fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಆಗಸ್ಟ್ 29, 2024

ಅವಲಕ್ಕಿ ಪವಲಕ್ಕಿ... ಆಟದ ಮಹತ್ವ 1

     ಪ್ರತಿ ವರ್ಷ ಆಗಸ್ಟ್ 29 ರಂದು , ಭಾರತವು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸುತ್ತದೆ, ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವನ್ನು ಸ್ಮರಿಸುತ್ತದೆ, ಇದು ಇತಿಹಾಸದಲ್ಲಿ ಅತ್ಯುತ್ತಮವಾದ ಫೀಲ್ಡ್ ಹಾಕಿ ಆಟಗಾರ ಎಂದು ಪರಿಗಣಿಸಲಾಗಿದೆ.
ನಾವೂ ಚಿಕ್ಕವರಿದ್ದಾಗ,
ಅವಲಕ್ಕಿ ಪವಲಕ್ಕಿ
ಕಾಂಚಣ ಮಿಣ ಮಿಣ, 
ಡಾಮ್ ಡೂಮ್,
ಟಸ್ ಪುಸ್,
ಕೊಯ್ ಕೊಟಾರ್ ಅಂತಿದ್ವಿ.

ಹುಚ್ಚರ ಹಾಗೇ ಏನೇನೋ ಆಟ ಎಂದು ನಾನು ಹೇಳಿದಾಗ, ಅದಕ್ಕೆ ನನ್ನ ಅಮ್ಮ ಹೇಳಿದರು ಹುಚ್ಚಪ್ಪ, ಅದರ ಅರ್ಥ ಹೇಳುತ್ತೇನು ಕೇಳು. 

ಈ ಹಾಡು ಭೂಮಿಯ ಮೇಲೆ ಮನುಷ್ಯನ ಜೀವನದ ಘಟ್ಟಗಳನ್ನು ತಿಳಿಸುತ್ತದೆ.

ಅವಲಕ್ಕಿ – ಮನುಷ್ಯ ಬಾಲ್ಯದಲ್ಲಿ ಅವಲಕ್ಕಿ ತಿಂತಾನೆ‌.

ಪವಲಕ್ಕಿ – ದೊಡ್ಡವನಾದ ಮೇಲೆ ಪಾವಕ್ಕಿ ಅನ್ನ ತಿಂತಾನೆ.

ಕಾಂಚನ – ಯೌವನದಲ್ಲಿ ಕೆಲಸಕ್ಕೆ ಸೇರಿದ ಮೇಲೆ ದುಡ್ಡು ಕೈಯಲ್ಲಿ ಓಡಾಡುತ್ತದೆ.

ಮಿಣ ಮಿಣ – ಕೆಲಸ ದುಡ್ಡು ಎಲ್ಲ ಇರುವಾಗ ಅವನ ಜೀವನದಲ್ಲಿ ಎಲ್ಲ ಮಿಣ ಮಿಣ ಎಂದು ಹೊಳೆಯುತ್ತಿರುತ್ತದೆ.

ಡಾಮ್ ಡೂಮ್ – ಆಮೇಲೆ ಧಾಮ್ ಧೂಮ್ ಎಂದು ಅವನ ಮದುವೆ ಆಗುತ್ತದೆ.

ಟಸ್ ಪುಸ್ – ಮದುವೆಯಾಗಿ ಮಕ್ಕಳಾದ ನಂತರ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಟಸ್ ಪುಸ್, ಏಕೆಂದರೆ ಮಕ್ಕಳು ಹೇಳೋದನ್ನೇ ದೊಡ್ಡವರು ಕೇಳಬೇಕು.

ಕೊಯ್ ಕೊಟಾರ್ – ಕೊನೆಗೆ ವ್ಯಕ್ತಿಯ ಮರಣ. 

       ಹೇಗಿದೆ ? “ಅವರು ಮುಗಿಸಿದಾಗ ನನ್ನ ತೆರೆದ ಬಾಯಿ ಹಾಗೆಯೇ ಇತ್ತು.
ಅಮ್ಮ ಮಾತು ಮುಂದುವರಿಸಿದರು.”

