fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | H𝐲𝐩𝐞𝐫 T𝐞𝐱𝐭 M𝐚𝐫𝐤𝐮𝐩 L𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಜುಲೈ 22, 2012

ಮುತ್ತಿನ ಹಾರ

ನಿರ್ದೆಶನ : ಎಸ್. ವಿ. ರಾಜೇಂದ್ರಸಿಂಗ್ ಬಾಬುಚಿತ್ರ : ಮುತ್ತಿನ ಹಾರ
ಸಂಗೀತ : ಹಂಸಲೇಖ
ತಾರಾಗಣ : ವಿಷ್ಣುವರ್ಧನ್, ಸುಹಾಸಿನಿ, ಕೆ. ಎಸ್. ಅಶ್ವಥ್, ರಾಮಕುಮಾರ್, ಮಾ. ಅನಂದ್, ಕಾವ್ಯ
ಗಾಯಕರು : ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರ, ಲತಾ ಹಂಸಲೇಖ, ಬಾಲಮುರುಳಿ ಕೃಷ್ಣ
ಬಿಡುಗಡೆಯಾದ ವರ್ಷ : ೧೯೯೦
ಕಥೆ : ಎರಡನೇ ಮಹಾಯುಧ್ಧದ ಸಮಯದಲ್ಲಿ ಸೈನಿಕ ಅಚ್ಚಪ್ಪ (ಕೊಡಗಿನ ಯೋಧ) ಗಾಯಗೊಂಡು ಅಸ್ಪತ್ರೆ ಸೇರುತ್ತಾನೆ. ಅಲ್ಲಿನ ನರ್ಸ್ ಅನ್ನಪೂರ್ಣಳನ್ನು (ಕೊಡಗಿನ ಬೆಡಗಿ) ಪ್ರೀತಿಸಿ ಮದುವೆಯಗುತ್ತಾನೆ. ಮಗನ ಜನನದ ನಂತರ ಅನ್ನಪೂರ್ಣ ಇನ್ನು ಮುಂದೆ ಮಕ್ಕಳು ಪಡೆಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸುತ್ತಾರೆ. ಮಗ ಹುಟ್ಟಿದ ನಂತರ ಅಚ್ಚಪ್ಪ ತುರ್ತಾಗಿ ಸೇನೆಯ ಸೇವೆಗೆ ತೆರಳಬೇಕಾಗುತ್ತದೆ. ಸ್ವಾತಂತ್ರದ ನಂತರ ಅಚ್ಚಪ್ಪ ರಾಜಸ್ಥಾನದಲ್ಲಿ ಸೇವೆಯಲ್ಲಿ ಇರುತ್ತಾನೆ. ಹುಟ್ಟಿದ ನಂತರ ಎಂದೂ ಕಾಣದ ತನ್ನ ಮಗ ಮತ್ತು ಹೆಂಡತಿಯನ್ನು ನೋಡಲು ರಾಜಸ್ಥಾನಕ್ಕೆ ಕರೆಸಿಕೊಳ್ಳುತ್ತಾನೆ. ಆದರೆ ಬಾಂಬ್ ದಾಳಿಗೆ ಮಗ ಬಲಿಯಾಗುತ್ತಾನೆ. ಅಚ್ಚಪ್ಪನಿಗೆ ಮಗನ ಮುಖವನ್ನು ನೋಡಲಾಗುವುದಿಲ್ಲ. ಅಚ್ಚಪ್ಪನಿಗೆ ಪುನಃ ಮದುವೆ ಮಾಡುವ ಅನ್ನಪೂರ್ಣಳ ಪ್ರಯತ್ನವನ್ನು ಅವನು ತಳ್ಳಿಹಾಕುತ್ತಾನೆ.ಮುಂದೆ ಅಚ್ಚಪ್ಪ Major ಅಗಿ Deharadun ನಲ್ಲಿ ಸೇವೆ ಸಲ್ಲಿಸುತಾನೆ. ಮೊಮ್ಮಗನ ಸಾವಿನ ವಿಷಯ ಅರಿಯದ ಅಚ್ಚಪ್ಪನ ತಂದೆ-ತಾಯಿ ಅವನನ್ನು ಕಾಣಲು ಮಗನಲ್ಲಿ ಬರುತ್ತಾರೆ. ವಿಷಯ ತಿಳಿದು ಆಘಾತಗೊಂಡ ಅಚ್ಚಪ್ಪನ ತಾಯಿ ಕೊನೆಯುಸಿರು ಎಳೆಯುತ್ತಾಳೆ. ಇದೇ ಸಂದರ್ಭದಲ್ಲಿ ಭಾರತ – ಚೀನಾ ಯುದ್ಧ ಆರಂಭವಾಗಿ ಅಚ್ಚಪ್ಪ ಯುಧ್ಧಕ್ಕೆ ತೆರಳುತ್ತಾನೆ. ಶತ್ರುವಿನ ಕೈಯಲ್ಲಿ ಸಿಕ್ಕಿ ಬಿದ್ದು ಅಚ್ಚಪ್ಪ ಚಿತ್ರಹಿಂಸೆ ಅನುಭವಿಸಿದರೂ ದೇಶದ ಗುಟ್ಟು ಬಿಟ್ಟು ಕೊದುವುದಿಲ್ಲ. ತನ್ನ ಸೈನ್ಯದ ಒಬ್ಬ ಯುವಕನನ್ನು ತನ್ನ ಮಗನಂತೆ ಕಾಣುವ ಅಚ್ಚಪ್ಪ ಕೊನೆಗೂ ಅವನೊಡನೆ ತಪ್ಪಿಸಿಕೊಂಡು ಭಾರತದ ಗಡಿ ಸೇರುತ್ತಾರೆ. ಅದರೆ ಅಲ್ಲಿ ನಡೆಯುವ ಯುಧ್ಧದಲ್ಲಿ ವೀರಮರಣವನ್ನು ಅಪ್ಪುತ್ತಾನೆ. ಸೈನಿಕ ನಂತರ ಅಸ್ಪತ್ರೆಯಲ್ಲಿ ಕೊನೆಯುಸಿರು ಎಳೆಯುತ್ತಾನೆ.
