ಕಾಲ: ೧೧೬೬
ದೊರಕಿರುವ ವಚನಗಳು: 74 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ: - -
ಹುಟ್ಟಿದ ಸ್ಥಳ: ಕಲ್ಬುರ್ಗಿ ಜಿಲ್ಲೆಯ ಏಲೇರಿ (ಏಲೇಶ್ವರ)
ಪರಿಚಯ: ಕಾಲ ಸು. 1166.
ಸ್ಥಳ: ಕಲ್ಬುರ್ಗಿ ಜಿಲ್ಲೆಯ ಏಲೇರಿ (ಏಲೇಶ್ವರ).
ಹೆಂಡತಿ: ಸಾವಿದೇವಿಯಮ್ಮ.
ಬೇಸಾಯಗಾರ. ಈತನ 74 ವಚನಗಳು ದೊರೆತಿವೆ. ವ್ರತ, ಆಚಾರ, ನಿಯಮಗಳ ಪಾಲನೆ ಕುರಿತು ಪ್ರಸ್ತಾಪಿಸಿದ್ದಾನೆ.
ಅನ್ಯರ ದ್ರವ್ಯವ ಅಪಹರಿಸಿಕೊಂಡಲ್ಲಿ ಅದು ತನಗೆ ಅನ್ಯದೈವ.
ತನ್ನ ಕ್ರೀಯಲ್ಲದಲ್ಲಿ ಮನ ಮುಟ್ಟಿ ನೆನೆದಾಗವೆ ಅದು ಅನ್ಯಾಹಾರ.
ಇದಿರ ಉಪಚರಿಯಕ್ಕೆ ನಾನೊಂದು ವ್ರತವ ಹಿಡಿದು
ನಡೆದೆಹೆನೆಂಬುದೆ ಪರಪಾಕದ ಪಾಕುಳ.
ಇಂತಿವರಲ್ಲಿ ಮನ ಹೇಸಿ, ತನು ಕರಗಿ, ಪಕ್ಷಪಾತವೆಂಬ ಪಾತಕವ ಬಿಟ್ಟು,
ನಿಶ್ಚಯದಲ್ಲಿ ನಿಂದ ವ್ರತಾಂಗಲಿಂಗಿ ಮತ್ರ್ಯರ ಸುಗುಣ ದುರ್ಗುಣವನೊಲ್ಲ,
ನಿತ್ಯಾನಿತ್ಯವ ಮುಟ್ಟಿ ಮತ್ರ್ಯರ ಕರ್ಕಶವನೊಲ್ಲ.
ಭಕ್ತಿಯಲ್ಲಿ ತಿಳಿದು, ಜ್ಞಾನದಲ್ಲಿ ನಿಂದು, ವೈರಾಗ್ಯದಲ್ಲಿ ಸಲೆಸಂದು-
ಇಂತೀ ತ್ರಿವಿಧದಲ್ಲಿ ನಿಧಾನಿಸಿ ನಿಂದು,
ಕ್ರೀಯೇ ಘಟವಾಗಿ, ಆಚಾರವೇ ಆತ್ಮವಾಗಿ,
ಅನುಸರಣೆಯಿಲ್ಲದ ನಿಶ್ಚಯವೇ ನಿಜತತ್ವಕೂಟವಾಗಿ
ತೊಳಗಿ ಬೆಳಗುತ್ತಿರಬೇಕು, ಏಲೇಶ್ವರಲಿಂಗದಲ್ಲಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.