fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಸಂದೇಶ

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ 🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಗುರುವಾರ, ಏಪ್ರಿಲ್ 14, 2016

ಬಸವಣ್ಣ ದೇವಾಲಯ

       ಬಸವನ ಬಾಗೇವಾಡಿ ಬಿಜಾಪುರ ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಸ್ಥಳ. ಬಿಜಾಪುರ ಜಿಲ್ಲಾ ಕೇಂದ್ರದಿಂದ 43 ಕಿಲೋ ಮೀಟರ್ ದೂರದಲ್ಲಿರುವ ಈ ನಾಡು ಪವಿತ್ರ ಪುಣ್ಯಕ್ಷೇತ್ರವಾಗಲು ಕಾರಣವೇ ಭಕ್ತಿ ಭಂಡಾರಿ ಬಸವಣ್ಣನವರು. ಬಸವೇಶ್ವರು ಹುಟ್ಟಿದ ಈ ಪುಣ್ಯಭೂಮಿ ಇತಿಹಾಸಪ್ರಸಿದ್ಧ ನಾಡಾಗಿ ವಿಶ್ವದ ಗಮನ ಸೆಳೆದಿದೆ.
ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ಪುಣ್ಯಭೂಮಿ ನೋಡಲೇಬೇಕಾದ ಸ್ಥಳ. ಪ್ರತಿ ನಿತ್ಯ ಇಲ್ಲಿಗೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬಸವಣ್ಣನವರು ಹುಟ್ಟಿದ ಪುಣ್ಯಭೂಮಿಯ ದರ್ಶನದಿಂದ ಪುನೀತರಾಗುತ್ತಾರೆ.
ಐತಿಹ್ಯ: 800 ವರ್ಷಗಳ ಹಿಂದೆ ಇಲ್ಲಿ ವಾಸಿಸುತ್ತಿದ್ದ (ವಾದಿರಾಜ) ಮಾದರಸ ಹಾಗೂ ಮಾದಲಾಂಬಿಕೆ ಎಂಬ ದಂಪತಿ ನಂದೀಶ್ವರನ ಭಕ್ತರಾಗಿದ್ದರು. ಅವರು ಕೈಗೊಂಡ ನಂದಿವ್ರತದ ಫಲವಾಗಿ ದೈವಕೃಪೆಯಿಂದ ಶಿವನೇ ತನ್ನ ವಾಹನ ನಂದಿಯನ್ನು ಇವರ ಪುತ್ರರಾಗಿ ಹುಟ್ಟುವಂತೆ ಅನುಗ್ರಹಿಸಿದನಂತೆ. ಹೀಗೆ ದೈವಾನುಗ್ರದಿಂದ ಜನಿಸಿದ ಆ ಕಂದನೇ 12ನೆಯ ಶತಮಾನವನ್ನು ಭರತಖಂಡದ ಧಾರ್ಮಿಕ ಪರಂಪರೆಯಲ್ಲಿ ಒಂದು ಚಿರಸ್ಮರಣೀಯ ಘಟ್ಟವನ್ನಾಗಿಸಿದ ಮಹಾವ್ಯಕ್ತಿ ಜಗಜ್ಯೋತಿ ಬಸವೇಶ್ವರರು.
ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಬಸವಣ್ಣನವರು, ತಮ್ಮ ಉಪನಯನದ ಬಳಿಕ, ಮೇಲು -ಕೀಳೆಂಬ ಸಾಮಾಜಿಕ ವ್ಯವಸ್ಥೆಯನ್ನು ಪ್ರತಿಭಟಿಸಲು ಯಜ್ಞೋಪವೀತವನ್ನು ಕಿತ್ತು ಹಾಕಿ, ಸಂಗಮಕ್ಕೆ ಹೋದರೆಂದು ಹೇಳಲಾಗಿದೆ.
ಆಗ ಕಳಚೂರ್ಯ ಬಿಜ್ಜಳನ ಬಳಿ ದಂಡಾಧಿಶನಾಗಿದ್ದ ಇವರ ಸೋದರಮಾವ ಬಲದೇವ ತನ್ನ ಒಬ್ಬಳೇ ಮಗಳು ಗಂಗಾಂಬಿಕೆಯನ್ನು ಕೊಟ್ಟು ಮದುವೆ ಮಾಡಿದರು.ನಂತರ ಬಸವೇಶ್ವರರು ಬಿಜ್ಜಖನ ಇನ್ನೊಬ್ಬ ದಂಡನಾಯಕ ಸಿದ್ಧರಸನ ಮಗಳು ನೀಲಾಂಬಿಕೆಯನ್ನು ವರಿಸಿದರು.
ಬಿಜ್ಜಳನ ಭಂಡಾರದ ಮಂತ್ರಿಯಾಗಿ, ಹಲವು ಕ್ರಾಂತಿಕಾರಿ ಕ್ರಮಕೈಗೊಂಡ ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಕಲ್ಪನೆ ಜೀವನಾದರ್ಶವಾಗಿದೆ.
ವಚನಕಾರರಾಗಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಬಸವಣ್ಣನವರ ಜನ್ಮಭೂಮಿ ಇಂದು ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಬಸವನಬಾಗೇವಾಡಿ ಎಂದೇ ಖ್ಯಾತವಾಗಿದೆ.
* ಬಸವ ಸ್ಮಾರಕ 
 * ಬಸವಣ್ಣ ದೇವಾಲಯ 


     ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು

ಪದ ಪುಸ್ತಕ

ಹುಡುಕಾಟ ಫಲಿತಾಂಶಗಳು

ಕನ್ನಡದ ತಾಣ ಅನುಸರಿಸುವವರು