ಮುತ್ತಿನ ಹಾರ ಧರಿಸುವ ಹೆಂಡತಿಯ ಅಸೆಯನ್ನು ಈಡೇರಿಸಲು ಅಚ್ಚಪ್ಪ ಪ್ರತಿ ವರುಷ ಅವಳಿಗೆ ಒಂದು ಮುತ್ತು ತಂದು ಕೊಡುತ್ತಾನೆ. ಆದರೆ ಆಕೆ ಎಲ್ಲ ಮುತ್ತುಗಳನ್ನು ಪೋಣಿಸಿ ಮುತ್ತಿನ ಹಾರ ಧರಿಸುವಷ್ಟರಲ್ಲಿ ಅಚ್ಚಪ್ಪ ಯುಧ್ಧದ ಭೀಕರತೆಗೆ ಬಲಿಯಾಗಿರುತ್ತಾನೆ. ಯುಧ್ಧದಿಂದ ದೇಶ, ಸಂಸಾರಗಳಲ್ಲಿ ಉಂಟಾಗುವ ಕೋಲಾಹಲವನ್ನು ಬಿಂಬಿಸುವ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಒಂದು ಮೈಲಿಗಲ್ಲು. ಈ ಚಿತ್ರ ರಾಷ್ತ್ರ ಮಟ್ಟದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂಬ ಪ್ರಶಸ್ತಿ ಪಡೆದಿತ್ತು. ವಿಷ್ಣುಅವರಿಗೆ ರಾಷ್ತ್ರ ಮಟ್ಟದಲ್ಲಿ ಶ್ರೇಷ್ಟ ನಟ ಪ್ರಶಸ್ತಿ ಲಭಿಸಲಿಲ್ಲವಲ್ಲ ಎನ್ನುವ ಕೊರಗು ಕನ್ನಡ ಚಿತ್ರಪ್ರೇಮಿಗಳಲ್ಲಿ ಈಗಲೂ ಇದೆ. ಬದುಕಿದ್ದಾಗ ಮಗನನ್ನು ನೋಡಲಾಗದೆ ಕೊನೆಗೆ ಸತ್ತ ಮೇಲೂ ಅವನ ಮುಖ ನೋಡಲಾಗದೆ ಪರಿತಪಿಸುವ ತಂದೆಯಾಗಿ ಅವರ ಅಭಿನಯ ಅವಿಸ್ಮರಣೀಯ. ವಿಷ್ಣು – ಸುಹಾಸಿನಿ ಜೋಡಿಯನ್ನು ಅಭೂತಪೂರ್ವ ಜೋಡಿ ಮಾಡಿದ ಚಿತ್ರ ಇದು. ತಮ್ಮ ಮುಗುಳ್ನಗೆಯಿಂದ ಮೋಡಿ ಮಾಡಿದ ಸುಹಾಸಿನಿ ಇಲ್ಲಿ ನೋವು – ನಲಿವು ಎರಡರಲ್ಲೂ ಮಿಂಚಿದ್ದಾರೆ. ಅಶ್ವಥ್ ಅವರ ಅಭಿನಯ ಮರೆಯುವಂತಿಲ್ಲ – ಹೆಂಡತಿಯನ್ನು ಕಳೆದುಕೊಂಡ ಮೇಲೆ ಮಗನಿಗೆ “ಈ ತಾಯಿಯ ಋಣ ಮುಗಿಯಿತು , ಆ ತಾಯಿಯ ಸೇವೆಗೆ ಸಿಧ್ಧನಾಗು” ಎಂದು ಯುಧ್ದದ ಕರೆ ಬಂದಾಗ ಮಗನಿಗೆ ಹೇಳುತ್ತಾರೆ. ಈ ಚಿತ್ರಕ್ಕೆ ಅವರಿಗೆ ರಾಜ್ಯದಲ್ಲಿ ಶ್ರೇಷ್ಟ ಪೋಷಕ ನಟ ಪ್ರಶಸ್ತಿ ಲಭಿಸಿತ್ತು.
ಇನ್ನು ರಾಜೇಂದ್ರಸಿಂಗ್ ಬಾಬು ಅವರ ದಕ್ಷ ನಿರ್ದೆಶನದ ಬಗ್ಗೆ ಬರೆಯದೆ ಇದ್ದರೆ ತಪ್ಪಾಗುತ್ತದೆ. ೧೯೯೦ ರಲ್ಲಿ ಯಾವ ಭಾರತೀಯ ಭಾಷಾ ಚಿತ್ರರಂಗ ಮಾಡದ ಪ್ರಯತ್ನವನ್ನು ಕನ್ನಡದಲ್ಲಿ ಮಾಡಿದ್ದಾರೆ. ಯುಧ್ಧದ ಭೀಕರತೆ ಬಿಂಬಿಸುವ ಪ್ರಥಮ ಪ್ರಯತ್ನಗಳಲ್ಲಿ ಇದೂ ಒಂದು. ಕೊಡಗು, ರಾಜಸ್ಥಾನ , Deharadun ಮುಂತಾದ ಜಾಗಗಳಲ್ಲಿ ಚಿತ್ರಿಕರಿಸಿದ್ದು ವಿಶೇಷ ಪ್ರಯತ್ನ. ಇಂಥ ಉತ್ತಮ ಚಿತ್ರಕ್ಕೆ ಹಂಸಲೇಖ ಅವರ ಸಂಗೀತ ಕಳಶವಿದ್ದಂತೆ. ಬಹುಶಃ ಆ ಸಮಯದಲ್ಲಿ ಹಂಸಲೇಖ ಸಂಗೀತ ನೀಡುತ್ತಿದ್ದ ಚಿತ್ರಗಳಿಗಿಂತ ಇದು ಬಹಳ ಬಿನ್ನವಾಗಿತ್ತು ಮತ್ತು ಅವರಿಗೂ challenging ಆಗಿತ್ತು.

ಹಾಡುಗಳು
1.ದೇವರು ಹೊಸೆದ ಪ್ರೇಮದ ದಾರ
: ಬಾಲಮುರುಳಿ ಕೃಷ್ಣ. ಬದಲಾಗುವ ಋತುವಿನೊಡನೆ ಬದಲಾಗುತ್ತ ಹೋಗುವ ಮನುಷ್ಯನ ಹೋರಾಟ್ ಬಿಂಬಿಸುವ ಗೀತೆ.
2.ಮಡಕೇರಿ ಸಿಪಾಯಿ
: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರ. ಹಂಸಲೇಖ ಅವರೆ ಹೇಳುವಂತೆ ಇದು ಈ ಚಿತ್ರಕ್ಕೆ ಅವರು ರಚಿಸಿದ ಮೊದಲ ಗೀತೆ. ಈ ಹಾಡಿನ ಚಿತ್ರಿಕರಣಕ್ಕೆ ನ.ರಾರು ಕೆ.ಜಿ. ಮಲ್ಲಿಗೆ ಹೂವು ಬಳಸಲಾಯಿತು.

3.ಸಾರು ಸಾರು
: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಲತಾ ಹಂಸಲೇಖ : ಒಗಟು ಬಿಡಿಸುವ ಸುಂದರ ಗೀತೆ.

4.ಕೊಡಗಿನೊಳು ಬೆಡಗಿನೋಳು
: ಎಸ್. ಪಿ. ಬಾಲಸುಬ್ರಹ್ಮಣ್ಯಂ. ತನ್ನ ಮದುವೆಯನ್ನು ತನ್ನ ಸೈನೆಕ ಮಿತ್ರರಿಗೆ ವರ್ಣಿಸುವ ಹಾಸ್ಯಮಯ ಗೀತೆ.

5.ಕೊಡಗನ ವೀರ
: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಚಿತ್ರ , ಕೊಡಗಿನ ಪರಂಪರೆಯನ್ನು ಬಿಂಬಿಸುವ ಗೀತೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು