ಅರಸನು ಆನೆಯ ಏರಿದ್ದೇಕೆ?
ಇಲಿಯೂ ಈಗಲೇ ಓಡಿದ್ದೇಕೆ?
ಉಡವು ಊರಿಗೆ ಹೊರಟದ್ದೇಕೆ?
ಋಷಿಯು ಎತ್ತಲೋ ತಿರುಗಿದ್ದೇಕೆ?
ಏಡಿಯು ಐವರ ಕಡಿದದ್ದೇಕೆ?
ಒಡನೆಯೆ ಓತಿಯ ಹಿಡಿದದ್ದೇಕೆ?
ಔತಣ ಅಂತ ಅಂದದ್ದೇಕೆ?
ಅಃ ಅಹಹಾ ಅಂತ ನಕ್ಕಿದ್ದೇಕೆ?
ಹೇಳೋ ಅಣ್ಣ, ಬೇಗನೇ ಹೇಳೋ..
ಇಲಿಯೂ ಈಗಲೇ ಓಡಿದ್ದೇಕೆ?
ಉಡವು ಊರಿಗೆ ಹೊರಟದ್ದೇಕೆ?
ಋಷಿಯು ಎತ್ತಲೋ ತಿರುಗಿದ್ದೇಕೆ?
ಏಡಿಯು ಐವರ ಕಡಿದದ್ದೇಕೆ?
ಒಡನೆಯೆ ಓತಿಯ ಹಿಡಿದದ್ದೇಕೆ?
ಔತಣ ಅಂತ ಅಂದದ್ದೇಕೆ?
ಅಃ ಅಹಹಾ ಅಂತ ನಕ್ಕಿದ್ದೇಕೆ?
ಹೇಳೋ ಅಣ್ಣ, ಬೇಗನೇ ಹೇಳೋ..
ಕಪಿಯು ಖಜೂರ ತಿಂದಿದ್ದೇಕೆ?
ಗಣಗಣ ಘಂಟೆ ಬಾರಿಸಿತೇಕೆ?
ಚಂದಿರ ಛತ್ರಿಯ ತರಲಿಲ್ಲೇಕೆ?
ಜಲಜ ಝರಿಯೆಡೆ ಹೋಗಿದ್ದೇಕೆ?
ಟಗರು ಠಕ್ಕನ ಗುದ್ದಿದ್ದೇಕೆ?
ಡಮರು ಢಮ ಢಮ ಕುಣಿದ್ದೇಕೆ?
ತಮಟೆಯ ಥರ ಥರ ನಡುಗಿದ್ದೇಕೆ?
ದಮಡಿಯು ಧಬ್ ಧಬ್ ಬಡಿದದ್ದೇಕೆ?
ನಳ್ಳಿಯು ಪರಮನ ಕರೆದದ್ದೇಕೆ?
ಫಲವನು ಬಡಿಸಲು ಹುಡುಕಿದ್ದೇಕೆ?
ಭರ್ಜರಿ ಮರವನು ಹತ್ತಿದ್ದೇಕೆ?
ಭರ್ಜರಿ ಮರವನು ಹತ್ತಿದ್ದೇಕೆ?
ಯಮಳನ ರಮಿಸಲು ಹೋದದ್ದೇಕೆ?
ಲಂಕಿಣಿ ವಧಿಸದೇ ಶಪಿಸಿದ್ದೇಕೆ?
ಷಡ್ಭುಜ ಸಮತಟ್ಟು ಮಾಡಿದ್ದೇಕೆ?
ಹದ್ದಿಗೆ ಹಪ್ಪಳದ ಭೋಜನವೇಕೆ?
ಕ್ಷಮೆಯದು ಜ್ಞಾನಿಗೆ ಇರಲೇಬೇಕೆ?
ಹೇಳೋ ಅಣ್ಣ, ಬೇಗನೇ ಹೇಳೋ..
ಅಕ್ಷರ ಮಾಲೆಗೆ ಪ್ರಶ್ನೆಯ ಹಾರ
ಜಾಣ ಪುಟ್ಟನಿಗೆ ಬೇಕೇ ಉತ್ತರ?
- ಶ್ರೀ ಬೇಂದ್ರೆ ಮಂಜುನಾಥ, ಹಾಸನ (02/11/2013, ವಿಜಯವಾಣಿ)
