fly

📗 ನಮ್ಮ ಕನ್ನಡವನ್ನು ಓದಲು ಬನ್ನಿ, ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಿ , ಜೊತೆಗೆ ಓದಲು ನಿಮ್ಮವರನ್ನು ಕರೆದುತನ್ನಿ. => S hivakumar . P . N egimani => spn3187 | 🅷𝐲𝐩𝐞𝐫 🆃𝐞𝐱𝐭 🅼𝐚𝐫𝐤𝐮𝐩 🅻𝐚𝐧𝐠𝐮𝐚𝐠𝐞 Codes | ಕನ್ನಡದ ಟೆ ಲಿ ಗ್ರಾ ಮ ಲಿಂಕ್ | ಮಕ್ಕಳ ಗೀತೆಗಳು | ಹೊನಲಿನಿಂದ ಅಜ್ಜಿ ಹೇಳಿದ 3 ಮಾತುಗಳು : 1} ದಾರಿ ಮೇಲೆ ಒಬ್ಬರು ಹೋಗಾಕ್ಕಿಂತ, ಇಬ್ಬರು ಹೋಗೋದು ಲೇಸು. 2} ಹಬ್ಬಕ ಹೋಗಾಕ್ಕಿಂತ, ಮದುವಿಗಿ ಹೋಗೋದ ಲೇಸು. 3} ಕೂತು ಕಾಲ ಕಳಿಯುದುಕ್ಕಿಂತ, ಕೂಲಿ ಮಾಡೋದ್ ಲೇಸು.

ತಾಣದ ಬೆಳವಣಿಗೆಗಾಗಿ ಪ್ರತಿದಿನ ಒಮ್ಮೆಯಾದರೂ ಜಾಹೀರಾತುಗಳ ಮೇಲೆ ಕ್ಲಿಕ್ ‌ಮಾಡಿ‌ರಿ _____ ಕೂ ವಿಸ್ಮಯ
🎀 ಕರುನಾಡು ಕನ್ನಡಿಗನ ಕನ್ನಡದ ತಾಣ 🎀

ಮಂಗಳವಾರ, ಜನವರಿ 31, 2017

ಕನ್ನಡ ನುಡಿ, ಕನ್ನಡ ತಾಯಿ, ಕನ್ನಡಿಗರು

ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ
ಕರುನಾಡ  ನಾಡನುಡಿ,
ಕನ್ನಡಿಗರಿಗದು  ಕನ್ನಡಿ.
ಮಾತನಾಡಿದರದು  ಮುತ್ತಿನಂಗಡಿ,
ಅದುವೇ ನಮ್ಮ “ಕನ್ನಡ” ನುಡಿ.
ಮಾಣಿಕ್ಯವೀಣೆ  ಪಿಡಿದಿಹಳು  ಕೈಯಲಿ,
ಮಂದಹಾಸದ  ನಗುವಿಹುದು  ಮುಖದಲಿ,
ಕರೆದು  ಕೊಡುತಿಹಳು  ಅಭಯಹಸ್ತವನಿಲ್ಲಿ,
ಅವಳೇ  ನಮ್ಮ  “ಕನ್ನಡಾಂಬೆ”.
ನೆಲಸಿಹರು  ಕನ್ನಡನಾಡಿನಲಿ,
ನಡೆದಾಡುವರು  ದೇಶದೆಲ್ಲೆಡೆಯಲಿ,
ನಕ್ಕುನಲಿದಾಡುತಿಹರು  ಆ  ಹೊರನಾಡುಗಳಲಿ,
ಕನ್ನಡದ  ಕಂಪನು  ಕೋರೈಸುತಲಿ.
ಅವರೇ ನಮ್ಮ “ಕನ್ನಡಿಗರು”.
ಹಚ್ಚಿಸಿದರು ಕನ್ನಡದ ಹಣತೆಯನು,
ಬೆಳಗಿಸಿದರು ಕನ್ನಡದ ಬೆಳಕನು,
ಕೊಂಡಾಡಿದರು ಕನ್ನಡದ  ಕವಿಗಳನು,
ಅರ್ಪಿಸಿದರು  ಎಲ್ಲಡೆಯಲ್ಲೂ  “ಔದಾರ್ಯವನು”.
ಅವರೇ ನಮ್ಮ “ಕನ್ನಡಿಗರು”.                      

