fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಬುಧವಾರ, ಜೂನ್ 28, 2017

ಪ್ರಾಣಿ ಲೋಕದ ವೈಚಿತ್ರ್ಯಗಳು 1

  • ನೀಲಿ ತಿಮಿಂಗಿಲದ ಮರಿಗಳು ಹುಟ್ಟಿನಲ್ಲೇ ಸು.೭ ಟನ್/ ೭೦೦೦ ಕಿ.ಗ್ರಾ. ಭಾರ ಇರುತ್ತದೆ.
  • ಹಾವುಗಳು ತಮ್ಮ ರೆಪ್ಪೆಗಳ ಮೂಲಕವೂ ನೋಡಬಲ್ಲವು.
  • ಆನೆಗಳು ದಿನದ ೨೩ ಗಂಟೆಗಳ ಕಾಲ ತಿನ್ನುವುದರಲ್ಲಿಯೇ ಕಳೆಯುತ್ತದೆ.
  • ಗಿಡುಗಗಳು ಕೆಲವೊಮ್ಮ ಹಾರಲು ಸಾಧ್ಯವಾಗದಷ್ಟು ಆಹಾರವನ್ನು ಸೇವಿಸುತ್ತದೆ.
  • ಬ್ಲೂಬಾಟಲ್ ಪ್ಲೆöÊಸ್ ಎಂದು ಕರೆಯುವ ನೋಣಗಳು ೭ ಕಿ.ಮೀ.ವರೆಗಿನ ವಾಸನೆಯನ್ನು ಗ್ರಹಿಸಬಲ್ಲವು.
  • ಆರ್ಕ್ಟಿಕ್ ಕಲಡ ಕಾಗೆಗಳು ಅತಿ ದೂರದ ವಲಸೆಗೆ ಹೆಸರುವಾಸಿ, ಇವು ಸು.೩೨,೦೦೦ ಕಿ.ಮೀ. ವಲಸೆ ಹೋಗಬಲ್ಲವು.

                      ಸೋಮವಾರ, ಜೂನ್ 26, 2017

                      ಏಕಾಂತ ವೀರಸೊಡ್ಡಳ

                      ಅಂಕಿತ ನಾಮಏಕಾಂತ ವೀರ ಸೊಡ್ಡಳ 
                      ಕಾಲ
                      ದೊರಕಿರುವ ವಚನಗಳು2 (ಆಧಾರಸಮಗ್ರ ವಚನ ಸಂಪುಟ) 
                      ತಂದೆ/ತಾಯಿ
                      ಹುಟ್ಟಿದ ಸ್ಥಳ

                      ಪರಿಚಯ:

                      ಶನಿವಾರ, ಜೂನ್ 24, 2017

                      ನೆಪ

                      ನೆನಪಾಗದ್ದಕ್ಕೆ ನಾವು ಕೊಡುವ ಕಾರಣ

                      ಇದಕ್ಕಾಗಿ ತುಂಬ ಹುಡುಕಬೇಕಾಗಿಲ್ಲ
                      ರಜೆ ಚೀಟಿಯ ಪ್ರಮುಖ ವಸ್ತು
                      ತಪ್ಪು ಮಾಡಿ ತಪ್ಪಿಸಿಕೊಳ್ಳಲು ಇರುವ ಶಾರ್ಟ್ಕಟ್
                      ಸಮಯಕ್ಕೆ ಸರಿಯಾಗಿ ನೆಪ ಹುಡುಕಬಲ್ಲವನೇ ನಿಜವಾದ ಜಾಣನೆನಿಸುತ್ತಾನೆ
                      ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಕೊಡುವ ಜವಾಬು
                      ಲೇಟಾಗಿ ಬಂದ ಗಂಡನ ಪ್ರಲಾಪಗಳು
                      ಆಡಿದ ಸುಳ್ಳಿನ ಸುಳಿಯಲಿ, ಸಿಲುಕದಿರಲು ಬಳಸುವ ಆಧಾರ
                      ಸೋಮವಾರಕ್ಕೆ ಕೆಲಸವನ್ನು ಮುಂದೂಡಲು ಸೋಮಾರಿಕೊಡುವ ಕಾರಣ
                      ಇದು ಸುಳ್ಳೂ ಆಗಿರಬಹುದು, ಸತ್ಯವೂ ಆಗಿರಬಹುದು
                      ನಮ್ಮ ಬುದ್ಧಿ ಅತ್ಯಂತ ಹೆಚ್ಚು ಕೆಲಸ ಮಾಡುವುದು ಇದನ್ನು ಹುಡುಕುವುದಕ್ಕಾಗಿಯೇ

