ಜನನ ಮತ್ತು ಬಾಲ್ಯ
ಮಾಗಡಿ ತಾಲೂಕಿನ
ವೀರಾಪುರದ ಶ್ರೀಯುತ ಹೊನ್ನಪ್ಪ ಮತ್ತು ತಾಯಿ ಗಂಗಮ್ಮನವರಿಗೆ
ಎಪ್ರಿಲ್ ೧,
೧೯೦೮ರಲ್ಲಿ ಶಿವಣ್ಣನವರಾಗಿ ಜನಿಸಿ, ೧೯೧೩ರಲ್ಲಿ ಪ್ರಾಥಮಿಕ ಮತ್ತು ೧೯೨೧ರಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸವನ್ನು
ನಾಗವಲ್ಲಿಯಲ್ಲಿ
ಮುಗಿಸಿ ೧೯೨೨ರಲ್ಲಿ ತುಮಕೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕಲಿತು ೧೯೨೬ರಲ್ಲಿ
ಮೆಟ್ರಿಕ್ಯುಲೇಷನ್ ಗಳಿಸಿದರು. ೧೯೨೭ರಲ್ಲಿ ಆಗಿನ ಸಿದ್ದಗಂಗಾ ಮಠಾಧಿಪತಿಗಳಾದ ಶ್ರೀ
ಶ್ರೀ ಶ್ರೀ
ಉದ್ದಾನ ಶಿವಯೋಗಿಗಳವರೊಡನಾಟ ಆಯಿತು. ಇದೇ ವರ್ಷ ಎಂಟ್ರೆನ್ಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಬೆಂಗಳೂರಿನ
ಸೆಂಟ್ರಲ್ ಕಾಲೇಜಿಗೆ ಸೇರಿದರು.
ಶ್ರೀಗಳ ದಿನಚರಿ
ಪ್ರರಿದಿನವೂ ಶ್ರೀಗಳು ಬೆಳಗಿನ ನಾಲ್ಕುಗಂಟೆಗೆ ಎದ್ದು ಸ್ನಾನಮಾಡಿ, ಪೂಜಾಕೋಣೆಯಲ್ಲಿ
ಒಂದು ತಾಸಿಗೂ ಹೆಚ್ಚು ಸಮಯ ಧ್ಯಾನದಲ್ಲಿ ತಲ್ಲೀನರಾಗುತ್ತಾರೆ. ನಂತರ ಇಷ್ಟಲಿಂಗ ಪೂಜೆ.
ದೂರದಿಂದ ಸ್ವಾಮಿಗಳ ದರ್ಶನಕಾಗಿ ಬರುವ ಭಕ್ತರಿಗೆ
ತ್ರಿಪುಂಢ್ರ ಭಸ್ಮವನ್ನು
ಕೊಟ್ಟು ತಾವೂ ಧರಿಸಿ, ಪೂಜೆಯನ್ನು ಮುಗಿಸುತ್ತಾರೆ. ನಂತರ ಆಹಾರ ಸೇವನೆ, ಮುಂಜಾನೆ
ಆರೂವರೆಗಂಟೆಗೆ. ಒಂದು ಅಕ್ಕಿ-ಇಡ್ಲಿ, ಸ್ವಲ್ಪ ಹೆಸರುಬೇಳೆ-ತೊವ್ವೆ, 'ಸಿಹಿ' ಹಾಗೂ
'ಖಾರ ಚಟ್ನಿ' ಸೇವನೆ. ಎರಡು ತುಂಡು ಸೇಬು. ಇದರ ಬಳಿಕ, 'ಬೇವಿನ-ಚಕ್ಕೆ ಕಷಾಯ'
ಸೇವನೆಯಾಗುತ್ತದೆ.
ಪ್ರಾರ್ಥನೆ
ಮಕ್ಕಳ ಸಾಮೂಹಿಕ ಪ್ರಾರ್ಥನೆಯಲ್ಲಿ ಅವರು ಪಾಲ್ಹೊಳ್ಳುತ್ತಾರೆ. ಪ್ರಾರ್ಥನೆಯ ನಂತರ,
ಕಚೇರಿಗೆ ಧಾವಿಸಿ ಅಲ್ಲಿ,ಪತ್ರಿಕೆಗಳ ವಾಚನವಾಗುತ್ತದೆ. ಅಲ್ಲಿಗೆ ಬಂದ ಭಕ್ತರಿಗೆ,
ದರ್ಶನಾರ್ಥಿಗಳಿಗೆ ದರ್ಶನನೀಡುತ್ತಾರೆ. ಮಳೆ-ಬೆಳೆ, ಕುಶಲೋಪರಿ ವಿಚಾರ,ಗಣ್ಯರ ಭೇಟಿ,
ಮಠದ ಆಡಳಿತ ಕಡತಗಳ ಪರಿಶೀಲನೆ,ಪತ್ರವ್ಯವಹಾರ.
ಭಕ್ತರ ಭೇಟಿ ಒಂದು ಪ್ರಮುಖ ದಿನಚರಿ
ಮಠದ ಪ್ರಸಾದ ನಿಲಯದ ನಿಲಯದ ಮುಂಭಾಗದ ಮಂಚದ ಮೇಲೆ ಆಸೀನರಾಗುತ್ತಾರೆ. ಭಕ್ತರ
ಕಷ್ಟ-ಸುಖಕ್ಕೆ ಸ್ಪಂದನ, ಮಧ್ಯಾನ್ಹ ಮೂರು ಗಂಟೆಯ ವರೆವಿಗೆ ನಿರಂತರವಾಗಿ ಸಾಗುತ್ತದೆ.
ಇದರ ಬಳಿಕ ಶ್ರೀಗಳು,ನೇರವಾಗಿ ಮಠಕ್ಕೆ ಸಾಗಿ, ಸ್ನಾನ ಪೂಜೆಗಳಲ್ಲಿ ಮಗ್ನರಾಗುತ್ತಾರೆ.
ಇದರ ಬಳಿಕ, ಒಂದು ಎಳ್ಳಿಕಾಯಿ ಗಾತ್ರದಮುದ್ದೆ, ಸ್ವಲ್ಪವೇ ಅನ್ನ, ಮತ್ತು ತೊಗರಿಬೇಳೆ
ಸಾಂಬಾರ್ ಊಟಮಾಡುತ್ತಾರೆ. ಸಂಜೆ ೪ ಗಂಟೆಯ ನಂತರ ಪುನಃ ಭಕ್ತಗಣದ ಬೇಟಿ. ಮಠದಲ್ಲಿ
ಉಳಿದುಕೊಂಡು ವಿದ್ಯಾರ್ಜನೆ ಮಾಡುವ ಮಕ್ಕಳ ಕುಶಲೋಪರಿ. ದಾಸೋಹದ ಮಾಹಿತಿ, ಸುಮಾರು
ರಾತ್ರಿ ೯ ಗಂಟೆಯವರೆವಿಗೂ ನಡೆಯುತ್ತದೆ.
ಶ್ರೀಗಳ ದಿನಚರಿ ಮುಗಿಯುವುದು ರಾತ್ರಿ ೧೧ ಗಂಟೆಗೆ
ಹಳೆಯ ಮಠದಲ್ಲಿ ರಾತ್ರಿಯ ಕಾರ್ಯಕ್ರಮ. ಸ್ನಾನ, ಪೂಜೆ, ಮತ್ತು, ಪ್ರಸಾದ. ಒಂದು
ಚಪಾತಿ ಇಲ್ಲವೇ ಒಂದು ದೋಸೆ. ಅದರ ಜೊತೆಗೆ ಚಟ್ಣಿ ಅಥವಾ ಪಲ್ಯ. ಇದಿಲ್ಲದೇ ಹೋದರೆ,
ಉಪ್ಪಿಟ್ಟು, ನಂತರ ಹಣ್ಣಿನ ಸೇವನೆ. ಹತ್ತು ಗಂಟೆಗೆ ಸ್ವಾಮಿಗಳು, ಸಭಾಂಗಣದಲ್ಲಿ
ಹಾಜರಾಗುತ್ತಾರೆ. '
ಶ್ರೀ ಜಗಜ್ಯೋತಿ ಬಸವೇಶ್ವರ ನಾಟಕ' ದ ಒಂದು ದೃಷ್ಯವನ್ನು ನೋಡಿದ ಬಳಿಕ ಅಂದಿನ ದಿನದ ಕಾಯಕಕ್ಕೆ ವಿರಾಮ.
ಶ್ರೀಗಳ ವಿಶ್ರಾಂತಿಯ ಸಮಯ
ರಾತ್ರಿ ಹತ್ತೂವರೆಗೆ ಸ್ವಾಮೀಜಿಯ ಮಲಗುವ ವೇಳೆ. ಪುಸ್ತಕ ಓದಿ ಮಲಗುವ
ಹವ್ಯಾಸವಿಟ್ಟುಕೊಂಡಿದ್ದಾರೆ. ಇದು ಕನಿಷ್ತ ಅರ್ಧತಾಸಾದರೂ ನದೆಯುತ್ತದೆ. ಹನ್ನೊಂದು
ಗಂಟೆಗೆ ಮಲಗುತ್ತಾರೆ. ಓದಿನೊಂದಿಗೆ ಆರಂಭವಾಗುವ ಶ್ರೀಜಗಳ ದಿನಚರಿ, ಓದಿನೊಂದಿಗೆ
ಮುಕ್ತಾಯವಾಗುತ್ತದೆ. ಹಲವು ದಿನಗಳಲ್ಲಿ, ಕೆಲವಾರು ಧಾರ್ಮಿಕ ಸಮಾರಂಭಗಳಲ್ಲಿ
ಪಾಲ್ಗೊಳ್ಳುತ್ತಾರೆ. ಆಹ್ವಾನಿಸುವ ಭಕ್ತರ ಮನೆಗಳಿಗೂ ಭೇಟಿನೀಡುತ್ತಾರೆ. ದೂರದ
ಊರುಗಳಿಗೂ ಓಡಾಡುತ್ತಾರೆ. ಪ್ರಸಾದ ಸ್ವೀಕರಿಸುವ ವೇಳೆಯಲ್ಲಿ ಮಾತ್ರ ಬಿಸಿನೀರು
ಸೇವಿಸುತ್ತಾರೆ. ಬಾಕೀ ಸಂದರ್ಭದಲ್ಲಿ ಏನನ್ನೂ ಸೇವಿಸುವುದಿಲ್ಲ. ಕಳೆದ ೮ ಸಶಕಗಳ ಜೀವನ
ಇದೇರೀತಿ ಸಾಗಿದೆ. ಶ್ರೀಗಳ ಆರೋಗ್ಯವೂ ಚೆನ್ನಾಗಿಯೇ ಇದೆ.
ಶ್ರೀ ಶ್ರೀ ಶಿವಕುಮಾರ ಮಾಹಾ ಸ್ಡಾಮಿಗಳು
ಪ್ರತ್ಯುತ್ತರಅಳಿಸಿನಡೆದಾಡುವ ದೇವರಿಗೆ ಕೋಟಿ ಪ್ರಣಮಗಳು
ಪ್ರತ್ಯುತ್ತರಅಳಿಸಿ