=> ಪ್ರಕಟಗೊಂಡಿದ್ದು  by daams(ತನು-ಮನ) ಈಗ ಮರು ಪ್ರಕಟ

ಗುರುವಾರ, ಜನವರಿ 26, 2017

ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ


ಅಂಕಿತ ನಾಮಉರಿಲಿಂಗಪೆದ್ದಿಗಳರಸ


ಕಾಲ1160  

ದೊರಕಿರುವ ವಚನಗಳು12 (ಆಧಾರಸಮಗ್ರ ವಚನ ಸಂಪುಟ) 

ತಂದೆ/ತಾಯಿ

ಹುಟ್ಟಿದ ಸ್ಥಳ

ಪರಿಚಯಕಾಲ ಸು. 1160.  ಈಕೆ ಉರಿಲಿಂಗಪೆದ್ದಿಯ ಪತ್ನಿ ಎಂಬುದನ್ನು ಬಿಟ್ಟರೆ ಉಳಿದ ವಿವರ ತಿಳಿದಿಲ್ಲಈಕೆಯ 12 ವಚನಗಳು ದೊರೆತಿವೆಕುಲ-ಜಾತಿಗಳ ವಿಡಂಬನೆ,  ವ್ರತದ ಮಹತ್ವ ಮೊದಲಾದ ಸಂಗತಿಗಳ ಬಗ್ಗೆ ಹೇಳಿದ್ದಾಳೆ.

ಅಯ್ಯಾಸೂಳೆಗೆ ಹುಟ್ಟಿದ ಮಕ್ಕಳಿಗೆ,

ಕೊಟ್ಟವರೊಳು ಸಮ್ಮೇಳಕೊಡದವರೊಳು ಕ್ರೋಧ.

ವ್ರತಹೀನರೊಳು ಮೇಳವ್ರತನಾಯಕರೊಳು ಅಮೇಳ.
ಸುಡು ಸುಡು ! ಅವರ ಕೂಡಿದಡೆ ಉರಿಲಿಂಗಪೆದ್ದಿಗಳರಸನೊಲ್ಲನವ್ವಾ

