ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ

👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಭಾನುವಾರ, ಅಕ್ಟೋಬರ್ 31, 2021

ನಮ್ಮ ಕನ್ನಡ ನಾಡು

ಕನ್ನಡ ನಾಡಿನ ಅಂದವ ನೋಡ
ಸಾಹಿತ್ಯ ಸಂಸ್ಕೃತಿಯ ಕಲೆ ಬೀಡ
ಮನ ತಣಿಸುವ ಹಚ್ಚ ಹಸಿರು
ಮಲೆನಾಡಿನ ಸೌಂದರ್ಯದುಸಿರು

ಜೋಗಿನ ಜಲಪಾತದ ಸೊಬಗಿನ ಇಂಪು
ಪಂಚ ಕೋಟಿ ಜನರಾಡುವ ಕನ್ನಡದ ಕಂಪು
ಬೇಲೂರು ಹಳೇಬೀಡು ಮೈಸೂರು
ಸದಾ ಆಕರ್ಷಿಸಿಸುವ ತವರೂರು

ಸುಂದರ ಇತಿಹಾಸ ಸೃಷ್ಟಿಸಿದ ನಾಡು
ಕಲೆ ವಾಸ್ತುಶಿಲ್ಪ ಸಾಹಿತ್ಯದ ಬೀಡು
ವಿದೇಶಿಯರು ಹೊಗಳುವ ಮೈಸೂರು ದಸರ
ನಾಡಿನ ಜನತೆಯ ಸಂತಸದ ಸಡಗರ

ನಾಡನ್ನು ಕಟ್ಟಿದ ರಾಜರ ವೈಭವ
ಕವಿಗಳು ರಚಿಸಿದ ಸಾಹಿತ್ಯ ಭಂಡಾರ
ಪ್ರವಾಸಿಗರ ಕೈ ಬೀಸಿ ಕರೆಯುವ ತಾಣ
ನೆಲೆಯೂರಲು ಯೋಗ್ಯವಾದ ವಾಸಸ್ಥಾನ

ನೀ ಒಮ್ಮೆ ಬಂದು ನೋಡು ಬಾರ
ಕನ್ನಡನಾಡಿನ ಅಂದವ ಸವಿಯಬಾರ
-ಮಾಕೃಮ

ಗುರುವಾರ, ಅಕ್ಟೋಬರ್ 14, 2021

ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು

ಆಯುಧ ಪೂಜೆ ಹಾಗೂ ದಸರಾ ಹಬ್ಬದ ಶುಭಾಶಯಗಳು

1. ಶೈಲಪುತ್ರಿಪರ್ವತ ರಾಜ ಹಿಮಾಲಯದ ಮಗಳಾದ ಪಾರ್ವತಿಯ ರೂಪದಲ್ಲಿ ಶೈಲಪುತ್ರಿ ದೇವಿಯನ್ನು ನವರಾತ್ರಿಯ ಮೊದಲನೇ ದಿನ ಪೂಜಿಸಲಾಗುತ್ತದೆ. ಆಕೆ ಒಂದು ಕೈಯಲ್ಲಿ ತ್ರಿಶೂಲ ಮತ್ತು ಇನ್ನೊಂದು ಕೈಯಲ್ಲಿ ಕಮಲದ ಹೂವನ್ನು ಹಿಡಿದಿದ್ದಾಳೆ. ಹಿಮಾಲಯದ ಮೇಲೆ ಕುಳಿತಿರುವ ನಂದಿಯ ಮೇಲೆ ಈಕೆ ಸವಾರಿ ಮಾಡುತ್ತಾಳೆ. ಈ ವೃಷಭ ವಾಹನವು ಶಿವನ ರೂಪವಾಗಿದೆ. ತೀವ್ರ ತಪಸ್ಸು ಮಾಡುವ ಶೈಲಪುತ್ರಿ ಎಲ್ಲಾ ಕಾಡು ಪ್ರಾಣಿಗಳ ರಕ್ಷಕಿ ಕೂಡ ಆಗಿದ್ದಾಳೆ.
2. ಬ್ರಹ್ಮಚಾರಿಣಿನವದುರ್ಗೆಯ 9 ಅವತಾರಗಳಲ್ಲಿ ಬ್ರಹ್ಮಚಾರಿಣಿ ಎರಡನೇ ಅವತಾರವಾಗಿದೆ. ನವರಾತ್ರಿಯ ಎರಡನೇ ದಿನ ಅವಳನ್ನು ಪೂಜಿಸಲಾಗುತ್ತದೆ. ಬ್ರಹ್ಮಚಾರಿಣಿ ಈ ಪ್ರಪಂಚದ ಎಲ್ಲಾ ಸ್ಥಿರ ಮತ್ತು ಚರ ಜ್ಞಾನವನ್ನು ಬಲ್ಲವಳು. ಆಕೆಯ ರೂಪವು ಬಿಳಿ ಬಟ್ಟೆಯಲ್ಲಿ ಸುತ್ತಿದ ಹುಡುಗಿಯ ರೂಪದಲ್ಲಿದ್ದು, ಒಂದು ಕೈಯಲ್ಲಿ ಅಷ್ಟದಳ ಮಾಲೆ ಮತ್ತು ಇನ್ನೊಂದು ಕೈಯಲ್ಲಿ ಕಮಂಡಲವನ್ನು ಹಿಡಿದಿರುತ್ತಾಳೆ. ಇದನ್ನು ಅಕ್ಷಯಮಾಲಾ ಮತ್ತು ಕಮಂಡಲ ಧಾರಿಣಿ ಬ್ರಹ್ಮಚಾರಿಣಿ ಎಂದು ಕರೆಯಲಾಗುತ್ತದೆ. ಅವಳು ತನ್ನ ಸರ್ವಜ್ಞ ಜ್ಞಾನವನ್ನು ನೀಡುವ ಮೂಲಕ ತನ್ನ ಭಕ್ತರನ್ನು ವಿಜಯಶಾಲಿಯಾಗುವಂತೆ ಮಾಡುತ್ತಾಳೆ. ಬ್ರಹ್ಮಚಾರಿಣಿಯ ರೂಪವು ತುಂಬಾ ಸರಳ ಮತ್ತು ಭವ್ಯವಾಗಿದೆ. ಇತರ ದೇವತೆಗಳಿಗೆ ಹೋಲಿಸಿದರೆ, ಅವಳು ಸೌಮ್ಯ, ಕೋಪ ಮುಕ್ತ ಮತ್ತು ಶೀಘ್ರವಾಗಿ ವರವನ್ನು ನೀಡುವವಳು.
3. ಚಂದ್ರಘಂಟ ದುರ್ಗಾ ದೇವಿಯ ಮೂರನೇ ರೂಪವೇ ಚಂದ್ರಘಂಟ ರೂಪವಾಗಿದೆ. ನವರಾತ್ರಿಯ ಮೂರನೇ ದಿನದಂದು ದೇವಿಯ ಈ ರೂಪವನ್ನು ಪೂಜಿಸಲಾಗುತ್ತದೆ. ಅವಳ ಸ್ವಭಾವವು ತುಂಬಾ ಶಾಂತಿಯುತ ಮತ್ತು ಪರೋಪಕಾರಿ. ಅವಳ ಹಣೆಯ ಮೇಲೆ ಅರ್ಧಚಂದ್ರಾಕಾರವನ್ನು ನಾವು ನೋಡಬಹುದಾಗಿದೆ. ಅದಕ್ಕಾಗಿಯೇ ಈ ದೇವಿಯ ಹೆಸರನ್ನು ಚಂದ್ರಘಂಟ ಎಂದು ನೀಡಲಾಗಿದೆ. ಅವಳ ದೇಹದ ಬಣ್ಣವು ಬಂಗಾರದಂತೆ ಪ್ರಕಾಶಮಾನವಾಗಿದೆ ಮತ್ತು ವಾಹನವು ಸಿಂಹವಾಗಿದೆ. ಆಕೆಯನ್ನು ಆರಾಧಿಸುವುದರಿಂದ, ಭಕ್ತರು ಎಲ್ಲಾ ಲೌಕಿಕ ತೊಂದರೆಗಳಿಂದ ಮುಕ್ತರಾಗುತ್ತಾರೆ ಮತ್ತು ಸುಲಭವಾಗಿ ಪರಮೋಚ್ಛ ನಿವಾಸದ ಅಧಿಕಾರಿಗಳಾಗುತ್ತಾರೆ. ಅವಳ 10 ಕೈಗಳಲ್ಲಿ ಕಮಲ, ಬಿಲ್ಲು, ಬಾಣ, ಕಮಂಡಲ, ಖಡ್ಗ, ತ್ರಿಶೂಲ ಮತ್ತು ಗದೆ ಮುಂತಾದ ಆಯುಧಗಳಿವೆ. ಅವಳ ಕುತ್ತಿಗೆಯಲ್ಲಿ ಬಿಳಿ ಬಣ್ಣದ ಹೂವಿನ ಹಾರ ಮತ್ತು ತಲೆಯ ಮೇಲೆ ರತ್ನದ ಕಿರೀಟವಿದೆ.
4. ಕೂಷ್ಮಾಂಡ ಇದು ದುರ್ಗಾ ಮಾತೆಯ ನಾಲ್ಕನೇ ರೂಪ. ಅದಕ್ಕಾಗಿಯೇ ಅವಳನ್ನು ನವರಾತ್ರಿಯ ಚತುರ್ಥಿ ತಿಥಿಯಂದು ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿಯನ್ನು ದುರ್ಗಾ ಎಂದು ಕರೆಯಲಾಗುತ್ತದೆ. ಬ್ರಹ್ಮಾಂಡವನ್ನು ಸೃಷ್ಟಿಸಿದ ಅವಳ ಮೃದುವಾದ ನಗುವಿನಿಂದಾಗಿ ಅವಳಿಗೆ ಕೂಷ್ಮಾಂಡ ಎಂದು ಹೆಸರಿಸಲಾಯಿತು. ಪ್ರಕಾಶಮಾನವಾದ ದುರ್ಗೆಯ ರೂಪವಾಗಿದೆ. ಹುಲಿಯ ಮೇಲೆ ಸವಾರಿ ಮಾಡುತ್ತಾಳೆ. ಅಷ್ಟಭುಜಾಕೃತಿಯ ರೂಪದಲ್ಲಿ, ಅವಳ ತಲೆಯ ಮೇಲೆ ಚಿನ್ನದ ಕಿರೀಟವನ್ನು ಆಭರಣ ಮಾಡಲಾಗಿದೆ, ಒಂದು ಕೈಯಲ್ಲಿ ಕಮಂಡಲವನ್ನು ಮತ್ತು ಇನ್ನೊಂದು ಕೈಯಲ್ಲಿ ಒಂದು ಕಲಶವನ್ನು ಹೊಂದಿದ್ದಾಳೆ. ಅವಳು ಇನ್ನೊಂದು ಕೈಯಲ್ಲಿ ಕಮಲ, ಸುದರ್ಶನ ಚಕ್ರ, ಗದೆ, ಬಿಲ್ಲು ಮತ್ತು ಬಾಣ ಮತ್ತು ಅಕ್ಷಯಮಾಲೆಗಳಿವೆ. 
5. ಸ್ಕಂದಮಾತೆ ಸ್ಕಂದಮಾತಾ ದೇವಿ ಯಾವಾಗಲೂ ಯಶಸ್ಸಿನ ರೂಪವಾಗಿದ್ದಾಳೆ. ಛಂದೋಗಯ ಉಪನಿಷತ್ತಿನ ಮೂಲ ಸನತಕುಮಾರನ ತಾಯಿ ಭಗವತಿಯ ಹೆಸರು ಸ್ಕಂದ. ಆದ್ದರಿಂದ, ದುರ್ಗಾ ದೇವಿಯ ಐದನೇ ರೂಪವನ್ನು ಸ್ಕಂದಮಾತೆಯಾಗಿ ಪೂಜಿಸಲಾಗುತ್ತದೆ. ಆಕೆಯ ಐಹಿಕ ರೂಪದಲ್ಲಿ, ಈ ದೇವಿಯು ಸಿಂಹದ ಮೇಲೆ ಕುಳಿತಿದ್ದಾಳೆ. ದುರ್ಗಾ ದೇವಿಯ ಈ ರೂಪವು ಎರಡೂ ಕೈಗಳಲ್ಲಿ ಕಮಲವನ್ನು ಹಿಡಿದಿದೆ ಮತ್ತು ಒಂದು ಕೈಯಲ್ಲಿ ಬ್ರಹ್ಮಸ್ವರೂಪ ಸನತಕುಮಾರನನ್ನು ತನ್ನ ಮಡಿಲಲ್ಲಿ ಹಿಡಿದಿದ್ದಾಳೆ. ಜ್ಞಾನ, ವಿಜ್ಞಾನ, ಧರ್ಮ, ಕರ್ಮ ಮತ್ತು ಕೃಷಿ ಉದ್ಯಮದ ಎಲ್ಲಾ ಐದು ಅಂಶಗಳನ್ನು ಒಳಗೊಂಡ ಈ ದುರ್ಗೆಯನ್ನು ವಿದ್ಯಾವಾಹಿನಿ ದುರ್ಗಾ ಎಂದೂ ಕರೆಯುತ್ತಾರೆ. ಈ ದೇವಿಯ ಪೂಜೆಯ ಸಮಯದಲ್ಲಿ ಬಿಲ್ಲು ಮತ್ತು ಬಾಣವನ್ನು ಅರ್ಪಿಸುವುದು ಕೂಡ ಶುಭಕರವಾಗಿದೆ. 
6. ಕಾತ್ಯಾಯಿನಿ ದುರ್ಗಾ ದೇವಿಯ ಆರನೆಯ ರೂಪವನ್ನು ಕಾತ್ಯಾಯಿನಿ ಎಂದು ಕರೆಯಲಾಗುತ್ತದೆ. ಮಹರ್ಷಿ ಕಾತ್ಯಾಯನ ತೀವ್ರ ತಪಸ್ಸಿನಿಂದ ಸಂತಸಗೊಂಡ ಕಾತ್ಯಾಯಿನಿಯು ಆತನ ಆಸೆಯಂತೆ ಆತನಿಗೆ ಮಗಳಾಗಿ ಜನಿಸಿದಳು. ಆಕೆಯನ್ನು ಮೊದಲು ಮಹರ್ಷಿ ಕಾತ್ಯಾಯನರಿಂದ ಪೂಜಿಸಲಾಯಿತು, ಆದ್ದರಿಂದ ಅವಳು ಕಾತ್ಯಾಯನಿಯಾಗಿ ಪ್ರಸಿದ್ಧಳಾದಳು. ಅವಳ ಲೌಕಿಕ ರೂಪದಲ್ಲಿ, ಅವಳು ಸಿಂಹದ ಮೇಲೆ ಕುಳಿತು ಸವಾರಿಯನ್ನು ಮಾಡುತ್ತಾಳೆ. ಈಕೆಯನ್ನು ನಾಲ್ಕು ಕೈಗಳನ್ನು ಹೊಂದಿರುವ ದೇವತೆ ಎಂದು ಹೇಳಲಾಗುತ್ತದೆ. ಅವಳ ಎಡಗೈಯಲ್ಲಿ ಕಮಲ ಮತ್ತು ಆಕೆಯ ಬಲಗೈಯಲ್ಲಿ ಖಡ್ಗ, ಸ್ವಸ್ತಿಕ ಮತ್ತು ಆಶೀರ್ವಾದ ಮುದ್ರೆಯನ್ನು ಹಿಡಿದಿದ್ದಾಳೆ. 
7. ಕಾಳರಾತ್ರಿ ತನ್ನ ದೊಡ್ಡ ವಿನಾಶಕಾರಿ ಗುಣಗಳಿಂದ ಶತ್ರುಗಳನ್ನು ಮತ್ತು ದುಷ್ಟರನ್ನು ನಾಶಮಾಡುವ ದುರ್ಗಾ ದೇವಿಯ ಏಳನೇ ರೂಪವೇ ಕಾಳರಾತ್ರಿ. ಆಕೆ ವಿನಾಶಕಾರಿಯಾದ ಕಾರಣ, ಆಕೆಯನ್ನು ಕಾಳರಾತ್ರಿ ಎಂದು ಹೆಸರಿಸಲಾಯಿತು. ಆಕಾರ ಮತ್ತು ಲೌಕಿಕ ರೂಪದಲ್ಲಿ, ಇದು ಕಾಳಿಕಾ ಅವತಾರ ಅಂದರೆ ಕಪ್ಪು ಮೈಬಣ್ಣ ಮತ್ತು ಬಿಚ್ಚಿದ ಕೂದಲು, ದುರ್ಗೆಯಂತೆ ನಾಲ್ಕು ತೋಳುಗಳನ್ನು ಹೊಂದಿದ್ದು, ಅರ್ಧನಾರೀಶ್ವರ ಶಿವನ ತಾಂಡವ ಭಂಗಿಯಲ್ಲಿ ಮತ್ತು ವೇಷದಲ್ಲಿ ಕಾಣಿಸುತ್ತಾಳೆ. ಅವಳ ಕಣ್ಣುಗಳಿಂದ ಬೆಂಕಿಯು ಮಳೆಯಂತೆ ಚಿಮ್ಮುತ್ತದೆ. ಒಂದು ಕೈಯಲ್ಲಿ ಶತ್ರುಗಳ ಕುತ್ತಿಗೆಯನ್ನು ಹಿಡಿದುಕೊಂಡು ಇನ್ನೊಂದು ಕೈಯಲ್ಲಿ ಖಡ್ಗದಿಂದ ಯುದ್ಧಭೂಮಿಯಲ್ಲಿ ಅವರನ್ನು ನಾಶಮಾಡುತ್ತಾ, ಕಾಳರಾತ್ರಿ ತನ್ನ ಅಸಾಧಾರಣ ರೂಪದಲ್ಲಿ ಕಾಣುತ್ತಾಳೆ. ಆಕೆ ಕತ್ತೆಯ ಮೇಲೆ ಕುಳಿತು ಸವಾರಿ ಮಾಡುತ್ತಾಳೆ. 
8. ಮಹಾಗೌರಿ ನವರಾತ್ರಿಯ ಎಂಟನೇ ದಿನದಂದು ತಾಯಿ ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಅವಳ ಜನನದ ಸಮಯದಲ್ಲಿ ಅವಳಿಗೆ ಎಂಟು ವರ್ಷ. ಅದಕ್ಕಾಗಿಯೇ ಅವಳನ್ನು ನವರಾತ್ರಿಯ ಎಂಟನೇ ದಿನದಂದು ಪೂಜಿಸಲಾಗುತ್ತದೆ. ಇದು ಆಕೆಯ ಭಕ್ತರಿಗೆ ಅನ್ನಪೂರ್ಣ ರೂಪವಾಗಿದೆ. ಅವಳು ಸಂಪತ್ತು, ಸಮೃದ್ಧಿ, ಸಂತೋಷ ಮತ್ತು ಶಾಂತಿಯ ಪ್ರಧಾನ ದೇವತೆ. ಲೌಕಿಕ ರೂಪದಲ್ಲಿ ಅವಳ ನೋಟವು ತುಂಬಾ ಪ್ರಕಾಶಮಾನವಾಗಿದ್ದು, ಬಿಳಿ ಬಣ್ಣದ ಬಟ್ಟೆಯನ್ನು ಧರಿಸಿರುತ್ತಾಳೆ. ದೇವಿಯು ಒಂದು ಕೈಯಲ್ಲಿ ತ್ರಿಶೂಲವನ್ನು ಮತ್ತು ಇನ್ನೊಂದು ಕೈಯಲ್ಲಿ ಡಮರುವನ್ನು ಹಿಡಿದಿದ್ದಾಳೆ. ಮಹಾಗೌರಿ ದೇವಿಯು ಹಾಡು ಮತ್ತು ಸಂಗೀತವನ್ನು ಇಷ್ಟಪಡುತ್ತಾಳೆ ಮತ್ತು ಬಿಳಿ ವೃಷಭ ಅಂದರೆ ಎತ್ತಿನ ಮೇಲೆ ಸವಾರಿ ಮಾಡುತ್ತಾಳೆ. ಈ ದಿನ ಕನ್ಯೆಯರನ್ನು ಪೂಜಿಸುವ ಪದ್ಧತಿಯಿದೆ. ಕೆಲವರು ಕನ್ಯೆಯರನ್ನು ನವಮಿಯ ದಿನ ಪೂಜಿಸುತ್ತಾರೆ, ಆದರೆ ಅಷ್ಟಮಿಯ ದಿನ ಕನ್ಯೆಯರನ್ನು ಪೂಜಿಸುವುದು ಉತ್ತಮ. 9 ಜನ ಕನ್ಯೆಯರನ್ನು ಪೂಜಿಸಿದರೆ ಇನ್ನೂ ಶುಭ. ಇಲ್ಲದಿದ್ದರೆ ಇಬ್ಬರು ಕನ್ಯೆಯರಿಗೂ ಪೂಜೆಯನ್ನು ಮಾಡಬಹುದು. 
9. ಸಿದ್ಧಿದಾತ್ರಿ ಸಿದ್ಧಿ ಮತ್ತು ಮೋಕ್ಷವನ್ನು ನೀಡುವ ದುರ್ಗಾಳನ್ನು ಸಿದ್ಧಿದಾತ್ರಿ ಎಂದು ಕರೆಯಲಾಗುತ್ತದೆ. ಈ ದೇವಿಯು ವಿಷ್ಣುವಿನ ಪ್ರೀತಿಯ ಲಕ್ಷ್ಮಿಯಂತೆ ಕಮಲದ ಆಸನದ ಮೇಲೆ ಕುಳಿತಿದ್ದಾಳೆ. ಅವಳು ಕೈಯಲ್ಲಿ ಕಮಲ, ಶಂಖ, ಗದೆ, ಸುದರ್ಶನ ಚಕ್ರವನ್ನು ಹಿಡಿದಿರುತ್ತಾಳೆ. ನವರಾತ್ರಿಯ ಒಂಬತ್ತನೆ ದಿನದಂದು ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ಸಿದ್ಧಿದಾತ್ರಿ ಕೂಡ ಸರಸ್ವತಿ ದೇವಿಯ ರೂಪವಾಗಿದ್ದಾಳೆ..


