ನಮ್ಮ ನಿತ್ಯದ ಬದುಕಿನಲ್ಲಿ ಕನ್ನಡವನ್ನು ಬಳಸುತ್ತಿದ್ದರೆ, ಕನ್ನಡ ತಾನಾಗಿಯೇ ಉಳಿಯುತ್ತದೆ ಹಾಗೆಯೇ ಬೆಳೆಯುತ್ತದೆ. ಜೈ ಕನ್ನಡಾಂಬೆ
ತಾಣದ ಸಂದೇಶ
ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ಮಾಡಿರಿ📶
ಬುಧವಾರ, ಜನವರಿ 18, 2017
ಶನಿವಾರ, ಜನವರಿ 14, 2017
ಹರಿಹರ
*ಟಿ.ಎಂ.ಸತೀಶ್
ಬೆಂಗಳೂರಿಗೆ 227 ಕಿಲೋ ಮೀಟರ್
ದೂರದಲ್ಲಿರುವ ಈ ಪಟ್ಟಣದಲ್ಲಿ
1223ರಲ್ಲಿ ನಿರ್ಮಿಸಿದರೆನ್ನಲಾದ ಹೊಯ್ಸಳ ಶೈಲಿಯ
ಅತ್ಯಂತ ಪ್ರಾಚೀನವಾದ ಹರಿಹರೇಶ್ವರ ಅಥವಾ ಶಂಕರನಾರಾಯಣ ದೇವಾಲಯವಿದೆ. ಈ ದೇವಾಲಯ ಸಹ
ಮಿಕ್ಕೆಲ್ಲ ಹೊಯ್ಸಳ ದೇವಾಲಯಗಳಂತೆಯೇ ಪ್ರವೇಶದ್ವಾರ, ಮುಖಮಂಟಪ, ಗರುಡಗಂಬ,
ಸುಕನಾಸಿ, ಭುವನೇಶ್ವರಿ, ಜಾಲಂದ್ರಗಳನ್ನು ಒಳಗೊಂಡಿದೆ.
ಗರ್ಭಗುಡಿಯಲ್ಲಿ ಹರಿಹರರ ಸುಂದರ
ಮೂರ್ತಿಯಿದೆ.
ಅರ್ಧ ಹರನ ರೂಪ, ಇನ್ನರ್ಧ ಹರಿಯ ರೂಪವಿರುವ ಈ ಸುಂದರ ಮೂರ್ತಿಯ ನಾಲ್ಕು ಕೈಗಳ ಪೈಕಿ
ಎರಡರಲ್ಲಿ ತ್ರಿಶೂಲ ಹಾಗೂ ಚಕ್ರವಿದೆ.
ಇನ್ನೆರೆಡು ಕೈಗಳ ಪೈಕಿ ಒಂದರಲ್ಲಿ ಶಂಖು ಹಾಗೂ ಅಭಯ
ಮುದ್ರೆಯಿದೆ. ದೇವಾಲಯದ ಭುವನೇಶ್ವರಿಗಳಲ್ಲಿನ ಕಲಾಶ್ರೀಮಂತಿಕೆ ಮನಸೆಳೆಯುತ್ತದೆ.
ಗರ್ಭಗೃಹದ ಮುಂದಿನ ಹಜಾರದಲ್ಲಿರುವ ನುಣುಪಾದ ಕಂಬಗಳು ಮನಮೋಹಕವಾಗಿವೆ.
ದೇವಾಲಯದ ಭಿತ್ತಿಗಳ ಪಟ್ಟಿಕೆಗಳಲ್ಲಿ ಸೂಕ್ಷ್ಮ ಕಲಾಕೆತ್ತನೆಯಿದೆ.
ದೇವಾಲಯ ಗೋಪುರಗಳ ಸಾಲು, ನೃತ್ಯಭಂಗಿಯಲ್ಲಿರುವ ಮದನಿಕೆಯರು, ಹೂಬಳ್ಳಿಗಳಿವೆ.
ದೇವಾಲಯದ ಒಳಗೆ ನುಣುಪಾದ ಕಂಬಗಳಿವೆ. ಇಲ್ಲಿ ಹರಿಹರ ರೂಪದಲ್ಲಿ ಶಂಕರನಾರಾಣರು ಬಂದು
ನೆಲೆಸಿದ್ದೇಕೆ ಎಂಬ ಬಗ್ಗೆ ಸ್ಥಳಪುರಾಣ ಹೀಗೆ ಸಾರುತ್ತದೆ.
ತುಂಗಭದ್ರಾ ನದಿ ದಂಡೆಯ
ಮೇಲಿರುವ ಈ ಊರಿನಲ್ಲಿ ಹಿಂದೆ ಇಲ್ಲಿ ಗುಹಾಸುರನೆಂಬ
ರಾಕ್ಷಸನಿದ್ದ. ಆತ ತನ್ನದೇ ಆದ ಸಾಮ್ರಾಜ್ಯ ಸ್ಥಾಪಿಸಿ ಈ ಪಟ್ಟಣವನ್ನು ತನ್ನ
ರಾಜಧಾನಿಯಾಗಿ ಮಾಡಿಕೊಂಡಿದ್ದ. ಗುಹಾಸುರ ಬ್ರಹ್ಮನನ್ನು ಕುರಿತು ದೀರ್ಘ
ತಪವನ್ನಾಚರಿಸಿ ತನಗೆ ಸಾವೇ ಬಾರದಂತೆ ವರ ನೀಡೆಂದು ಬೇಡಿದ. ನರರಿಗೆ ಅಮರತ್ವವು
ಸಲ್ಲ. ಬೇರೇನಾದರೂ ವರ ಕೇಳಿಕೋ ಎಂದಾಗ, ಗುಹಾಸುರ ತನಗೆ ಪ್ರತ್ಯೇಕವಾಗಿ
ಹರಿಯಿಂದಲಾಗಲೀ,
ಹರನಿಂದಲಾಗಲೀ ಸಾವು ಬಾರದಂತೆ ವರ ನೀಡೆಂದ. ಬ್ರಹ್ಮ ತಥಾಸ್ತು
ಎಂದ.
ಇಲ್ಲಿರುವ ದೇವಾಲಯದಲ್ಲಿ ಅನೇಕ
ಶಾಸನಗಳೂ ದೊರೆತಿವೆ. ಈ ಪುಣ್ಯಕ್ಷೇತ್ರದಲ್ಲಿರುವ ದೇವಾಲಯಕ್ಕೆ ಚಾಳುಕ್ಯರು,
ಹೊಯ್ಸಳರು, ವಿಜಯನಗರದ ರಾಜರು, ಸೇವುಣರು ಭಕ್ತಿಯಿಂದ ನಡೆದುಕೊಂಡು ಧರ್ಮ
ದತ್ತಿಗಳನ್ನು ಬಿಟ್ಟರೆಂದು ಶಾಸನಗಳು ಸಾರುತ್ತವೆ.
ಶಿವ -ವಿಷ್ಣುವಿನ ನಡುವೆ
ಯಾವುದೇ ಭೇದವಿಲ್ಲ. ಶಂಕರ ನಾರಾಯಣರಿಬ್ಬರೂ ಒಬ್ಬರೇ ಎಂದು ಸಾರುತ್ತಿದೆ.
ಸಂಪರ್ಕ: ನಿರ್ದೇಶಕರು,
ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,
ರೇಸ್‌ಕೋರ್ಸ್ ರಸ್ತೆ, ಬೆಂಗಳೂರು.
ದೂರವಾಣಿ :080-22352901 /22352909 /22352903
Email : kstdc@vsnl.in
ಮಂಗಳವಾರ, ಜನವರಿ 10, 2017
ನುಡಿಮುತ್ತು 42
- ಆಧ್ಯಾತ್ಮಿಕ ಮತ್ತು ಧಾರ್ಮಿಕ ಪ್ರಗತಿಯ ಮೊದಲ ಗುರುತು ಸದಾ ಹಸನ್ಮುಖಿಯಾಗಿರುವುದು - ಸ್ವಾಮಿ ವಿವೇಕಾನಂದ
- ಈ ಜಗತ್ತೆನ್ನುವುದು ನಮ್ಮನ್ನು ನಾವು ಗಟ್ಟಿಗೊಳಸಲೆಂದೇ ಇರುವ ವ್ಯಾಯಾಮಶಾಲೆ. - ಸ್ವಾಮಿ ವಿವೇಕಾನಂದ
- ಜಗತ್ತಿನ ಪರಮೋಚ್ಚ ಧರ್ಮವೆಂದರೆ ನಮ್ಮ ಮೂಲಸ್ವರೂಪದಲ್ಲಿ, ಅಂತಃಸ್ಸತ್ವದಲ್ಲಿ ನಂಬಿಕೆಯಿಡುವುದು. - ಸ್ವಾಮಿ ವಿವೇಕಾನಂದ
- ಪ್ರತಿಯೊಬ್ಬ ಮಾನವನಲ್ಲೂ ಸುಪ್ತವಾಗಿರುವ ದೈವೀ ಶಕ್ತಿಯನ್ನು ಪ್ರಕಟಗೊಳಿಸಿ, ಪ್ರಕಾಶಿಸುವಂತೆ ಮಾಡುವುದೇ ನಿಜವಾದ ಧರ್ಮ - ಸ್ವಾಮಿ ವಿವೇಕಾನಂದ
- ವಿದ್ಯೆ ಗುರುಗಳ ಗುರು - ಭ್ರತೃ ಹರಿ.
- ವಿದ್ಯೆಯಿಂದಲೇ ಮನುಷ್ಯನಿಗೆ ಸುಖ, ಭೋಗ, ಧನ, ಕೀರ್ತಿ ಕೈಗೂಡುತ್ತದೆ - ನುಡಿಮುತ್ತುಗಳು.
- ಶಿಕ್ಷಣವೆಂದರೆ, ಮನಸ್ಸು, ದೇಹ, ಬುದ್ಧಿಗಳೊಂದಿಗೆ ದೊರೆಯುವ ಸಂಸ್ಕಾರ - ಹರ್ಡೀಕರ‍್ ಮಂಜಪ್ಪ.
- ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ - ವಿವೇಕಾನಂದ.
- ವಿದ್ಯಾಭ್ಯಾಸದಿಂದ ಪ್ರಭುತ್ವ ಬೆಳೆಯದು - ಜಾನ್ ಡ್ಯೂಯಿ.
ಕೃಪೆ : ಮಾ.ಕೃ.ಮಂಜು
ಸೋಮವಾರ, ಜನವರಿ 09, 2017
ತಂದೆ ಸ್ಥಾನದಲ್ಲಿ ಮನುಷ್ಯರನ್ನೇ ಮೀರಿಸುವ ಪ್ರಾಣಿಗಳು 9 (Animals can Beat Man-9)
ಜಕಾನ ಹಕ್ಕಿ
ಗಂಡು ಜಾಕನ ಹಕ್ಕಿಯ ನಿಷ್ಠೆಯನ್ನು ನೀವು ಎಲ್ಲರೂ ಮೆಚ್ಚಲೇ ಬೇಕು. ಯಾಕಂದರೆ ಒಮ್ಮೆ ಹೆಣ್ಣು ಹಕ್ಕಿ ಒಮ್ಮೆ ಮೊಟ್ಟೆಯಿಟ್ಟ ಮೇಲೆ ಗಂಡನ್ನು ತೊರೆದು ಬೇರೆ ಗಂಡಿನ ಸಂಗವನ್ನು ಬಯಸುತ್ತದೆ. ಆದರೆ ಗಂಡು ಅ ಮೊಟ್ಟೆಗಳಿಗಾಗಿ ಗೊಡನ್ನು ಕಟ್ಟಿ, ಮರಿ ಮಾಡಿ ಸಾಕಿ ಸಲಹುತ್ತದೆ. ಇದಲ್ಲದೆ ಬೇರೆ ಗಂಡು ಹಕ್ಕಿಯ ಸಂಗ ಮಾಡಿದ ಅದೇ ಹೆಣ್ಣು ಹಕ್ಕಿ ಮೊಟ್ಟೆ ಇಟ್ಟರೆ ಅವಕ್ಕೂ ಸಹ ಆಶ್ರಯ ನೀಡುತ್ತದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)


