Print friendly

ಶನಿವಾರ, ಫೆಬ್ರವರಿ 24, 2018

ನಾನು

'ನಾನು' ಯಾವತ್ತೂ ಉತ್ತಮ ಪುರುಷ
ನನ್ನೊಳಗಿನ ಎಲ್ಲ ಬೇನೆಗೆ ಮುಖ್ಯ ಕಾರಣ
ಅಹಂ ಶಬ್ದದಷ್ಟೇ ಶಬ್ದವೂ ಶಬ್ದ ಮಾಡುತ್ತದೆ
ನಾನು ಜಗತ್ತಿಗೆ stick ಆಗಬಾರದೆಂದರೆ, ನಾನು non-stickಆಗಬೇಕು
ನಾಕೇ ನಾಕು ತಂತಿಗಳಲ್ಲಿ ಮೊದಲನೆಯದು
ಇದು pronounಕೂಡ ಹೌದು, noun ಕೂಡ ಹೌದು
ನೀನು ಎನ್ನಲು ಕಾರಣವಾದ ಪ್ರತ್ಯಯ
ನನ್ನನ್ನು ಯಾರೆಂದು ತಿಳಿದಿದ್ದೀ..ಎಂದು ಬೇರೆಯವರನ್ನು ಕೇಳುವ ಮೊದಲು ನಾವೇ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಉತ್ತಮ
ನಾನು ಮೊದಲು ಬಂದರೆ ಅವನ ಕೊನೆ ಬಂದಿದೆಯೆಂದರ್ಥ
ಹಮ್ಮು ಅಥವಾ ಅಹಮ್ಮು
ನಾನು ಆದ ಮೇಲೆಯೇ ನೀನು, ಡಿಕ್ಷನರಿಯಲ್ಲೂ
ಒಂದೆರಡಲ್ಲ..ನಾನಾ ರೂಪ ಇದರದ್ದು

-ವಿಶ್ವನಾಥ ಸುಂಕಸಾಳ

ಕಾಮೆಂಟ್‌ಗಳಿಲ್ಲ: