್ರಶಕ್ತಿಯಿಂದ ಎಲ್ಲಾ ರಾಕ್ಷಸರಿಗೂ ನಿದ್ದೆ ಬರಿಸಿ, ನಂತರ ಸೀತೆಗೆ ಪಾಯಸ ಕೊಟ್ಟಿದ್ದ.      ಕೃಪೆ : ಕೆ.ಟಿ.ಆರ್

1.. ಜಾಹೀರಾತು

2.ಜಾಹೀರಾತು