"ಅವಲಕ್ಕಿ, ಅಪಮಾನ ಮಾಡಬಾರದು ಹಂಚಿ ತಿನ್ನಬೇಕು. ಸುಧಾಮ ಗುರುಕುಲದಲ್ಲಿದ್ದಾಗ, ಒಬ್ಬನೇ ಕೂತು ಎಲ್ಲಾ ಅವಲಕ್ಕಿ ತಿಂದುಬಿಟ್ಟಿದ್ದಕ್ಕೇ ಆ ಪರಿ ದಾರಿದ್ರ್ಯ ಕಾಡಿತಂತೆ. ಮುಂದೆ ಕೃಷ್ಣನಿಗೆ ಆ ಅವಲಕ್ಕಿಯ ಋಣವನ್ನು ತೀರಿಸಿದಾಗ ಆ ದೋಷ ಪರಿಹಾರವಾಯಿತಂತೆ.” 

ಒಂದು ಸಣ್ಣ ಆಟದಲ್ಲಿ ಎಷ್ಟು ದೊಡ್ಡ ತತ್ವ ಅಡಗಿದೆ.

ಭಾನುವಾರ, ಆಗಸ್ಟ್ 18, 2024

ಗೂಗಲ ಪಕ್ಷಿ ದ್ವನಿಯ ಪುಟ (Google Birds Pages) 48


Google ನಲ್ಲಿ ಹೀಗೆ ಟೈಪ್ ಮಾಡಿ: "   Birds  " ಎಂದು ಬರೆದು ಎಂಟರ್ ಒತ್ತಿರಿ. ಆಗ ನಿಮಗೆ " ಪಕ್ಷಿಯ ದ್ವನಿ ವರ್ದಕ  " ಕಾಣುತ್ತದೆ. ಆಗ ನೀವು  ಅದನ್ನು ಮುಟ್ಟಿದಾಗ ಒಂದು ಪಕ್ಷಿಯ ದ್ವನಿ ಕೇಳಿತ್ತದೆ.  ಎಷ್ಟು ಬಾರಿ ಕ್ಲಿಕ್‌ ಮಾಡುವಿರೋ ಅಷ್ಟು ಬಾರಿ ಬೇರೆ ಬೇರೆ ಪಕ್ಷಿಯ ದ್ವನಿ ಕೇಳಿತ್ತದೆ. ಇದೂ ಕೂಡ ಒಂದು ಗೂಗಲ್‌ ಮೊಜು ಪುಟ...

ಗುರುವಾರ, ಆಗಸ್ಟ್ 15, 2024

55 ರ ಸಂಭ್ರಮದಲ್ಲಿ "ನಮ್ಮ ಇಸ್ರೋ, ನಮ್ಮ ಹೆಮ್ಮೆ"

🤖🤩 ಮಾನವ ಕುಲದ ಸೇವೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನ 🤩🤖

ವಿಷಯವಿವರ
ಸಂಸ್ಥಾಪಕರುವಿಕ್ರಮ್ ಸಾರಾಭಾಯಿ
ಸಂಕ್ಷೇಪಣISRO
ರಚನೆ
15 ಆಗಸ್ಟ್ 1969
1962 ರಲ್ಲಿ ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಸಂಶೋಧನಾ ಸಮಿತಿ
ಹಿಂದಿನ ಸಂಸ್ಥೆINCOSPAR
ವಿಧಸ್ಪೇಸ್ ಏಜೆನ್ಸಿ
ನ್ಯಾಯವ್ಯಾಪ್ತಿಬಾಹ್ಯಾಕಾಶ ಇಲಾಖೆ
ಪ್ರಧಾನ ಕಛೇರಿ
ಬೆಂಗಳೂರು, 13°02′6.4″N77°34′15.6″E
ಮಾಲಿಕಭಾರತ ಸರ್ಕಾರ
ಉದ್ಯೋಗಿಗಳು16,786 (2022)
ತಾಣwww.isro.gov.in
ಪ್ರಾಥಮಿಕ ಬಾಹ್ಯಾಕಾಶ ನಿಲ್ದಾಣಗಳುS.D.S.C ಮತ್ತು T.E.R.L.S
I.S.R.O
Indian  Space Research Organisation

I.N.C.O.S.P.A.R
Indian National Committee for Space Research

S.D.S.C
Satish Dhawan Space Centre

T.E.R.L.S
Thumba Equatorial Rocket Launching Station

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ "ಇಸ್ರೋ" ಬೆಂಗಳೂರು ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತ ಸರ್ಕಾರದ ಬಾಹ್ಯಾಕಾಶ ಸಂಸ್ಥೆಯಾಗಿದೆ. ಇಂಜಿನಿಯರ್‌ಗಳು ಕೆಲಸ ಮಾಡಲು ಇದು ಅತ್ಯಂತ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿದೆ. "ಬಾಹ್ಯಾಕಾಶ ವಿಜ್ಞಾನ ಸಂಶೋಧನೆ ಮತ್ತು ಗ್ರಹಗಳ ಅನ್ವೇಷಣೆಯನ್ನು ಅನುಸರಿಸುವಾಗ ರಾಷ್ಟ್ರೀಯ ಅಭಿವೃದ್ಧಿಗಾಗಿ ಬಾಹ್ಯಾಕಾಶ ತಂತ್ರಜ್ಞಾನ" ವನ್ನು ಬಳಸಿಕೊಳ್ಳುವ ದೃಷ್ಟಿಯನ್ನು ISRO ಹೊಂದಿದೆ.

ಭಾರತದಾದ್ಯಂತ ಒಟ್ಟು 32 ಕೇಂದ್ರಗಳೊಂದಿಗೆ ISRO ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದಕ್ಕಾಗಿ ಸಿವಿಲ್, ಎಲೆಕ್ಟ್ರಿಕಲ್, ಆರ್ಕಿಟೆಕ್ಚರ್, ಮೆಕ್ಯಾನಿಕಲ್, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮತ್ತು ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್ ಸ್ಟ್ರೀಮ್‌ಗಳಿಂದ ಅಭ್ಯರ್ಥಿಗಳನ್ನು ಆಹ್ವಾನಿಸಲಾಗುತ್ತದೆ. ISROಗೆ ಅರ್ಜಿ ಸಲ್ಲಿಸಲು ಅರ್ಹವಾದ ಪದವಿಗಳು ಅಂದರೆ B.E., B.Tech, B.Sc.(ಎಂಜಿನಿಯರಿಂಗ್), ಡಿಪ್ಲೊಮಾ + B.E / B.Tech (ಲ್ಯಾಟರಲ್ ಎಂಟ್ರಿ), B.Sc. + B.E / B.Tech(ಲ್ಯಾಟರಲ್ ಎಂಟ್ರಿ), AMIE, B.E / B.Tech ಪದವಿ ಅರೆಕಾಲಿಕ.

