fly

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಆಗಸ್ಟ್ 29, 2024

ಅವಲಕ್ಕಿ ಪವಲಕ್ಕಿ... ಆಟದ ಮಹತ್ವ 1

     ಪ್ರತಿ ವರ್ಷ ಆಗಸ್ಟ್ 29 ರಂದು , ಭಾರತವು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸುತ್ತದೆ, ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವನ್ನು ಸ್ಮರಿಸುತ್ತದೆ, ಇದು ಇತಿಹಾಸದಲ್ಲಿ ಅತ್ಯುತ್ತಮವಾದ ಫೀಲ್ಡ್ ಹಾಕಿ ಆಟಗಾರ ಎಂದು ಪರಿಗಣಿಸಲಾಗಿದೆ.
ನಾವೂ ಚಿಕ್ಕವರಿದ್ದಾಗ,
ಅವಲಕ್ಕಿ ಪವಲಕ್ಕಿ
ಕಾಂಚಣ ಮಿಣ ಮಿಣ, 
ಡಾಮ್ ಡೂಮ್,
ಟಸ್ ಪುಸ್,
ಕೊಯ್ ಕೊಟಾರ್ ಅಂತಿದ್ವಿ.

ಹುಚ್ಚರ ಹಾಗೇ ಏನೇನೋ ಆಟ ಎಂದು ನಾನು ಹೇಳಿದಾಗ, ಅದಕ್ಕೆ ನನ್ನ ಅಮ್ಮ ಹೇಳಿದರು ಹುಚ್ಚಪ್ಪ, ಅದರ ಅರ್ಥ ಹೇಳುತ್ತೇನು ಕೇಳು. 

ಈ ಹಾಡು ಭೂಮಿಯ ಮೇಲೆ ಮನುಷ್ಯನ ಜೀವನದ ಘಟ್ಟಗಳನ್ನು ತಿಳಿಸುತ್ತದೆ.

ಅವಲಕ್ಕಿ – ಮನುಷ್ಯ ಬಾಲ್ಯದಲ್ಲಿ ಅವಲಕ್ಕಿ ತಿಂತಾನೆ‌.

ಪವಲಕ್ಕಿ – ದೊಡ್ಡವನಾದ ಮೇಲೆ ಪಾವಕ್ಕಿ ಅನ್ನ ತಿಂತಾನೆ.

ಕಾಂಚನ – ಯೌವನದಲ್ಲಿ ಕೆಲಸಕ್ಕೆ ಸೇರಿದ ಮೇಲೆ ದುಡ್ಡು ಕೈಯಲ್ಲಿ ಓಡಾಡುತ್ತದೆ.

ಮಿಣ ಮಿಣ – ಕೆಲಸ ದುಡ್ಡು ಎಲ್ಲ ಇರುವಾಗ ಅವನ ಜೀವನದಲ್ಲಿ ಎಲ್ಲ ಮಿಣ ಮಿಣ ಎಂದು ಹೊಳೆಯುತ್ತಿರುತ್ತದೆ.

ಡಾಮ್ ಡೂಮ್ – ಆಮೇಲೆ ಧಾಮ್ ಧೂಮ್ ಎಂದು ಅವನ ಮದುವೆ ಆಗುತ್ತದೆ.

ಟಸ್ ಪುಸ್ – ಮದುವೆಯಾಗಿ ಮಕ್ಕಳಾದ ನಂತರ ವ್ಯಕ್ತಿಯ ಜೀವನದಲ್ಲಿ ಎಲ್ಲಾ ಟಸ್ ಪುಸ್, ಏಕೆಂದರೆ ಮಕ್ಕಳು ಹೇಳೋದನ್ನೇ ದೊಡ್ಡವರು ಕೇಳಬೇಕು.

ಕೊಯ್ ಕೊಟಾರ್ – ಕೊನೆಗೆ ವ್ಯಕ್ತಿಯ ಮರಣ. 

       ಹೇಗಿದೆ ? “ಅವರು ಮುಗಿಸಿದಾಗ ನನ್ನ ತೆರೆದ ಬಾಯಿ ಹಾಗೆಯೇ ಇತ್ತು.
ಅಮ್ಮ ಮಾತು ಮುಂದುವರಿಸಿದರು.”

"ಅವಲಕ್ಕಿ, ಅಪಮಾನ ಮಾಡಬಾರದು ಹಂಚಿ ತಿನ್ನಬೇಕು. ಸುಧಾಮ ಗುರುಕುಲದಲ್ಲಿದ್ದಾಗ, ಒಬ್ಬನೇ ಕೂತು ಎಲ್ಲಾ ಅವಲಕ್ಕಿ ತಿಂದುಬಿಟ್ಟಿದ್ದಕ್ಕೇ ಆ ಪರಿ ದಾರಿದ್ರ್ಯ ಕಾಡಿತಂತೆ. ಮುಂದೆ ಕೃಷ್ಣನಿಗೆ ಆ ಅವಲಕ್ಕಿಯ ಋಣವನ್ನು ತೀರಿಸಿದಾಗ ಆ ದೋಷ ಪರಿಹಾರವಾಯಿತಂತೆ.” 

ಒಂದು ಸಣ್ಣ ಆಟದಲ್ಲಿ ಎಷ್ಟು ದೊಡ್ಡ ತತ್ವ ಅಡಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು