ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಬುಧವಾರ, ಡಿಸೆಂಬರ್ 31, 2025

ಅಂದು - ಇಂದು ( 25 ವರ್ಷಗಳ ಹಿಂದೆ )


ಅಂದುಇಂದು
1. ಎಲ್ಲರೂ ಮಕ್ಕಳನ್ನು ಹೊಂದಬೇಕೆಂದು ಬಯಸಿದ್ದರು.ಅನೇಕ ಜನರು ಮಕ್ಕಳನ್ನು ಹೊಂದಲು ಹೆದರುತ್ತಾರೆ.
2. ಮಕ್ಕಳು ತಮ್ಮ ಹೆತ್ತವರನ್ನು ಗೌರವಿಸಿದರು.ಈಗ ಪೋಷಕರು ತಮ್ಮ ಮಕ್ಕಳನ್ನು ಗೌರವಿಸಬೇಕು.
3. ನಾವು ಎಲ್ಲಾ ನೆರೆಹೊರೆಯವರನ್ನು ತಿಳಿದುಕೊಂಡೆವು.ಈಗ ನಾವು ನಮ್ಮ ನೆರೆಹೊರೆಯವರಿಗೆ ಅಪರಿಚಿತರು.
4. ಇಡೀ ಕುಟುಂಬವನ್ನು ಪೋಷಿಸಲು ಒಬ್ಬ ವ್ಯಕ್ತಿ ಮಾತ್ರ ಕೆಲಸ ಮಾಡುತ್ತಿದ್ದ.
ಈಗ ಎಲ್ಲರೂ ಒಂದು ಮಗುವನ್ನು ಬೆಂಬಲಿಸಲು ಕೆಲಸ ಮಾಡಬೇಕು.
5. ಶ್ರೀಮಂತರು ಬಡವರಂತೆ ನಟಿಸಿದರು.ಈಗ ಬಡವರು ಶ್ರೀಮಂತರಂತೆ ನಟಿಸುತ್ತಿದ್ದಾರೆ.
6. ಎಲ್ಲರೂ ಸಂತೋಷವಾಗಿ ಕಾಣಲು ಕೊಬ್ಬು ಇರಬೇಕೆಂದು ಬಯಸಿದ್ದರು.ಇತ್ತೀಚಿನ ದಿನಗಳಲ್ಲಿ ಎಲ್ಲರೂ ಆರೋಗ್ಯವಾಗಿರಲು ಆಹಾರ ಕ್ರಮದಲ್ಲಿರುತ್ತಾರೆ.
7. ಜನರು ಕಷ್ಟಪಟ್ಟು ಕೆಲಸ ಮಾಡಲು ಶಕ್ತಿಯ ಅಗತ್ಯವಿರುವುದರಿಂದ ಬಹಳಷ್ಟು ತಿನ್ನಬೇಕಾಯಿತು.ಈಗ ನಾವು ಕೊಲೆಸ್ಟ್ರಾಲ್ ಭಯದಿಂದ ಕೊಬ್ಬಿನ ಆಹಾರವನ್ನು ತಿನ್ನಲು ಹೆದರುತ್ತಿದ್ದೇವೆ.
8. ಗ್ರಾಮಸ್ಥರು ಉದ್ಯೋಗ ಹುಡುಕಲು ನಗರಕ್ಕೆ ಸೇರುತ್ತಿದ್ದರು.ಈಗ ಪಟ್ಟಣದ ಜನರು ಶಾಂತಿಯನ್ನು ಕಂಡುಕೊಳ್ಳಲು ಒತ್ತಡದಿಂದ ಪಲಾಯನ ಮಾಡುತ್ತಿದ್ದಾರೆ.
9. ಮದುವೆ ಸುಲಭ ಆದರೆ ವಿಚ್ಚೆದನ ಕಷ್ಟವಾಗಿತ್ತು.ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ಕಷ್ಟ ಆದರೆ ವಿಚ್ಚೆದನ ತುಂಬಾ ಸುಲಭ.
10. ಜನರು ಪುಸ್ತಕಗಳನ್ನು ಅಧ್ಯಯನ ಮಾಡಲು ಮತ್ತು ಓದಲು ಇಷ್ಟಪಟ್ಟರು.ಈಗ ಜನರು ಸಾಮಾಜಿಕ Appಗಳನ್ನು ನವೀಕರಿಸಲು ಹಾಗೂ  ಸಂದೇಶಗಳನ್ನು ಓದಲು ಇಷ್ಟಪಡುತ್ತಾರೆ.


ಇಂದಿನ ಜೀವನಕ್ಕೆ ಮೇಲಿನವು ಕಷ್ಟಕರ ಸಂಗತಿಯಾಗಿದೆ ಎಂದು ನಾವು ಅರಿತುಕೊಂಡೆವು.

ಶುಕ್ರವಾರ, ಡಿಸೆಂಬರ್ 19, 2025

ಗೂಗಲ ಪುಟದ ವಿಚಿತ್ರಗಳು (Google katamari Pages) 63

 "Katamari" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಬಣ್ಣದ ಚೆಂಡು" Google ಪುಟದ ಮೇಲೆ " ಕಾಣುತ್ತದೆ. ನೀವು ಆ ಬಣ್ಣದ ಚೆಂಡಿನ ಚಿತ್ರವನ್ನು ಮುಟ್ಟಿದಾಗ ಆ ಪರದೆಯಲ್ಲಿ ಬಾಣದ ಕೀ ಗಳಿಂದ ಚಲಿಸಬಹುದು ಆಗ ಅದು ತಿರುಗುತ್ತಾ ಆ ಪುಟದಲ್ಲಿರುವ ಸುದ್ದಿಯನ್ನು ತನ್ನ ಚೆಂಡಿಗೆ ಅಂಟಿಸಿಕೊಳ್ಳುತ್ತಾ ಮುಂದೆ ಚಲಿಸುತ್ತದೆ. ಪ್ರತಿ ಬಾರಿ ಕೀ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಆ ಪುಟದಲ್ಲಿರುವ ಸುದ್ದಿಯನ್ನು ತನ್ನ ಚೆಂಡಿಗೆ ಅಂಟಿಸಿಕೊಳ್ಳುತ್ತಾ ತಿರುಗುತ್ತಾ ಮುಂದೆ ಸಾಗುತ್ತದೆ . ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಸೋಮವಾರ, ಡಿಸೆಂಬರ್ 15, 2025

ಅ-ಅಃ & ಕ-ಕ್ಷ ದ ವರೆಗಿನ ಅಕ್ಷರ ರಾಮಾಯಣ (Great Ramayana)

ಯೋಧ್ಯೆಯರಸನು ದಶರಥನು

ತ್ಮಜರು ಬೇಕೆಂಬ ಬಯಕೆಯ ಹೊತ್ತಿಹನು

ಷ್ಟಿಯಮಾಡಿದ ಜಗಮೆಚ್ಚಿದ ರೀತಿಯಲಿ

ಶ್ವರ ಕೃಪೆಯಲಿ ದೊರೆಯಿತು ಪಾಯಸವು

ದಾತ್ತ ದೊರೆಯಿತ್ತನು ಮೂವರು ಸತಿಯರಿಗೆ

ಟವ ಮಾಡಲು ಪಡೆದರು ನಾಲ್ವರನು

ಷಿವರ ವಿಶ್ವಾಮಿತ್ರರು ಕೇಳಿದರು ಕಳಿಸು

ಕ್ಷ ಜನರನು ಶಿಕ್ಷಿಸಲು ರಾಮನನು

ಸುಳೆಗಳೊಂದಿಗೆ ದಂಡಕಾರಣ್ಯಕೆ

ಳಿಗೆ ಋಷಿಜನಕೆಂದು ಜತೆಯಲಿ ಲಕ್ಷ್ಮಣನು

ಮ್ಮೆಲೆ ಖರದೂಷಣರ ಬಡಿದು ಜನಕಪುರಕೆ

ಲಗದಲಿ ರಾಮನು ಶಿವಧನುವ ಮುರಿದು

ತ್ಸುಕತೆಯಲಿ ಸೀತಾಮಾಲೆಗೆ ಕೊರಳೊಡ್ಡಿ

ಅಂಬಾ ಸೀತಾ ಸ್ವಯಂವರ ಸಂಭ್ರಮವು

ಅಃ ಅಃ ಶ್ರೀರಾಮ ಸೀತಾ ವಿವಾಹ ವೈಭವವು


ಟುವರ ಬೇಡಿದಳು ಕೈಕೇಯಿ ದಶರಥನ

ತಿಗೊಳ್ಳದೆ ಸೀತಾಲಕ್ಷ್ಮಣರೊಡನೆ

ಮನ ಕಾನನಕೆ ಉಟ್ಟು ನಾರುಮಡಿ

ಟಸಂಭವನಿತ್ತನು ಹರಿಚಾಪವನು

  ಅನ್ನುತ ಪ್ರಾಣಿಗಳೊಡನಾಡಿದಳು ಸೀತೆ


ಳಿಗಾಳಿ ಉರಿಬಿಸಿಲ ಸಹಿಸುತ ರಾಘವನು

ವಿಗುಂದದೆ ಕಾಡಲಿ ಕಾಲವ ಕಳೆಯುತಲಿರಲು

ಯಜಯ ರಾಘವ ಎನ್ನುತ ಭರತನು ಬಂದು

ಗಮಗಿಸುವ ರಾಮಪಾದುಕೆಗಳ ಪಡೆಯಲು

ಜ್ಞಾನಿವರೇಣ್ಯ ರಘುಕುಲತಿಲಕ ತಮ್ಮನ ತಬ್ಬಿದನು

ವುಳಿಯಾಡದೆ
 ರಾಜ್ಯವ ನೀಯುವೆನು

ಕ್ಕೆಯ ಹಾರಿಸುವೆ ಎನೆ ರಾಮನು ಖಂಡಿಸಿದ

ನಿಯುಳಿಯಲು ಪಾದುಕೆಗಳ ಕೈಗೊಂಡು

ಕ್ಕೆಯ ಬಾರಿಸುವನೆ ಭರತನು

  ಣಣ ಶಬ್ದವು ಎಲ್ಲೆಡೆ ಕೇಳಿಸಿತು


ರುಣಿಯ ಮಾತನು ಲೆಕ್ಕಿಸಿ ರಾಘವ

ಳಥಳಿಪ ಜಿಂಕೆಯ ಹಿಂದೋಡಿದನು

ನಿರಾಮದೆನುತ ಅತ್ತ ತೆರಳಿದ ಲಕ್ಷ್ಮಣನು

ಣಿಗಳಾಶ್ರಮ ಸೇರುವ ಮೊದಲೆ

ಲ್ಲೆಯನಪಹರಿಸಿದ ದಶಶಿರ ರಾವಣನು


ತ್ನಿಯ ಕದ್ದ ಲಂಕಾಪತಿ ಕೊಂದು ಸೀತಾ


ಲ ಪಡೆಯಲು ಸುಗ್ರೀವ ಗೆಳೆತನ ರಾಮನಿಗೆ

ಲಿಷ್ಟ ಜಟಾಯುವಿಂದ ಉಪಕೃತ ರಾಘವ

ವಭಾದೆಯ ಕಳೆಯಲು ಹರಸಿದನು

ರ್ಕಟವೀರ ಹನುಮನ ಮೈತ್ರಿಯ ಬೆಳೆಸಿದನು


ಮಪುರಿಗಟ್ಟಿದ ರಾಮನು ವಾಲಿಯನು

ಮಣೀಯ ವಾರ್ತೆ ತಂದನು ಮಾರುತಿಯು

ವಣಾಂಬುಧಿಗೈ ತಂದರು ವಾನರರು

ತ್ಸಲನಾಶ್ರಯವಿತ್ತು ವಿಭೀಷಣನಿಗೆ

ರಧಿಯ ದಾಟಿ ಯುದ್ದವ ಹೂಡಿದರು

ಡ್ಗುಣ ಸಹಿತನು ರಾವಣನ ಕೊಂದು

ತಿಯೊಡಗೂಡಿ ಅಯೋಧ್ಯೆಗೆ ಹೊರಡಲು

ನುಮನು ಭರತಗೆ ವಿಷಯವ ತಿಳುಹಿದನು

ಕ್ಷ್ಮೀವಲ್ಲಭನು ಚಂದದಿ ರಾಜ್ಯವನಾಳಿದನು

ಕ್ಷಮಾಪೂರ್ಣ ರಾಮಚಂದ್ರನು ಎಲ್ಲರನ್ನೂ ಕಾಪಾಡಲಿ...



(
ಇಷ್ಟು ಸುಂದರವಾದ "ಅಕ್ಷರ ರಾಮಾಯಣ"ವನ್ನು ರಚಿಸಿದ ಕವಿ ಅಜ್ಞಾತ (ಸಂಗ್ರಹ ಲೇಖನ). ಕವಿಗೆ ಗೌರವ ಪೂರ್ವಕ ನಮಸ್ಕಾರಗಳು. ನಿಮಗೆ ಗೊತ್ತಿದ್ದರೆ ತಿಳಿಸಿ. ೧೯೫೮-೫೯ರ ಪತ್ರಿಕೆಯಿಂದ ಸಂಗ್ರಹ)


ಬುಧವಾರ, ಡಿಸೆಂಬರ್ 03, 2025

ಗದ್ದೆ - ಒದ್ದೆ

ವಿದ್ಯಾರ್ಥಿ ಗಳೆಂದರೆ ಭತ್ತ ಬೆಳೆವ "ಗದ್ದೆ||  ವಾವ್ಹಾ   ||

ವಿದ್ಯಾರ್ಥಿ ಗಳೆಂದರೆ ಭತ್ತ ಬೆಳೆವ "ಗದ್ದೆ||  ವಾವ್ಹಾ   ||

ಆದರೆ

ಗುರುಗಳ ಹೊಡೆತಕ್ಕೆ 
ರಾತ್ರಿ ಹಾಸಿಗೆಯೂ ಆಗ್ತಿತ್ತು "ಒದ್ದೆ".

1.. ಜಾಹೀರಾತು

2.ಜಾಹೀರಾತು