ಮಂಗಳವಾರ, ಜನವರಿ 24, 2017

ಹೊಗಳು



ಘನ ಕಾರ್ಯದ ಬಗೆಗಿನ ಶ್ಲಾಘನೆ
ಉತ್ತಮ ದಾರಿಯಲ್ಲಿರುವವರನ್ನು ದಾರಿ ತಪ್ಪಿಸಲು ಬಳಸುವ ತಂತ್ರ
ಸವೆಯದ ನಾಣ್ಯ; ಹರಿಯದ ನೋಟು
ಬೇಗ ವಾಪಸ್ ಕೊಟ್ಟುಬಿಡಬೇಕೆಂಬ ಉದ್ದೇಶದಿಂದ ಕೆಲವರು ಇದನ್ನು ನಮಗೆ ಕೊಟ್ಟಿರುತ್ತಾರೆ
ಇದನ್ನು ಅಡವು ಇಡಲಾಗದು
ಮಿತವಾಗಿದ್ದರೆ ನಮ್ಮೆಲ್ಲ ಶ್ರಮವನ್ನು ಮರೆಸುವಂಥದ್ದು. ಹೆಚ್ಚಾದರೆ ಕೆಲಸವನ್ನೇ ಮರೆಸುವಂಥದ್ದು
ಎಲ್ಲ ಗಳಿಕೆಗಳಿಗಿಂತಲೂ ಹೆಚ್ಚು ಖುಷಿಕೊಡುವ ಗಳಿಕೆ ಹೊ-ಗಳಿಕೆ
ಪ್ರಶಸ್ತ ಕಾರ್ಯದ ಬಗೆಗಿನ ಪ್ರಶಸ್ತಿ
ನಾನು ಹೊಗಳಿಕೆಯನ್ನು ಇಷ್ಟಪಡುವುದಿಲ್ಲ ಎಂಬ ಮಾತಿನ ಹಿಂದಿರೋದು ಕೂಡ ಇದರದ್ದೇ ಬಯಕೆ
ಮುದುಕಿಯನ್ನು ತರುಣಿಯಾಗಿಸುವಂಥ ಮದಿರೆ
ಕಾರ್ಯವಾಸಿ ಹೊಗಳು ಭಟ..
ತೆಗಳಿಕೆಗೆ ಬಗ್ಗದವನೂ ಹೊಗಳಿಕೆಗೆ ಹಿಗ್ಗುತ್ತಾನೆ
ಬೀಗರನ್ನು ಬೀಗಿಸುವ ಬೀಗದ ಕೈ
ಹೆಣ್ಣು ಕೊಡುವವರೆಗೆ...ಮಾವನನ್ನು, ಕೊಟ್ಟ ನಂತರ ಅಳಿಯನನ್ನು..
ಮೂರ್ಖ ಬಯಸುವ ಅಗುಳು
-ವಿಶ್ವನಾಥ ಸುಂಕಸಾಳ

ಭಾನುವಾರ, ಜನವರಿ 22, 2017

ಅಮ್ಮನ ಬಿಳಿಯ ಕತ್ತಲ್ಲಿ



ಅಮ್ಮನ ಬಿಳಿಯ ಕತ್ತಲ್ಲಿ ಕಪ್ಪು ಮಣಿಯ ಸರ ನೋಡಿದ್ದಾಗೆಲ್ಲ ನನಗೂ ಅಂತಹದೇ ಸರ ಬೇಕೆಂದು ಅತ್ತಿದ್ದೆ
ಅಮ್ಮ ತಿಳಿ ಹೇಳಿದ್ದಳು
ಅದು ಪವಿತ್ರವಾದ ಮಾಂಗಲ್ಯ ಎಂದೂ ಅದು ಆಟಕ್ಕೆ ಹಾಕುವ ಸರ ಅಲ್ಲವೆಂದೂ ದೊಡ್ಡವಳಾದ ಮೇಲೆ ನಿನಗೆಂದೇ ಹುಟ್ಟಿದ ರಾಜಕುಮಾರ ಬಂದು ತನ್ನ ಕೈಯಾರೆ ಅದ ತೊಡಿಸಿ ..
ನಿನ್ನನ್ನು ಎತ್ತಿಕೊಂಡು..
ತನ್ನರಮನೆಗೆ ಕರೆದೊಯ್ವನೆಂದು….
ಅಮ್ಮನ ಮಾತಿಗೆ ಪುಟ್ಟ ಕನಸೊಂದು ಗೂಡು ಕಟ್ಟ ತೊಡಗಿತು
ಯಾವಾಗ ದೊಡ್ಡವಳಾದೇನೋ ರಾಜಕುಮಾರ ಹೇಗಿರುವನೋ
ಅವನರಮನೆಗೆ ತಾನೇ ರಾಣಿಯಾದಂತೆ..
ಅವನೊಲವಿಗೆ ತಾನೇ ಅರಗಿಣಿಯಾದಂತೆ….
ದಿನಗಳೆದಂತೆ ನಾ ಬೆಳೆದೆ
ಕನ್ನಡಿಯು ಹೇಳಿತು ನಾನು ರಾಜಕುವರಿಯೇ ಎಂದು
ಅಪ್ಪ ಅಮ್ಮನ ಮುದ್ದಿನ ಕೂಸು
ಅಣ್ಣನ ಸಕ್ಕರೆ ಗೊಂಬೆ
ಇದ್ದದ್ದರಲ್ಲೇ ನಾನು ರಾಜಕುಮಾರಿ ನನ್ನ ಮನೆಗೆ….
ಬಂದನೊಬ್ಬ ರಾಜಕುಮಾರ ನನ್ನ ಕರೆದೊಯ್ಯಲು..
ನನ್ನ ಕನಸು ನನಸಾದಂತೆ
ನನಗೊಂದು ಕಪ್ಪುಮಣಿ ಸರ ತಂದಂತೆ
ರಾಜಕುವರ ತಂದ ಕಪ್ಪುಮಣಿಯ ಬೆಲೆ ನನ್ನಪ್ಪನ ಜೀವಮಾನದ ದುಡಿಮೆ
ನನ್ನಮ್ಮನ ಕಣ್ಣ ನೀರು
ನನ್ನ ಜೀವದ ಹಕ್ಕು  ಎಂದು ತಿಳಿಯುವಷ್ಟರಲ್ಲಿ ನನ್ನ ಕತ್ತ ಸುತ್ತ ಕಪ್ಪು ಮಣಿ ಹೊಳೆಯುತ್ತಿತ್ತು
ಕನಸು ಗರ್ಭಪಾತವಾಗಿತ್ತು……
ಅಮ್ಮ…..
ಕನಸ ತುಂಬುವ ಮೊದಲು ಕಸುವ ತುಂಬ ಬಾರದಿತ್ತೆ…..
ಅಪ್ಪ..
ಜೀವಮಾನದ ದುಡಿಮೆ ನನಗಾಗಿ ಸುರಿವ ಬದಲು..
ಜೀವನ ನಡೆಸುವ ದುಡಿಮೆ ಕಲಿಸಬಾರದಿತ್ತೆ
ಅಣ್ಣ..
ನಿನ್ನ ಸಕ್ಕರೆಯ ಬೊಂಬೆಗೆ
ಸಕ್ಕರೆ ತರುವುದ ಹೇಳಿಕೊಡಬಾರದಿತ್ತೆ…..
ಕಪ್ಪು ಮಣಿಯ ಆಸೆಗೆ ಜೀವ ತೊತ್ತಾಯಿತೇ..??!!(ಒಂದು ಹಳೆಯ ಪುಟ..:))))
-ಸುನಿತಾ ಮಂಜುನಾಥ್  By  on July 3, 2012

ಶುಕ್ರವಾರ, ಜನವರಿ 20, 2017

ಮಳೆ ಮಳೆ ಮಲ್ಲಪ್ಪ



 ಮಳೆ ಮಳೆ ಮಲ್ಲಪ್ಪ

ಕೈಯ ಚಾಚೋ ಕರಿಯಪ್ಪ


ಮಳೆ ಮಳೆ ಮಲ್ಲಪ್ಪ

ಕೈಯ ಚಾಚೋ ಕರಿಯಪ್ಪ
 

ತಿರುಗೊ ತಿರುಗೊ ತಿಮ್ಮಪ್ಪ

ತಿರುಗಲಾರೆ ಉಸ್ಸಪ್ಪ


ಮಳೆ ಬಂತು ಮಳೆ

ಕೊಡೆ ಹಿಡಿದು ನಡೆ

ಮಣ್ಣಿನಲ್ಲಿ ಜಾರಿ ಬಿದ್ದು

ಬಟ್ಟೆ ಎಲ್ಲಾ ಕೊಳೆ



ಬಿಸಿಲು ಬಂತು ಬಿಸಿಲು

ಕೋಟು ಟೋಪಿ ತೆಗೆ

ಬಾವಿಯಿಂದ ನೀರು ಸೇದಿ

ಸೋಪು ಹಾಕಿ ಒಗೆ