ಅಂಕಿತ ನಾಮ:
ಅಂಬಿಗರ ಚೌಡಯ್ಯ
ಕಾಲ: 1160
ದೊರಕಿರುವ ವಚನಗಳು: 279 (ಆಧಾರ: ಸಮಗ್ರ ವಚನ ಸಂಪುಟ)
ತಂದೆ/ತಾಯಿ:
ಹುಟ್ಟಿದ ಸ್ಥಳ: ಶಿವಪುರ (ಧಾರವಾಡ ಜಿಲ್ಲೆ) (ಚೌಡದಾನಪುರ)
ಪರಿಚಯ: ಕಾಲ; ಸು. 1160. ದೋಣಿ ನಡೆಸುವ ಕಾಯಕದವನು. ಈತನ 278 ವಚನಗಳು ದೊರೆತಿವೆ. ಕಸುಬಿನ ಅನುಭವಗಳನ್ನೇ ತನ್ನ ವಚನಗಳಲ್ಲಿ ರೂಪಕ, ನಿದರ್ಶನಗಳನ್ನಾಗಿ ಬಳಸಿಕೊಂಡಿದ್ದಾನೆ. ಧಾರ್ಮಿಕ ಜಿಜ್ಞಾಸೆ, ಜ್ಞಾನದ ಸ್ವರೂಪದಂಥ ತಾತ್ವಿಕ ಚಿಂತನೆಗಳೊಡನೆ ತೀವ್ರವಾದ ಭಾಷೆಯಲ್ಲಿ ಡಾಂಬಿಕತೆ, ಜಾತೀಯತೆಗಳನ್ನು ಟೀಕಿಸುತ್ತಾನೆ.

ಅರಿವಿನ ಪಥವನರಿಯದಿರ್ದಡೆ,
ಮುಂದೆ ಹೆರರಿಗೆ ದೀಕ್ಷೆಯ ಮಾಡಲೇಕೆ?
ತೊರೆಯಲದ್ದವನಸೀಲರಿಯದವ
ತೆಗೆಯ ಹೋದಂತಾಯಿತ್ತರಂದನಂಬಿಗ ಚೌಡಯ್ಯ.
ಮುಂದೆ ಹೆರರಿಗೆ ದೀಕ್ಷೆಯ ಮಾಡಲೇಕೆ?
ತೊರೆಯಲದ್ದವನಸೀಲರಿಯದವ
ತೆಗೆಯ ಹೋದಂತಾಯಿತ್ತರಂದನಂಬಿಗ ಚೌಡಯ್ಯ.
ಅಂಬಿಗ ಅಂಬಿಗ ಎಂದು ಕುಂದ ನುಡಿಯದಿರು,
ನಂಬಿದರೆ ಒಂದೆ ಹುಟ್ಟಲಿ ಕಡೆಯ ಹಾಯಿಸುವನಂಬಿಗರ ಚೌಡಯ್ಯ.
ನಂಬಿದರೆ ಒಂದೆ ಹುಟ್ಟಲಿ ಕಡೆಯ ಹಾಯಿಸುವನಂಬಿಗರ ಚೌಡಯ್ಯ.
ಅಲ್ಲಲ್ಲಿಗೆ ತಕ್ಕ ಹಾಗೆ ಎಲ್ಲರಿಗೂ ಬೋದ್ಥಿಸಲಾಗದು.
ಬಲ್ಲವರಲ್ಲಿ ನುಡಿದು, ಅರಿಯದವರಲ್ಲಿ ಗೆಲ್ಲ ಸೋಲಕ್ಕೆ ನುಡಿದಡೆ,
ಅವರು ಕಲ್ಲೆದೆಯವನೆಂಬರು.
ಒಳ್ಳಿತು ಹೊಲ್ಲವೆನಬೇಡ ಆರಿಗೂ.
ತನ್ನಲ್ಲಿಯೆ ಅರಿಕೆಯೆಂದನಂಬಿಗ ಚೌಡಯ್ಯ.
ಬಲ್ಲವರಲ್ಲಿ ನುಡಿದು, ಅರಿಯದವರಲ್ಲಿ ಗೆಲ್ಲ ಸೋಲಕ್ಕೆ ನುಡಿದಡೆ,
ಅವರು ಕಲ್ಲೆದೆಯವನೆಂಬರು.
ಒಳ್ಳಿತು ಹೊಲ್ಲವೆನಬೇಡ ಆರಿಗೂ.
ತನ್ನಲ್ಲಿಯೆ ಅರಿಕೆಯೆಂದನಂಬಿಗ ಚೌಡಯ್ಯ.
ಅರಿದೆಹೆನೆಂಬನ್ನಬರ ಅಸಗೆ ನೀರಡಿಸಿ ಸತ್ತಂತಾಯಿತ್ತು.
ಕಟ್ಟೋಗರವ ಹೊತ್ತು ಉಂಡೆಹೆ ಉಂಡೆಹೆನೆಂದು
ಆಪ್ಯಾಯನವಡಸಿ ಸತ್ತಂತಾಯಿತ್ತು.
ಅರಿದೆಹೆನೆಂದು ಕೇಳಿಹೇಳಿಹೆನೆಂಬನ್ನಬರ
ಆತನು ಶಿಲೆಯ ರೇಖೆಯೆ ? ಬಯಲ ಬ್ರಹ್ಮವೆ ?
ತಾನಳಿವುದಕ್ಕೆ ಮುನ್ನವೆ ಅರಿದು ಕೂಡಬೇಕೆಂದನಂಬಿಗ Zõ್ಞಡಯ್ಯ.
ಕಟ್ಟೋಗರವ ಹೊತ್ತು ಉಂಡೆಹೆ ಉಂಡೆಹೆನೆಂದು
ಆಪ್ಯಾಯನವಡಸಿ ಸತ್ತಂತಾಯಿತ್ತು.
ಅರಿದೆಹೆನೆಂದು ಕೇಳಿಹೇಳಿಹೆನೆಂಬನ್ನಬರ
ಆತನು ಶಿಲೆಯ ರೇಖೆಯೆ ? ಬಯಲ ಬ್ರಹ್ಮವೆ ?
ತಾನಳಿವುದಕ್ಕೆ ಮುನ್ನವೆ ಅರಿದು ಕೂಡಬೇಕೆಂದನಂಬಿಗ Zõ್ಞಡಯ್ಯ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.