- ನೀವು ಇಚ್ಚಿಸಿದ್ದು ನಿಮಗೆ ಸಿಗದಿದ್ದಾಗ ಅದರ ಅಗತ್ಯವೇ ನಿಮಗಿರಲಿಲ್ಲವೆಂದು ತಿಳಿಯಿರಿ.
- ಮೌನವು ಮನಸ್ಸಿಗೆ ವಿಶ್ರಾಂತಿಯನ್ನು ಕೊಡುತ್ತದೆ. ಇದರ ಮೂಲಕ ದೇಹಕ್ಕೂ ವಿಶ್ರಾಂತಿ ಸಿಗುತ್ತದೆ. ಕೆಲವು ವೇಳೆ ಮೌನವೇ ಬೇಕಾದ ಔಷಧಿಯಾಗುತ್ತದೆ.
- ಮನಸ್ಸಿನ ಸ್ಥಿರಚಿತ್ತತೆಯಿಂದಲೇ ಗೆಲವು ಸಾಧ್ಯ.
- ಕೋಪವು ಮನುಷ್ಯನನ್ನು ಹುಚ್ಚನನ್ನಾಗಿ ಮಾಡುತ್ತದೆ.
- ನಿಮ್ಮನ್ನು ಯಾರಾದರೂ ಕೋಪದಿಂದ ಮಾತನಾಡಿಸಿದರೆ, ಉರಿಯುವ ಬೆಂಕಿಯ ಮೇಲೆ ತಂಪಾದ ಜಲವನ್ನು ಹಾಕಿದಂತೆ ಪ್ರೀತಿಯಿಂದ ಮಾತನಾಡಿ,
- ನೀವು ನೀವೇ ಆದ್ದರಿಂದ ನಿಮ್ಮ ನಿಜವಾದ ಸ್ವಭಾವವನ್ನು ತಿಳಿದುಕೊಂಡು ಸಂತೋಷವಾಗಿರಿ.
- ಯಾವುದನ್ನೂ ವಿಘ್ನವೆಂದೆಣಿಸಬೇಡ ವಿಜಯಕ್ಕೆ ಪ್ರತಿಯೊಂದು ಏರುವ ಮೆಟ್ಟಿಲೆಂದು ಪರಿಗಣಿಸಬೇಕು.
- ಮನುಷ್ಯ ತನ್ನ ಒಳ್ಳೆಯತನದಿಂದ ದೊಡ್ಡವನಾಗುತ್ತಾನೆಯೇ ಹೊರತು ಹುಟ್ಟಿನಿಂದಲ್ಲ.
- ನೀವು ಯಾರ ತಪ್ಪನ್ನೂ ತಿದ್ದಲು ಪ್ರಯತ್ನಿಸದೆ ನಿಮ್ಮಿಂದ ಯಾರಿಗೂ ಕೆಡುಕಾಗದಂತೆ ನೋಡಿಕೊಳ್ಳಿ.
- ಎಲ್ಲವನ್ನೂ ತಿಳಿದ ಜ್ಞಾನಿಯಂತೆ ಮೌನವಾಗಿರು.
- ನಿನ್ನ ಜನ ನಗುತಿರಲು ನೀನಳುತ ಬಂದೆ ನಿನ್ನ ಜನ ಅಳುತಿರಲು ನೀ ನಗುತ ಹೋಗು.
- ರೋಧಿಸಲು ನೀನೇನು ಕಳಕೊಂಡಿರುವೆ
- ಕಳಕೊಳ್ಳಲು ನೀನು ತಂದಿರುವುದಾದರೂ ಏನು, ನಾಶವಾಗಲು ನೀನು ಮಾಡಿರುವುದಾದರೂ ಏನು.
- ಆತ್ಮವಿಶ್ವಾಸವಿಲ್ಲದವನೊಡನೆ ವಿಧಿಯೂ ಸಹಕರಿಸದು.
- ಜೀವನದಲ್ಲಿ ನೀವು ಮುನ್ನಡೆಯಬೇಕಾದರೆ ನಿಮ್ಮ ಅವಶ್ಯಕತೆಗಳನ್ನೇ ಮುನ್ನಡೆಯುವಂತೆ ಮಾಡಬೇಡಿ.
- ಪರಿಶುದ್ಧತೆ, ತಾಳ್ಮೆ, ಸತತ ಪ್ರಯತ್ನ ಇವುಗಳನ್ನು ಹೊಂದಿರುವವರಿಗೆ ಯಾವುದೂ ಅಸಾಧ್ಯವಲ್ಲ.
- ಅಂಗಳದಲ್ಲಿ ಕಾಗೆ ಸದಾ ಕೂಗುತ್ತಿದ್ದರೂ ವಿವೇಕಿಗಳು ಅದನ್ನು ಪರಿಗಣಿಸದೇ ಕೋಗಿಲೆಯ ಸ್ವರವನ್ನು ಮಾತ್ರವೇ ಆಲಿಸುತ್ತಾರೆ.
- ಸಂದರ್ಭ ಬಂದಾಗ ಮಕ್ಕಳ ಮಾತನ್ನೂ ಸಹ ಜ್ಞಾನಿಯಾದವನು ಉಪಯೋಗಿಸಿ ಕೊಳ್ಳಬೇಕು.
- ಬೇರೆಯವರಿಗೆ ಶುದ್ಧ ಮಾರ್ಗವನ್ನು ತೋರಿಸುವ ಪ್ರಾಜ್ಞರು ತಾವೇ ಮಲಿನವಾದ ದಾರಿಯಲ್ಲಿ ನಡೆಯರು.
- ಸಜ್ಜನರ ವಿನೋದದ ಮಾತೂ ಶಿಲಾಲೇಖದಂತೆ, ಸಜ್ಜನರಲ್ಲದವರು ಪ್ರಮಾಣ ಮಾಡಿ ಹೇಳಿದ ಮಾತು ನೀರ ಮೇಲಣ ಬರಹದಂತೆ.
- ಮಹತ್ವಾಕಾಂಕ್ಷಿಯಾದ ಮನುಷ್ಯ ಯಾವಾಗಲೂ ಸ್ವಾರ್ಥಿಯಾಗಿರುತ್ತಾನೆ.
- ಸ್ವಾರ್ಥಿ ಎಂದೂ ಪರರ ಭಾವನೆಗೆ ಬೆಲೆ ಕೊಡುವುದಿಲ್ಲ.
- ನಮ್ಮನ್ನು ನಾವು ಅರ್ಥಮಾಡಿಕೊಂಡಾಗ, ಬೇರೆಯವರ ಸಾಮರ್ಥ್ಯವನ್ನು ಚಿಂತನೆಯನ್ನು ಗೌರವಿಸುವ ಮನೋಭಾವ ಬರುತ್ತದೆ.
- ಸೋಮಾರಿತನವೆಂಬುದು ಮನುಷ್ಯನ ಶರೀರದಲ್ಲೇ ಇರುವ ದೊಡ್ಡ ಶತ್ರು.
- ಪರಿಶ್ರಮಕ್ಕೆ ಸಮಾನವಾದ ಬಂಧುವು ಇಲ್ಲ. ಈ ಬಂಧುವನ್ನು ನಂಬಿ ಯಾರೂ ಹಾಳಾಗಿಲ್ಲ.
- ಮನುಷ್ಯ ಅತ್ಯಂತ ವಾಸ್ತವಿಕತೆಯನ್ನು ಸಹಿಸಲಾರ.
- ನಿಜ ಜೀವನ ನಾವು ತಿಳಿದಿರುವಷ್ಟು ಕಠಿಣವೂ ಅಲ್ಲ, ನಾವು ಊಹಿಸಿದಷ್ಟು ಸುಲಭವೂ ಅಲ್ಲ. ಅದು ಎರಡರ ಮಿಶ್ರಣವಾಗಿರುತ್ತದೆ.
- ಮನೆಯ ರಹಸ್ಯವನ್ನು, ಮನೋವ್ಯಥೆಯನ್ನು, ಮೋಸಹೋದುದನ್ನು ಎಂದಿಗೂ ಬಹಿರಂಗ ಮಾಡಬಾರದು.
- ಬಿಸಿಯಾದ ವರ್ತನೆಗೆ ಬಿಸಿಯಾಗಿಯೇ ಪ್ರತಿಕ್ರಿಯಿಸುವುದು-ಮೃಗದ ಗುಣ
- ಶಾಂತವಾದ ಮಾತಿಗೆ ಶಾಂತವಾಗಿಯೇ ಉತ್ತರಿಸುವುದು-ಮನುಷ್ಯಗುಣ
- ಬಿಸಿಯಾದ ಮಾತಿಗೆ ಶಾಂತವಾಗಿ ಮಾತನಾಡುವುದು ಆತ್ಮರೂಪವಾದ ದೇವಗುಣ.
- ಯಾರು ಯಾರ ಪ್ರೀತಿಗೆ ಪಾತ್ರರೋ ಅವರು ಏನನ್ನೂ ಮಾಡದೇ ಇದ್ದರೂ, ಕೇವಲ ಸಾಮೀಪ್ಯ ಮಾತ್ರದಿಂದಲೇ ದುಃಖವನ್ನು ಹೋಗಲಾಡಿಸುತ್ತಾರೆ. ಅದೇ ಪ್ರೀತಿಯಲ್ಲಿರುವ ಮಹತ್ತರವಾದ ಗುಣ.
- ಎಲ್ಲಾ ಜನರನ್ನು ಕೆಲ ಕಾಲ ವಂಚಿಸಬಹುದು ಕೆಲವರನ್ನು ಸದಾ ಕಾಲ ವಂಚಿಸಬಹುದು ಆದರೆ ಎಲ್ಲರನ್ನು ಎಲ್ಲಾ ಕಾಲದಲ್ಲಿಯೂ ವಂಚಿಸಲು ಸಾಧ್ಯವಿಲ್ಲ.
- ಪ್ರೇಮದಿಂದ ಕೂಡಿದ ಒಂದೇ ಒಂದು ಮಾತು ದುಃಖತಪ್ತವಾದ ಎಷ್ಟೋ ಹೃದಯಗಳಿಗೆ ಸಮಾಧಾನವನ್ನು ತರುತ್ತದೆ.
- ಮನಸ್ಸಿನಲ್ಲಿ ಪೂರ್ಣ ನಂಬಿಕೆಯಿದ್ದಾಗ ಜಯವು ಖಂಡಿತ ಅದಿಲ್ಲದಿದ್ದಾಗ ಅಪಜಯವೇ.
- ತನ್ನನ್ನು ತಿಳಿದವನು ತನ್ನ ಕಾಲುಗಳ ಮೇಲೆಯೇ ನಿಲ್ಲುತ್ತಾನೆ.
- ನಿನ್ನ ಆಪ್ತ ಬಾಂಧವರು ತಮ್ಮ ಮನಸ್ಸನ್ನು ಬೇರೆ. ಮಾಡಿದಾಗ ನಿನ್ನ ಭಾವನೆಗಳು ವ್ಯತ್ಯಾಸವಾಗದಂತೆ ನೋಡಿಕೋ.
- ಕಾಲು ಒದ್ದೆಯಾಗದೆ ಸಮುದ್ರವನ್ನು ದಾಟಬಲ್ಲ ಮೇಧಾವಿ ಕೂಡ ಕಣ್ಣು ಒದ್ದೆಯಾಗದೆ ಸಂಸಾರವೆಂಬ ಸಾಗರವನ್ನು ದಾಟಲಾರ.
ಈ ಸಂದೇಶ ಎಲ್ಲರಿಗೂ ಅನ್ವಹಿಸುತ್ತದೆ.
ಪ್ರತ್ಯುತ್ತರಅಳಿಸಿನಿಮ್ಮ ಉತ್ತರಗಳು ನಮಗೆ ಅಮೃತವಿದ್ದಂತೆ.
ಅಳಿಸಿ