ತಾಣದ ಸಂದೇಶ

ಓದು ಒಂದು ಮಹಾಶಕ್ತಿ.📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | Hyper Text Markup Language Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ📶 👈 🌱ನೆರಳಿಗಾಗಿ ಗಿಡವನ್ನು ನೆಡಿ🌱,🌳ಶುದ್ಧವಾದ ಗಾಳಿಗಾಗಿ ಮರವನ್ನು ರಕ್ಷಿಸಿ🌳 👉

ಬುಧವಾರ, ಜೂನ್ 20, 2012

ಮಾತು

  • ನೀವು ಇಚ್ಚಿಸಿದ್ದು ನಿಮಗೆ ಸಿಗದಿದ್ದಾಗ ಅದರ ಅಗತ್ಯವೇ ನಿಮಗಿರಲಿಲ್ಲವೆಂದು ತಿಳಿಯಿರಿ.
  • ಮೌನವು ಮನಸ್ಸಿಗೆ ವಿಶ್ರಾಂತಿಯನ್ನು ಕೊಡುತ್ತದೆ. ಇದರ ಮೂಲಕ ದೇಹಕ್ಕೂ ವಿಶ್ರಾಂತಿ ಸಿಗುತ್ತದೆ. ಕೆಲವು ವೇಳೆ ಮೌನವೇ ಬೇಕಾದ ಔಷಧಿಯಾಗುತ್ತದೆ.
  • ಮನಸ್ಸಿನ ಸ್ಥಿರಚಿತ್ತತೆಯಿಂದಲೇ ಗೆಲವು ಸಾಧ್ಯ.
  • ಕೋಪವು ಮನುಷ್ಯನನ್ನು ಹುಚ್ಚನನ್ನಾಗಿ ಮಾಡುತ್ತದೆ.
  • ನಿಮ್ಮನ್ನು ಯಾರಾದರೂ ಕೋಪದಿಂದ ಮಾತನಾಡಿಸಿದರೆ, ಉರಿಯುವ ಬೆಂಕಿಯ ಮೇಲೆ ತಂಪಾದ ಜಲವನ್ನು ಹಾಕಿದಂತೆ ಪ್ರೀತಿಯಿಂದ ಮಾತನಾಡಿ,
  • ನೀವು ನೀವೇ ಆದ್ದರಿಂದ ನಿಮ್ಮ ನಿಜವಾದ ಸ್ವಭಾವವನ್ನು ತಿಳಿದುಕೊಂಡು ಸಂತೋಷವಾಗಿರಿ.
  • ಯಾವುದನ್ನೂ ವಿಘ್ನವೆಂದೆಣಿಸಬೇಡ ವಿಜಯಕ್ಕೆ ಪ್ರತಿಯೊಂದು ಏರುವ ಮೆಟ್ಟಿಲೆಂದು ಪರಿಗಣಿಸಬೇಕು.

  • ಮನುಷ್ಯ ತನ್ನ ಒಳ್ಳೆಯತನದಿಂದ ದೊಡ್ಡವನಾಗುತ್ತಾನೆಯೇ ಹೊರತು ಹುಟ್ಟಿನಿಂದಲ್ಲ.
  • ನೀವು ಯಾರ ತಪ್ಪನ್ನೂ ತಿದ್ದಲು ಪ್ರಯತ್ನಿಸದೆ ನಿಮ್ಮಿಂದ ಯಾರಿಗೂ ಕೆಡುಕಾಗದಂತೆ ನೋಡಿಕೊಳ್ಳಿ.
  • ಎಲ್ಲವನ್ನೂ ತಿಳಿದ ಜ್ಞಾನಿಯಂತೆ ಮೌನವಾಗಿರು.
  • ನಿನ್ನ ಜನ ನಗುತಿರಲು ನೀನಳುತ ಬಂದೆ ನಿನ್ನ ಜನ ಅಳುತಿರಲು ನೀ ನಗುತ ಹೋಗು.
  • ರೋಧಿಸಲು ನೀನೇನು ಕಳಕೊಂಡಿರುವೆ
  • ಕಳಕೊಳ್ಳಲು ನೀನು ತಂದಿರುವುದಾದರೂ ಏನು, ನಾಶವಾಗಲು ನೀನು ಮಾಡಿರುವುದಾದರೂ ಏನು.
  • ಆತ್ಮವಿಶ್ವಾಸವಿಲ್ಲದವನೊಡನೆ ವಿಧಿಯೂ ಸಹಕರಿಸದು.
  • ಜೀವನದಲ್ಲಿ ನೀವು ಮುನ್ನಡೆಯಬೇಕಾದರೆ ನಿಮ್ಮ ಅವಶ್ಯಕತೆಗಳನ್ನೇ ಮುನ್ನಡೆಯುವಂತೆ ಮಾಡಬೇಡಿ.

  • ಪರಿಶುದ್ಧತೆ, ತಾಳ್ಮೆ, ಸತತ ಪ್ರಯತ್ನ ಇವುಗಳನ್ನು ಹೊಂದಿರುವವರಿಗೆ ಯಾವುದೂ ಅಸಾಧ್ಯವಲ್ಲ.
  • ಅಂಗಳದಲ್ಲಿ ಕಾಗೆ ಸದಾ ಕೂಗುತ್ತಿದ್ದರೂ ವಿವೇಕಿಗಳು ಅದನ್ನು ಪರಿಗಣಿಸದೇ ಕೋಗಿಲೆಯ ಸ್ವರವನ್ನು ಮಾತ್ರವೇ ಆಲಿಸುತ್ತಾರೆ.
  • ಸಂದರ್ಭ ಬಂದಾಗ ಮಕ್ಕಳ ಮಾತನ್ನೂ ಸಹ ಜ್ಞಾನಿಯಾದವನು ಉಪಯೋಗಿಸಿ ಕೊಳ್ಳಬೇಕು.
  • ಬೇರೆಯವರಿಗೆ ಶುದ್ಧ ಮಾರ್ಗವನ್ನು ತೋರಿಸುವ ಪ್ರಾಜ್ಞರು ತಾವೇ ಮಲಿನವಾದ ದಾರಿಯಲ್ಲಿ ನಡೆಯರು.
  • ಸಜ್ಜನರ ವಿನೋದದ ಮಾತೂ ಶಿಲಾಲೇಖದಂತೆ, ಸಜ್ಜನರಲ್ಲದವರು ಪ್ರಮಾಣ ಮಾಡಿ ಹೇಳಿದ ಮಾತು ನೀರ ಮೇಲಣ ಬರಹದಂತೆ.
  • ಮಹತ್ವಾಕಾಂಕ್ಷಿಯಾದ ಮನುಷ್ಯ ಯಾವಾಗಲೂ ಸ್ವಾರ್ಥಿಯಾಗಿರುತ್ತಾನೆ.
  • ಸ್ವಾರ್ಥಿ ಎಂದೂ ಪರರ ಭಾವನೆಗೆ ಬೆಲೆ ಕೊಡುವುದಿಲ್ಲ.

  • ನಮ್ಮನ್ನು ನಾವು ಅರ್ಥಮಾಡಿಕೊಂಡಾಗ, ಬೇರೆಯವರ ಸಾಮರ್ಥ್ಯವನ್ನು ಚಿಂತನೆಯನ್ನು ಗೌರವಿಸುವ ಮನೋಭಾವ ಬರುತ್ತದೆ.
  • ಸೋಮಾರಿತನವೆಂಬುದು ಮನುಷ್ಯನ ಶರೀರದಲ್ಲೇ ಇರುವ ದೊಡ್ಡ ಶತ್ರು.
  • ಪರಿಶ್ರಮಕ್ಕೆ ಸಮಾನವಾದ ಬಂಧುವು ಇಲ್ಲ. ಈ ಬಂಧುವನ್ನು ನಂಬಿ ಯಾರೂ ಹಾಳಾಗಿಲ್ಲ.
  • ಮನುಷ್ಯ ಅತ್ಯಂತ ವಾಸ್ತವಿಕತೆಯನ್ನು ಸಹಿಸಲಾರ.
  • ನಿಜ ಜೀವನ ನಾವು ತಿಳಿದಿರುವಷ್ಟು ಕಠಿಣವೂ ಅಲ್ಲ, ನಾವು ಊಹಿಸಿದಷ್ಟು ಸುಲಭವೂ ಅಲ್ಲ. ಅದು ಎರಡರ ಮಿಶ್ರಣವಾಗಿರುತ್ತದೆ.
  • ಮನೆಯ ರಹಸ್ಯವನ್ನು, ಮನೋವ್ಯಥೆಯನ್ನು, ಮೋಸಹೋದುದನ್ನು ಎಂದಿಗೂ ಬಹಿರಂಗ ಮಾಡಬಾರದು.

  • ಬಿಸಿಯಾದ ವರ್ತನೆಗೆ ಬಿಸಿಯಾಗಿಯೇ ಪ್ರತಿಕ್ರಿಯಿಸುವುದು-ಮೃಗದ ಗುಣ
  • ಶಾಂತವಾದ ಮಾತಿಗೆ ಶಾಂತವಾಗಿಯೇ ಉತ್ತರಿಸುವುದು-ಮನುಷ್ಯಗುಣ
  • ಬಿಸಿಯಾದ ಮಾತಿಗೆ ಶಾಂತವಾಗಿ ಮಾತನಾಡುವುದು ಆತ್ಮರೂಪವಾದ ದೇವಗುಣ.
  • ಯಾರು ಯಾರ ಪ್ರೀತಿಗೆ ಪಾತ್ರರೋ ಅವರು ಏನನ್ನೂ ಮಾಡದೇ ಇದ್ದರೂ, ಕೇವಲ ಸಾಮೀಪ್ಯ ಮಾತ್ರದಿಂದಲೇ ದುಃಖವನ್ನು ಹೋಗಲಾಡಿಸುತ್ತಾರೆ. ಅದೇ ಪ್ರೀತಿಯಲ್ಲಿರುವ ಮಹತ್ತರವಾದ ಗುಣ.
  • ಎಲ್ಲಾ ಜನರನ್ನು ಕೆಲ ಕಾಲ ವಂಚಿಸಬಹುದು ಕೆಲವರನ್ನು ಸದಾ ಕಾಲ ವಂಚಿಸಬಹುದು ಆದರೆ ಎಲ್ಲರನ್ನು ಎಲ್ಲಾ ಕಾಲದಲ್ಲಿಯೂ ವಂಚಿಸಲು ಸಾಧ್ಯವಿಲ್ಲ.

  • ಪ್ರೇಮದಿಂದ ಕೂಡಿದ ಒಂದೇ ಒಂದು ಮಾತು ದುಃಖತಪ್ತವಾದ ಎಷ್ಟೋ ಹೃದಯಗಳಿಗೆ ಸಮಾಧಾನವನ್ನು ತರುತ್ತದೆ.
  • ಮನಸ್ಸಿನಲ್ಲಿ ಪೂರ್ಣ ನಂಬಿಕೆಯಿದ್ದಾಗ ಜಯವು ಖಂಡಿತ ಅದಿಲ್ಲದಿದ್ದಾಗ ಅಪಜಯವೇ.
  • ತನ್ನನ್ನು ತಿಳಿದವನು ತನ್ನ ಕಾಲುಗಳ ಮೇಲೆಯೇ ನಿಲ್ಲುತ್ತಾನೆ.
  • ನಿನ್ನ ಆಪ್ತ ಬಾಂಧವರು ತಮ್ಮ ಮನಸ್ಸನ್ನು ಬೇರೆ. ಮಾಡಿದಾಗ ನಿನ್ನ ಭಾವನೆಗಳು ವ್ಯತ್ಯಾಸವಾಗದಂತೆ ನೋಡಿಕೋ.
  • ಕಾಲು ಒದ್ದೆಯಾಗದೆ ಸಮುದ್ರವನ್ನು ದಾಟಬಲ್ಲ ಮೇಧಾವಿ ಕೂಡ ಕಣ್ಣು ಒದ್ದೆಯಾಗದೆ ಸಂಸಾರವೆಂಬ ಸಾಗರವನ್ನು ದಾಟಲಾರ.

2 ಕಾಮೆಂಟ್‌ಗಳು:

ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.

1.. ಜಾಹೀರಾತು

2.ಜಾಹೀರಾತು