ಶನಿವಾರ, ಅಕ್ಟೋಬರ್ 09, 2021

ನಮ್ಮ ನಂಬಿಕೆಗಳು 10


೧೦) ನಾವೇಕೆ ವಿಗ್ರಹಗಳನ್ನು ಪೂಜಿಸುತ್ತೇವೆ?
ಹಿಂದೂ ಧರ್ಮವು ಇತರ ಧರ್ಮಗಳಿಗಿಂತ ಹೆಚ್ಚಾಗಿ ಮೂರ್ತಿ ಪೂಜೆಯನ್ನು ಬೆಂಬಲಿಸುತ್ತದೆ. ಇದರಿಂದ ಪೂಜೆಯಲ್ಲಿ ಏಕಾಗ್ರತೆಯು ಅಧಿಕವಾಗುತ್ತದೆ ಎಂದು ಅಧ್ಯಯನಕಾರರು ಸ್ಪಷ್ಟ ಪಡಿಸಿದ್ದಾರೆ. ಮನೋವಿಜ್ಞಾನಿಗಳ ಪ್ರಕಾರ ಮನುಷ್ಯನು ತಾನು ನೋಡುವುದರ ಆಧಾರದ ಮೇಲೆ ಆಲೋಚನೆಗಳನ್ನು ಹೊಂದುತ್ತಾನಂತೆ. ಒಂದು ವೇಳೆ ನಿಮ್ಮ ಮುಂದೆ ಮೂರು ವಸ್ತುಗಳು ಇದ್ದಲ್ಲಿ, ಅದರಲ್ಲಿ ಯಾವ ವಸ್ತುವನ್ನು ನೋಡುತ್ತೀರಿ ಎಂಬುದರ ಮೇಲೆ ನಿಮ್ಮ ಭಾವನೆಗಳು ಬದಲಾಗುತ್ತವೆಯಂತೆ. ಕಾರಣವಾಗಿಯೇ ಪ್ರಾಚೀನ ಕಾಲದಲ್ಲಿ ಮೂರ್ತಿ ಪೂಜೆಯು ಆರಂಭಗೊಂಡಿತು. ಯಾವಾಗ ಜನರು ದೇವರನ್ನು ಮೂರ್ತಿಯ ರೂಪದಲ್ಲಿ ನೋಡಲು ಆರಂಭಿಸಿದರೋ, ಆಗಲೇ ಅವರ ಮನಸ್ಸನ್ನು ಏಕ ಚಿತ್ತದಿಂದ ದೇವರ ಮೇಲೆ ನೆಲೆಗೊಳಿಸಲು ಸಾಧ್ಯವಾಗುತ್ತ ಹೋಯಿತು. ಇದರಿಂದ ಅವರ ಧ್ಯಾನಕ್ಕೆ ಯಾವುದೇ ಭಂಗ ಬರುತ್ತಿರಲಿಲ್ಲ ಮತ್ತು ಅವರಲ್ಲಿ ಆಧ್ಯಾತ್ಮಿಕ ಶಕ್ತಿಯು ಹೆಚ್ಚಾಗುತ್ತ ಹೋಗುತ್ತಿತ್ತು.

ಭಾನುವಾರ, ಅಕ್ಟೋಬರ್ 03, 2021

ಪುಣ್ಯ.. / ಗುನ್ಯಾ..

ರೋಗಿಗಳಿಗೆ ರಕ್ತ ಕೊಟ್ರೆ ಪುಣ್ಯ..

ರೋಗಿಗಳಿಗೆ ರಕ್ತ ಕೊಟ್ರೆ ಪುಣ್ಯ..
( ಭಿಕ್ಷುಕರಿಗೆ ದುಡ್ಡು ಕೊಟ್ರೆ ಪುಣ್ಯ..

ಭಿಕ್ಷುಕರಿಗೆ ದುಡ್ಡು ಕೊಟ್ರೆ ಪುಣ್ಯ.. )
ಆದರೆ,
ಸೊಳ್ಳೆಗೆ ರಕ್ತ ಕೊಟ್ರೆ, ಚಿಕನ್ ಗುನ್ಯಾ.. 
(ವಾಹ್ ವಾಹ್)

1.. ಜಾಹೀರಾತು

2.ಜಾಹೀರಾತು