ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಸೋಮವಾರ, ನವೆಂಬರ್ 25, 2024

ಓದು ಓದು ನೀ ಓದು ಭಾಗ - 1

ನಿನ್ನ ಹೆತ್ತವರ ಖುಷಿಗಾಗಿ ನೀ ಓದು

ನಿನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೀ ಓದು

ಬಡವರ ಬಾಳಲ್ಲಿ ಬೆಳಕಾಗಲು ನೀ ಓದು

ನಿನ್ನ ಅವಮಾನಿಸಿದವರಿಗಾಗಿ ನೀ ಓದು 

ಇನ್ನೊಬ್ಬರಿಗೆ ಮಾದರಿಯಾಗಲು ನೀ ಓದು

ಮಂಗಳವಾರ, ನವೆಂಬರ್ 19, 2024

ಗೂಗಲ ಚಾ ಚಾ ಸ್ಲೈಡ ಪುಟದ ವಿಚಿತ್ರಗಳು (Google cha cha slide Pages) 51

Google ನಲ್ಲಿ ಹೀಗೆ ಟೈಪ್ ಮಾಡಿ: 
"cha cha slide" ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ "ಚಾ ಚಾ ಸ್ಲೈಡ" ಕಾಣುತ್ತದೆ. ಆಗ ನಿಮಗೆ ಅಲ್ಲಿ ಒಂದು ಬಣ್ಣದ ಮೈಕ ಚಿತ್ರ ಕಾಣುತ್ತದೆ. ನೀವು ಆ ಬಣ್ಣದ ಮೈಕ ಚಿತ್ರವನ್ನು ಮುಟ್ಟಿದಾಗ ಆ ಪರದೆ ಚಲಿಸುತ್ತಾ ಮತ್ತು ಧ್ವನಿ ಕೇಳುತ್ತದೆ. ಒಟ್ಟು 12 ಬಾರಿ ಕ್ಲಿಕ್‌ ಮಾಡಿ. ಪ್ರತಿ ಬಾರಿ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಬೇರೆ ಬೇರೆ ರೀತಿ ಪರದೆ ಚಲಿಸುತ್ತದೆ ಮತ್ತು ಧ್ವನಿ ಕೇಳುತ್ತದೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

█▓▒▒░░░⮊⯮ ಕೃಪೆ: 🙶 Google🙷 ⮈░░░▒▒▓█

ಗುರುವಾರ, ನವೆಂಬರ್ 07, 2024

10. ಬಣ್ಣದ ಗುಂಡಿಗಳು (Color Buttons)

ಬಣ್ಣದ ಗುಂಡಿಗಳ ಮೇಲೆ ನಿಮ್ಮ ಕರ್ಸರ್‌ ತೋರಿಸಿ



ಶುಕ್ರವಾರ, ನವೆಂಬರ್ 01, 2024

ಎಲ್ಲೆಲ್ಲಿ ನಮ್ಮ ಕನ್ನಡ ಬಳಕೆ ಮಾಡಬೇಕು ?