ಬಾಹ್ಯಾಕಾಶ ಇಲಾಖೆಯ ಇಸ್ರೋ ಕೇಂದ್ರೀಕೃತ ನೇಮಕಾತಿ ಮಂಡಳಿ (ICRB) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ISRO ನೇಮಕಾತಿ ಡ್ರೈವ್ ಅನ್ನು ನಡೆಸುತ್ತದೆ. ಕೆಳಗಿನ ತಿಳಿಸದ 15 ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿಯನ್ನು ಮಾಡಲಾಗುತ್ತದೆ:
  1. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC).
  2. ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (LPSC).
  3. ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC) SHAR.
  4. ISRO ಉಪಗ್ರಹ ಕೇಂದ್ರ (ISAC).
  5. ISRO ಪ್ರೊಪಲ್ಷನ್ ಕಾಂಪ್ಲೆಕ್ಸ್ (IPRC).
  6. ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರ (SAC).
  7. ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (NRSC).
  8. ISRO ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ISTRAC).
  9. ISRO ಜಡ ವ್ಯವಸ್ಥೆಗಳ ಘಟಕ (IISU).
  10. ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ (LEOS) ಪ್ರಯೋಗಾಲಯ.
  11. ಅಭಿವೃದ್ಧಿ ಮತ್ತು ಶೈಕ್ಷಣಿಕ ಸಂವಹನ ಘಟಕ (DECU).
  12. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ (IIRS).
  13. ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (MCF).
  14. ಬಾಹ್ಯಾಕಾಶ ಇಲಾಖೆ ಮತ್ತು ಇಸ್ರೋ ಕೇಂದ್ರ.
  15. ಆಂಟ್ರಿಕ್ಸ್ ಕಾರ್ಪೊರೇಷನ್ ಲಿಮಿಟೆಡ್.
█▓▒▒░░⯮ ಕೃಪೆ: 🙶ವಿಕಿಡೇಟಾ, ಮೇಡಇಝಿ🙷 ░░▒▒▓█

ಶನಿವಾರ, ಆಗಸ್ಟ್ 03, 2024

ಬಾಲಕ / ಹಿಂಬಾಲಕ

ಮದುವೆಗೂ ಮುನ್ನ ಅವನು ಬಾಲಕ || ವಾವ್ಹಾ ||
ಮದುವೆಗೂ ಮುನ್ನ ಅವನು ಬಾಲಕ || ವಾವ್ಹಾ ||
ಆದರೆ
ಮದುವೆಯ ನಂತರ ಅವನು ಹೆಂಡತಿಯ ಹಿಂಬಾಲಕ.

ಗುರುವಾರ, ಆಗಸ್ಟ್ 01, 2024

ಕನ್ನಡ ಇತಿಹಾಸ 11/11

ಲಿಪ್ಯಂತರಣ
ಕನ್ನಡ ಅಕ್ಷರಗಳನ್ನು ಗಣಕಯಂತ್ರದಲ್ಲಿ ಸಾಮಾನ್ಯ ಕೀಲಿಮಣೆಯ ಮೂಲಕ ಮೂಡಿಸಲು ಅನೇಕ ಲಿಪ್ಯಂತರಣ ವಿಧಾನಗಳಿವೆ. ಇವುಗಳಲ್ಲಿ ಕೆಲವೆಂದರೆ INSCRIPT, ITRANS, ಬರಹ ಮತ್ತು ನುಡಿ. ಕರ್ನಾಟಕ ಸರ್ಕಾರದ ಅಧಿಕೃತ ಲಿಪ್ಯಂತರಣ ವಿಧಾನ ನುಡಿ. INSCRIPT ಶಿಷ್ಟಾಚಾರವನ್ನು ವಿಂಡೋಸ್ ಹಾಗೆಯೇ GNOME ಬಳಸುವ ಎಲ್ಲಾ ಕಾರ್ಯಾಚರಣೆ ವ್ಯವಸ್ಥೆಗಳೂ ಗುರುತು ಹಿಡಿಯುತ್ತವೆ.ಇದನ್ನು ಸಿದ್ಧಪಡಿಸಿಕೊಟ್ಟವರು ಕೆ. ಪಿ. ರಾವ್ರವರು.

ಕನ್ನಡ ಅಂಕೆಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಕಾಣುವಂತೆ ಗುರುತಿಸಲಾಗುತ್ತದೆ.
ಕನ್ನಡ ಅಂಕೆಗ‍ಳುಇಂಡೋ ಅರೇಬಿಯನ್ ಅಂಕೆಗಳು
ಸೊನ್ನೆ0
ಒಂದು1
ಎರಡು2
ಮೂರು3
ನಾಲ್ಕು4
ಐದು5
ಆರು6
ಏಳು7
ಎಂಟು8
ಒಂಬತ್ತು9

ಕೃಪೆ: ಕನ್ನಡದ ವಿಕಿಪೀಡಿಯ

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು