ಲಿಪ್ಯಂತರಣ
ಕನ್ನಡ ಅಕ್ಷರಗಳನ್ನು ಗಣಕಯಂತ್ರದಲ್ಲಿ ಸಾಮಾನ್ಯ ಕೀಲಿಮಣೆಯ ಮೂಲಕ ಮೂಡಿಸಲು ಅನೇಕ ಲಿಪ್ಯಂತರಣ ವಿಧಾನಗಳಿವೆ. ಇವುಗಳಲ್ಲಿ ಕೆಲವೆಂದರೆ INSCRIPT, ITRANS, ಬರಹ ಮತ್ತು ನುಡಿ. ಕರ್ನಾಟಕ ಸರ್ಕಾರದ ಅಧಿಕೃತ ಲಿಪ್ಯಂತರಣ ವಿಧಾನ ನುಡಿ. INSCRIPT ಶಿಷ್ಟಾಚಾರವನ್ನು ವಿಂಡೋಸ್ ಹಾಗೆಯೇ GNOME ಬಳಸುವ ಎಲ್ಲಾ ಕಾರ್ಯಾಚರಣೆ ವ್ಯವಸ್ಥೆಗಳೂ ಗುರುತು ಹಿಡಿಯುತ್ತವೆ.ಇದನ್ನು ಸಿದ್ಧಪಡಿಸಿಕೊಟ್ಟವರು ಕೆ. ಪಿ. ರಾವ್ರವರು.
ಕನ್ನಡ ಅಂಕೆಗಳನ್ನು ಈ ಕೆಳಗಿನ ಪಟ್ಟಿಯಲ್ಲಿ ಕಾಣುವಂತೆ ಗುರುತಿಸಲಾಗುತ್ತದೆ.
ಕನ್ನಡ ಅಂಕೆಗಳು | ಇಂಡೋ ಅರೇಬಿಯನ್ ಅಂಕೆಗಳು | ||
---|---|---|---|
೦ | ಸೊನ್ನೆ | 0 | |
೧ | ಒಂದು | 1 | |
೨ | ಎರಡು | 2 | |
೩ | ಮೂರು | 3 | |
೪ | ನಾಲ್ಕು | 4 | |
೫ | ಐದು | 5 | |
೬ | ಆರು | 6 | |
೭ | ಏಳು | 7 | |
೮ | ಎಂಟು | 8 | |
೯ | ಒಂಬತ್ತು | 9 |
ಕೃಪೆ: ಕನ್ನಡದ ವಿಕಿಪೀಡಿಯ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನಿಮ್ಮ ಆಶಿರ್ವಾದವೇ ನಮಗೆ ಶ್ರೀರಕ್ಷೆ.