    ಪ್ರತಿ ವರ್ಷ ನವೆಂಬರ್ ಒಂದರಂದು ಹಬ್ಬದ ವಾತಾವರಣದಿಂದ ಪ್ರೇರಿತರಾಗಿ ಕೇವಲ ಒಂದೆರಡು ದಿನ / ವಾರಗಳವರೆಗೆ ಕನ್ನಡ ದ ಜಪ ಮಾಡಿ ಮರೆತುಹೋದರೆ ಸರಿಯೆ?ಸಂಭ್ರಮದಿಂದ ನಲಿಯಲು ಹಬ್ಬ ಬೇಕು, ಆದರೆ ಕನ್ನಡದ ಸೇವೆ ಮಾಡಲು ಹಬ್ಬದ ದಿನವೊಂದೇ ಬೇಕಾಗಿಲ್ಲ. ಹಾಗಾಗಿ, ದಿನನಿತ್ಯದ ಬಳಕೆಯಲ್ಲಿ ಕನ್ನಡಕ್ಕೇ ಪ್ರಾಧಾನ್ಯತೆ ಕೊಟ್ಟು, ವರ್ಷಕ್ಕೊಮ್ಮೆ ಆಚರಿಸುವ ಕನ್ನಡ ಹಬ್ಬದ ಮೂಲಕ ಸಂಭ್ರಮಿಸೋಣ.
    ವರ್ಷವಿಡೀ ಕನ್ನಡಮಯ ಜೀವನ ನಡೆಸಿದ ಸಾರ್ಥಕ ಮನೋಭಾವದಿಂದ ಕುಣಿದು ಕುಪ್ಪಳಿಸೋಣ. ದೈನಂದಿನ ಜೀವನದಲ್ಲಿ ಕನ್ನಡವನ್ನು ಹೇಗೆ ಬೇರೆ-ಬೇರೆ ವಿಧಗಳಲ್ಲಿ ಬಳಸಬಹುದು ಎಂಬುದನ್ನು ಈ ಪುಟದಲ್ಲಿ ಕಾಣಬಹುದು. ಹೊಸ-ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಆಂಗ್ಲದ ಹಂಗಿನಲ್ಲಿ ಇರಲೇಬೇಕು ಎಂದೇನಿಲ್ಲ.
    ಕನ್ನಡಿಗರು ಕನ್ನಡದ ಬಳಕೆಯನ್ನು ಹೆಚ್ಚಿಸಿದರೆ, ಆಗ ತಂತ್ರಜ್ಞಾನ ಒದಗಿಸುವ ಕಂಪನಿಗಳು ಕನ್ನಡಕ್ಕೆ ಒತ್ತುನೀಡಲು ಆರಂಭಿಸುತ್ತವೆ. ನೆನಪಿರಲಿ, ಸತತವಾಗಿ ಆಂಗ್ಲದಲ್ಲಿ ಮೊಬೈಲ್, ಗಣಕ, ಇತ್ಯಾದಿ ತಂತ್ರಜ್ಞಾನದ ಉಪಕರಣಗಳನ್ನು ಬಳಸಿ ನಮಗೆ ಒಮ್ಮೆಲೆ ಅವುಗಳನ್ನು ಕನ್ನಡಕ್ಕೆ ಬದಲಿಸಿದರೆ ಆರಂಭದಲ್ಲಿ ತುಸು ಕಿರಿಕಿರಿಯಾಗಬಹುದು.ಹಾಗೆಂದಮಾತ್ರಕ್ಕೆ ತಾಳ್ಮೆ ಕಳೆದುಕೊಂಡು ಮತ್ತೇ ಆಂಗ್ಲಕ್ಕೆ ಮರಳಿದರೆ ಹೇಗೆ? ನಿಮ್ಮ ತಾಯಿಯ ಮಾತು ನಿಮಗೆ ಕಿರಿಕಿರಿಯುಂಟು ಮಾಡುತ್ತದೆ ಎಂದು ಆಕೆಯನ್ನು ದೂರವಿಡಲಾದೀತೆ?
    ಹೊಸದಾಗಿರುವುದು ಹೊಂದಿಕೊಳ್ಳುವವರೆಗಷ್ಟೇ ತುಸು ತ್ರಾಸು.ಆರಂಭದ ಕೆಲ ದಿನಗಳನ್ನು ತಾಳ್ಮೆಯಿಂದ ತಳ್ಳಿದರೆ, ಮುಂದೆ ನೀವೇ ಕನ್ನಡಕ್ಕೆ ಹೊಂದಿಕೊಳ್ಳುತ್ತೀರಿ (ಇದು ಮಾನವನ ಸಹಜ ಗುಣ). ಆಮೇಲೆ, ನೀವೇ ಬೇರೆಯವರಿಗೆ ಕನ್ನಡ ಬಳಸಲು ಹೇಳಿಕೊಡುತ್ತೀರಿ.
    ಈಗಾಗಲೇ ಸಾಕಷ್ಟು ಜನ ಸಾಧ್ಯವಿರುವ ಕಡೆಯಲ್ಲೆಲ್ಲ ಕನ್ನಡದ ಬಳಕೆಯನ್ನು ಅಳವಡಿಸಿಕೊಂಡಿದ್ದಾರೆ, ಅವರೆಲ್ಲರಿಗೂ "ಕನ್ನಡಿಗ ಶಿವಕುಮಾರ" ವತಿಯಿಂದ ನಮಸ್ಕಾರಗಳು.

1.. ಜಾಹೀರಾತು

2.ಜಾಹೀರಾತು