ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಶನಿವಾರ, ಜೂನ್ 30, 2012
ಬುಧವಾರ, ಜೂನ್ 20, 2012
ಮಾತು
- ನೀವು ಇಚ್ಚಿಸಿದ್ದು ನಿಮಗೆ ಸಿಗದಿದ್ದಾಗ ಅದರ ಅಗತ್ಯವೇ ನಿಮಗಿರಲಿಲ್ಲವೆಂದು ತಿಳಿಯಿರಿ.
- ಮೌನವು ಮನಸ್ಸಿಗೆ ವಿಶ್ರಾಂತಿಯನ್ನು ಕೊಡುತ್ತದೆ. ಇದರ ಮೂಲಕ ದೇಹಕ್ಕೂ ವಿಶ್ರಾಂತಿ ಸಿಗುತ್ತದೆ. ಕೆಲವು ವೇಳೆ ಮೌನವೇ ಬೇಕಾದ ಔಷಧಿಯಾಗುತ್ತದೆ.
- ಮನಸ್ಸಿನ ಸ್ಥಿರಚಿತ್ತತೆಯಿಂದಲೇ ಗೆಲವು ಸಾಧ್ಯ.
- ಕೋಪವು ಮನುಷ್ಯನನ್ನು ಹುಚ್ಚನನ್ನಾಗಿ ಮಾಡುತ್ತದೆ.
- ನಿಮ್ಮನ್ನು ಯಾರಾದರೂ ಕೋಪದಿಂದ ಮಾತನಾಡಿಸಿದರೆ, ಉರಿಯುವ ಬೆಂಕಿಯ ಮೇಲೆ ತಂಪಾದ ಜಲವನ್ನು ಹಾಕಿದಂತೆ ಪ್ರೀತಿಯಿಂದ ಮಾತನಾಡಿ,
- ನೀವು ನೀವೇ ಆದ್ದರಿಂದ ನಿಮ್ಮ ನಿಜವಾದ ಸ್ವಭಾವವನ್ನು ತಿಳಿದುಕೊಂಡು ಸಂತೋಷವಾಗಿರಿ.
- ಯಾವುದನ್ನೂ ವಿಘ್ನವೆಂದೆಣಿಸಬೇಡ ವಿಜಯಕ್ಕೆ ಪ್ರತಿಯೊಂದು ಏರುವ ಮೆಟ್ಟಿಲೆಂದು ಪರಿಗಣಿಸಬೇಕು.
- ಮನುಷ್ಯ ತನ್ನ ಒಳ್ಳೆಯತನದಿಂದ ದೊಡ್ಡವನಾಗುತ್ತಾನೆಯೇ ಹೊರತು ಹುಟ್ಟಿನಿಂದಲ್ಲ.
- ನೀವು ಯಾರ ತಪ್ಪನ್ನೂ ತಿದ್ದಲು ಪ್ರಯತ್ನಿಸದೆ ನಿಮ್ಮಿಂದ ಯಾರಿಗೂ ಕೆಡುಕಾಗದಂತೆ ನೋಡಿಕೊಳ್ಳಿ.
- ಎಲ್ಲವನ್ನೂ ತಿಳಿದ ಜ್ಞಾನಿಯಂತೆ ಮೌನವಾಗಿರು.
- ನಿನ್ನ ಜನ ನಗುತಿರಲು ನೀನಳುತ ಬಂದೆ ನಿನ್ನ ಜನ ಅಳುತಿರಲು ನೀ ನಗುತ ಹೋಗು.
- ರೋಧಿಸಲು ನೀನೇನು ಕಳಕೊಂಡಿರುವೆ
- ಕಳಕೊಳ್ಳಲು ನೀನು ತಂದಿರುವುದಾದರೂ ಏನು, ನಾಶವಾಗಲು ನೀನು ಮಾಡಿರುವುದಾದರೂ ಏನು.
- ಆತ್ಮವಿಶ್ವಾಸವಿಲ್ಲದವನೊಡನೆ ವಿಧಿಯೂ ಸಹಕರಿಸದು.
- ಜೀವನದಲ್ಲಿ ನೀವು ಮುನ್ನಡೆಯಬೇಕಾದರೆ ನಿಮ್ಮ ಅವಶ್ಯಕತೆಗಳನ್ನೇ ಮುನ್ನಡೆಯುವಂತೆ ಮಾಡಬೇಡಿ.
- ಪರಿಶುದ್ಧತೆ, ತಾಳ್ಮೆ, ಸತತ ಪ್ರಯತ್ನ ಇವುಗಳನ್ನು ಹೊಂದಿರುವವರಿಗೆ ಯಾವುದೂ ಅಸಾಧ್ಯವಲ್ಲ.
- ಅಂಗಳದಲ್ಲಿ ಕಾಗೆ ಸದಾ ಕೂಗುತ್ತಿದ್ದರೂ ವಿವೇಕಿಗಳು ಅದನ್ನು ಪರಿಗಣಿಸದೇ ಕೋಗಿಲೆಯ ಸ್ವರವನ್ನು ಮಾತ್ರವೇ ಆಲಿಸುತ್ತಾರೆ.