                      -ವಿಶ್ವನಾಥ ಸುಂಕಸಾಳ

                      ಗುರುವಾರ, ಜೂನ್ 22, 2017

                      ಅವಳೇ ಅಮ್ಮ


                      ಇಂದು ಮದರ್ಸ್ ಡೇ ಇಂಗ್ಲಂಡಿನಲ್ಲಿ. ಅದಕ್ಕೆಂದೇ 'ಮೈ ಮದರ್' ಪದ್ಯದ ಸ್ಪೂರ್ತಿಯಿಂದ ಒಂದು ಚಿಕ್ಕ ಪದ್ಯ:

                      ಯಾರು ನನ್ನ ಹೊತ್ತು ಹೆತ್ತು ಹಾಲು ಕುಡಿಸಿ ನಕ್ಕಳೋ ನಿದ್ದೆಯಲ್ಲು ಮುದ್ದು ಮಾಡಿ ಜೋ ಜೋ ಲಾಲಿ ಅಂದಳೋ ಅವಳೇ ಅಮ್ಮ  
                      ಜ್ವರದ ಕಾವು ವಾಂತಿ ಭೇದಿ ಹೊಟ್ಟೆನೋವು ಕಾಡಲು ನಿದ್ದೆ ಬಿಟ್ಟು ಹಗಲು ರಾತ್ರಿ ನನ್ನ ನೋಡಿಕೊಂಡಳು ಅವಳೇ ಅಮ್ಮ
                      ಯಾರು ನನ್ನ ತೊದಲುಮಾತು ಅರ್ಥಮಾಡಿಕೊಂಡಳೋ ಅಳುವ ಅಳಿಸಿ ನಗುವ ಬರಿಸಿ ಕೈಯ ತುತ್ತ ಕೊಟ್ಟಳೋ ಅವಳೇ ಅಮ್ಮ
                      ಅಮ್ಮನಂಥ ಗುಮ್ಮನಿಲ್ಲ ಅಮ್ಮನಂಥ ಗೆಳೆಯನಿಲ್ಲ
                      ಅಮ್ಮನಂಥ ದೇವರಿಲ್ಲ ದೇವರೂ ಹಾಗಂತಾನಲ್ಲ! ಅಮ್ಮ ನಮ್ಮಮ್ಮ
























                      ಮಂಗಳವಾರ, ಜೂನ್ 20, 2017

                      ಜಾಣ ತಿಮ್ಮ

                      ಬಾಳೆಯ ತೋಟದ ಪಕ್ಕದ ಕಾಡೊಳು
                      ವಾಸಿಸುತಿದ್ದವು ಮಂಗಗಳು
                      ಮಂಗಗಳೆಲ್ಲವು ಒಟ್ಟಿಗೆ ಸೇರುತ
                      ಒಂದುಪವಾಸವ ಮಾಡಿದವು .
                      ಏನೂ ತಿನ್ನದೆ ಮಟ ಮಟ ನೋಡುತ
                      ಇದ್ದವು ಮರದಲಿ ಕುಳಿತಲ್ಲೇ
                      "ನಾಳೆಗೆ ತಿಂಡಿಯ ಈಗಲೇ ಹುಡುಕುವ
                      ಬನ್ನಿರಿ " ಎಂದಿತು ಕಪಿಯೊಂದು
                      "ಹೌದೌದಣ್ಣಾ" ಎಂದೆನ್ನುತ ಎಲ್ಲವು
                      ಬಾಳೆಯ ತೋಟಕೆ ಹಾರಿದವು
                      ತೋಟದಿ ಬಾಳೆಯ ಹಣ್ಣನು ನೋಡಲು
                      ಆಶೆಯು ಹೆಚ್ಚಿತು ನೀರೂರಿ
                      "ಸುಲಿದೇ ಇಡುವ ಆಗದೆ " ಎಂದಿತು
                      ಆಶೆಯ ಮರಿಕಪಿಯೊಂದಾಗ
                      "ಹೌದೌದೆನ್ನುತ" ಹಣ್ಣನು ಸುಲಿದವು
                      ಕೈಯೊಳೆ ಹಿಡಿದು ಕುಳಿತಿರಲು
                      "ಕೈಯ್ಯಲ್ಲೇತಕೆ ಬಾಯೊಳಗಿಟ್ಟರೆ
                      ಆಗದೆ ? " ಎಂದಿತು ಇನ್ನೊಂದು
                      ಹಣ್ಣನು ಬಾಯಲಿ ಇಟ್ಟವು
                      "ಜಗಿದೇ ಇಡುವೆವುಎಂದಿತು ಕಪಿ ಮತ್ತೊಂದು
                      ಜಗಿದೂ ಜಗಿದೂ ನುಂಗಿದವೆಲ್ಲವು
                      ಆಗಲೇ ಮುಗಿಯಿತು ಉಪವಾಸ .
                                                                         (ಕವಿ : ಮಚ್ಚಿಮಲೆ ಶಂಕರನಾರಾಯಣ ರಾವ್ )

                      ಶುಕ್ರವಾರ, ಜೂನ್ 09, 2017

                      ಸರ್ಪಸಂಭೋಗ + ಹಸು ಮುಕ್ಕೋಟಿ ದೇವತೆ

                      1.ಸರ್ಪಸಂಭೋಗ ನೋಡಿದ್ದೀನಲ್ಲಾ ? ಏನೂ ತೊಂದರೆ ಇಲ್ವಾ ?
                      - ಫೋಟೋ ತೆಗೆದಿಲ್ಲ ಅಂದರೆ ಚೆಲುವನ್ನು ನೀನು ಅನುಭವಿಸಲು ಗೊತ್ತಿಲ್ಲದವನು ಎಂದು.

                      2.ಹಸು ಮುಕ್ಕೋಟಿ ದೇವತೆಗಳನ್ನು ಹೊಂದಿರುವ ಪ್ರಾಣಿ ಅಲ್ಲವೇ ?

                      - ಮನುಷ್ಯನ ಹೊರೆತು ಎಲ್ಲ ಪ್ರಾಣಿಗಳೂ ಅಷ್ಟೇ

                      ಕೃಪೆ : ಕೆ.ಟಿ.ಆರ್

                      ಶುಕ್ರವಾರ, ಜೂನ್ 02, 2017

                      ಕನ್ನಡದ ____ ? ಭಾಗ 2

                      ಕನ್ನಡದ 'ವರ್ಷ'                   ಅಮೋಘವರ್ಷ   
                      ಕನ್ನಡದ 'ಪೆಂಪು'                  ಪಂಪ
                      ಕನ್ನಡದ 'ಪೊನ್ನು'                 ಪೊನ್ನ 
                      ಕನ್ನಡದ 'ಚಿನ್ನ'                    ರನ್ನ
                      ಕನ್ನಡದ 'ರಾಯ'                 ಚಾವುಂಡರಾಯ  
                      ಕನ್ನಡದ 'ನಾಗ'                  ನಾಗವರ್ಮ 
                      ಕನ್ನಡದ 'ಸಿಂಹ'                 ದುರ್ಗಸಿಂಹ 
                      ಕನ್ನಡದ 'ಚಂದ್ರ'                ನಾಗಚಂದ್ರ 
                      ಕನ್ನಡದ 'ಅಣ್ಣ'                   ಬಸವಣ್ಣ  
                      ಕನ್ನಡದ 'ಅಕ್ಕ'                  ಅಕ್ಕಮಹಾದೇವಿ 
                      ಕನ್ನಡದ 'ಪ್ರಭು'                 ಅಲ್ಲಮಪ್ರಭು 
                      ಕನ್ನಡದ 'ಹರ'                   ಹರಿಹರ 
                      ಕನ್ನಡದ 'ನಾಥ'                 ಸೋಮನಾಥ  
                      ಕನ್ನಡದ 'ರಾಘವ'              ರಾಘವಾಂಕ 
                      ಕನ್ನಡದ 'ಚೆನ್ನ'                  ಜನ್ನ 
                      ಕನ್ನಡದ 'ವ್ಯಾಸ'                ಕುಮಾರವ್ಯಾಸ  
                      ಕನ್ನಡದ 'ಕುಮಾರ'            ಕುಮಾರ ವಾಲ್ಮೀಕಿ 
                      ಕನ್ನಡದ 'ದಾಸ'                ಪುರಂದರದಾಸ 

                      ಕನ್ನಡದ 'ಈಶ'                 ಲಕ್ಷ್ಮೀಶ 

                      ಕನ್ನಡದ 'ಜ್ಞಾನ'                ಸರ್ವಜ್ಞ

                      ಕನ್ನಡದ 'ಹೊನ್ನು'              ಸಂಚಿಯ ಹೊನ್ನಮ್ಮ 

                      ಕನ್ನಡದ 'ಶರೀಫ'               ಶಿಶುನಾಳ ಶರೀಫ  


                                                                                                  ಕೃಪೆ : ಎನ್ ಕುಮಾರ