fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಭಾನುವಾರ, ಆಗಸ್ಟ್ 26, 2012

ಕನ್ನಡ ಅಭಿಮಾನಿಗಳಿಗೆ ಸಂಗ್ರಹ " ಮಂಕುತಿಮ್ಮನ ಕಗ್ಗ "-ಗಳು

ಮಂಕುತಿಮ್ಮ

 

ಶಾಲೆಯ ದಿನಗಳಲ್ಲಿ ಕಗ್ಗದ ಬಗ್ಗೆ ಕೇಳುತ್ತ ಬೆಳೆದೆ. ಆದರು ಇದರ ಹುಡುಕಾಟದಲ್ಲಿ ಇಂದು ನನಗೆ ನನ್ನ ಮಿತ್ರರಿಂದ  ಸಂಗ್ರಹಿಸಿ ನಿಮ್ಮ ಮುಂದೆ ಪ್ರಕಟಿಸಿದ್ದೇನೆ.ಕಗ್ಗದ ಎಲ್ಲ ನುಡಿಗಳು ಸಾಮಾನ್ಯ ಓದುಗರಿಗೆ ಎಟುಕುವಂತಿಲ್ಲ, ಅವುಗಳಲ್ಲಿ ಚೆಂದ, ಸುಲಭ ಕಂಡ ಕೆಲವನ್ನು ಇಲ್ಲಿ ಪೋಸ್ಟಿಸುತ್ತಿರುವೆ. ಓದಿ ತಿಳಿದುಕೊಳ್ಳುವ ಭಾರ, ಭಾಗ್ಯ ನಿಮ್ಮದು.


ಒಟ್ಟಿನಲಿ ತತ್ವವಿದು


ಒಟ್ಟಿನಲಿ ತತ್ವವಿದು, ವಿಕಟ ರಸಿಕನೋ ಧಾತ
ತೊಟ್ಟಿಲನು ತೂಗುವನು ಮಗುವ ಜಿಗುಟುವನು
ಸಿಟ್ಟಿನ್ ಓಡವುಟ್ಟುಗಳೊಳಾಗಿಪನು, ಸೋಲಿಪನು
ತುತ್ತು ವಿಕಟಿಗೆ ನಾವು – ಮಂಕುತಿಮ್ಮ

ಒಟ್ಟಿನಲಿ ತಿಳಿಯ ಬೇಕಾದ್ದು ಇಷ್ಟೇ. ನಮ್ಮನ್ನೆಲ್ಲ ಭೂಮಿಗೆ ತಂದ ದೇವರು ವಿನೋದ ಪ್ರಿಯನು. ಆದರೆ ನಾವುಗಳು ಅವನ ವಿನೋದಕ್ಕೆ ತುತ್ತುಗಳು. ನಮಗೆ ಎಲ್ಲ ಕೊಡುತ್ತಾನೆ. ಎಲ್ಲ ಕಸಿದು ಕೊಳ್ಳುತ್ತಾನೆ, ನಾವು ಅತ್ತರು ಅವನಿಗೆ ಆನಂದವೇ, ನಕ್ಕರು ಅವನಿಗೆ ಆನಂದವೇ. ಎಲ್ಲಾ ನಮ್ಮದು, ಎಲ್ಲಾ ನಮ್ಮಿಂದ ಎಂಬ ಭ್ರಮೆಯನ್ನು ಕಳಚಿ ಎಲ್ಲಾ ಅವನ ವಿನೋದ ಲೀಲೆಗಳು ಎಂದು ತಿಳಿದು ಬಾಳಿ ಮುಗಿಸುವುದು ಅಷ್ಟೇ ನಮ್ಮ ಪಾಲಿಗೆ ಬಿಟ್ಟದ್ದು. ನಮ್ಮ ಸೋಲು ಅವನದೇ ನಮ್ಮ ಗೆಲುವು ಅವನದೇ.
ಒಗಟೆಯೇನೀ ಸೃಷ್ಟಿ? ಬಾಳಿನರ್ಥವದೇನು?
ಬಗೆದು ಬಿಡಿಸುವರಾರು ಸೂಜಿಗವನಿದನು?
ಜಗವ ನಿರವಿಸಿದ ಕೈಯೊಂದಾದೊಡೇಕಿಂತು
ಬಗೆ ಬಗೆಯ ಜೀವಗತಿ – ಮಂಕುತಿಮ್ಮ

ದೇವರೆಂಬುದೇನು


ದೇವರೆಂಬುದೇನು ಕಗ್ಗತ್ತಲೆಯ ಗವಿಯೇ
ನಾವರಿಯಲಾರದೆಲ್ಲದರೊಟ್ಟು ಹೆಸರೇ
ಕಾವನೊಬ್ಬನಿರಲ್ಕೆ ಜಗದ ಕಥೆಯೇಕಿಂತು
ಸಾವು ಹುಟ್ಟುಗಳೇನು – ಮಂಕುತಿಮ್ಮ

ದೇವರು ಎಂದರೆ ಏನು? ನಮಗೆ ತಿಳಿಯದ ಎಲ್ಲಕ್ಕೂ ಸೇರಿಸಿ ಕೊಟ್ಟ ಹೆಸರೇ. ಈ ಜಗತ್ತನ್ನು ಕಾಯಲು ಒಬ್ಬನಿರಲು ಜಗವು ಹೀಗೇಕೆ ಇದೆ? ಸಾವು ಹುತ್ತುಗಳು ಏತಕ್ಕಾಗಿ?
ಕೊಳದಿ ನೀ ಮೀವಂದು ತೆರೆಯೆದ್ದು ಹರಡುತ್ತೆ
ವಲಯ ವಲಯಗಳಾಗಿ ಸಾರುವುದು ದಡಕೆ
ಅಲೆಗಳಾ ತೆರದಿ ನಿನ್ನಾತ್ಮದಿಂ ಪರಿಪರಿದು
ಕಳೆತುಕೊಳ್ಳಲಿ ಜಗದಿ – ಮಂಕುತಿಮ್ಮ
ಕಾರಿಳೊಳಾಗಸದಿ ತಾರೆ ನೂರಿದ್ದರೇನು?
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು
ದೂರದಾ ದೈವವಂತಿರಲಿ, ಮಾನುಷಸಖನ
ಕೋರುವುದು ಬಡಜೀವ – ಮಂಕುತಿಮ್ಮ
ಪ್ರೇಮಾತಿಶಯವಿರದ ದಾಂಪತ್ಯ ವರ್ಧಿಸದು |
ವ್ಯಾಮೋಹಕೆಡೆಗೊಟ್ಟಡದು ನಿಗಳವಹುದು ||
ಸಾಮರಸ್ಯವನೆಂತು ಕಾಣ್ಬುದೀ ವಿಷಮದಲಿ |
ಆಮಿಷದ ತಂಟೆಯಿದು ಮಂಕುತಿಮ್ಮ||
ಬಿಳಳಲ್ಲ, ಬೇರಲ್ಲ, ಮುಂಡಕಾಂಡಗಳಲ್ಲ |
ತಳಿರಲ್ಲ, ಮಲರಲ್ಲ, ಕಾಯಿಹಣ್ಣಲ್ಲ ||
ಎಲೆ ನೀನು; ವಿಶ್ವವೃಕ್ಷದೊಳ್ ಎಲೆಯೊಳೊಂದು ನೀಂ |
ತಿಳಿದವನು ನೆರವಾಗು – ಮಂಕುತಿಮ್ಮ ||
ಜಗವೆನ್ನ ಮುದ್ದಿಸದದೇಕೆಂದು ಕೊರಗದಿರು |
ಮಗುವು ನೀಂ ಪೆತ್ತರ್ಗೆ, ಲೋಕಕೆ ಸ್ಪರ್ಧಿ ||
ಹೆಗಲಹೊರೆ ಹುಟ್ಟಿದರ್ಗೆಲ್ಲಮಿರುತಿರೆ, ನಿನ್ನ |
ರಗಳೆಗಾರಿಗೆ ಬಿಡುವೋ? – ಮಂಕುತಿಮ್ಮ ||
ಸ್ಮಿತವಿರಲಿ ವದನದಲಿ, ಕಿವಿಗೆ ಕೇಳಿಸದಿರಲಿ |
ಹಿತವಿರಲಿ ವಚನದಲಿ, ಋತವ ಬೇಡದಿರಲಿ ||
ಮಿತವಿರಲಿ ಮನಸಿನುದ್ವೇಗದಲಿ, ಭೋಗದಲಿ |
ಅತಿ ಬೇಡವೆಲ್ಲಿಯುಂ – ಮಂಕುತಿಮ್ಮ ||
ಹಾಗೆಯೋ ಹೀಗೆಯೋ ಹೇಗೆ ಹೇಗೆಯೋ ಜನುಮ
ಸಾಗಿ ಮುಗಿಯುವುದು; ಮುಗಿದು ಮರೆವುದದೆ ಸುಕೃತ
ಈಗಲೋ ಆಗಲೋ ಎಂದೋ ಮುಗಿವುಂಟೆಂಬ
ಭಾಗ್ಯವನು ನೆನೆದು ನಲಿ ಮಂಕುತಿಮ್ಮ
ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ
ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ
ಎಲ್ಲರೊಳಗೊಂದಾಗು – ಮಂಕುತಿಮ್ಮ
ಉರಿಯುತಿರೆ ಹೊಟ್ಟೆಕಿಚ್ಚಾರಿಸಲು ನೀರೆಲ್ಲಿ?
ನರಕವೆದೆಯಲಿ ನೆಲೆಸೆ ನಿದ್ದೆಗೆಡೆಯೆಲ್ಲಿ?
ಹರಿಸಲಪ್ಪುದೆ ನರರು ಮತ್ಸರಿಯ ಸಂಕಟವ
ಕರುಬಿದನ ಹರಿ ಪೊರೆಗೆ – ಮಂಕುತಿಮ್ಮ
ತ್ರಾಸಿನಲಿ ಕಪ್ಪೆಗಳ ಸರಿಕೂಡಿಸುವ ಚತುರಿ
ಸಂಸ್ಕೃತಿ ದ್ವಂದ್ವಗಳ ಸಮತೂಗಲರಿವಂ
ಬೀಸುಕತ್ತಿಗಳ ಮಧ್ಯದಿ ನೂಲಮೇಲ್ ನಡೆವ
ಸಾಸವೀ ಗೃಹಧರ್ಮ – ಮಂಕುತಿಮ್ಮ

ಇರುವ ಕೆಲಸವ ಮಾಡು


ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು
ದೊರೆತುದ ಹಸಾದವೆಂದುಣ್ಣು ಗೊಣಗಿಡದೆ
ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ
ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ

ಕನ್ನಡ (Kannada SMS)

ಕನ್ನಡ(Kannada SMS)

1. ಬಾಳೆಮ್ಬ ಮೊಳಕೆ ಚಿಗುರೊಡೆಯಲು ಮಳೆಯಾದೆ
ಹೂವಾಗಿ ಅರಳಲು ಸ್ಪೂರ್ತಿಯ ಸೂರ್ಯಾನಾದೆ
ವೃಕ್ಷವಾಗಿ ಬೆಳೆಯಲು ಆಸರೆಯ ಭೂಮಿಯಾದ
ಮಾತೃ ದೇವತೆಗೆ ನಮನ.

2. ಪ್ರೀತಿ ಇಲ್ಲದ ಮೇಲೆ
ಹೂವು ಅರಳಿದರೇನು?
ತಾರೆಗಳು ಮಿನುಗಿದರೇನು?

ಗಾಳಿ ಕಂಪು ಸೂಸಿದರೇನು?
ಎಲ್ಲವೂ ಸಂತೆಯಲ್ಲಿನ ಪಿಸುಮಾತಂತೆ
ಬರಡು ಭೂಮಿಯಂತೆ

3. ಮಳೆ ಎಲ್ಲವನ್ನು ಅಂದವಾಗಿಸುತ್ತದೆ,
ಹೂವು, ಎಲೆ, ಮರ ಎಲ್ಲವ.
ಮಳೆ ಎಲ್ಲವೂ ಚೆನ್ನಾಗಿ

ಕಾಣಿಸುವಂತೆ ಮಾಡುವುದಾದರೆ ನಿನ್ನ ಮೇಲೇಕೆ ಮಳೆ ಸುರಿಯಲಿಲ್ಲ.

4. ನೀವು ಪ್ರೀತಿ ಮಾಡುವಾಗ ಮದುವೆ ಆಗಿದ್ದರೆ
 ಚೆನ್ನಾಗಿರುತ್ತಿತ್ತು ಅನ್ನಿಸುತ್ತೆ.
ಮದುವೆ ಆದ
ಮೇಲೆ, ಛೇ! 
ಇನ್ನೂ ಪ್ರೀತಿ ಮಾಡುತ್ತ ಇರಬಹುದಿತ್ತು ಅನ್ನಿಸುತ್ತೆ.

5. ನಾನು ಯಾವಾಗಲು ಅವಳ ಕೈಯನ್ನು ಹಿಡಿದಾಗ,
 ನನ್ನ ಕೆನ್ನೆಯನ್ನೆ ಮುಟ್ಟಿದಂತಾಗುತ್ತದೆ.
ಏಕೆಂದರೆ ಅವಳು ಯಾವಾಗಲು ನನ್ನ ಕೆನ್ನೆಗೆ ಬಾರಿಸುತ್ತಾಳೆ.

6. ನೀನು ನೋಡಲು ಸುಂದರವಾಗಿದ್ದೀಯ, ನಿನ್ನ ಸ್ಟೈಲ್ ಸೂಪೆರ್,
ನಿನ್ನ ಬುದ್ಧಿಗೆ ಯಾರು ಸಾಟಿಯಿಲ್ಲ, ನಿನ್ನ ನೋಡಲು ಜನ ಸಾಯ್ತಾರೆ,
ಸಾರೀ ಇದು ರಾಂಗ್ ನಂಬರ್ ಅನ್ನಿಸುತ್ತೆ…..

7. ನಗುವು ಮನಸ್ಸಿನ ಭಾವನೆಗಳನ್ನು ಹೇಳುತ್ತದೆ; ಒಪ್ಪಿಕೊಂಡಿದ್ದು,
ಇಷ್ಟವಾಗಿದ್ದು ಮತ್ತು ಹಲವು. ಅವುಗಳಲ್ಲಿ ನನ್ನದೊಂದು ನಗು ನಿನಗಾಗಿ.
ಶುಭೋದಯ.

8. ಅತ್ಯುತ್ತಮ ಕಾಣಿಕೆಗಳು
- ಸ್ನೇಹಕ್ಕೆ- ಪ್ರೀತಿ, ವಿಶ್ವಾಸ;
ಶತ್ರುವಿಗೆ- ಕ್ಷಮಾಪಣೆ;
ನಿಮ್ಮ ಮೇಲಧಿಕರಿಗೆ- ಸೇವೆ;
ಮಗುವಿಗೆ-ಒಳ್ಳೆಯ ಉದಾಹರಣೆ;
ಪೋಷಕರಿಗೆ- ಭಕ್ತಿ;
ದೇವರಿಗೆ- ಸರ್ವಸ್ವ ಮತ್ತು ಸಂದೇಶ ಕಳುಹಿಸುವವರಿಗೆ- ಸಂದೇಶ.

9. ನಗು ಎಲ್ಲರಿಗೂ ಅರ್ಥವಾಗುವ ಭಾಷೆ.
ಅದಕ್ಕೆ ಕಾಸಿಲ್ಲ. ಆದರೆ
ಅದು ಅಮೂಲ್ಯವಾದದ್ದು.
ಅದು ಬೇಗ ಆಗಿಬಿಡುತ್ತೆ.
ಅದರ ನೆನಪು ನಿರಂತರ.
ನಗುವೆಲ್ಲ ನೀನಾಗಲಿ.

10. ಸತಾಹಿಸೋ ಹೆಂಡತಿಯನ್ನು ಪಡೆದಿದ್ದರೆ ತುಂಬಾ ತಾಳ್ಮೆ ಬೇಕು,
ಒಳ್ಳೆಯ ಹೆಂಡತಿ ಪಡೆದಿದ್ದರೆ ಅದೃಷ್ಟ ಇದ್ದಿರಬೇಕು, ಸುಂದರವಾದ
ಹೆಂಡತಿ ಪಡೆದಿದ್ದರೆ ನಾಲ್ಕು ಕಣ್ಣು ಪಡೆದಿರಬೇಕು.

11. ಪಾಪಪ್ರಜ್ಞೆ: ನಮ್ಮನ್ನು ಯಾರೋ ನೋಡುತ್ತಿದ್ದಾರೆ ಎಂದು ಹೇಳೋ ನಮ್ಮ ಅಂತಃಸತ್ವ.

12. ಪ್ರೀತಿ ಯುದ್ಧವಿದ್ದ ಹಾಗೆ. ಶುರುವಾಗೋದು ಸುಲಭ,
 ನಿಲ್ಲೋದು ಕಠಿಣ, ಮರೆಯೋದು ಸಾಧ್ಯವಿಲ್ಲ.
 ಅದಕ್ಕಾಗಿಯೇ ನಾನು ನಿನ್ನೊಂದಿಗೆ
ಸಮರ ಸಾರಿದ್ದೇನೆ. ನನಗೆ ಗೊತ್ತು ನಿನಗೆ ಶಾಂತಿ ಬೇಡವೆಂದು.

13. ನೀನು ಯಶಸ್ಸಿನತ್ತ ಸಾಗಿದಾಗ, ನಿನ್ನ ಸ್ನೇಹಿತರಿಗೆ ನೀನ್ಯಾರೆಂದು
ಗೊತ್ತಾಗುತ್ತದೆ. ನೀನು ಕಷ್ಟದಲ್ಲಿದ್ದಾಗ ನಿನಗೆ ನಿನ್ನ
ಸ್ನೇಹಿತರ್ಯಾರೆಂದು ಗೊತ್ತಾಗುತ್ತದೆ.

14. ನಾನು ತಪ್ಪು ಮಾಡಿದಾಗ, ನನ್ನ ಸರಿ ಮಾಡುವುದಕ್ಕೆ ನಿನ್ನ ಕೈಗಳು ಬೇಕು,
ನಾನು ಅತ್ತಾಗ ನನ್ನ ಸಂತೈಸಲು ನಿನ್ನ ಕೈಗಳು ಬೇಕು, 
ನಾನು ಗೆದ್ದಾಗ ನನ್ನ ಹುರಿದುಂಬಿಸಲು ನಿನ್ನ ಕೈಗಳು ಬೇಕು. 
ಒಂದೇ ಮಾತಿನಲ್ಲಿ ಹೇಳುವುದಾದರೆ ನಿನ್ನ ಕೈಗಳನ್ನು ನನಗೆ ಕೊಟ್ಟು ಬಿಡು ಠಾಕುರ್.
ನೀನು ಬಯಸುತ್ತೀಯ, ನೀನು ಪಡೆಯುತ್ತೀಯ, ಅದು ಅದೃಷ್ಟ.
ನೀನು ಬಯಸುತ್ತೀಯ, ನೀನು ಕಾಯುತ್ತೀಯ,
ಅದು ನಿನ್ನ ಕಾಲ. ನೀನು ಬಯಸುತ್ತೀಯ, ಆದರೆ ರಾಜಿ ಮಾಡಿಕೊಳ್ಳುತ್ತಿಯ,
ಅದು ಜೀವನ. ನೀನು ಬಯಸುತ್ತೀಯ, ಕಾಯುತ್ತೀಯ 
 ಆದರೆ ರಾಜಿ ಮಾಡಿಕೊಳ್ಳುವುದಿಲ್ಲ ಅದೇ ಪ್ರೀತಿ.
ನೀನು ನನಗೆ ಕಾಣಿಸದೇ ಹೋದರೂ ನನ್ನ ಹೃದಯದಲ್ಲೇ ಇದ್ದೀಯಾ,
ನೀನು ನನ್ನ ಕೈಗೆ ಸಿಗದೆ ಹೋದರೂ ನನ್ನ ನೆನಪಿನ ಅಂಗಳದಲ್ಲಿ ಇದ್ದೀಯಾ.
ನಾನು ನಿನಗೆ  ಏನು ಅನ್ನೋದು ನನಗೆ ಗೊತ್ತಿಲ್ಲ.
ಆದರೆ ನೀನು ಮಾತ್ರ ನನಗೆ ಯಾವಾಗಲು SPECIAL.
I MISS U.

15. ಮೊದಲ ರಾತ್ರಿಗೂ ಕೊನೆಯ ರಾತ್ರಿಗೂ ಏನು ವ್ಯತ್ಯಾಸ?
ಮೊದಲ ರಾತ್ರಿಯಲ್ಲಿ ಹೂವಿನ ಮೇಲೆ ನಾವು ಇರ್ತೇವೆ.
ಕೊನೇ ರಾತ್ರಿಯಲ್ಲಿ ನಮ್ಮ ಮೇಲೆ ಹೂವಿರುತ್ತೆ.

16. ನೀನು ನನ್ನ ಕನಸಲ್ಲಿ ಮಾತ್ರ ಬರುವುದಾದರೆ,
ನನಗೆ ಚಿರ ನಿದ್ರೆ ಬರಲಿಬಿಡು.

17. ನ್ಯೂಟನ್ನನ ಪ್ರೀತಿಯ ಮೊದಲ ನಿಯಮ:
 ಹುಡುಗ ಹುಡುಗಿಗೆ ಪ್ರಪೋಸ್ ಮಾಡುವಾಗ ಉಪಯೋಗಿಸುವ
ಬಲವು ಹುಡುಗಿ ಚಪ್ಪಳಿಯಿಂದ ಹೊಡೆಯುವುದಕ್ಕೆ ಸಮನಾಗಿರುತ್ತದೆ.

18. ನ್ಯೂಟನ್ನನ ಪ್ರೀತಿಯ ಎರಡನೆಯ ನಿಯಮ:
ಹುದುಗನೆಡೆಗೆ ಹುಡುಗಿಯ ಪ್ರೀತಿಯ ಉತ್ಸುಕತೆ ಅವನ
ಬ್ಯಾಂಕ್ ಬ್ಯಾಲೆನ್ಸ್ ಮೇಲೆ ನೇರವಾಗಿ ಅವಲಂಬಿತವಾಗಿರುತ್ತದೆ
ಮತ್ತು ಪ್ರೀತಿಯ ದಿಕ್ಕು ಬ್ಯಾಂಕ್
ಬ್ಯಾಲೆನ್ಸ್ನ ಏರಿಳಿತವನ್ನು ಅವಲಂಬಿಸಿರುತ್ತದೆ

ಶನಿವಾರ, ಆಗಸ್ಟ್ 04, 2012

ಹಲ್ಮಿಡಿ ಶಾಸನ


ಹಲ್ಮಿಡಿ ಶಾಸನ ಪಠ್ಯ

ಜಯತಿ ಶ್ರೀ ಪರಿಷ್ವರ್ಙ್ಗ ಶ್ಯಾರ್ಙ್ಗ [ವ್ಯಾ]ನತಿರ್ ಅಚ್ಯುತಃ ದಾನಕ್ಷೆರ್ ಯುಗಾನ್ತಾಗ್ನಿಃ [ಶಿಷ್ಟಾನಾನ್ತು ಸುದರ್ಶನಃ ನಮಃ ಶ್ರೀಮತ್ ಕದಂಬಪನ್ ತ್ಯಾಗ ಸಂಪನ್ನನ್ ಕಲಭೋg[ನಾ] ಅರಿ ಕಕುಸ್ಥಭಟ್ಟೋರನ್ ಆಳೆ ನರಿದಾವಿ[ಳೆ] ನಾಡುಳ್ ಮೃಗೇಶನಾಗೇನ್ದ್ರಾಭೀಳರ್ ಭ್ಭಟಹರಪ್ಪೋರ್ ಶ್ರೀ ಮೃಗೇಶ ನಾಗಾಹ್ವಯರ್ ಇರ್ವ್ವರಾ ಬಟರಿ ಕುಲಾಮಲ ವ್ಯೋಮತಾರಾಧಿನಾಥನ್ ಅಳಪ ಗಣ ಪಶುಪತಿಯಾ ದಕ್ಷಿಣಾಪಥ ಬಹುಶತಹವನಾಹವದು[ಳ್] ಪಶುಪ್ರದಾನ ಶೌರ್ಯ್ಯೋದ್ಯಮ ಭರಿತೋ[ನ್ದಾನ]ಪಶುಪತಿಯೆನ್ದು ಪೊಗೞೆಪ್ಪೊಟ್ಟಣ ಪಶುಪತಿ ನಾಮಧೇಯನ್ ಆಸರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ zಸೇನ್ದ್ರಕ ಬಣೋಭಯ ದೇಶದಾ ವೀರಪುರುಷಸಮಕ್ಷದೆ ಕೇಕಯ ಪಲ್ಲವರಂ ಕಾದೆಱದು ಪೆತ್ತಜಯನಾ ವಿಜ ಅರಸಂಗೆ ಬಾಳ್ಗೞ್ಚು ಪಲ್ಮಡಿಉಂ ಮೂೞುವಳ್ಳಿಉಂ ಕೊಟ್ಟಾರ್ ಬಟಾರಿ ಕುಲದೊನಳ ಕದಂಬನ್ ಕೞ್ದೋನ್ ಮಹಾಪಾತಕನ್ ಸ್ವಸ್ತಿ ಭಟ್ಟರ್ಗ್ಗೀಗೞ್ದೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರಕ

ಒಮ್ಮೆ ನೋಡಿ