- ಸಂದರ್ಭ ಬಂದಾಗ ಮಕ್ಕಳ ಮಾತನ್ನೂ ಸಹ ಜ್ಞಾನಿಯಾದವನು ಉಪಯೋಗಿಸಿ ಕೊಳ್ಳಬೇಕು.
- ಬೇರೆಯವರಿಗೆ ಶುದ್ಧ ಮಾರ್ಗವನ್ನು ತೋರಿಸುವ ಪ್ರಾಜ್ಞರು ತಾವೇ ಮಲಿನವಾದ ದಾರಿಯಲ್ಲಿ ನಡೆಯರು.
- ಸಜ್ಜನರ ವಿನೋದದ ಮಾತೂ ಶಿಲಾಲೇಖದಂತೆ, ಸಜ್ಜನರಲ್ಲದವರು ಪ್ರಮಾಣ ಮಾಡಿ ಹೇಳಿದ ಮಾತು ನೀರ ಮೇಲಣ ಬರಹದಂತೆ.
- ಮಹತ್ವಾಕಾಂಕ್ಷಿಯಾದ ಮನುಷ್ಯ ಯಾವಾಗಲೂ ಸ್ವಾರ್ಥಿಯಾಗಿರುತ್ತಾನೆ.
- ಸ್ವಾರ್ಥಿ ಎಂದೂ ಪರರ ಭಾವನೆಗೆ ಬೆಲೆ ಕೊಡುವುದಿಲ್ಲ.
- ನಮ್ಮನ್ನು ನಾವು ಅರ್ಥಮಾಡಿಕೊಂಡಾಗ, ಬೇರೆಯವರ ಸಾಮರ್ಥ್ಯವನ್ನು ಚಿಂತನೆಯನ್ನು ಗೌರವಿಸುವ ಮನೋಭಾವ ಬರುತ್ತದೆ.
- ಸೋಮಾರಿತನವೆಂಬುದು ಮನುಷ್ಯನ ಶರೀರದಲ್ಲೇ ಇರುವ ದೊಡ್ಡ ಶತ್ರು.
- ಪರಿಶ್ರಮಕ್ಕೆ ಸಮಾನವಾದ ಬಂಧುವು ಇಲ್ಲ. ಈ ಬಂಧುವನ್ನು ನಂಬಿ ಯಾರೂ ಹಾಳಾಗಿಲ್ಲ.
- ಮನುಷ್ಯ ಅತ್ಯಂತ ವಾಸ್ತವಿಕತೆಯನ್ನು ಸಹಿಸಲಾರ.
- ನಿಜ ಜೀವನ ನಾವು ತಿಳಿದಿರುವಷ್ಟು ಕಠಿಣವೂ ಅಲ್ಲ, ನಾವು ಊಹಿಸಿದಷ್ಟು ಸುಲಭವೂ ಅಲ್ಲ. ಅದು ಎರಡರ ಮಿಶ್ರಣವಾಗಿರುತ್ತದೆ.
- ಮನೆಯ ರಹಸ್ಯವನ್ನು, ಮನೋವ್ಯಥೆಯನ್ನು, ಮೋಸಹೋದುದನ್ನು ಎಂದಿಗೂ ಬಹಿರಂಗ ಮಾಡಬಾರದು.
- ಬಿಸಿಯಾದ ವರ್ತನೆಗೆ ಬಿಸಿಯಾಗಿಯೇ ಪ್ರತಿಕ್ರಿಯಿಸುವುದು-ಮೃಗದ ಗುಣ
- ಶಾಂತವಾದ ಮಾತಿಗೆ ಶಾಂತವಾಗಿಯೇ ಉತ್ತರಿಸುವುದು-ಮನುಷ್ಯಗುಣ
- ಬಿಸಿಯಾದ ಮಾತಿಗೆ ಶಾಂತವಾಗಿ ಮಾತನಾಡುವುದು ಆತ್ಮರೂಪವಾದ ದೇವಗುಣ.
- ಯಾರು ಯಾರ ಪ್ರೀತಿಗೆ ಪಾತ್ರರೋ ಅವರು ಏನನ್ನೂ ಮಾಡದೇ ಇದ್ದರೂ, ಕೇವಲ ಸಾಮೀಪ್ಯ ಮಾತ್ರದಿಂದಲೇ ದುಃಖವನ್ನು ಹೋಗಲಾಡಿಸುತ್ತಾರೆ. ಅದೇ ಪ್ರೀತಿಯಲ್ಲಿರುವ ಮಹತ್ತರವಾದ ಗುಣ.
- ಎಲ್ಲಾ ಜನರನ್ನು ಕೆಲ ಕಾಲ ವಂಚಿಸಬಹುದು ಕೆಲವರನ್ನು ಸದಾ ಕಾಲ ವಂಚಿಸಬಹುದು ಆದರೆ ಎಲ್ಲರನ್ನು ಎಲ್ಲಾ ಕಾಲದಲ್ಲಿಯೂ ವಂಚಿಸಲು ಸಾಧ್ಯವಿಲ್ಲ.
- ಪ್ರೇಮದಿಂದ ಕೂಡಿದ ಒಂದೇ ಒಂದು ಮಾತು ದುಃಖತಪ್ತವಾದ ಎಷ್ಟೋ ಹೃದಯಗಳಿಗೆ ಸಮಾಧಾನವನ್ನು ತರುತ್ತದೆ.
- ಮನಸ್ಸಿನಲ್ಲಿ ಪೂರ್ಣ ನಂಬಿಕೆಯಿದ್ದಾಗ ಜಯವು ಖಂಡಿತ ಅದಿಲ್ಲದಿದ್ದಾಗ ಅಪಜಯವೇ.
- ತನ್ನನ್ನು ತಿಳಿದವನು ತನ್ನ ಕಾಲುಗಳ ಮೇಲೆಯೇ ನಿಲ್ಲುತ್ತಾನೆ.
- ನಿನ್ನ ಆಪ್ತ ಬಾಂಧವರು ತಮ್ಮ ಮನಸ್ಸನ್ನು ಬೇರೆ. ಮಾಡಿದಾಗ ನಿನ್ನ ಭಾವನೆಗಳು ವ್ಯತ್ಯಾಸವಾಗದಂತೆ ನೋಡಿಕೋ.
- ಕಾಲು ಒದ್ದೆಯಾಗದೆ ಸಮುದ್ರವನ್ನು ದಾಟಬಲ್ಲ ಮೇಧಾವಿ ಕೂಡ ಕಣ್ಣು ಒದ್ದೆಯಾಗದೆ ಸಂಸಾರವೆಂಬ ಸಾಗರವನ್ನು ದಾಟಲಾರ.
ಭಾನುವಾರ, ಜೂನ್ 10, 2012
ಕನ್ನಡ ಚಿತ್ರಗಳು
ಪ್ರತಿ ತಿಂಗಳು 13 ನೇ ತಾರೀಕಿನಂದು ಹತ್ತು ವರ್ಷಗಳ ಕನ್ನಡ ಚಿತ್ರಗಳ ಸಂಪೂರ್ಣ ಮಾಹಿತಿ ಪಟ್ಟಿ (ಜುಲೈ 2014 ರಿಂದ)
1934 ರಿಂದ 1940 -- ಜುಲೈ 13,2014
1941 ರಿಂದ 1950 -- ಅಗಸ್ಟ 13,2014
1951 ರಿಂದ 1960 -- ಸೆಪ್ಟೆಂಬರ್ 13,2014
1961 ರಿಂದ 1970 --ಅಕ್ಟೋಬರ್ 13,20..
1971 ರಿಂದ 1980 --ನವೆಂಬರ್ 13,20..
1981 ರಿಂದ 1990 --ಡಿಸೆಂಬರ್ 13,20..
1991 ರಿಂದ 2000 -- ಜನೇವರಿ 13,20..
2001 ರಿಂದ 2010 --ಪೆಬ್ರುವರಿ 13,20..
2011 ರಿಂದ 2020 --ಮಾರ್ಚ 13,20..
1934 ರಿಂದ 1940 -- ಜುಲೈ 13,2014
1941 ರಿಂದ 1950 -- ಅಗಸ್ಟ 13,2014
1951 ರಿಂದ 1960 -- ಸೆಪ್ಟೆಂಬರ್ 13,2014
1961 ರಿಂದ 1970 --
1971 ರಿಂದ 1980 --
1981 ರಿಂದ 1990 --
1991 ರಿಂದ 2000 --
2001 ರಿಂದ 2010 --
2011 ರಿಂದ 2020 --
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)
1.. ಜಾಹೀರಾತು
-
ಇದುವರೆಗೆ ಸಂಗ್ರಹವಾದ ಶರಣ ಶರಣೆಯರ ಹೆಸರುಗಳು ಕೃಪೆ ಕಲ್ಯಾಣ ಕಿರಣ ಸೆಪ್ಟೆಂಬರ್ ೨೦೦೮ 626 ಹೆಸರುಗಳು
-
ಕೆಂಪು '' ಕುಂಕುಮ '' ವಿರುವುದು 'ಹಣೆಗಾಗಿ' ಹಸಿರು '' ಗಾಜಿನ ಬಳೆ '' ಗಳು 'ಕೈಗಳಿಗಾಗಿ' ಹೊಳೆವ ...
-
ಅಂಕಿತ ನಾಮ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ಕಾಲ: 1160 ದೊರಕಿರುವ ವಚನಗಳು: 366 (ಆಧಾರ: ಸಮಗ್ರ ವಚನ ಸಂಪುಟ) ತಂದೆ/ತಾಯಿ: ಹುಟ್ಟಿದ ಸ್ಥಳ: ಪರಿಚಯ: ಕಾಲ ಸು. 1160...
-
1. ಆದಿ ಪರ್ವ : ಪರಿಚಯ , ವಿಶ್ವ ಸೃಷ್ಟಿ ಯ ವಿವರ ಸೃಷ್ಟಿ ಮತ್ತು ಮಹಾಭಾರತ , ಹಿನ್ನೆಲೆ , ಪಾಂಡವ ಮತ್ತು ಕೌರವರ ...






